AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

New Year: ಡಿ.31 ರಂದು ಎಂ.ಜಿ ರೋಡ್​ನಿಂದ ಬಿಎಂಟಿಸಿ ಹೆಚ್ಚುವರಿ ಬಸ್​ ಸೇವೆ, ಇಲ್ಲಿದೆ ಮಾರ್ಗ ವಿವರ ​

ಬೆಂಗಳೂರಿನಲ್ಲಿ 2025ರ ಹೊಸ ವರ್ಷಾಚರಣೆಗೆ ಸಂಚಾರ ವ್ಯವಸ್ಥೆ ಬದಲಾವಣೆಗಳಾಗಿವೆ. ಎಂ.ಜಿ. ರಸ್ತೆ, ಕೋರಮಂಗಲ, ಬ್ರಿಗೇಡ್ ರೋಡ್‌ಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಬಿಎಂಟಿಸಿ ಹೆಚ್ಚುವರಿ ಬಸ್​ಗಳು ಎಂಜಿ ರಸ್ತೆಯಿಂದ ನಗರದ 13 ಸ್ಥಳಗಳಿಗೆ ಸಂಚರಿಸಲಿವೆ (ರಾತ್ರಿ 11 ಗಂಟೆಯಿಂದ ಬೆಳಿಗ್ಗೆ 2 ಗಂಟೆವರೆಗೆ). ನಮ್ಮ ಮೆಟ್ರೋ ಸೇವೆಯನ್ನು ವಿಸ್ತರಿಸಲಾಗಿದೆ, ಆದರೆ ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣ ಮುಚ್ಚಲಾಗಿದೆ.

New Year: ಡಿ.31 ರಂದು ಎಂ.ಜಿ ರೋಡ್​ನಿಂದ ಬಿಎಂಟಿಸಿ ಹೆಚ್ಚುವರಿ ಬಸ್​ ಸೇವೆ, ಇಲ್ಲಿದೆ ಮಾರ್ಗ ವಿವರ ​
ಬಿಎಂಟಿಸಿ
Kiran Surya
| Updated By: ವಿವೇಕ ಬಿರಾದಾರ|

Updated on: Dec 29, 2024 | 11:37 AM

Share

ಬೆಂಗಳೂರು ಡಿಸೆಂಬರ್​ 29: 2025 ಹೊಸ ವರ್ಷವನ್ನು (New Year) ಸ್ವಾಗತಿಸಲು ಬೆಂಗಳೂರು ನಗರ ಸಜ್ಜಾಗಿದೆ. ಡಿಸೆಂಬರ್​ 31ರ ರಾತ್ರಿ ನಗರದ ಎಂಜಿ ರಸ್ತೆ, ಕೋರಮಂಗಲ, ಬ್ರಿಗೇಡ್​ ರೋಡ್​ಗಳಲ್ಲಿ ಹೊಸ ವರ್ಷಾಚರಣೆ ಜೋರಾಗಿರಲಿದೆ. ಈ ರಸ್ತೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವುದರಿಂದ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ನಮ್ಮ ಮೆಟ್ರೋ, ಬಿಎಂಟಿಸಿ ಬಳಸುವಂತೆ ಬೆಂಗಳೂರು ನಗರ ಸಂಚಾರಿ ಪೊಲೀಸರು (Bengaluru Trafic Police) ಮನವಿ ಮಾಡಿಕೊಂಡಿದ್ದಾರೆ. ಹೀಗಾಗಿ ಬೃಹತ್​ ಬೆಂಗಳೂರು ಮಹಾನಗರ ಸಾರಿಗೆ (BMTC) ಎಂ.ಜಿ ರಸ್ತೆಯಿಂದ ನಗರದ ವಿವಿಧ ಭಾಗಗಳಿಗೆ ಹೆಚ್ಚುವರಿ ಬಸ್ ಓಡಿಸಲಿದೆ.

ಬಿಎಂಟಿಸಿ ಒಟ್ಟು 13 ಸ್ಥಳಗಳಿಗೆ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಿದೆ. ಈ ಬಸ್​ಗಳು ರಾತ್ರಿ 11 ಗಂಟೆಯಿಂದ ನಸುಕಿನ ಜಾವ 2 ಗಂಟೆಯವರೆಗೆ ಸಂಚರಿಸಲಿವೆ.

