ಬೆಂಗಳೂರು: ನಗರದಲ್ಲಿ ಹೊಸವರ್ಷವನ್ನು (New Year 2023) ವಿಜ್ರಂಭಣೆಯಿಂದ, ಮೋಜು ಮಸ್ತಿಯಿಂದ ಆಚರಿಸಲಾಗುತ್ತಿದೆ. ಒಂದಷ್ಟು ಮಂದಿ ಮದ್ಯ ಸೇವನೆ ಮಾಡಿ ಹೊವ ವರ್ಷವನ್ನು ಆಚರಿಸುತ್ತಾರೆ. ಹೀಗೆ ಕುಡಿದವರು ವಾಹನ ಚಲಾಯಿಸಿದರೆ ಅಪಘಾತ ಸಂಭವಿಸುವ ಸಾಧ್ಯತೆಯೂ ಇದೆ. ಕುಡಿದು ವಾಹನ ಚಲಾಯಿಸುವುದು ಅಪರಾಧವೂ ಆಗಿದೆ. ಈ ನಿಟ್ಟಿನಲ್ಲಿ ಹೊಸ ವರ್ಷದಂದು ಪೊಲೀಸರು ಫುಲ್ ಅಲರ್ಟ್ ಆಗಿರಲಿದ್ದು, ಡ್ರಂಕ್ ಆ್ಯಂಡ್ ಡ್ರೈವ್ (Drunk and Drive) ಮಾಡಿದರೆ ಖಾಕಿ ಕೈಗೆ ಲಾಕ್ ಆಗುವುದು ಖಚಿತ. ಮಾತ್ರವಲ್ಲದೆ ಭಾರೀ ದಂಡ ತೆರಬೇಕಾಗುತ್ತದೆ. ಏಕೆಂದರೆ ಅಂದು ಪೊಲೀಸರು ಗಲ್ಲಿ ಗಲ್ಲಿಯಲ್ಲಿಯೂ ಡ್ರಂಕ್ ಆ್ಯಂಡ್ ಡ್ರೈವ್ ಟೆಸ್ಟ್ ನಡೆಸಲಿದ್ದಾರೆ.
ಡ್ರಂಕ್ ಅಂಡ್ ಡ್ರೈವ್ ಟೆಸ್ಟ್ ನಡೆಸಲು ಟ್ರಾಫಿಕ್ ಪೊಲೀಸರು ಈಗಾಗಲೇ ವಿಶೇಷ ಕಾರ್ಯಾಚರಣೆ ಆರಂಭಿಸಿದ್ದಾರೆ. ಬೆಂಗಳೂರಿನಲ್ಲಿ ಡ್ರಂಕ್ ಆ್ಯಂಡ್ ಡ್ರೈವ್ನಿಂದಾಗಿ ಅಪಘಾತ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆ ಈ ವಿಶೇಷ ಕಾರ್ಯಾಚರಣೆ ಆರಂಭಿಸಲಾಗಿದೆ. ನಿನ್ನೆ (ಡಿ.23) ನಗರದಾದ್ಯಂತ ಡ್ರಂಕ್ ಅಂಡ್ ಡ್ರೈವ್ ಕಾರ್ಯಚರಣೆ ನಡೆಸಲಾಗಿದ್ದು, ಒಂದೇ ದಿನ 146 ಡ್ರಂಕ್ ಅಂಡ್ ಡ್ರೈವ್ ಪ್ರಕರಣಗಳು ದಾಖಲಾಗಿವೆ.
ಇದನ್ನೂ ಓದಿ: Corona in Karnataka: ವ್ಯಾಪಕವಾಗಿ ಹರಡುತ್ತಿರುವ ಕೊರೊನಾ, ರಾಜ್ಯ ಸರ್ಕಾರದಿಂದ ಹೊಸ ಮಾರ್ಗಸೂಚಿ ಬಿಡುಗಡೆ ಸಾಧ್ಯತೆ
ಜನವರಿ 1ರ ತನಕ ಈ ವಿಶೇಷ ಕಾರ್ಯಾಚರಣೆ ಮುಂದುವರೆಯಲಿದೆ. ಇತ್ತೀಚೆಗೆ ನಗರದಲ್ಲಿ ಮದ್ಯಪಾನ ಮಾಡಿ ವಾಹನ ಚಲಾವಣೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ನಗರದಲ್ಲಿ ಅಪಘಾತ ಪ್ರಕರಣಗಳು ಹೆಚ್ಚುತ್ತಿವೆ. ಹೆಚ್ಚುತ್ತಿರುವ ಅಪಘಾತಗಳನ್ನು ತಗ್ಗಿಸುವಲ್ಲಿ ಟ್ರಾಫಿಕ್ ಪೊಲೀಸರು ಈ ವಿಶೇಷ ಕಾರ್ಯಾಚರಣೆ ಆರಂಭಿಸಿದ್ದಾರೆ.
