ಬೆಂಗಳೂರು, ಮೇ 27: ಬೆಂಗಳೂರಿನ (Bengaluru) ಕೆಲವು ಶಾಲೆಗಳು (School) ಈಗಾಗಲೇ ದಾಖಲಾತಿಯನ್ನು ಶುರು ಮಾಡಿದ್ದು ಕೆಲವು ಶಾಲೆಗಳು ಶೇ30 ರಷ್ಟು ಶುಲ್ಕ ಏರಿಕೆ ಮಾಡಿರುವ ಬಗ್ಗೆ ಆರೋಪ ಪೋಷಕರ ವಲಯದಲ್ಲಿ ಕೇಳಿ ಬಂದಿದೆ. ಇನ್ನು ಕೆಲವು ಶಾಲೆಗಳು ಕನಿಷ್ಠ 15 ರಿಂದ 20 ರಷ್ಟು ಶುಲ್ಕ ಏರಿಕೆ ಮಾಡಿವೆ. ಇದರ ನಡುವೆ ಈಗ ಕೆಲವು ಶಾಲೆಗಳು ಸಂಪೂರ್ಣ ಶುಲ್ಕವನ್ನು ಒಂದೇ ಕಂತಿನಲ್ಲಿ ಕಟ್ಟುವಂತೆ ಒತ್ತಡ ಹಾಕುತ್ತಿವೆ. ಖಾಸಗಿ ಶಾಲೆಗಳ ಈ ತಂತ್ರಕ್ಕೆ ಪೋಷಕರು ಪುಲ್ ಹೈರಾಣಾಗಿದ್ದಾರೆ.
2024-25ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗೆ ಚಾಲನೆ ಸಿಕ್ಕಿದೆ. ಪೋಷಕರು ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುವಾಗ ಶುಲ್ಕ ಏರಿಕೆ ನೋಡಿ ಕಂಗಾಲಾಗಿದ್ದಾರೆ. ಈ ನಡುವೆ ಈಗ ಕೆಲವು ಖಾಸಗಿ ಶಾಲೆಗಳು ಒಂದೇ ಕಂತಿನಲ್ಲಿ ಕಟ್ಟುವಂತೆ ಒತ್ತಾಯ ಶುರು ಮಾಡಿವೆ. ಖಾಸಗಿ ಶಾಲೆಗಳಲ್ಲಿ 1.5 ಲಕ್ಷದಿಂದ 2 ಲಕ್ಷದಷ್ಟು ಶುಲ್ಕ ಇದೆ ಈ ಶುಲ್ಕವನ್ನು ಒಂದೇ ಕಂತಿನಲ್ಲಿ ಕಟ್ಟುವಂತೆ ಖಾಸಗಿ ಶಾಲೆಗಳು ಒತ್ತಾಯ ಮಾಡುತ್ತಿರುವುದು ಪೋಷಕರಿಗೆ ಚಿಂತೆಯಾಗಿದೆ.
ಮೊದಲೆಲ್ಲ ಶುಲ್ಕ ಕಟ್ಟಲು ಪೋಷಕರಿಗೆ ಮೂರರಿಂದ ನಾಲ್ಕು ಬಾರಿ ಅವಕಾಶ ನೀಡುತ್ತಿದ್ದವು. ಪೋಷಕರು ಶೈಕ್ಷಣಿಕ ಮದ್ಯಭಾಗದಲ್ಲಿ ಶುಲ್ಕ ಕಟ್ಟಲ್ಲ. ಕೆಲವು ಸರಿ ಶಾಲೆ ಬದಲಾಯಿಸಿದರೆ ಶುಲ್ಕ ಕಟ್ಟಲ್ಲ ಆಗ ಲಾಸ್ ಆಗುತ್ತೆ ಅಂತ ಈಗಲೇ ಪೋಷಕರು ಪೂರ್ತಿ ಶುಲ್ಕ ಕಟ್ಟುವಂತೆ ಒತ್ತಾಯ ಮಾಡುತ್ತಿವೆ. ಶುಲ್ಕ ಕಟ್ಟಲಾಗದ ಶಾಲೆಗಳಿಗೆ ಕೆಲವು ಶಾಲೆಗಳು ಲೋನ್ ಆಫರ್ ಕೂಡ ನೀಡುತ್ತಿವೆ. ಆದರೆ ಎರಡು ಲಕ್ಷದ ಶುಲ್ಕವನ್ನ ಪೋಷಕರು ಒಂದೇ ಸರಿ ಕಟ್ಟುವುದು ಹೇಗ ಅಂತ ಪೋಷಕರು ಟೆನ್ಷನ್ ಆಗಿದ್ದಾರೆ ಎಂದು ಪೋಷಕರ ಸಮನ್ವಯ ಸಮಿತಿ ಅಧ್ಯಕ್ಷ ಯೋಗಾನಂದ್ ಹೇಳಿದರು.
