AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡ್ರಂಕ್ ಆ್ಯಂಡ್ ಡ್ರೈವ್, ಅತಿವೇಗದ ಚಾಲನೆಯಿಂದ ಅಪಘಾತ: ಕಾಂಗ್ರೆಸ್ ಮುಖಂಡ ಸೇರಿ ಇಬ್ಬರ ಸಾವು

ಜೂನ್ 17ರ ಮಧ್ಯರಾತ್ರಿ ಮಂಗಳೂರಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಕಾಂಗ್ರೆಸ್​ ಮುಖಂಡ ಸೇರಿ ಇಬ್ಬರು ಯುವಕರು ಸಾವನ್ನಪ್ಪಿದ್ದರೆ. ಅತಿವೇಗ ಮತ್ತು ಮದ್ಯಪಾನದಿಂದ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡ್ರಂಕ್ ಆ್ಯಂಡ್ ಡ್ರೈವ್, ಅತಿವೇಗದ ಚಾಲನೆಯಿಂದ ಅಪಘಾತ: ಕಾಂಗ್ರೆಸ್ ಮುಖಂಡ ಸೇರಿ ಇಬ್ಬರ ಸಾವು
ಅಪಘಾತದಲ್ಲಿ ಅಪ್ಪಚ್ಚಿಯಾದ ಕಾರು
ಪೃಥ್ವಿರಾಜ್​ ಬಿ.ಯು. ಮಂಗಳೂರು
| Edited By: |

Updated on:Jun 20, 2025 | 8:28 AM

Share

ಮಂಗಳೂರು, ಜೂನ್​ 20: ಜೂನ್ 17ರ ಮದ್ಯರಾತ್ರಿ ನಗರದ ಹೊರವಲಯದ ಜಪ್ಪಿನಮೊಗರುವಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಭವಿಸಿದ್ದ ಕಾರು ಅಪಘಾತದಲ್ಲಿ (accident) ಕಾಂಗ್ರೆಸ್ ಮುಖಂಡ ಸೇರಿ ಇಬ್ಬರು ಯುವಕರು ಸಾವನ್ನಪ್ಪಿರುವಂತಹ (death) ಘಟನೆ ನಡೆದಿದೆ. ಎನ್ಎಸ್​ಯುಐ ಜಿಲ್ಲಾ ಉಪಾಧ್ಯಕ್ಷ ಓಂಶ್ರೀ ಪೂಜಾರಿ ಹಾಗೂ ಕದ್ರಿ‌ ನಿವಾಸಿ ಅಮನ್ ರಾವ್​ ಮೃತರು. ರಾತ್ರಿ ವೇಳೆ ಸಂಭವಿಸಿದ ಭೀಕರ ಅಪಘಾತಕ್ಕೆ ಮದ್ಯಪಾನ ಮಾಡಿ ಅತಿವೇಗವಾಗಿ ಕಾರು ಚಾಲನೆ ಮಾಡಿರುವುದೇ ಕಾರಣವೆಂದು ಪೊಲೀಸರು ತಿಳಿಸಿದ್ದಾರೆ. ಅತೀಯಾದ ವೇಗ, ಡ್ರಿಂಕ್​ & ಡ್ರೈವ್ ಅಡಿ ಪ್ರಕರಣ ದಾಖಲಾಗಿದೆ.

ಮದ್ಯರಾತ್ರಿವರೆಗೂ ಎಣ್ಣೆ ಪಾರ್ಟಿ ಮಾಡಿದ್ದ ಐವರು ಯುವಕರು ಬಳಿಕ ಕಾರಿನಲ್ಲಿ ತಲಪಾಡಿಯಿಂದ ಮಂಗಳೂರಿನ ಕಡೆಗೆ ಹೊರಟ್ಟಿದ್ದರು. ಪೊಲೀಸರ ಪ್ರಕಾರ ಕಾರು ಗಂಟೆಗೆ 192 ಕಿಲೋಮೀಟರ್ ವೇಗದಲ್ಲಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ.

ಇದನ್ನೂ ಓದಿ: ಮಡಿಕೇರಿಯಲ್ಲಿ ಪೊಲೀಸರ ಮನೆಗಳಲ್ಲೇ ಕಳ್ಳತನ, ಬರೋಬ್ಬರಿ 9 ಮನೆಗಳಲ್ಲಿ ಕೈಚಳಕ!

