ಕಾರ್ಯಕರ್ತರ ಜೋಷ್ ಮತ್ತೆ ಡಬಲ್ ಇಂಜಿನ್ ಸರ್ಕಾರಗಳನ್ನು ಅಧಿಕಾರಕ್ಕೆ ತರುತ್ತದೆ: ಕೇಂದ್ರ ಸಚಿವ ಅಶ್ವಿನ್ ವೈಷ್ಣವ್

ನರೇಂದ್ರ ಮೋದಿ ಅವರು ಸದೃಢ ಭಾರತ ನಿರ್ಮಿಸುವ ಪಣ ತೊಟ್ಟಿದ್ದಾರೆ. ಸಮಾಜದ ವಂಚಿತ ವರ್ಗಗಳ ಪರ ಮೋದಿಯವರು ಸದಾ ಚಿಂತಿಸುತ್ತಾರೆ ಎಂದು ಕೇಂದ್ರ ಸಚಿವ ಅಶ್ವಿನ್ ವೈಷ್ಣವ್ ಹೇಳಿದರು.

ಕಾರ್ಯಕರ್ತರ ಜೋಷ್ ಮತ್ತೆ ಡಬಲ್ ಇಂಜಿನ್ ಸರ್ಕಾರಗಳನ್ನು ಅಧಿಕಾರಕ್ಕೆ ತರುತ್ತದೆ: ಕೇಂದ್ರ ಸಚಿವ ಅಶ್ವಿನ್ ವೈಷ್ಣವ್
ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
Follow us
TV9 Web
| Updated By: Rakesh Nayak Manchi

Updated on:Dec 18, 2022 | 1:53 PM

ಬೆಂಗಳೂರು: ನಮ್ಮ ಕಾರ್ಯಕರ್ತರ ಜೋಷ್ ಮತ್ತೆ ಡಬಲ್ ಇಂಜಿನ್ ಸರ್ಕಾರಗಳನ್ನು ಅಧಿಕಾರಕ್ಕೆ ತರುತ್ತದೆ ಎಂದು ಕೇಂದ್ರ ರೈಲ್ವೇ ಸಚಿವ ಅಶ್ವಿನ್ ವೈಷ್ಣವ್ (Ashwini Vaishnav) ಅವರು ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿ ಪ್ರಕೋಷ್ಠಗಳ ಸಮಾವೇಶ (BJP prakoshtha convention)ದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಶೇ.101ರಷ್ಟು ಬಿಜೆಪಿ (Karnataka BJP) ಗೆಲ್ಲುತ್ತದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಸದೃಢ ಭಾರತ ನಿರ್ಮಿಸುವ ಪಣ ತೊಟ್ಟಿದ್ದಾರೆ. ಸಮಾಜದ ವಂಚಿತ ವರ್ಗಗಳ ಪರ ಮೋದಿಯವರು ಸದಾ ಚಿಂತಿಸುತ್ತಾರೆ ಎಂದರು.

ಇದನ್ನೂ ಓದಿ: ಬಿಜೆಪಿ ನಾಯಕರ ಕಿತ್ತಾಟದಲ್ಲಿ ಆಪರೇಷನ್ ಕಮಲದ ಹಣ ಬಯಲಿಗೆ, ಕಾಂಗ್ರೆಸ್​ನಿಂದ ಲೋಕಾಯುಕ್ತಕ್ಕೆ ದೂರು

ಡಬಲ್ ಇಂಜಿನ್ ಸರ್ಕಾರ ಇರುವ ರಾಜ್ಯಗಳಲ್ಲಿ ಅಭಿವೃದ್ಧಿ ಕೆಲಸಗಳು ವೇಗವಾಗಿ ನಡೆಯುತ್ತಿವೆ. ಕಾಂಗ್ರೆಸ್ ಇದ್ದಾಗ ಅಭಿವೃದ್ಧಿ ಮರೀಚಿಕೆ ಆಗಿತ್ತು. ರೈಲ್ವೇ ವಲಯಕ್ಕೆ ಕಾಂಗ್ರೆಸ್ ಇದ್ದಾಗ ಕರ್ನಾಟಕಕ್ಕೆ ಕೊಟ್ಟಿದ್ದು ವಾರ್ಷಿಕ 834 ಕೋಟಿ ಅಷ್ಟೇ. 2014ಕ್ಕೂ ಮುನ್ನ ಕರ್ನಾಟಕಕ್ಕೆ ಕಾಂಗ್ರೆಸ್ ಎಷ್ಟು ಅನುದಾನ ಕೊಡುತ್ತಿದ್ದರು? ಮೋದಿ ಅವರು ಕರ್ನಾಟಕಕ್ಕೆ 6,091 ಕೋಟಿ ರೂ. ಕೊಡುತ್ತಿದ್ದಾರೆ ಎಂದರು.