ಯಾವ ಮಾರ್ಗಗಳಲ್ಲಿ ಹೆಚ್ಚುವರಿ ಬಸ್ ಸಂಚಾರ

ಮಾರ್ಗ ಸಂಖ್ಯೆ ಎಲ್ಲಿಂದ ಎಲ್ಲಿಗೆ
G-3 ಬ್ರಿಗೇಡ್ ರಸ್ತೆ ಎಲೆಕ್ಟ್ರಾನಿಕ್ಸ್ ಸಿಟಿ
G-4 ಬ್ರಿಗೇಡ್ ರಸ್ತೆ ಜಿಗಣಿ
G-2 ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣ ಸರ್ಜಾಪುರ
G-6 ಎಂ.ಜಿ.ರಸ್ತೆ ಕೆಂಗೇರಿ ಕೆ.ಹೆಚ್.ಬಿ. ಕ್ವಾರ್ಟ್ರ್ಸ್
G-7 ಎಂ.ಜಿ.ರಸ್ತೆ ಜನಪ್ರಿಯ ಟೌನ್ ಶಿಪ್
G-8 ಎಂ.ಜಿ.ರಸ್ತೆ ನೆಲಮಂಗಲ
G-9 ಎಂ.ಜಿ.ರಸ್ತೆ ಯಲಹಂಕ ಉಪನಗರ 5ನೇ ಹಂತ
G-10 ಎಂ.ಜಿ.ರಸ್ತೆ ಯಲಹಂಕ
G-11 ಎಂ.ಜಿ.ರಸ್ತೆ ಬಾಗಲೂರು
317-G ಎಂ.ಜಿ.ರಸ್ತೆ ಹೊಸಕೋಟೆ
SBS-13K ಎಂ.ಜಿ.ರಸ್ತೆ ಚನ್ನಸಂದ್ರ
SBS-1K ಎಂ.ಜಿ.ರಸ್ತೆ ಕಾಡುಗೋಡಿ
13 ಎಂ.ಜಿ.ರಸ್ತೆ ಬನಶಂಕರಿ

ಜೊತೆಗೆ ಜನದಟ್ಟಣೆ ಇರುವ ಪ್ರಮುಖ ಬಸ್ ನಿಲ್ದಾಣ, ಜಂಕ್ಷನ್​ಗಳಿಂದಲೂ ಬಸ್ ವ್ಯವಸ್ಥೆ ಮಾಡಲಾಗಿದೆ. ಕೆಂಪೇಗೌಡ ಬಸ್ ನಿಲ್ದಾಣ, ಕೆ.ಆರ್​.ಮಾರುಕಟ್ಟೆ, ಶಿವಾಜಿನಗರ, ಕೋರಮಂಗಲ, ಕಾಡುಗೋಡಿ, ಕೆಂಗೇರಿ, ಸುಮನಹಳ್ಳಿ, ಗೊರಗುಂಟೆಪಾಳ್ಯ, ಯಶವಂತಪುರ, ಯಲಹಂಕ, ಶಾಂತಿನಗರ, ಬನಶಂಕರಿ, ಹೆಬ್ಬಾಳ ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್​ಗಳಿಂದ ಪ್ರಯಾಣಿಕರ ದಟ್ಟಣೆ ಅನುನುಗುಣವಾಗಿ ಬಸ್ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ: ಬೆಂಗಳೂರಿನ ಈ ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧ​, ವಾಹನ ನಿಲುಗಡೆ ನಿಷೇಧ

ನಮ್ಮ ಮೆಟ್ರೋ ರೈಲು ಸೇವೆ ವಿಸ್ತರಣೆ

ಹೊಸ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ನಮ್ಮ ಮೆಟ್ರೋ ರೈಲು ಸೇವೆ ವಿಸ್ತರಿಸಲಾಗಿದೆ. ಹೊಸವರ್ಷದ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುವವರ ಅನುಕೂಲಕ್ಕಾಗಿ ನಮ್ಮ ಮೆಟ್ರೋ ಸೇವಾ ಅವಧಿಯನ್ನು ವಿಸ್ತರಿಸಲಾಗಿದೆ. ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ ಕೊನೆಯ ರೈಲು ಜನವರಿ 1 ನಸುಕಿನ ಜಾವ 2 ಗಂಟೆಗೆ ಎಲ್ಲ ಟರ್ಮಿನಲ್ ನಿಲ್ದಾಣಗಳಿಂದ ಹೊರಡಲಿದೆ. ಮೆಜೆಸ್ಟಿಕ್​ನಿಂದ ಕೊನೆಯ ರೈಲು ಎಲ್ಲ ನಾಲ್ಕು ದಿಕ್ಕುಗಳಿಗೆ ಮುಂಜಾನೆ 2.40ಕ್ಕೆ ಹೊರಡಲಿದೆ.

ಎಂಜಿ ರಸ್ತೆ ಮೆಟ್ರೋ ನಿಲ್ದಾಣ ಬಂದ್​

ಡಿಸೆಂಬರ್​ 31ರಂದು ರಾತ್ರಿ 11 ಗಂಟೆಯಿಂದ ಎಂಜಿ ರಸ್ತೆ ಮೆಟ್ರೋ ನಿಲ್ದಾಣದ ಪ್ರವೇಶ ಮತ್ತು ನಿರ್ಗಮನದ ದ್ವಾರಗಳನ್ನು ಮುಚ್ಚಲಾಗುತ್ತದೆ. ಹತ್ತಿರದ ಟ್ರಿನಿಟಿ ಮತ್ತು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳಲ್ಲಿ ರೈಲುಗಳು ನಿಲ್ಲುತ್ತವೆ. 50 ರೂಪಾಯಿ ಮೌಲ್ಯದ ಪೇಪರ್ ಟಿಕೆಟ್​ಗಳು ಮುಂಗಡವಾಗಿ ಲಭ್ಯವಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