Street Dogs: ಬೆಂಗಳೂರಿನಲ್ಲಿ ಬೀದಿ ನಾಯಿಗಳ ಹಾವಳಿ ತಡೆಗೆ ಬಿಬಿಎಂಪಿಯಿಂದ ಮಾರ್ಗಸೂಚಿ ಬಿಡುಗಡೆ
ಬೆಂಗಳೂರಿನಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಬಿಬಿಎಂಪಿಯು ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಹಾಗೂ ಬೀದಿ ನಾಯಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಜನ ಸಾಮಾನ್ಯರು ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬಹುದು ಎಂಬ ಬಗ್ಗೆ ಸಲಹೆ ನೀಡಿದೆ.
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ಬೀದಿನಾಯಿಗಳ ಹಾವಳಿ ಹೆಚ್ಚಾಗುತ್ತಿದೆ(Street Dogs). ಒಂಟಿಯಾಗಿ ಓಡಾಡಂಗಿಲ್ಲ, ರಾತ್ರಿ ವೇಳೆ ಒಬ್ರೇ ಬರಂಗಿಲ್ಲ. ಅದ್ರಲ್ಲೂ ಮಕ್ಕಳು ಕಂಡ್ರೆ ಸಾಕು ಬೀದಿ ನಾಯಿಗಳು ಎಗರಿ ಬೀಳುತ್ತವೆ . ಹೀಗಾಗಿ ಮಕ್ಕಳನ್ನ ಶಾಲೆಗೆ ಒಂಟಿಯಾಗಿ ಕಳಿಸಲು ಪೋಷಕರು ಭಯ ಬೀಳ್ತಿದ್ದಾರೆ. ಅದಕ್ಕೆ ಬೀದಿ ನಾಯಿ ದಾಳಿ ತಪ್ಪಿಸಲು ಪಾಲಿಕೆ(BBMP) ಜಾಗೃತಿ ಆರಂಭಿಸಿದೆ.
2 ದಿನದ ಹಿಂದಷ್ಟೇ ಕೇರಳದಲ್ಲಿ ಬಾಲಕಿ ಮೇಲೆ ಬೀದಿ ನಾಯಿಗಳು ಎರಗಿದ್ದವು. ಒಂದು ಕಾಲು ಕಚ್ಚುತ್ತಿದ್ರೆ ಮತ್ತೊಂದು ಕೈಗೆ ಬಾಯಿ ಹಾಕಿತ್ತು. ಇನ್ನೊಂದು ನಾಯಿ ತಲೆಯನ್ನೇ ಮುಕ್ಕಿತಿನ್ನಲು ಮುಂದಾಗ್ತಿತ್ತು. ಈ ರೀತಿ ಕೇರಳದಲ್ಲಿ ನಡೆದ ಭಯಾನಕ ದೃಶ್ಯ ಕಂಡು ಜನ ಬೆಚ್ಚಿಬಿದ್ದಿದ್ದರು. ಇಂಥಾ ಅದೆಷ್ಟೋ ಪ್ರಕರಣಗಳು ಬೆಂಗಳೂರಿನಲ್ಲೂ ನಡೆದಿತ್ತು. ಇದ್ರಿಂದ ಎಚ್ಚೆತ್ತಿರೋ ಪಾಲಿಕೆ ಕೆಲ ಮಾರ್ಗಸೂಚಿ ರೆಡಿ ಮಾಡಿದೆ.
