Akasa Air: ಬೆಂಗಳೂರು – ಗೋವಾ ನಡುವೆ ಆಕಾಶ್ ಏರ್ ವಿಮಾನ; ಮುಂದಿನ ತಿಂಗಳು ಆರಂಭ

ಬೆಂಗಳೂರು, ಗೋವಾ ನಡುವಣ ವಿಮಾನ ಸೇವೆಯಿಂದ ಪ್ರವಾಸೋದ್ಯಮಕ್ಕೆ ಪ್ರಯೋಜನವಾಗಲಿದೆ. ಇದು ಬೆಂಗಳೂರು ಮತ್ತು ದೇಶದ ಅತ್ಯಂತ ಜನಪ್ರಿಯ ಪ್ರವಾಸೋದ್ಯಮ ಕೇಂದ್ರದ ನಡುವೆ ಸಂಪರ್ಕ ಬೆಸೆಯಲಿದೆ ಎಂದು ಆಕಾಶ್ ಏರ್​ ತಿಳಿಸಿದೆ.

Akasa Air: ಬೆಂಗಳೂರು - ಗೋವಾ ನಡುವೆ ಆಕಾಶ್ ಏರ್ ವಿಮಾನ; ಮುಂದಿನ ತಿಂಗಳು ಆರಂಭ
ಆಕಾಶ್ ಏರ್Image Credit source: PTI
Follow us
TV9 Web
| Updated By: Ganapathi Sharma

Updated on:Dec 24, 2022 | 3:55 PM

ಬೆಂಗಳೂರು: ದೇಶದ ಹೊಸ ವಿಮಾನಯಾನ ಸಂಸ್ಥೆ ಆಕಾಶ್ ಏರ್ (Akasa Air) ಜನವರಿ 11ರಿಂದ ಬೆಂಗಳೂರು (Bengaluru) ಹಾಗೂ ಗೋವಾ (Goa) ಮಧ್ಯೆ ವಿಮಾನ ಸೇವೆ ಆರಂಭಿಸಲಿದೆ. ಪ್ರತಿ ದಿನ ಎರಡು ವಿಮಾನಗಳು ಉಭಯ ನಗರಗಳ ಮಧ್ಯೆ ಹಾರಾಟ ನಡೆಸಲಿವೆ. ಫೆಬ್ರವರಿ 1ರಿಂದ ಮತ್ತೊಂದು ವಿಮಾನ ಹಾರಾಟ ನಡೆಸಲಿದೆ. ನಮ್ಮ ವೈಮಾನಿಕ ಜಾಲಕ್ಕೆ ಸೇರ್ಪಡೆಯಾಗುತ್ತಿರುವ 12ನೇ ವಿಮಾನ ನಿಲ್ದಾಣ ಗೋವಾ ಆಗಿದೆ. ಗೋವಾ, ಬೆಂಗಳೂರು ನಡುವೆ ಪ್ರತಿ ದಿನ ಎರಡು ವಿಮಾನಗಳು ಸಂಚರಿಸಲಿದ್ದು, ಫೆಬ್ರವರಿ 1ರಿಂದ ಮೂರು ವಿಮಾನಗಳು ಸಂಚರಿಸಲಿವೆ ಎಂದು ವಿಮಾನಯಾನ ಕಂಪನಿ ಇತ್ತೀಚೆಗೆ ಘೋಷಿಸಿತ್ತು.

ಬೆಂಗಳೂರು, ಗೋವಾ ನಡುವಣ ವಿಮಾನ ಸೇವೆಯಿಂದ ಪ್ರವಾಸೋದ್ಯಮಕ್ಕೆ ಪ್ರಯೋಜನವಾಗಲಿದೆ. ಇದು ಬೆಂಗಳೂರು ಮತ್ತು ದೇಶದ ಅತ್ಯಂತ ಜನಪ್ರಿಯ ಪ್ರವಾಸೋದ್ಯಮ ಕೇಂದ್ರದ ನಡುವೆ ಸಂಪರ್ಕ ಬೆಸೆಯಲಿದೆ. ಪ್ರವಾಸೋದ್ಯಮದ ಜತೆಗೆ ಆರ್ಥಿಕ ಬೆಳವಣಿಗೆಗೂ ಪ್ರಯೋಜನವಾಗಲಿದೆ ಎಂದು ಕಂಪನಿ ತಿಳಿಸಿದೆ.

