Rakesh Jhunjhunwala: ಭಾರತದ ವಾರನ್ ಬಫೆಟ್ ಎಂದೇ ಖ್ಯಾತರಾಗಿದ್ದ ‘ಮನಿ ಮ್ಯಾಗ್ನೆಟ್’ ರಾಕೇಶ್ ಜುಂಜುನ್​ವಾಲಾ ನಿಧನ

ಉದ್ಯಮಿ ರಾಕೇಶ್​ ಜುಂಜುನವಾಲಾ(62) ಬಹುಅಂಗಾಂಗ ವೈಫಲ್ಯಗಳಿಂದ ಬಳಲುತ್ತಿದ್ದ ರಾಕೇಶ್​ ಮುಂಬೈನ ಬ್ರೀಚ್​​ ಕ್ಯಾಂಡಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. 

Rakesh Jhunjhunwala: ಭಾರತದ ವಾರನ್ ಬಫೆಟ್ ಎಂದೇ ಖ್ಯಾತರಾಗಿದ್ದ ‘ಮನಿ ಮ್ಯಾಗ್ನೆಟ್’ ರಾಕೇಶ್ ಜುಂಜುನ್​ವಾಲಾ ನಿಧನ
ಉದ್ಯಮಿ ರಾಕೇಶ್​ ಜುಂಜುನವಾಲಾ
TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Aug 14, 2022 | 1:53 PM

ಮುಂಬೈ: ಭಾರತದ ವಾರನ್ ಬಫೆಟ್ ಎಂದೇ ಖ್ಯಾತರಾಗಿದ್ದ ‘ಮನಿ ಮ್ಯಾಗ್ನೆಟ್’ ರಾಕೇಶ್ ಜುಂಜುನ್​ವಾಲಾ (62) ನಿಧನ ಹೊಂದಿದ್ದಾರೆ. ಉದ್ಯಮಿ ರಾಕೇಶ್​ ಜುಂಜುನವಾಲಾ ಬಹುಅಂಗಾಂಗ ವೈಫಲ್ಯಗಳಿಂದ ಬಳಲುತ್ತಿದ್ದರು. ಇಂದು ಬೆಳಗ್ಗೆ 6:30ಕ್ಕೆ ಮುಂಬೈನ ಬ್ರೀಚ್​​ ಕ್ಯಾಂಡಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಐದು ಸಾವಿರ ರೂಪಾಯಿಂದ ಷೇರು ವಹಿವಾಟ ಆರಂಭಿಸಿದ ಇವರು ಸುಮಾರು 40 ಸಾವಿರ ಕೋಟಿ ರೂಪಾಯಿ ನಿವ್ವಳ ಆಸ್ತಿ ಹೊಂದಿದ್ದರು. ಭಾರತದ 36ನೇ ಶ್ರೀಮಂತ ವ್ಯಕ್ತಿ ಎಂದು ಕೂಡ ಇವರನ್ನು ಕರೆಯಲಾಗುತ್ತದೆ. ಷೇರು ಮಾರುಕಟ್ಟೆಯ ‘ಬಿಗ್​ ಬುಲ್’​ ಎಂದೇ ಖ್ಯಾತಿಯಾಗಿದ್ದರು. ಮಾಜಿ ಜೆಟ್​​ ಏರ್​​ವೇಸ್​​ ಸಿಇಓ ದುಬೆ ಮತ್ತು ಇಂಡಿಗೋ ಮಾಜಿ ಮುಖ್ಯಸ್ಥ ಆದಿತ್ಯ ಘೋಷ್ ಅವರೊಂದಿಗೆ ಸೇರಿ ಇತ್ತಿಚೇಗಷ್ಟೇ ಆಕಾಶ ಏರ್​ಲೈನ್ಸ್​ನ್ನು ಆರಂಭಿಸಿದ್ದರು. ಜುಲೈ 5, 1960 ರಂದು ಜುಂಜುನ್ವಾಲಾ ಮುಂಬೈನಲ್ಲಿ ರಾಜಸ್ಥಾನಿ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಆದಾಯ ತೆರಿಗೆ ಆಯುಕ್ತರಾಗಿದ್ದರು. ರಾಕೇಶ್‌  ಸೈಡೆನ್‌ಹ್ಯಾಮ್‌ ಕಾಲೇಜಿನಿಂದ ಪದವಿ ಪಡೆದಿದ್ದು, ನಂತರ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದಲ್ಲಿ ಸೇರಿಕೊಂಡಿದ್ದರು.    ​​

ಅವರ ಖಾಸಗಿ ಓಡೆತನದ ಸ್ಟಾಕ್​ ಟ್ರೇಡಿಂಗ್ ಫರ್ಮ್​​​ ರೇರ್​​ ಎಂಟರ್​ಪ್ರೈಸಸ್​​ ಅವರ ಮತ್ತು ಅವರ ಪತ್ನಿಯ ಮೊದಲ ಎರಡು ಅಕ್ಷರಗಳನ್ನು ಕಂಪನಿಗೆ ಹೆಸರನ್ನಾಗಿ ಇಡಲಾಗಿದೆ. ಟೈಟಾನ್, ಸ್ಟಾರ್​ ಹೆಲ್ತ್​​, ಟಾಟಾ ಮೋಟಾರ್ಸ್​​​ ಮತ್ತು ಮೆಟ್ರೋ ಬಾಂಡ್​ಗಳು ಅವರ ದೊಡ್ಡ ಹಿಡುವಳಿಗಳಾಗಿವೆ.

ಕ್ಯಾಪಿಟಲ್​​ ಮೈಂಡ್​ನ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದೀಪಕ್​ ಶೆಣೈ ಅವರು ಟ್ವೀಟ್​ ಮಾಡಿದ್ದು, ಹಲವರಿಗೆ ಸ್ಪೂರ್ತಿ ನೀಡಿದ ವ್ಯಾಪಾರಿ, ಹೂಡಿಕೆದಾರ ಮತ್ತು ಷೇರು ಮಾರುಕಟ್ಟೆಯ ದಂತಕಥೆ. ಅವರನ್ನು ಸ್ಮರಿಸಲಾಗುವುದು. ಅವರ ಕುಟುಂಬಕ್ಕೆ ನನ್ನ ಸಂತಾಪಗಳು ಎಂದು ಟ್ವೀಟ್ ಮಾಡಿದ್ದಾರೆ.

ರಾಕೇಶ್​ ಜುಂಜುನ್​ವಾಲಾ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದು,  ಆರ್ಥಿಕ ಜಗತ್ತಿಗೆ ಅಳಿಸಲಾಗದ ಕೊಡುಗೆ ನೀಡಿದ್ದಾರೆ. ಭಾರತದ ಪ್ರಗತಿಯ ಬಗ್ಗೆ ತುಂಬಾ ಉತ್ಸುಕರಾಗಿದ್ದರು. ಅವರ ಅಗಲಿಕೆ ದುಃಖ ತಂದಿದೆ. ಅವರ ಕುಟುಂಬಕ್ಕೆ ಮತ್ತು ಅವರ ಆಪ್ತರಿಗೆ ನನ್ನ ಸಂತಾಪಗಳು ಎಂದು ಟ್ವೀಟ್ ಮೂಲಕ ಪ್ರಧಾನಮಂತ್ರಿ ಮೋದಿ ಸಂತಾಪ ಸೂಚಿಸಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada