ಲಾಲ್​ಬಾಗ್​​ನಲ್ಲಿ 6 ಎಕರೆ ಅಲ್ಲ 6 ಇಂಚು ಜಾಗವನ್ನೂ ಬಿಡೋದಿಲ್ಲ; ತೇಜಸ್ವಿ ಸೂರ್ಯ

ಸುರಂಗ ಮಾರ್ಗಕ್ಕೆ ಬೆಂಗಳೂರಿನ ಲಾಲ್​ಬಾಗ್​ನಲ್ಲಿ 6 ಎಕರೆ ಜಾಗವನ್ನು ಭೂಸ್ವಾಧೀನ ಮಾಡಲಾಗುತ್ತದೆ ಎಂಬ ಬಗ್ಗೆ ಕಳವಳಗಳು ಹೆಚ್ಚಾಗಿದ್ದವು. ಈ ಬಗ್ಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದು, ಆ ರೀತಿಯ ಯಾವುದೇ ಉದ್ದೇಶ ಸರ್ಕಾರಕ್ಕಿಲ್ಲ ಎಂದು ಹೇಳಿದ್ದಾರೆ. ಆದರೂ ಸರ್ಕಾರ ಲಾಲ್​ಬಾಗ್​ ಜಾಗವನ್ನು ಸ್ವಾಧೀನಕ್ಕೆ ಪಡೆಯುತ್ತದೆ ಎಂಬ ಚರ್ಚೆಗಳು ಇನ್ನೂ ನಿಂತಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಲು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಇಂದು ಮುಂಜಾನೆ ಲಾಲ್​ಬಾಗ್​ಗೆ ಭೇಟಿ ನೀಡಿದ್ದಾರೆ.

ಲಾಲ್​ಬಾಗ್​​ನಲ್ಲಿ 6 ಎಕರೆ ಅಲ್ಲ 6 ಇಂಚು ಜಾಗವನ್ನೂ ಬಿಡೋದಿಲ್ಲ; ತೇಜಸ್ವಿ ಸೂರ್ಯ
Tejasvi Surya

Updated on: Oct 12, 2025 | 11:20 AM

ಬೆಂಗಳೂರು, ಅಕ್ಟೋಬರ್ 12: ಸುರಂಗ ರಸ್ತೆ ನಿರ್ಮಾಣಕ್ಕೆ ಲಾಲ್​ಬಾಗ್​​ನಲ್ಲಿ 6 ಎಕರೆ ಅಲ್ಲ 6 ಇಂಚೂ ಜಾಗ ಕೊಡೋಕೆ ಬಿಡುವುದಿಲ್ಲ, ಈ ಬಗ್ಗೆ ಹೋರಾಟ ಮಾಡುತ್ತೇವೆ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ (Tejasvi Surya) ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರನ್ನು ದುರಂತಕ್ಕೀಡು ಮಾಡುವ ಪ್ರಾಜೆಕ್ಟ್ ಇದು. ರಾಜ್ಯ ಸರ್ಕಾರ ಟನಲ್ ರೋಡ್ ಮಾಡೋಕೆ ಹೊರಟಿರುವುದು ಜನರಿಗಾಗಿ ಅಲ್ಲ, ಟನಲ್ ರೋಡ್ ಕಾರ್ ಇಟ್ಟುಕೊಂಡವರಿಗೆ ಮಾತ್ರ. ಲಾಲ್​ಬಾಗ್​ನಲ್ಲಿ ಭೂಸ್ವಾಧೀನ ಮಾಡಿದ್ದಾರೆ ಎಂದು ತೇಜಸ್ವಿ ಸೂರ್ಯ ಟೀಕಿಸಿದ್ದಾರೆ.

300 ವರ್ಷ ಹಿಂದೆ ಇರೋ ಬಂಡೆ ಲಾಲ್​ಬಾಗ್​​ನಲ್ಲಿದೆ. ಜಿಬಿಐ ಅಧಿಕಾರಿಗಳಿಗೆ ಅಲೈನ್ ಮೆಂಟ್ ತೋರ್ಸಿ ಅಂದರೆ ಓಡಿ ಹೋದರು. ಸಾರ್ವಜನಿಕರ ಅಭಿಪ್ರಾಯವನ್ನೂ ಕೇಳಿಲ್ಲ. ಲಾಲ್ ಬಾಗ್ ನಲ್ಲಿ ಕಮರ್ಷಿಯಲ್‌ ಕಟ್ಟಬೇಕಾ? 300 ವರ್ಷ ಹಳೇ ಬಂಡೆ ಇರುವ ಇದು ದೇಶದ ಆಸ್ತಿ. ಇದನ್ನು ಒಡೆದು ರಿಯಲ್ ಎಸ್ಟೇಟ್ ಮಾಡುತ್ತೇವೆ ಎಂದರೆ ಅದಕ್ಕೆ ನಾವು ಒಪ್ಪುವುದಿಲ್ಲ ಎಂದಿದ್ದಾರೆ.


ಇದನ್ನೂ ಓದಿ: ಬೆಂಗಳೂರಿನಲ್ಲಿ ರಸ್ತೆ ಅಗಲೀಕರಣ ಅಸಾಧ್ಯ, ಟ್ರಾಫಿಕ್ ಸಮಸ್ಯೆಗೆ ಸುರಂಗ ಮಾರ್ಗವೊಂದೇ ಪರಿಹಾರ: ಡಿಕೆ ಶಿವಕುಮಾರ್


ಟನಲ್ ರೋಡ್ ಅವೈಜ್ಞಾನಿಕವಾದದ್ದು. ಲಾಲ್ ಬಾಗ್ ಬೆಂಗಳೂರಿನ ಹೆಮ್ಮೆ. ಲಾಲ್ ಬಾಗ್ ಅನ್ನು ಹಾಳು ಮಾಡುವಂತಹ ಕೆಲಸ ಮಾಡೋಕೆ ಕಾಂಗ್ರೆಸ್ ಸರ್ಕಾರ ಹೊರಟಿದೆ. ನಾವು ಯಾವುದೇ ಕಾರಣಕ್ಕೂ ಟನಲ್ ರೋಡ್ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ. ಟನಲ್‌ರೋಡ್ ವಿರುದ್ಧ ಹೈ ಕೋರ್ಟ್‌ನಲ್ಲಿ ಎರಡು ಪಿಐಎಲ್ ಹಾಕಿದ್ದೇವೆ. ಟನಲ್ ರೋಡ್ ವಿಚಾರವಾಗಿ ಹೈಕೋರ್ಟ್ ನಲ್ಲಿ ನಾನೇ ವಾದ ಮಾಡುತ್ತೇನೆ. ಲಾಲ್ ಬಾಗ್ ನಲ್ಲಿ 6 ಎಕರೆ ಅಲ್ಲ 6 ಇಂಚು ಕೂಡ ಬಿಡುವುದಿಲ್ಲ. ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕರೆಲ್ಲಾ ಈ ವಾರದಲ್ಲಿ ಲಾಲ್ ಬಾಗ್​ಗೆ ಬರುತ್ತಾರೆ, ಟನಲ್‌ ಬಗ್ಗೆ ಅಭಿಪ್ರಾಯ ಸಂಗ್ರಹ ಮಾಡುತ್ತಾರೆ. ಟನಲ್ ನಿರ್ಮಾಣಕ್ಕೆ ನಾವು ಯಾವುದೇ ಕಾರಣಕ್ಕು ಬಿಡುವುದಿಲ್ಲ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:12 am, Sun, 12 October 25