ಹುಂಜ ಕೂಗುತ್ತದೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ ಪಕ್ಕದ ಮನೆಯವರು

ಹುಂಜ ಕೂಗುತ್ತದೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ ಪಕ್ಕದ ಮನೆಯವರು

TV9 Web
| Updated By: Rakesh Nayak Manchi

Updated on:Dec 18, 2022 | 12:23 PM

ಹೂಂಜ ಪ್ರತೀ ದಿನ ಕೂಗುತ್ತಾ ತೊಂದರೆ ನೀಡುತ್ತದೆ ಎಂದು ಆರೋಪಿಸಿ ಪಕ್ಕದ ಮನೆಯವರು ಪೊಲೀಸ್ ಠಾಣೆಗೆ ದೂರು ನೀಡಿದ ಪ್ರಸಂಗ ಬೆಂಗಳೂರು ನಗರದಲ್ಲಿ ನಡೆದಿದೆ.

ಬೆಂಗಳೂರು: ಎದುರು ಮನೆಯವರು ಸಾಕುತ್ತಿರುವ ಹುಂಜಾ (Cock) ಮತ್ತು ಬಾತುಕೋಳಿ (Duck) ಪ್ರತಿನಿತ್ಯ ಕೂಗುವುದರಿಂದ ನಮಗೆ ತೊಂದರೆ ಆಗುತ್ತಿದೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಪೊಲೀಸ್ ಠಾಣೆಗೆ ದೂರು ನೀಡಿದ ಅಪರೂಪದ ಪ್ರಸಂಗ ನಗರದಲ್ಲಿ ನಡೆದಿದೆ. ಎದುರು ಮನೆಯವರು ಹುಂಜಾ ಮತ್ತು ಬಾತುಕೋಳಿ ಸಾಕುತ್ತಿದ್ದಾರೆ. ಅವುಗಳು ಪ್ರತಿದಿನ ಕೂಗುವುದರಿಂದ ನೆರೆಹೊರೆಯವರಿಗೆ ತೊಂದರೆಯಾಗುತ್ತಿದೆ. ನಮ್ಮ ಮನೆಯಲ್ಲಿರುವ ಎರಡು ವರ್ಷದ ಮಗು ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಟ್ವಿಟ್ಟರ್ ಮೂಲಕ ಬೆಂಗಳೂರು ಪೊಲೀಸರಿಗೆ (Bengaluru Police) ದೂರು ನೀಡಿದ್ದಾರೆ. ನೆಮೊ ಎಂಬ ಟ್ವಿಟ್ಟರ್ ಖಾತೆ ಮೂಲಕ ಹುಂಜಾ ಕೂಗುವ ವಿಡಿಯೋ ಹಂಚಿಕೊಂಡು ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡ ಲಾಗಿದೆ. ನಗರದ ಜೆ.ಪಿ.ನಗರ 8ನೇ ಹಂತದಲ್ಲಿರುವ ವ್ಯಕ್ತಿಯಿಂದ ದೂರು ನೀಡಲಾಗಿದ್ದು, ಸೂಕ್ತ ಕ್ರಮ ಕೈಗೊಳ್ಳಿ ಅಥವಾ ಹುಂಜಾ ಮತ್ತು ಕೋಳಿಗಳನ್ನು ಬೇರೆಡೆ ಸ್ಥಳಾಂತರಿಸುವಂತೆ ಮನವಿ ಮಾಡಿದ್ದಾರೆ. ತಲಘಟ್ಟಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ ಎಂದು ಟ್ವೀಟ್ ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Dec 18, 2022 11:42 AM