ಬೆಂಗಳೂರು: ಪುಟ್ಟೇನಹಳ್ಳಿ ಕೆರೆಗೆ ಸೇರುತ್ತಿದೆ ರಾಜಕಾಲುವೆ ನೀರು, “ಸೇವ್ ಪುಟ್ಟೇನಹಳ್ಳಿ ಲೇಕ್” ಅಭಿಯಾನ

ಅದು ನೂರಾರು ಬಗೆಯ ಪಕ್ಷಿಗಳಿಗೆ ಆಶ್ರಯತಾಣವಾಗಿದ್ದ ಕೆರೆ. ಕೆರೆಯಂಗಳದ ಸ್ವಚ್ಛ ನೀರಿಗೆ ಇದೀಗ ರಾಜಕಾಲುವೆ ಕಂಟಕವಾಗಿ ಪರಿಣಮಿಸಿದೆ. ಇತ್ತೀಚೆಗಷ್ಟೆ ವಿಲ್ಲಾಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿದ್ದ ರಾಜಕಾಲುವೆ ನೀರಿಗೆ ಬೇರೆ ಮಾರ್ಗ ತೋರಿಸಬೇಕಿದ್ದ ಮಹಾನಗರ ಪಾಲಿಕೆ, ಇದೀಗ ರಾಜಕಾಲುವೆ ನೀರು ಕೆರೆಗೆ ಸೇರುತ್ತಿದ್ದರೂ ಮೌನ ವಹಿಸಿರುವುದು ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಬೆಂಗಳೂರು: ಪುಟ್ಟೇನಹಳ್ಳಿ ಕೆರೆಗೆ ಸೇರುತ್ತಿದೆ ರಾಜಕಾಲುವೆ ನೀರು, ಸೇವ್ ಪುಟ್ಟೇನಹಳ್ಳಿ ಲೇಕ್ ಅಭಿಯಾನ
ಪುಟ್ಟೇನಹಳ್ಳಿ ಕೆರೆ
Follow us
ಶಾಂತಮೂರ್ತಿ
| Updated By: ವಿವೇಕ ಬಿರಾದಾರ

Updated on:May 27, 2024 | 7:46 AM

ಬೆಂಗಳೂರು, ಮೇ 27: ಪಕ್ಷಿಗಳ ಸಂರಕ್ಷಣಾತಾಣವಾಗಿದ್ದ ಪುಟ್ಟೇನಹಳ್ಳಿ ಕೆರೆಗೆ (Puttenahalli Lake) ರಾಜಕಾಲುವೆಯಿಂದ ಸಂಕಷ್ಟ ಎದುರಾಗಿದೆ. ಯಲಹಂಕದ (Yalahanka) ನಾರ್ಥ್ ಹುಡ್ ವಿಲ್ಲಾಗೆ ಇತ್ತೀಚೆಗೆ ರಾಜಕಾಲುವೆ ನೀರು ತುಂಬಿ ಅವಾಂತರ ಸೃಷ್ಟಿಯಾಗಿತ್ತು. ಈ ವೇಳೆ ಪಕ್ಕದಲ್ಲಿದ್ದ ಪುಟ್ಟೇನಹಳ್ಳಿ ಕೆರೆಗೆ ನೀರು ಹರಿಸಲಾಗಿತ್ತು, ಆದರೆ ಇದೀಗ ರಾಜಕಾಲುವೆಯ (Rajkaluve) ಕಲುಷಿತ ನೀರು ಕೂಡ ಕೆರೆಯ ಒಡಲು ಸೇರುತ್ತಿದೆ. ಇತ್ತ ಪ್ರವಾಹದ ಸ್ಥಿತಿ ನಿರ್ಮಾಣವಾದ ವೇಳೆ ದೊಡ್ಡ ದೊಡ್ಡ ಪೈಪ್ ಅಳವಡಿಸಿ ಬೇರೆಡೆ ನೀರು ಬಿಡಲಾಗುತ್ತೆ ಎಂದಿದ್ದ ಮಹಾನಗರ ಪಾಲಿಕೆ, ಸದ್ಯ ಯಾವುದೆ ಪೈಪ್ ಅಳವಡಿಸದೆ ಇರುವುದು ಮತ್ತಷ್ಟು ಸಮಸ್ಯೆ ತಂದೊಡ್ಡಿದೆ.

ಕೆರೆಗೆ ಮಲಿನ ನೀರು ಸೇರುತ್ತಿರುವುದರಿಂದ ವಲಸೆ ಪಕ್ಷಿಗಳು ಕೂಡ ಕಡಿಮೆಯಾಗುತ್ತಿವೆ. ಅಲ್ಲದೆ ವಾಯುವಿಹಾರಕ್ಕೆ ಬಂದವರು ಮಾಡುವವರು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯ ಪರಮೇಶ್ ಕಿಡಿಕಾರಿದ್ದಾರೆ.

ಇದನ್ನೂ ಓದಿ: ಚಿವರಿಗೆ ಸುಳ್ಳು ಹೇಳಿ ಚೆಳ್ಳೆ ಹಣ್ಣು ತಿನ್ನಿಸಿದ ಅಧಿಕಾರಿಗಳು, ಸ್ಥಳ ಪರಿಶೀಲನೆ ವೇಳೆ ಕಾಮಗಾರಿ ಅಲಿಯತ್ತು ಬಯಲು

ಇನ್ನು ಕೆರೆ ನೀರು ಮಲಿನವಾಗುರುವುದರಿಂದ ಜಲಚರಗಳು, ಪಕ್ಷಿಗಳಿಗೂ ಕಂಟಕ ಎದುರಾಗುತ್ತಿರುವುದಕ್ಕೆ ಪರಿಸರಪ್ರೇಮಿಗಳು ವಿರೋಧ ವ್ಯಕ್ತಪಡಿಸ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ “ಸೇವ್ ಪುಟ್ಟೇನಹಳ್ಳಿ ಲೇಕ್” ಅಂತ ಅಭಿಯಾನ ಆರಂಭಿಸಿದ್ದು, ಕೆರೆ ಒಡಲಿಗೆ ವಿಷ ಹಾಕಬೇಡಿ ಅಂತ ಕಿಡಿಕಾರುತ್ತಿದ್ದಾರೆ. ಅಲ್ಲದೆ ರಾಜಕಾಲುವೆ ನೀರನ್ನು ಸಂಸ್ಕರಿಸದೆ ಹಾಗೆ ಕೆರೆಗೆ ಬಿಡುತ್ತಿರುವುದು ವ್ಯತಿರಿಕ್ತ ಪರಿಣಾಮ ಬೀರುತ್ತೆ ಅಂತ ಪರಿಸರಪ್ರೇಮಿ ಅರುಣ್ ಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪುಟ್ಟೇನಹಳ್ಳಿ ಕೆರೆ

ಒಟ್ಟಿನಲ್ಲಿ ಅಪಾರ್ಟ್​ಮೆಂಟ್, ವಿಲ್ಲಾಗಳ ಜನರಿಗೆ ಆಗುತ್ತಿದ್ದ ಸಮಸ್ಯೆ ತಪ್ಪಿಸಲು ಪ್ರಕೃತಿಗೆ ವಿಷ ಹಾಕುತ್ತಿರುವುದು ಜನರ ಕೆಂಗಣ್ಣಿಗೆ ಗುರಿಯಾಗಿದೆ. ಜೊತೆಗೆ ಅರೆಬರೆ ರಾಜಕಾಲುವೆ ಮಾಡಿ ನೀರು ಎಲ್ಲಿ ಬಿಡಬೇಕು ಅಂತ ಅರಿಯದೆ ಕೆರೆ ಮಡಿಲಿಗೆ ಕಂಟಕ ತಂದಿಟ್ಟಿರುವ ಪಾಲಿಕೆ, ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 7:30 am, Mon, 27 May 24

ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