ಸಚಿವರಿಗೆ ಸುಳ್ಳು ಹೇಳಿ ಚೆಳ್ಳೆ ಹಣ್ಣು ತಿನ್ನಿಸಿದ ಅಧಿಕಾರಿಗಳು, ಸ್ಥಳ ಪರಿಶೀಲನೆ ವೇಳೆ ಕಾಮಗಾರಿ ಅಲಿಯತ್ತು ಬಯಲು

ಬೆಂಗಳೂರಿನ ಕೆಂಪಾಪುರ ಬಳಿ ಇರುವ ರಾಜಕಾಲುವೆ ಕಾಮಗಾರಿ ಶುರು ಮಾಡಿದ್ದೇವೆ ಎಂದು ಬಿಬಿಎಂಪಿ ಅಧಿಕಾರಿಗಳು ಸಚಿವ ಕೃಷ್ಣ ಬೈರೇಗೌಡ ಅವರಿಗೆ ಸುಳ್ಳು ಹೇಳಿ ಚಳ್ಳೆ ಹಣ್ಣು ತಿನ್ನಿಸಿದ್ದರು. ಆದರೆ ಸ್ಥಳ ಪರಿಶೀಲನೆ ಮಾಡಿದಾಗ ಬಂಡವಾಳ ಬಯಲಾಗಿದ್ದು, ಕಾಮಗಾರಿ ಇನ್ನೂ ಆರಂಭಗೊಂಡಿರಲಿಲ್ಲ. ಇದರಿಂದ ಸಚಿವ ಕೃಷ್ಣಭೈರೇಗೌಡ ಬೇಸರಗೊಂಡರು.

ಸಚಿವರಿಗೆ ಸುಳ್ಳು ಹೇಳಿ ಚೆಳ್ಳೆ ಹಣ್ಣು ತಿನ್ನಿಸಿದ ಅಧಿಕಾರಿಗಳು, ಸ್ಥಳ ಪರಿಶೀಲನೆ ವೇಳೆ ಕಾಮಗಾರಿ ಅಲಿಯತ್ತು ಬಯಲು
ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ತರಾಟೆ
Follow us
ವಿವೇಕ ಬಿರಾದಾರ
|

Updated on: May 25, 2024 | 9:54 AM

ಬೆಂಗಳೂರು, ಮೇ 25: ಬಿಬಿಎಂಪಿ (BBMP) ಅಧಿಕಾರಿಗಳ ನಡೆಗೆ ಕಂದಾಯ ಸಚಿವ ಕೃಷ್ಣಭೈರೇಗೌಡ (Krishna Byre Gowda) ಬೇಸರ ವ್ಯಕ್ತಪಡಿಸಿದ್ದಾರೆ. ಕೆಂಪಾಪುರ ಬಳಿ ಇರುವ ರಾಜಕಾಲುವೆ (Rajakaluve) ಕಾಮಗಾರಿ ಶುರು ಮಾಡಿದ್ದೇವೆ ಎಂದು ಬಿಬಿಎಂಪಿ ಅಧಿಕಾರಿಗಳು ಸಚಿವ ಕೃಷ್ಣ ಬೈರೇಗೌಡ ಅವರಿಗೆ ಸುಳ್ಳು ಹೇಳಿ ಚಳ್ಳೆ ಹಣ್ಣು ತಿನ್ನಿಸಿದ್ದರು. ಆದರೆ ಸ್ಥಳ ಪರಿಶೀಲನೆ ಮಾಡಿದಾಗ ಬಂಡವಾಳ ಬಯಲಾಗಿದ್ದು, ಕಾಮಗಾರಿ ಇನ್ನೂ ಆರಂಭಗೊಂಡಿರಲಿಲ್ಲ. ಇದರಿಂದ ಸಚಿವ ಕೃಷ್ಣಭೈರೇಗೌಡ ಬೇಸರಗೊಂಡರು.

ಇದರಿಂದ ಆಕ್ರೋಶಗೊಂಡ ಸಚಿವ ಕೃಷ್ಣ ಬೈರೇಗೌಡ, ಜನ ನಮ್ಮನ್ನು ಬೈತಾರೆ, ಅಧಿಕಾರಿಗಳನ್ನು ಪ್ರಶ್ನೆ ಮಾಡುವುದು ಕಮ್ಮಿ. ಶಾಸಕಾಂಗ, ಕಾರ್ಯಾಂಗ ಒಟ್ಟಾಗಿ ಕೆಲಸ ಮಾಡಬೇಕು ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿಗೆ ಮಳೆ ಮುನ್ಸೂಚನೆ; ಯಾವುದೇ ಕಾರಣಕ್ಕೂ ಕೆರೆ, ರಾಜಕಾಲುವೆ ಒತ್ತುವರಿ ತೆರವಿಗೆ ನಿರ್ಲಕ್ಷ್ಯ ಬೇಡ -ತುಷಾರ್ ಗಿರಿನಾಥ್ ಆದೇಶ

ಈ ಬಗ್ಗೆ ಟಿವಿ9 ಜೊತೆ ಮಾತನಾಡಿದ ಅವರು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಸೂಚನೆ ಕೊಟ್ಟರೂ ಕೆಲ ಅಧಿಕಾರಿಗಳು ಕಳ್ಳಾಟವಾಡುತ್ತಿದ್ದಾರೆ. ಇಂಥವರ ವಿರುದ್ಧ ಸೂಕ್ತ ಕ್ರಮ ಜರುಗಿಸುತ್ತೇವೆ. ಬಿಬಿಎಂಪಿ ಅಧಿಕಾರಿಗಳು ಮಳೆ ನಿರ್ವಹಣೆಗೆ ಸನ್ನದ್ಧರಾಗಬೇಕು. ಒತ್ತುವರಿದಾರರ ವಿರುದ್ಧ ಮುಲಾಜಿಲ್ಲದೆ ಕ್ರಮ ಜರಿಗಿಸುತ್ತೇವೆ. ಬೆಂಗಳೂರು ವಿಚಾರದಲ್ಲಿ ಬಿಜೆಪಿಯವರು ರಾಜಕೀಯ ಮಾಡಬಾರದು. ಬಿಜೆಪಿಯವರು ಬೇಕಾದಲ್ಲಿ ಸಲಹೆ ಸೂಚನೆಗಳನ್ನು ಮಾಡಲಿ. ಬ್ರ್ಯಾಂಡ್ ಬೆಂಗಳೂರು ಹೆಸರನ್ನ ರಾಜಕೀಯಕ್ಕೆ ಬಳಸಬಾರದು ಎಂದು ಮನವಿ ಮಾಡಿದರು.

ನಾವು ಭೂ ಒತ್ತುವರಿ ತಡೆಯಲು ಜಿಯೋ ಮ್ಯಾಪಿಂಗ್ ಮಾಡುತ್ತಿದ್ದೇವೆ. ನಮ್ಮ ಕಂದಾಯ ಅಧಿಕಾರಿಗಳು 3 ತಿಂಗಳಿಗೊಮ್ಮೆ ಸ್ಥಳ ಪರಿಶೀಲನೆ ಮಾಡುತ್ತಾರೆ. ನಾವು ಭೂ ಒತ್ತುವರಿ ಶಾಶ್ವತವಾಗಿ ತಪ್ಪಿಸಲು ಈ ಪ್ಲಾನ್ ಮಾಡುತ್ತಿದ್ದೇವೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