ಇದನ್ನೂ ಓದಿ: ಅನಧಿಕೃತ ಶಾಲೆಗಳ ವಿಚಾರದಲ್ಲಿ ಮತ್ತೆ ಯೂ ಟರ್ನ್ ಹೊಡೆದ ಶಿಕ್ಷಣ ಇಲಾಖೆ!
ಇನ್ನು ಶುಲ್ಕ ಏರಿಕೆಗೆ ಶಾಲೆಗಳು ಮುಂದಾಗಿದ್ದರೂ, ಶಿಕ್ಷಣ ಇಲಾಖೆ ಮಾತ್ರ ಗಪ್ ಚುಪ್ ಅಂತಿದೆ. ಖಾಸಗಿ ಶಾಲೆಗಳು ಶುಲ್ಕದ ಜೊತೆ ಲಕ್ಷ ಲಕ್ಷ ಶುಲ್ಕ ಒಂದೆ ಸರಿ ಕಟ್ಟಿಸಿಕೊಂಡು ಮಕ್ಕಳನ್ನ ಬೇರೆ ಶಾಲೆಗೆ ಹೊಗದ್ದಂತೆ ತಡೆ ಹಿಡಿಯಲು ಮುಂದಾಗಿದೆ. ಇದನ್ನು ತಡೆಯಬೇಕು. ಮತ್ತು ಮಕ್ಕಳು ಹಾಗೂ ಪೋಷಕರಿಗೆ ಒತ್ತಡ ನೀಡುವ ಶಾಲೆಗಳಿಗೆ ನೋಟಿಸ್ ನೀಡುವಂತೆ ಮಕ್ಕಳ ಹಕ್ಕುಗಳ ಆಯೋಗ ಅಧ್ಯಕ್ಷ ಅಧ್ಯಕ್ಷ ನಾಗನಗೌಡ್ ಶಾಲಾ ಶಿಕ್ಷಣ ಇಲಾಖೆಗೆ ಒತ್ತಾಯಿಸಿದ್ದಾರೆ.
ಇನ್ನು ಈ ಬಗ್ಗೆ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಮಾತ್ರ ಪೋಷಕರದ್ದೆ ತಪ್ಪು ಅಂತಿದೆ. ಕೆಲವು ಶಾಲೆಗಳು ಹಣದಾಹಿಯಾಗಿವೆ ಅಂತಹ ಶಾಲೆಗಳ ಕಡೆಯೇ ಪೋಷಕರು ಹೋಗುತ್ತಾರೆ. ಮೊದಲು ಪೋಷಕರು ಎಚ್ಚರ ವಹಿಸಬೇಕು. ಮೊದಲೆಲ್ಲ ಕಂತಿನಲ್ಲಿ ಶುಲ್ಕ ಕಟ್ಟಲು ಅವಕಾಶ ಇತ್ತು. ಈಗಲೂ ಇದೇ ಅವಕಾಶ ನೀಡಬೇಕು ಎಂದು ಖಾಸಗಿ ಶಾಲೆಗಳ ಒಕ್ಕೂಟ ಪ್ರಾಧಾನ ಕಾರ್ಯದರ್ಶಿ ಶಶಿಕುಮಾರ್ ಹೇಳಿದರು.
ಒಟ್ಟಿನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಮಾತ್ರ ಯಾವುದನ್ನು ಲೆಕ್ಕಿಸದೆ, ಕಳೆದ ಭಾರಿಗಿಂತ ಪ್ರಸಕ್ತ ವರ್ಷದಲ್ಲಿ ಶುಲ್ಕ ಏರಿಕೆ ಮಾಡಿಕೊಂಡು ಮತ್ತೊಂದಡೆ ಒಂದೇ ಕಂತಿನಲ್ಲಿ ಲಕ್ಷ ಲಕ್ಷ ಶುಲ್ಕ ಕಟ್ಟಿಸಿಕೊಂಡು ಕಾಸು ಮಾಡಲು ಮುಂದಾಗಿದ್ದು ದುರದೃಷ್ಟಕರ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