ಬೆಂಗಳೂರು, ಡಿಸೆಂಬರ್ 30: ಹೊಸ ವರ್ಷವನ್ನ (New Year) ವೆಲ್ ಕಮ್ ಮಾಡುವುದಕ್ಕೆ ಕೇವಲ ಒಂದೇ ದಿನ ಬಾಕಿ ಉಳಿದಿದೆ. ರಾಜಧಾನಿಯಲ್ಲಿ ಹೊಸ ವರ್ಷ ಆಚರಣೆಗೆ ಸಕಲ ಸಿದ್ಧತೆ ನಡೆದಿದ್ದರೆ, ಇತ್ತ ಸಂಭ್ರಮಾಚರಣೆಗೆ ಯಾವುದೇ ಅಡ್ಡಿಯಾಗದಂತೆ ಕ್ರಮವಹಿಸುವುದಕ್ಕೆ ಖಾಕಿಪಡೆ ಸಜ್ಜಾಗಿದೆ. ಬಿಬಿಎಂಪಿ ಕೂಡ ನ್ಯೂ ಇಯರ್ ಸೆಲೆಬ್ರೇಷನ್ಗೆ ಸಾಥ್ ನೀಡುತ್ತಿದೆ. ಸದ್ಯ ನ್ಯೂ ಇಯರ್ ಸಂಭ್ರಮಾಚರಣೆಗೆ ಬೆಂಗಳೂರಿನಲ್ಲಿ ಯಾವೆಲ್ಲಾ ರೂಲ್ಸ್ ಇರುತ್ತೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.
ಸಿಲಿಕಾನ್ ಸಿಟಿಯಲ್ಲಿ ನ್ಯೂ ಇಯರ್ ಸಂಭ್ರಮಾಚರಣೆಗೆ ಸಕಲ ತಯಾರಿ ನಡೆದಿದೆ. ಎಂ.ಜಿ.ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್ ರಂಗೇರುತ್ತಿದ್ರೆ, ಯಾವುದೇ ಕಹಿ ಘಟನೆ ನಡೆಯದಂತೆ ಖಾಕಿಪಡೆ ಕಣ್ಣಿಡೋಕೆ ಸಜ್ಜಾಗಿದೆ. ಇತ್ತ ಪ್ರತಿವರ್ಷದಂತೆ ಈ ಬಾರೀ ಹೊಸ ವರ್ಷಕ್ಕೆ ಪಾಲಿಕೆ ಕೂಡ ಕೈ ಜೋಡಿಸೋಕೆ ಸಜ್ಜಾಗಿದ್ದು, ಕಸದ ನಿರ್ವಹಣೆ, ಸಿಸಿಟಿವಿ ಕ್ಯಾಮರಾ ನಿರ್ವಹಣೆ ಸೇರಿ ಇನ್ನಿತರ ಕೆಲಸಗಳಲ್ಲಿ ಪೊಲೀಸ್ ಇಲಾಖೆ ಜೊತೆ ಕೈಜೋಡಿಸೋಕೆ ಸಜ್ಜಾಗಿದೆ. ಅಲ್ಲದೇ ಹೆಚ್ಚು ಜನ ಸೇರುವ ಕಡೆ ಪ್ರಾಥಮಿಕ ಚಿಕಿತ್ಸೆಗೆ ಪಾಲಿಕೆ ವೈದ್ಯರನ್ನ ನೇಮಿಸಿ ಮೇಲ್ವಿಚಾರಣೆ ನಡೆಸುವುದು ಪಾಲಿಕೆ ರೆಡಿಯಾಗಿದೆ.
ಡಿಸೆಂಬರ್ 31ರ ರಾತ್ರಿ 11ಗಂಟೆಯಿಂದ ರಾತ್ರಿ 2ಗಂಟೆವರೆಗೂ, ಬಿಎಂಟಿಸಿ ಬಸ್ಗಳು ಸಂಚರಿಸಲಿವೆ. ಹೆಚ್ಚಿನ ಜನ ಸೇರುವ ಸಾಧ್ಯತೆ ಡಿಸೆಂಬರ್ 31ರ ರಾತ್ರಿ 11 ರಿಂದ 2ರವರೆಗೆ ಎಂ.ಜಿ.ರಸ್ತೆ ಮೆಟ್ರೋ ರೈಲು ನಿಲ್ದಾಣ ಬಂದ್ ಮಾಡಲಾಗುತ್ತಿದೆ. ಅಂದರೆ ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣದಲ್ಲಿ ಇಳಿಯಬಹುದು, ಹೊರತು ಹತ್ತಲು ಅವಕಾಶ ಇರುವುದಿಲ್ಲ ಅಂತಾ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಹೊಸ ವರ್ಷ ಆಚರಣೆಗೆ ಸಿದ್ದತೆ: ಬಿಗಿ ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಸದ್ಯ ಈಗಾಗಲೇ ರಾಜಧಾನಿಯ ಬಾರ್, ಪಬ್ಗಳು ಜೊತೆಗೆ ಪ್ರಮುಖ ರಸ್ತೆಗಳಲ್ಲಿ ಹೊಸ ವರ್ಷದ ಆಚರಣೆಗೆ ತಯಾರಿ ನಡೆದಿದ್ದು, ಇನ್ನು ಈ ಬಾರೀ ಕೂಡ ಅಧಿಕ ಜನರು ಸಂಭ್ರಮಾಚರಣೆಗೆ ಸೇರುವ ನಿರೀಕ್ಷೆಯಿದೆ. ಸದ್ಯ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನ ಹಿನ್ನೆಲೆ ಶೋಕಾಚರಣೆ ಜಾರಿಯಲ್ಲಿದ್ದರೂ ನ್ಯೂ ಇಯರ್ ಸೆಲೆಬ್ರೇಷನ್ಗೆ ಯಾವುದೇ ಅಡ್ಡಿ ಇಲ್ಲವೆಂದು ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದು, ಸಿಟಿಮಂದಿ ಹೊಸ ವರ್ಷವನ್ನ ವೆಲ್ ಕಮ್ ಮಾಡುವುದಕ್ಕೆ ತುದಿಗಾಲಲ್ಲಿ ಕಾದುನಿಂತಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:52 pm, Mon, 30 December 24