ಬೆಂಗಳೂರು: ಗ್ಯಾಸ್ ​ಗೀಸರ್​ನಿಂದ ವಿಷಾನಿಲ ಸೋರಿಕೆ; ತಾಯಿ, ಮಗ ಸಾವು

ಬೆಂಗಳೂರು ಗೋವಿಂದರಾಜನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪಂಚಶೀಲನಗರದ ಮನೆಯೊಂದರಲ್ಲಿ ಗ್ಯಾಸ್ ​ಗೀಸರ್​ನಿಂದ ವಿಷಾನಿಲ ಸೋರಿಕೆಯಾಗಿ ನಾಲ್ಕು ವರ್ಷದ ಮಗ ಸೇರಿ ತಾಯಿ ಕೂಡ ಸಾವನ್ನಪ್ಪಿರುವಂತಹ ಘಟನೆ ಸೋಮವಾರ ರಾತ್ರಿ ನಡೆದಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು: ಗ್ಯಾಸ್ ​ಗೀಸರ್​ನಿಂದ ವಿಷಾನಿಲ ಸೋರಿಕೆ; ತಾಯಿ, ಮಗ ಸಾವು
ಮೃತರು
Edited By:

Updated on: Dec 08, 2025 | 10:47 PM

ಬೆಂಗಳೂರು, ಡಿಸೆಂಬರ್​ 08: ಗ್ಯಾಸ್ ​ಗೀಸರ್​ನಿಂದ ವಿಷಾನಿಲ ಸೋರಿಕೆಯಾಗಿ (gas geyser leakage) ತಾಯಿ ಮತ್ತು ಮಗ ಸಾವನ್ನಪ್ಪಿರುವಂತಹ (death) ಘಟನೆ ನಗರದ ಪಂಚಶೀಲನಗರದಲ್ಲಿ ನಡೆದಿದೆ. ಚಾಂದಿನಿ(26) ಮತ್ತು ಕಿರಣ್(4) ಮೃತ ದುರ್ದೈವಿಗಳು. ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿಕ್ಕಬಳ್ಳಾಪುರದಲ್ಲಿ ಭೀಕರ ಅಪಘಾತ: ಯುವಕ ಸ್ಥಳದಲ್ಲೇ ಸಾವು 

ಚಿಕ್ಕಬಳ್ಳಾಪುರ ನಗರದ ಎಂ.ಜಿ ರಸ್ತೆಯಲ್ಲಿ ಬೈಕ್ ಸವಾರನಿಗೆ ಖಾಸಗಿ ಬಸ್ ಡಿಕ್ಕಿ ಹೊಡದ ಪರಿಣಾಮ 22 ವರ್ಷದ ಯುವಕ ಮುಸ್ತಾಪ್ ಸ್ಥಳದಲ್ಲಿ ಮೃತಪಟ್ಟ ಘಟನೆ ನಡೆದಿದೆ. ಮೃತ ಯುವಕ ಚಿಕ್ಕಬಳ್ಳಾಪುರ ನಗರದ ದರ್ಗಾಮೊಹಲ್ಲ ನಿವಾಸಿ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಉದ್ಯಮಿ ಕಿಡ್ನ್ಯಾಪ್: 1 ಕೋಟಿ ರೂ ಹಣಕ್ಕೆ ಡಿಮ್ಯಾಂಡ್ ಮಾಡಿದ್ದ ಆರೋಪಿಗಳ ಕೈಗೆ ಸಿಕ್ಕಿದ್ದು ಚಿಪ್ಪು

ಚಿಕ್ಕಬಳ್ಳಾಪುರದಿಂದ ಗೌರಿಬಿದನೂರಿನತ್ತ ಹೊರಟಿದ್ದ ಎಸ್.ಎಲ್.ವಿ ಖಾಸಗಿ ಬಸ್, ಪಕ್ಕದಲ್ಲಿದ್ದ ಬೈಕ್ ಸವಾರಿನ ಮೇಲೆ ಹರಿದ ಪರಿಣಾಮ ಯುವಕ ಸ್ಥಳದಲ್ಲಿ ಮೃತಪಟ್ಟಿದ್ದಾನೆ. ಸುದ್ದಿ ತಿಳಿಯುತ್ತಿದ್ದಂತೆ ಚಿಕ್ಕಬಳ್ಳಾಪುರ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ದೂರು ದಾಖಲು ಮಾಡಿಕೊಂಡು ಖಾಸಗಿ ಬಸ್​​ ಅನ್ನು ವಶಕ್ಕೆ ಪಡೆದಿದ್ದಾರೆ.

ಎರಡು ಬೈಕ್​ಗಳ ನಡುವೆ ಡಿಕ್ಕಿ: ಓರ್ವ ಬೈಕ್ ಸವಾರ 

ದ್ವಿಚಕ್ರ ವಾಹನಗಳ ಮಧ್ಯೆ ಡಿಕ್ಕಿ ಸಂಭವಿಸಿದ್ದು, ಓರ್ವ ಬೈಕ್ ಸವಾರ ಸಾವನ್ನಪ್ಪಿರುವಂತಹ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಅನಿಗಾನಹಳ್ಳಿ ಬಳಿ ನಡೆದಿದೆ. ಗೊಲ್ಲಹಳ್ಳಿಯ ಮನೋಹರ್(27) ಮೃತ ಬೈಕ್ ಸವಾರ. ಮತ್ತೋರ್ವ ಬೈಕ್ ಸವಾರನಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಬಂಗಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಚಾಲಕನ ನಿಯಂತ್ರಣ ತಪ್ಪಿ ಕಾಂಪೌಂಡ್​ಗೆ ಗುದ್ದಿದ ಕಾರು

ಚಾಲಕನ ನಿಯಂತ್ರಣ ತಪ್ಪಿ ಕಾಂಪೌಂಡ್​ಗೆ ಕಾರು ಗುದ್ದಿದ್ದ ಘಟನೆ ಬೆಂಗಳೂರಿನ ಬಸವನಗುಡಿಯ ವಾಸವಿ ಶಾಲೆ ಬಳಿ ನಡೆದಿದೆ. ಕಾರು ಜಖಂ ಆಗಿದ್ದು, ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ 2 ಬೈಕ್​ ಮತ್ತು 1 ಕಾರಿಗೂ ಹಾನಿ ಆಗಿದೆ. ಬಸವನಗುಡಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಮೋಹರಂ ಮುಗಿದ್ರೂ ಗಲಾಟೆ ಮುಗಿದಿಲ್ಲ: ಅಂತಿಮವಾಗಿ ಮೌಲ್ವಿ ಕೊಲೆಯಲ್ಲಿ ಅಂತ್ಯ

ಛತ್ತೀಸ್​ಗಢ ನೋಂದಣಿಯ ಬೆಂಜ್​​​ ಕಾರು ಬೈಕ್​ಗೆ ಡಿಕ್ಕಿ ತಪ್ಪಿಸಲು ಹೋಗಿ ಕಾಂಪೌಂಡ್​ಗೆ ಡಿಕ್ಕಿ ಹೊಡೆದಿದೆ.  ಬೆಂಗಳೂರು ನೇತಾಜಿ ನಗರ ನಿವಾಸಿ ಪ್ರಣಯ್ ಜೈನ್ ಮದ್ಯಸೇವಿಸಿ ಕಾರು ಚಲಾಯಿಸುತ್ತಿದ್ದರು. ಬಸವನಗುಡಿ ಸಂಚಾರಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಸದ್ಯ ಆರೋಪಿಯನ್ನ ಠಾಣೆಗೆ ಕರೆತಂದು ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.