ಇದನ್ನೂ ಓದಿ: ನಿಖಿಲ್‌ಗಾಗಿ ಕ್ಷೇತ್ರ ತ್ಯಾಗ ಮಾಡಿದ ಅನಿತಾ ಕುಮಾರಸ್ವಾಮಿ, ತಾಯಿಯಿಂದಲೇ ಮಗನಿಗೆ ಪಟ್ಟಾಭಿಷೇಕ

ಕರ್ನಾಟಕಕ್ಕೆ ಕಾಂಗ್ರೆಸ್ ಯಾವಾಗಲೂ ತಾರತಮ್ಯ ಮಾಡುತ್ತಿತ್ತು. ಕಾಂಗ್ರೆಸ್​ಗೆ ಕರ್ನಾಟಕ ಹಾಲು ಕರೆಯುವ ಹಸು ಆಗಿತ್ತು. ಇಲ್ಲಿಂದ ಪಡೆಯುತ್ತಿದ್ದರೇ ಹೊರತು ಮೇಲಿಂದ ಏನೂ ಕೊಡುತ್ತಿರಲಿಲ್ಲ. ಇದುವೇ ನಮಗೂ ಕಾಂಗ್ರೆಸ್​ಗೂ ಇರುವ ವ್ಯತ್ಯಾಸ. ಟೆಲಿಕಾಂ ಇರಲಿ ಬೇರೆ ಯಾವುದೇ ವಲಯಕ್ಕೂ ಕಾಂಗ್ರೆಸ್ ಅನುದಾನ ಕೊಡುತ್ತಿರಲಿಲ್ಲ. ಮೋದಿ ರೈಲ್ವೇ ವಲಯದ ಪೂರ್ಣ ಪುನಶ್ಚೇತನ ಮಾಡುತ್ತಿದ್ದಾರೆ. ಅಭಿವೃದ್ಧಿಯ ನಿಟ್ಟಿನಲ್ಲಿ ಮತ್ತೆ ಡಬಲ್ ಇಂಜಿನ್ ಸರ್ಕಾರ ಅಧಿಕಾರಕ್ಕೆ ತರುವ ಅಗತ್ಯ ಇದೆ ಎಂದರು.

ಕುಕ್ಕರ್ ಬಾಂಬ್ ಡಿಜಿಪಿ ನೋಡಿದ್ರಾ ಎಂಬ ಕೊಳಕು ರಾಜಕಾರಣ ನಾವು ಮಾಡಲ್ಲ

ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಮಾತನಾಡಿ, ನಾವು ಗೆದ್ದರೆ ಇಲ್ಲೇ ಕೊಚ್ಚಿಯಲ್ಲಿ ಬಿದ್ದು ಈಜಾಡುವ ರಾಜಕಾರಣ ನಾವು ಮಾಡಲ್ಲ. ಕುಕ್ಕರ್ ಬಾಂಬ್ ಡಿಜಿಪಿ ನೋಡಿದ್ರಾ ಎಂಬ ಕೊಳಕು ರಾಜಕಾರಣ ನಾವು ಮಾಡಲ್ಲ. ಇನ್ನು ನೂರು ದಿನಗಳಿಗೆ ಚುನಾವಣೆ ಗೊತ್ತಾಗುತ್ತದೆ. ನಮ್ಮ ರಾಜ್ಯದಲ್ಲಿ ಕೆಲವು ರಾಜಕೀಯ ಮುಖಂಡರು ಬೀದಿಗೆ ಬಂದರು ಅಂದರೆ ಚುನಾವಣೆ ಬಂತು ಅಂತಾ ಅರ್ಥ. ಅಲ್ಲಿಯವರೆಗೆ ಯಾವುದೇ ರತ್ನವೂ ಇರುವುದಿಲ್ಲ. ಅವರು ಪ್ರತಿ ಬಾರಿಯೂ ಕಡೇ ಚುನಾವಣೆ ಅಂತಾ ಕಣ್ಣೀರು ಹಾಕುತ್ತಾರೆ, ಯಾಕೆ ಕಣ್ಣೀರು ಹಾಕುತ್ತಾರೋ ಗೊತ್ತಿಲ್ಲ. ನಾವು ಒಳ್ಳೆಯ ಆಡಳಿತ ಕೊಟ್ಟಿದ್ದೇವೆ, ಅದಕ್ಕಾಗಿ ಆನಂದವಾಗಿದ್ದೇವೆ. ಅಪ್ಪ ಮಗನಿಗೆ, ಮಗ ಹೆಂಡತಿಗೆ, ಹೆಂಡತಿ ಇನ್ನೊಬ್ಬ ಮಗನಿಗೆ ತ್ಯಾಗ ಮಾಡುತ್ತಾರೆ. ಚುನಾವಣೆ ಬಂದಾಗ ಅವರಿಗೆ ಅವರ ತಾತ ನೆನಪಾಗುತ್ತಾರೋ ಗೊತ್ತಿಲ್ಲ, ಟಿಪ್ಪು ತಾತ ನೆನಪಾಗುತ್ತಾರೆ ಎಂದರು.

ಮಂಗಳೂರಿನಲ್ಲಿ ಆದ ಹಾಗೆ ಕೊಯಮತ್ತೂರಿನಲ್ಲೂ ಕುಕ್ಕರ್ ಬಾಂಬ್ ಸ್ಫೋಟ ಆಯಿತು. ನಮ್ಮ ರಾಜ್ಯದಲ್ಲಿ ಕೆಲವು ನಾಯಕರಿಂದ ಡಿಜಿಪಿಗೆ ಹೆಂಗೆ ಗೊತ್ತಾಯ್ತು ಅನ್ನೋ ಪ್ರಶ್ನೆ ಕೇಳಲಾಗುತ್ತದೆ. ಈ ರೀತಿ ಸಂಶಯ ವ್ಯಕ್ತಪಡಿಸಿದರೆ ಬುದ್ದಿ ಸರಿ ಇದೆ ಅಂತಾ ಹೇಳುತ್ತಾರಾ? ಡಿಜಿಪಿ ಬಗ್ಗೆ ಸಂಶಯ ಬಂತು ಅಂದರೆ ಚುನಾವಣೆ ಬಂತು ಅಂತಾ ಅರ್ಥ ಎಂದರು.

ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:25 pm, Sun, 18 December 22