
ಉದ್ಯಮಿ ರಾಕೇಶ್ ಜುಂಜುನ್‌ವಾಲಾ
ಷೇರು ಮಾರುಕಟ್ಟೆಯ ‘ಬಿಗ್ ಬುಲ್’ ಎಂದೇ ಖ್ಯಾತಿಯನ್ನು ಹೊಂದಿದ್ದ ರಾಕೇಶ್ ಜುಂಜುನ್‌ವಾಲಾ (Rakesh Jhunjhunwala) ತಮ್ಮ 62ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಬಹುಅಂಗಾಂಗ ವೈಫಲ್ಯಗಳಿಂದ ಬಳಲುತ್ತಿದ್ದ ರಾಕೇಶ್ ಜುಂಜುನ್‌ವಾಲಾ ಇಂದು ಬೆಳಗ್ಗೆ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕೆವಲ 5 ಸಾವಿರ ರೂಪಾಯಿಂದ ಷೇರು ವಹಿವಾಟನ್ನು ಆರಂಭಿಸಿದ್ದ ರಾಕೇಶ್ ಜುಂಜುನ್‌ವಾಲಾ ತಮ್ಮ ಕೊನೆ ಗಳಿಗೆಯಲ್ಲಿ ಸುಮಾರು 40 ಸಾವಿರ ಕೋಟಿ ರೂಪಾಯಿ ಮೊತ್ತದ ನಿವ್ವಳ ಆಸ್ತಿ ಹೊಂದಿದ್ದರು. ಇದು ಅವರನ್ನು ಭಾರತದ 36ನೇ ಶ್ರೀಮಂತ ವ್ಯಕ್ತಿಯನ್ನಾಗಿ ಮಾಡಿತು. ಭಾರತದ ವಾರನ್ ಬಫೆಟ್ ಎಂದೇ ಖ್ಯಾತರಾಗಿದ್ದ ರಾಕೇಶ್ ಜುಂಜುನ್ವಾಲಾರ ಕುರಿತಾದ ಕೆಲ ಸಂಗತಿಗಳು ಹೀಗಿವೆ.
ಇದನ್ನೂ ಓದಿ: Rakesh Jhunjhunwala: ಭಾರತದ ವಾರನ್ ಬಫೆಟ್ ಎಂದೇ ಖ್ಯಾತರಾಗಿದ್ದ ‘ಮನಿ ಮ್ಯಾಗ್ನೆಟ್’ ರಾಕೇಶ್ ಜುಂಜುನ್‌ವಾಲಾ ನಿಧನ
ಐದು ಸಂಗತಿಗಳು ಹೀಗಿವೆ
- ರಾಕೇಶ್ ಜುಂಜುನ್‌ವಾಲಾ ಜುಲೈ 5, 1960 ರಂದು ಹೈದರಾಬಾದ್‌ನಲ್ಲಿ ಜನಿಸಿದರು. ಆದರೆ ಅವರು ಬೆಳೆದಿದ್ದು ಮಾತ್ರ ಮುಂಬೈನಲ್ಲಿ. ರಾಕೇಶ್ ಜುಂಜುನ್‌ವಾಲಾ ಅವರನ್ನು ಭಾರತದ ವಾರನ್ ಬಫೆಟ್ ಎಂದು ಕರೆಯಲಾಗುತ್ತದೆ.
- ಸಿಡೆನ್‌ಹ್ಯಾಮ್ ಕಾಲೇಜಿನಿಂದ ಪದವಿ ಪಡೆದ ರಾಕೇಶ್ ಜುಂಜುನ್‌ವಾಲಾ, ನಂತರ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾಕ್ಕೆ ಸೇರಿಕೊಂಡರು. ಸ್ಟಾಕ್ ಮಾರುಕಟ್ಟೆ ಹೂಡಿಕೆದಾರರಾದ ರೇಖಾ ಜುಂಜುನ್‌ವಾಲಾ ಅವರನ್ನು ವಿವಾಹವಾದರು.
- ಜುನ್‌ಜುನ್‌ವಾಲಾ ಅವರು ಭಾರತದ ಷೇರು ಮಾರುಕಟ್ಟೆಯ ಬೆಳವಣಿಗೆಯ ಕನಸ್ಸನ್ನು ಹೊಂದಿದ್ದರು. ಮತ್ತು ಅವರು ಖರೀದಿಸಿದ ಯಾವುದೇ ಷೇರುಗಳು ಬಹುಪಾಲು ದುಪ್ಪಟ್ಟಾಗಿ ಮಾರ್ಪಟ್ಟಿವೆ.
- ರಾಕೇಶ್ ಜುಂಜುನ್‌ವಾಲಾ ಅವರ ತಮ್ಮದೇ ಆದ ಖಾಸಗಿ ಓಡೆತನದ ಸ್ಟಾಕ್ ಟ್ರೇಡಿಂಗ್ ಫರ್ಮ್ ರೇರ್ ಎಂಟರ್ಪ್ರೈಸಸ್ನ್ನು ಹೊಂದಿದ್ದರು. ಮತ್ತು ಇತ್ತಿಚೇಗಷ್ಟೇ ಭಾರತದ ಹೊಸ ವಿಮಾನ ಸಂಸ್ಥೆ ಆಕಾಶ ಏರ್ಲೈನ್ಸ್ನ್ನು ಆರಂಭಿಸಿದ್ದರು.
- ವಿಮಾನಯಾನ ಕ್ಷೇತ್ರ ಉತ್ತಮವಾಗಿ ಕಾರ್ಯನಿರ್ವಹಿಸದ ಈ ಸಂದರ್ಭದಲ್ಲಿ ನೀವು ಯಾಕೆ ಏರ್ಲೈನ್ಸ್ನ್ನು ಆರಂಭಿಸಿದಿರಿ ಎಂಬ ಮಾತಿಗೆ ನಾನು ವೈಫಲ್ಯವನ್ನು ಅಥವಾ ಸೋಲನ್ನು ಅನುಭವಿಸಲು ಸಿದ್ಧನಾಗಿದ್ದೇನೆ ಎಂದು ಅವರು ಹೇಳಿದ್ದರು.
ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.