ಸಿಟಿಯಲ್ಲಿ ಹಿಂಡು ಹಿಂಡಾಗಿ ಬೀದಿನಾಯಿಗಳು ದಾಂಗುಡಿ ಇಡುತ್ತಿದ್ದು, ಮಕ್ಕಳ ಮೇಲೆ ಹೆಚ್ಚಾಗಿ ಎಗುರಿ ಬೀಳ್ತಿವೆ. ಕಳೆದ ಕೆಲವು ದಿನಗಳಿಂದ ಸಿಟಿಯಲ್ಲಿ ಬೀದಿ ನಾಯಿಗಳ ಹಾವಳಿ ಮಕ್ಕಳ ಮೇಲಿನ ದಾಳಿ ಪ್ರಕರಣ ಹೆಚ್ಚಾಗುತ್ತಿವೆ ಹೀಗಾಗಿ ಪಾಲಿಕೆ ನಾಯಿ ಕಡಿತ ಪ್ರಕರಣ ತಪ್ಪಿಸಲು ಜಾಗೃತಿ ಅಭಿಯಾನಕ್ಕೆ ಮುಂದಾಗಿದೆ. ನಾಯಿಗಳ ಕಡಿತಕ್ಕೆ ಕಾರಣ ಏನು? ಬೀದಿ ನಾಯಿಗಳಿಂದ ಸುರಕ್ಷಿತವಾಗಿರಲು ಏನು ಮಾಡಬೇಕು? ಯಾವ ರೀತಿಯಾಗಿ ಬೀದಿ ನಾಯಿಗಳಿಂದ ಪಾರಾಗಬೇಕು ಅಂತಾ ಶಾಲಾ ಮಕ್ಕಳು ಹಾಗೂ ಜನರಿಗೆ ಜಾಗೃತಿ ಮೂಡಿಸಲು ಪಾಲಿಕೆ ಮುಂದಾಗಿದೆ.
ಕಳೆದ ಮೂರು ವರ್ಷಗಳಿಂದ ಪಾಲಿಕೆ ರೇಬಿಸ್ ಲಸಿಕೆಯ ಪರಿಣಾಮ ಬೀದಿ ನಾಯಿಗಳ ಕಡಿತದ ಪ್ರಮಾಣ ಕಡಮೆಯಾಗಿದೆಯಂತೆ. 2019- 20ರಲ್ಲಿ 42,818, ಜನರಿಗೆ ಬೀದಿ ನಾಯಿ ಕಚ್ಚಿದ್ರೆ, 2020-21ರಲ್ಲಿ 18,629 ಮತ್ತು 2021-22ರಲ್ಲಿ 17,610 ನಾಯಿ ಕಚ್ಚಿದ ಪ್ರಕರಣಗಳು ವರದಿಯಾಗಿವೆ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇನ್ನು ಬೀದಿ ನಾಯಿಗಳು ಅಥವ ಸಾಕು ನಾಯಿಗಳ ಕುರಿತು ಶಾಲಾ ಕಾಲೇಜುಗಳಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ಪಾಲಿಕೆಗೆ ಕೆಲವು ಎನ್ಜಿಒಗಳು ಕೂಡಾ ಸಾಥ್ ನೀಡಿದ್ದು ಎನ್ಜಿಒಗಳ ಸಾಹಯದೊಂದಿಗೆ ಪಾಲಿಕೆ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ನಾಯಿಗಳ ಜೊತೆ ಹೇಗೆ ವರ್ತಿಸಬೇಕು ಏನೆಲ್ಲ ಮುನ್ನೆಚ್ಚರಿಕೆ ತಗೆದುಕೊಳ್ಳಬೇಕು ಎಂದು ಸಲಹೆ ಸೂಚನೆ ಹಾಗೂ ಮಾರ್ಗದರ್ಶನ ನೀಡಿದ್ದಾರೆ.
ಇದನ್ನೂ ಓದಿ: Stray Dog Attack: 8 ವರ್ಷದ ಬಾಲಕಿಯ ಮೇಲೆ 3 ಬೀದಿ ನಾಯಿಗಳ ದಾಳಿ
ಬಿಬಿಎಂಪಿಯ ಮಾರ್ಗಸೂಚಿಯಲ್ಲೇನಿದೆ?