ಇದನ್ನೂ ಓದಿ
Image
ಬೆಂಗಳೂರಿನ 17 ಕ್ಕೂ ಹೆಚ್ಚು ಡ್ಯಾನ್ಸ್ ಬಾರ್​ಗಳ ಮೇಲೆ ಪೊಲೀಸರಿಂದ ದಾಳಿ
Image
ಕರ್ನಾಟಕದ ಕರಾವಳಿಗೆ ಯೆಲ್ಲೋ ಅಲರ್ಟ್​, ಜೂ.26ರವರೆಗೂ ಹುಚ್ಚು ಮಳೆ
Image
ಚಾಮರಾಜನಗರದಲ್ಲಿ ವ್ಯಾಘ್ರ ಅಟ್ಟಹಾಸ: ತಿಂಗಳಲ್ಲಿ 2 ಜೀವ ಬಲಿ ಪಡೆದ ನರಭಕ್ಷಕ
Image
ಮಡಿಕೇರಿಯಲ್ಲಿ ಬರೋಬ್ಬರಿ 9 ಪೊಲೀಸರ ಮನೆಗಳಲ್ಲೇ ಕಳ್ಳತನ!

ಐವರು ಯುವಕರ ಪೈಕಿ ಓಂಶ್ರೀ ಪೂಜಾರಿ ಹಾಗೂ ಕದ್ರಿ‌ ನಿವಾಸಿ ಅಮನ್ ರಾವ್​ ಮೃತಪಟ್ಟಿದ್ದು, ವಂಶಿ ಮತ್ತು ಆಶಿಕ್​ಗೆ ಗಂಭೀರ ಗಾಯಗಳಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಟಲಿ ಮೂಲದ ಇನ್ನೊಬ್ಬ ಗೆಳೆಯ ಜೆರ್ರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಾಲಕನ ಅತೀ ವೇಗಕ್ಕೆ ಫೋಕ್ಸ್ ವೇಗನ್ ಕಾರು ಅಪ್ಪಚ್ಚಿಯಾಗಿದೆ.

ಕಾರುಗಳನ್ನು ಕದ್ದು ಮಾರಾಟ ಮಾಡುತ್ತಿದ್ದ ಗ್ಯಾಂಗ್​ ಮತ್ತೆ ಬಂಧನ

ಕಾರುಗಳನ್ನು ಕದ್ದು ಮಾರಾಟ ಮಾಡುತ್ತಿದ್ದ ಗ್ಯಾಂಗ್​ ಅನ್ನು​ ಬೆಂಗಳೂರಿನ ವಿದ್ಯಾರಣ್ಯಪುರ ಪೊಲೀಸರು  ಬಂಧಿಸಿದ್ದಾರೆ. ಉಮೇಶ್, ತಬ್ರೇಜ್ ಮತ್ತು ಜಬೀರ್ ಖಾನ್ ಬಂಧಿತ ಆರೋಪಿಗಳು. ಬಂಧಿತರಿಂದ 12 ಲಕ್ಷ ಮೌಲ್ಯದ ಆರು ಓಮ್ನಿ ಕಾರು ಜಪ್ತಿ ಮಾಡಲಾಗಿದೆ.

ಇದನ್ನೂ ಓದಿ: ಪ್ರೀತಿಯ ನಾಟಕ, ಅಶ್ಲೀಲ ವಿಡಿಯೋ ರೆಕಾರ್ಡ್: ಆಂಧ್ರದ ಮಹಿಳೆಯ ಬ್ಲ್ಯಾಕ್​ಮೇಲ್ ಮಾಡುತ್ತಿದ್ದ ಯುವಕನ ಬಂಧನ

ಈ ಗ್ಯಾಂಗ್ ಹಿಂದೆ ಟ್ರ್ಯಾಕ್ಟರ್​​ಗಳನ್ನು ಕದ್ದು ಮಾರುತ್ತಿದ್ದರು. ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. 2020ರಲ್ಲಿ ಟ್ರ್ಯಾಕ್ಟರ್​​ ಕಳ್ಳತನ ಕೇಸ್​ನಲ್ಲಿ ಗ್ಯಾಂಗ್​ ಅನ್ನು ಬಂಧಿಸಲಾಗಿತ್ತು. ಬಳಿಕ ಜೈಲಿನಿಂದ ಹೊರಬಂದು ಟ್ರ್ಯಾಕ್ಟರ್ ಬಿಟ್ಟು ಓಮ್ನಿ ಕಾರು ಕದಿಯುತ್ತಿದ್ದರು. ಬೆಂಗಳೂರಿನಲ್ಲಿ ಕಾರುಗಳನ್ನು ಕದ್ದು ಹಳ್ಳಿಗಳಲ್ಲಿ ಮಾರುತ್ತಿದ್ದರು. ಮೇ ತಿಂಗಳಲ್ಲಿ ವಿದ್ಯಾರಣ್ಯಪುರದಲ್ಲಿ ಕಾರು ಕದ್ದಿದ್ದರು. ಆರೋಪಿಗಳು ಕಾರು ಕದಿಯುತ್ತಿದ್ದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು. ಇದೀಗ ಮತ್ತೆ ಲಾಕ್​ ಆಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:21 am, Fri, 20 June 25