On the night of 23 December 2022 BTP conducted special drive against drunken drive, and booked 146 cases against drivers driving under the influence of alcohol. This drive will continue till 31st December 2022 to prevent Road Traffic Accidents.
— Dr.M.A.Saleem, IPS (@SplCPTraffic) December 24, 2022
ಮಂಗಳೂರು: ಇಯರ್ ಎಂಡ್ ಹಿನ್ನಲೆ ಮಸ್ತಿ ಮಾಡಲು ಕರಾವಳಿಯ ಬೀಚ್ಗಳಿಗೆ ಪ್ರವಾಸಿಗರು, ಜನರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ಮಂಗಳೂರಿನಲ್ಲಿರುವ ಪಣಂಬೂರು ಬೀಚ್ಗೆ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದು, ಚೀನಾದ ರೂಪಾಂತರಿ ಕೊರೋನಾದ ಪರಿಣಾಮ ಅರಿವಿಲ್ಲದಂತೆ ಇದ್ದುಕೊಂಡು ವರ್ಷಾಂತ್ಯದ ರಜೆಗಳನ್ನು ಕಳೆಯುತ್ತಿದ್ದಾರೆ.
ಇದನ್ನೂ ಓದಿ: Covid Fake News: ಕೋವಿಡ್ XBB ರೂಪಾಂತರ ಪರಿಣಾಮಕಾರಿ: ಈ ವಾಟ್ಸಾಪ್ ಸಂದೇಶ ನಂಬಬೇಡಿ ಆರೋಗ್ಯ ಸಚಿವಾಲಯ
ಚಿಕ್ಕಮಗಳೂರು: ಹೊಸ ವರ್ಷಾಚರಣೆ, ಇಯರ್ ಎಂಡ್ ಹಾಗೂ ವೀಕೆಂಡ್ ಹಿನ್ನಲೆ ಕಾಫಿನಾಡಿಗೆ ಪ್ರವಾಸಿಗರ ದಂಡೇ ಆಗಮಿಸತ್ತಿದೆ. ಜಿಲ್ಲೆಯ ರೆಸಾರ್ಟ್, ಹೋಂ ಸ್ಟೆಗಳು ಬಹುತೇಕ ಭರ್ತಿಗೊಂಡಿದ್ದು, ಮುಳ್ಳಯ್ಯನಗಿರಿ, ಬಾಬಾಬುಡನ್ ಗಿರಿಯಲ್ಲಿ ಜನರ ದಂಡೇ ಆಗಮಿಸುತ್ತಿದೆ. ಕೊರೋನಾ ಹೆಚ್ಚುವ ಭೀತಿ ಹಿನ್ನಲೆ ಕಠಿಣ ನಿಯಮ ಜಾರಿಯಾದರೆ ಹೊಸ ವರ್ಷಾಚರಣೆಯ ಮೋಜು, ಮಸ್ತಿಗೆ ಬ್ರೇಕ್ ಬೀಳಲಿದೆ. ಹೀಗಾಗಿ ಹೊಸ ವರ್ಷಾಚರಣೆಗೆ ನಿರ್ಬಂಧ ಹೇರದಂತೆ ಪ್ರವಾಸಿಗರ ಮನವಿ ಮಾಡುತ್ತಿದ್ದಾರೆ. ವ್ಯಾಕ್ಸಿನ್ ಪಡೆದು ಸುರಕ್ಷತೆ ಪಾಲಿಸುತ್ತಿರುವ ಹಿನ್ನಲೆ ಕಠಿಣ ನಿಯಮ ಜಾರಿ ಮಾಡದಂತೆ ಒತ್ತಾಯ ಮಾಡುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:10 pm, Sat, 24 December 22