ಗೋವಾದ ಮೋಪಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು. ಗೋವಾ ಹಾಗೂ ಮುಂಬೈ ನಡುವೆ ಕೂಡ ಜನವರಿ 11ರಿಂದ ಹೊಸ ವಿಮಾನಯಾನ ಸೇವೆ ಆರಂಭಗೊಳ್ಳಲಿದೆ.

ಇದನ್ನೂ ಓದಿ: Rakesh Jhunjhunwala: ‘ಬಿಗ್​​ ಬುಲ್’​ ರಾಕೇಶ್ ಜುಂಜುನ್​ವಾಲಾ ಬಗ್ಗೆ ನೀವು ತಿಳಿಯಬೇಕಾದ 5 ಅಪರೂಪದ ಸಂಗತಿಗಳಿವು

ಡಿಸೆಂಬರ್ ಅಂತ್ಯದ ವೇಳೆಗೆ ವಾರಕ್ಕೆ 500ರಂತೆ ವಿಮಾನ ಹಾರಾಟದ ಗುರಿ ಹೊಂದಿರುವುದಾಗಿ ಆಕಾಶ್ ಏರ್​ ಇತ್ತೀಚೆಗೆ ತಿಳಿಸಿತ್ತು. 12 ನಗರಗಳ ಮಧ್ಯೆ 18 ಮಾರ್ಗಗಳ ಮೂಲಕ ವಿಮಾನ ಹಾರಾ ನಡೆಸುತ್ತಿದೆ ಎಂದು ಕಂಪನಿ ಹೇಳಿಕೊಂಡಿದೆ. ಆಕಾಶ್ ಏರ್ ವಿಮಾನಗಳು ಸದ್ಯ ಬೆಂಗಳೂರು, ಅಹಮದಾಬಾದ್, ಕೊಚ್ಚಿ, ಚೆನ್ನೈ, ಮುಂಬೈ, ದೆಹಲಿ, ಗುವಾಹಟಿ, ಅಗರ್ತಲ, ಪುಣೆ, ವಿಶಾಖಪಟ್ಟಣಂ ಹಾಗೂ ಲಖನೌ ನಗರಗಳಿಂದ ಕಾರ್ಯಾಚರಣೆ ನಡೆಸುತ್ತಿವೆ.

ಇತ್ತೀಚೆಗೆ ನಿಧನರಾಗಿದ್ದ, ಭಾರತದ ವಾರನ್ ಬಫೆಟ್ ಎಂದೇ ಪ್ರಸಿದ್ಧರಾಗಿದ್ದ ರಾಕೇಶ್ ಜುಂಜುನ್​ವಾಲಾ ಅವರ ಕನಸಾಗಿದ್ದ ಆಕಾಶ್ ಏರ್​ಗೆ ಜುಲೈ ತಿಂಗಳಲ್ಲಿ ನಾಗರಿಕ ವಿಮಾನಯಾನ ನಿರ್ದೇಶನಾಲಯದಿಂದ (ಡಿಜಿಸಿಎ) ಕಾರ್ಯಾಚರಣೆ ಪ್ರಮಾಣಪತ್ರ ದೊರೆತಿತ್ತು. ಬಳಿಕ ಕಂಪನಿಯ ವಿಮಾನಗಳ ಹಾರಾಟ ಆರಂಭಗೊಂಡಿತ್ತು. ವಿಮಾನಯಾನ ಕ್ಷೇತ್ರ ಅಷ್ಟೊಂದು ಉತ್ತಮವಾಗಿ ಕಾರ್ಯನಿರ್ವಹಿಸದ ಈ ಸಂದರ್ಭದಲ್ಲಿ ಏರ್​ಲೈನ್ಸ್​ ಅನ್ನು ಆರಂಭಿಸಿದ ಬಗ್ಗೆ ಪ್ರತಿಕ್ರಿಯಿಸಿದ್ದ ಜುಂಜುನ್​ವಾಲಾ, ನಾನು ವೈಫಲ್ಯವನ್ನು ಅಥವಾ ಸೋಲನ್ನು ಅನುಭವಿಸಲು ಸಿದ್ಧನಾಗಿದ್ದೇನೆ ಎಂದು ಹೇಳಿದ್ದರು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:54 pm, Sat, 24 December 22