ಬೆಂಗಳೂರು: ಮೈಸೂರನಿಂದ(Mysuru) ಬರುವ ಪ್ರತಿನಿತ್ಯ ಸೂಪರ್ ಫಾಸ್ಟ್ ಹಾಗೂ ಎಕ್ಸ್‌ಪ್ರೆಸ್ ರೈಲುಗಳು (Trains) ಬೆಂಗಳೂರಿನ(Bengaluru) ನಾಯಂಡಹಳ್ಳಿಯಲ್ಲಿ(Nayandahalli) ನಿಲುಗಡೆಯಾಗಲಿವೆ. ಬೆಂಗಳೂರಿನಿಂದ ತೆರಳುವ ಹಾಗೂ ನಗರಕ್ಕೆ ಆಗಮಿಸುವ ನಾಲ್ಕು ರೈಲುಗಳು ನಾಯಂಡಹಳ್ಳಿಯಲ್ಲಿ ನಿಲುಗಡೆಯಾಗಲಿದ್ದು, ಪ್ರಯಾಣಿಕರು ಇದರ ಉಪಯೋಗ ಪಡೆದುಕೊಳ್ಳಬಹುದಾಗಿದೆ. ಇದರೊಂದಿಗೆ ರೈಲು ಪ್ರಯಾಣಿಕರ ಬಹುದಿನಗಳ ಬೇಡಿಕೆಯನ್ನು ರೈಲ್ವೆ ಇಲಾಖೆ ಈಡೇರಿಸಿದೆ. ಈ ಸೇವೆ ಸೆಪ್ಟೆಂಬರ್ 20 ರವರೆಗೆ ಪ್ರಾಯೋಗಿಕವಾಗಿ ನಿಲುಗಡೆ ಆಗಲಿವೆ. ಮುಖ್ಯವಾಗಿ ನಾಯಂಡಹಳ್ಳಿಯಲ್ಲಿ ರೈಲುಗಳು ಕೇವಲ ಒಂದು ನಿಮಿಷ ಮಾತ್ರ ನಿಲ್ಲಿಸಲಿವೆ. ಹೀಗಾಗಿ ಪ್ರಯಾಣಿಕರು ಇದರ ಬಗ್ಗೆ ಎಚ್ಚರಿಕೆ ವಹಿಸಬೇಕು. ಹಾಗಾದ್ರೆ ಯಾವೆಲ್ಲ ರೈಲುಗಳು ನಾಯಂಡಹಳ್ಳಿಯಲ್ಲಿ ಸ್ಟಾಪ್ ಕೊಡಲಿವೆ ಎನ್ನುವ ವಿವರ ಈ ಕೆಳಗಿನಂತಿದೆ ನೀಡಿ.
ರೈಲು ಸಂಖ್ಯೆ 06525 ಬೆಂಗಳೂರು – ಮೈಸೂರು ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಜೆ 5.04 ನಿಮಿಷಕ್ಕೆ ನಾಯಂಡನಹಳ್ಳಿಗೆ ಆಗಮಿಸಿ, ಒಂದು ನಿಮಿಷ ನಿಲುಗಡೆ ನಂತರ 5.05 ನಿಮಿಷಕ್ಕೆ ಅಲ್ಲಿಂದ ತೆರಳುತ್ತದೆ. ಮೈಸೂರು-ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್ ರೈಲು ರಾತ್ರಿ 10.27 ಕ್ಕೆ ನಾಯಂಡಹಳ್ಳಿಗೆ ಆಗಮಿಸಿ, ಒಂದು ನಿಮಿಷದ ನಿಲುಗಡೆ ನಂತರ 10.28 ಕ್ಕೆ ಅಲ್ಲಿಂದ ತೆರಳಲಿದೆ.
ಮೈಸೂರು – ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಖ್ಯೆ 06269 ನಾಯಂಡಹಳ್ಳಿಗೆ ತಡರಾತ್ರಿ 12.17 ಕ್ಕೆ ಆಗಮಿಸಿ ಅಲ್ಲಿಂದ 12.18 ನಿಮಿಷಕ್ಕೆ ಹೊರಡಲಿದೆ. ರೈಲು ಸಂಖ್ಯೆ 06270 ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಡುವೆ ಸಂಚರಿಸುವ ವಿಶೇಷ ಎಕ್ಸ್‌ಪ್ರೆಸ್ ರೈಲು, ತಡರಾತ್ರಿ 12.27ಕ್ಕೆ ನಾಯಂಡಹಳ್ಳಿಗೆ ಆಗಮಿಸಲಿದ್ದು, ಒಂದು ನಿಮಿಷದ ನಿಲುಗಡೆ ನಂತರ 12.28 ಕ್ಕೆ ಅಲ್ಲಿಂದ ಹೊರಡಲಿದೆ.
ಈ ಮೇಲೆ ತಿಳಿಸಲಾದ ರೈಲುಗಳು ನಾಯಂಡಹಳ್ಳಿಯಲ್ಲಿ ಒಂದು ನಿಮಿಷ ಕಾಲ ನಿಲ್ಲಿಸಲಿದ್ದು, ಇದೇ ಸೆಪ್ಟೆಂಬರ್ 20ರ ವರೆಗೆ ಪ್ರಾಯೋಗಿಕವಾಗಿ ರೈಲು ನಿಲುಗಡೆಯಾಗಲಿವೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಇದರಿಂದ ಬೆಂಗಳೂರಿನ ಪಶ್ಚಿಮ ಉಪನಗರಗಳಲ್ಲಿ ವಾಸಿಸುವ ಜನರಿಗೆ ಅನುಕೂಲವಾಗಲಿದೆ.
ಇನ್ನಷ್ಟು ಬೆಂಗಳೂರು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 7:20 am, Thu, 22 June 23