Bengaluru: ಮಧ್ಯರಾತ್ರಿ ವಾಹನ ಚಾಲನೆ ಮಾಡುವವರಿಗೆ ಭಯ ಹುಟ್ಟುಸುತ್ತಿದ್ದಾನೆ ಆ ವ್ಯಕ್ತಿ

| Updated By: Rakesh Nayak Manchi

Updated on: Dec 22, 2022 | 8:32 AM

ಮಧ್ಯರಾತ್ರಿ ವಾಹನ ಚಾಲನೆ ಮಾಡುವವರಿಗೆ ಭಯ ಹುಟ್ಟುಸುತ್ತಿದ್ದಾನಂತೆ ಆ ವ್ಯಕ್ತಿ, ಆ ವಾಹನದಲ್ಲಿದ್ದವರ ಪರಿಸ್ಥಿತಿ ಏನಾಗಬೇಡ ಹೇಳಿ?

Bengaluru: ಮಧ್ಯರಾತ್ರಿ ವಾಹನ ಚಾಲನೆ ಮಾಡುವವರಿಗೆ ಭಯ ಹುಟ್ಟುಸುತ್ತಿದ್ದಾನೆ ಆ ವ್ಯಕ್ತಿ
ಕಾರು ನಿಲ್ಲಿಸುತ್ತಿರುವ ನಿಗೂಢ ವ್ಯಕ್ತಿ
Follow us on

ಬೆಂಗಳೂರು: ನಗರದಲ್ಲಿ ಮಧ್ಯರಾತ್ರಿ ವೇಳೆ ವಾಹನ ಸಚಲಾಯಿಸುವಾಗ ಜಾಗರೂಕರಾಗಿರಿ. ಏಕೆಂದರೆ ನಿಗೂಢ ವ್ಯಕ್ತಿ (Mysterious man)ಯೊಬ್ಬ ಮಧ್ಯರಾತ್ರಿಯಲ್ಲಿ ಸಂಚರಿಸುವ ವಾಹನಗಳನ್ನು ಅಡ್ಡಹಾಕಿ ಭಯ ಹುಟ್ಟಿಸುತ್ತಿದ್ದಾನೆ. ಒಂದೊಮ್ಮೆ ನೀವು ಕಾರು ನಿಲ್ಲಿಸಿದರೆ ಆತ ಏನು ಮಾಡುತ್ತಾನೋ ಆತನಿಗೇ ಗೊತ್ತು. ಈ ಬಗ್ಗೆ ವ್ಯಕ್ತಿಯೊಬ್ಬರು ವಿಡಿಯೋವನ್ನು ಟ್ವಿಟರ್​ನಲ್ಲಿ ಹಂಚಿಕೊಂಡು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನಗರದ ಮಹದೇವಪುರ ಠಾಣಾ ಪೊಲೀಸರು, ನಿಗೂಢ ವ್ಯಕ್ತಿಯನ್ನು ಪತ್ತೆಹಚ್ಚಲು ಮುಂದಾಗಿದ್ದಾರೆ.

ಮಹದೇವಪುರ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರು ಕಾರು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಹೆಡ್​ಫೋನ್ ಹಾಕಿ ಕೈಯಲ್ಲೊಂದು ಫೈಲ್ ಹಿಡಿದುಕೊಂಡು ರಸ್ತೆಗೆ ಅಡ್ಡಬಂದು ಕಾರು ನಿಲ್ಲಿಸುವಂತೆ ಎರಡೂ ಕೈಗಳನ್ನು ಚಾಚಿದ್ದಾನೆ. ಕಾರು ನಿಲ್ಲುತ್ತಿದ್ದಂತೆ ಕಾರಿನ ಹತ್ತಿರಕ್ಕೆ ಬಂದಾಗ ಕಾರು ಚಾಲಕನಿಗೆ ಭಯವಾಗಿ ಕಾರು ಚಲಾಯಿಸಲು ಮುಂದಾಗಿದ್ದಾನೆ. ಈ ವೇಳೆ ಕಾರಿಗೆ ಅಡ್ಡಬಂದು ನಿಲ್ಲಿಸುವಂತೆ ಸೂಚಿಸುತ್ತಾನೆ. ಮತ್ತೆ ಕಾರನ್ನು ನಿಲ್ಲಿಸಿದಾಗ ಎಡಬದಿಯ ಬಾಗಿಲ ಬಳಿ ಬರುತ್ತಾನೆ. ಈ ವೇಳೆ ಚಾಲಕ ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದಾರೆ.

ಇದನ್ನೂ ಓದಿ: Bengaluru House Rent: ಬೆಂಗಳೂರಿನ ಬಾಡಿಗೆ ನಿವಾಸಿಗಳಿಗೆ ದರ ಏರಿಕೆಯ ಶಾಕ್; ಮನೆ ಬಾಡಿಗೆ ಶೇ 45ರವರೆಗೆ ಹೆಚ್ಚಳ

ಡಿಸೆಂಬರ್ 18ರಂದು ಮಧ್ಯರಾತ್ರಿ ನಡೆದ ಘಟನೆಯ ವಿಡಿಯೋವನ್ನು ThirdEye ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಮಧ್ಯರಾತ್ರಿ ಕಾರು ನಿಲ್ಲಿಸುವ ಆ ವ್ಯಕ್ತಿ ಯಾರು? ಯಾಕಾಗಿ ಕಾರು ನಿಲ್ಲಿಸಿದ್ದ ಅನ್ನೋದು ಗೊತ್ತಿಲ್ಲ. ಆದರೆ ಈ ನಿಗೂಢ ವ್ಯಕ್ತಿಯನ್ನು ಪತ್ತೆಹಚ್ಚಲು ಮಹದೇಪುರ ಠಾಣೆ ಪೊಲೀಸರು ಮುಂದಾಗಿದ್ದು, ಆ ವ್ಯಕ್ತಿ ಸಿಕ್ಕ ಬಳಿಕವಷ್ಟೇ ಘಟನೆಗೆ ಸ್ಪಷ್ಟತೆ ಸಿಗಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:54 am, Thu, 22 December 22