- ಬೀದಿ ನಾಯಿಗಳ ಕಂಡಾಗ ತೊಂದರೆ ನೀಡಬಾರದು
- ನಾಯಿಗಳಿಗೆ ಯಾವುದೇ ಪ್ರಚೋದನೆ,ಕಿರಿಕ್ ಮಾಡಬಾರ್ದು
- ನಾಯಿಗಳಿಗೆ ತೊಂದರೆ ಕೊಟ್ರೆ ಮಾತ್ರ ಅಟ್ಯಾಕ್ ಮಾಡುತ್ತವೆ
- ಬೀದಿ ನಾಯಿ, ಸಾಕು ನಾಯಿ ಕಂಡಾಗ ಆರೋಗ್ಯದ ಬಗ್ಗೆ ಗಮನ
- ಅನಾರೋಗ್ಯದಿಂದ ಇರೋ ನಾಯಿಗಳಿಂದ ದೂರವಿರಿ
- ನಾಯಿಗಳು ಕಚ್ಚಿದ್ರೆ ಕಡ್ಡಾಯವಾಗಿ ಲಸಿಕೆ ಪಡೆಯಬೇಕು
- ಕಚ್ಚುವ ನಾಯಿಗಳು ತೀಕ್ಷ್ಣವಾದ ನೋಟ, ಬಿದ್ದ ದವಡೆ ಹೊಂದಿರುತ್ತವೆ
ನಾಯಿಗಳು ಕಚ್ಚಿದ್ರೆ ಪಶುಸಂಗೋಪನಾ ಇಲಾಖೆ ಸಂಪರ್ಕ ಮಾಡಿ ತಿಳಸಬೇಕು. ಪಶುಸಂಗೋಪನಾ ಇಲಾಖೆ ಸಂಪರ್ಕಿಸಿ ಪರಿಹಾರ ಪಡೆಯಬೇಕು. ನಾಯಿಗಳ ಮೇಲೆ ದಾಳಿಗೆ ಮುಂದಾಗಬಾರದು. ನಾಯಿಗಳಿಂದ ಅಪಾಯ ಅಂತಾ ಗೊತ್ತಾದ್ರೆ ದೂರದಿಂದ ಸಾಗುವಂತೆ ಬಿಬಿಎಂಪಿ ಸಲಹೆ ನೀಡಿದೆ. ನಾಯಿಗಳ ಜೊತೆ ಪ್ರೀತಿಯಿಂದ ವರ್ತಿಸಿ. ಕೋಪಗೊಂಡ ನಾಯಿಗಳು ಸಾಮಾನ್ಯವಾಗಿ ಗುರಾಯಿಸುವುದು, ಬೀಳುವ ದವಡೆ, ಬೀಳುವ ನಾಲಿಗೆ, ಹೇರಳವಾದ ಜೊಲ್ಲು ಸುರಿಸುವುದು. ತಿಳಿದ ದಿಕ್ಕಿನಕಡೆ ಓಡುವ ಲಕ್ಷಣ ಹೊಂದಿರುತ್ತವೆ ಹೀಗಾಗಿ ಇತಂಹ ಲಕ್ಷಣ ಹೊಂದಿರುವ ನಾಯಿಗಳಿಂದ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳವಂತೆ ಸಲಹೆ ನೀಡಿದ್ದು ಈ ಬಗ್ಗೆ ಜಾಗೃತಿಗೆ ಪಾಲಿಕೆ ಮುಂದಾಗಿದೆ.
ಒಟ್ನಲ್ಲಿ ಪಾಲಿಕೆ ಅಧಿಕಾರಿಗಳು ನಾಯಿಗಳ ಕಡಿತದ ಪ್ರಕರಣ ಕಡಿಮೆ ಮಾಡಲು ಜಾಗೃತಿ ಅಭಿಯಾನಕ್ಕೆ ಮುಂದಾಗಿದ್ದು ಜೊತೆಗೆ ಇದೇ ಜುಲೈ ಒಂದರಿಂದ ನಾಯಿಗಳ ಗಣತಿಗೆ ಮುಂದಾಗಿದೆ ಇನ್ನು ನಾಯಿ ಕಡಿತಕ್ಕೆ ಬಲಿಯಾದವರಿಗೆ ಬಿಬಿಎಂಪಿಯೇ ಪರಿಹಾರ ನೀಡುತ್ತಿದ್ದು, ವೈದ್ಯಕೀಯ ವೆಚ್ಚವನ್ನೂ ಭರಿಸುತ್ತಿದೆ. ಹೀಗಾಗಿ ನಾಯಿ ಕಡಿತಕ್ಕೆ ಒಳಗಾದವರು ಬಿಬಿಎಂಪಿಯ ಪಶುಸಂಗೋಪನಾ ಇಲಾಖೆಯ ಸಂಪರ್ಕಿಸಲು ತಿಳಸಿದ್ದು ಬೀದಿ ನಾಯಿಗಳ ಕಡಿತ ಬಗ್ಗೆ ಹೆಚ್ಚು ಗಮನ ಹರಿಸಲಾಗುತ್ತಿದೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