AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Lalbagh Mango Mela 2024: ಲಾಲ್ ಬಾಗ್​​ನಲ್ಲಿ ಇಂದಿನಿಂದ ಮಾವು ಮೇಳ: ಯಾವ ತಳಿಯ ಮಾವಿನ ಹಣ್ಣಿಗೆ ಎಷ್ಟಿದೆ ಬೆಲೆ? ಇಲ್ಲಿದೆ ವಿವರ

ಬೆಂಗಳೂರಿನ ಮಾವು ಪ್ರಿಯರಿಗೆ ಇಲ್ಲಿದೆ ಸಿಹಿ ಸುದ್ದಿ. ಲಾಲ್ ಬಾಗ್ ಮಾವು ಮೇಳ ಇಂದು ಆರಂಭವಾಗಿದ್ದು, ವಿವಿಧ ತಳಿಯ ಮಾವಿನ ಹಣ್ಣುಗಳು ಲಭ್ಯವಿವೆ. ಜತೆಗೆ ಹಲಸಿನ ಮೇಳವೂ ಇದೆ. ಈ ವರ್ಷದ‌ ಮೇಳದಲ್ಲಿ ಬಾದಾಮಿ, ರಸಪುರಿ, ಸೇಂಧೂರ, ಮಲಗೋವ ಸೇರಿ ವಿವಿಧ ತಳಿಯ ಹಣ್ಣುಗಳು ಲಭ್ಯವಿದ್ದು, ದರವೂ ನಿಗದಿಯಾಗಿದೆ. ಇಲ್ಲಿದೆ ವಿವರ.

Lalbagh Mango Mela 2024: ಲಾಲ್ ಬಾಗ್​​ನಲ್ಲಿ ಇಂದಿನಿಂದ ಮಾವು ಮೇಳ: ಯಾವ ತಳಿಯ ಮಾವಿನ ಹಣ್ಣಿಗೆ ಎಷ್ಟಿದೆ ಬೆಲೆ? ಇಲ್ಲಿದೆ ವಿವರ
ಲಾಲ್ ಬಾಗ್​​ನಲ್ಲಿ ಇಂದಿನಿಂದ ಮಾವು ಮೇಳ
Poornima Agali Nagaraj
| Edited By: |

Updated on: May 25, 2024 | 10:42 AM

Share

ಬೆಂಗಳೂರು, ಮೇ 25: ಬೆಂಗಳೂರಿನಲ್ಲಿ ಮಾವಿನ ಸೀಸನ್ ಆರಂಭವಾಗಿದ್ದು, ಮಾವು ಮಾರಾಟ ಕಳೆಗಟ್ಟಿದೆ. ಇದೀಗ ಲಾಲ್ ಬಾಗ್​​ನಲ್ಲಿ (Lalbagh) ಮಾವು ಮೇಳ (Mango Mela 2024) ಇಂದಿನಿಂದ ಆರಂಭವಾಗಿದೆ. ಇಂದಿನಿಂದ ಜೂನ್ 10 ವರೆಗೂ ಮಾವಿನ ಮೇಳ‌ ನಡೆಯಲಿದೆ. ಈ ವರ್ಷ ತಾಪಮಾನ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ರಾಜಾಧಾನಿಯಲ್ಲಿ ಮಾವಿನ ಸೀಸನ್ (Mango Season) ತಡವಾಗಿ ಆರಂಭವಾಗಿದೆ. ಮಳೆ ಬಂದ ನಂತರ ಸಿಲಿಕಾನ್ ಸಿಟಿಯ ಮಂದಿ ಈಗ ಬಗೆ ಬಗೆಯ ಮಾವಿನ ಹಣ್ಣುಗಳನ್ನು ಸವಿಯುತ್ತಿದ್ದಾರೆ. ಇಂದು ತೋಟಗಾರಿಕೆ ಇಲಾಖೆ ಹಾಗೂ ಮಾವು ನಿಗಮ‌ ಮಂಡಳಿ ಅಧಿಕೃತವಾಗಿ ಮಾವು ಮೇಳಕ್ಕೆ ಚಾಲನೆ ನೀಡಿದೆ.

ಮಾವಿನ‌ ಜೊತಗೆ ಹಲಸಿನ ಮೇಳ ಕೂಡ ಇರಲಿದೆ. ಮಾವಿನ ಮೇಳದಲ್ಲಿ ಕೋಲಾರ, ಶ್ರೀನಿವಾಸಪುರ, ಚಿಂತಾಮಣಿ, ಬೆಂಗಳೂರು ಗ್ರಾಮಾಂತರ, ಹಾವೇರಿ, ಧಾರವಾಡ ಸೇರಿದಂತೆ ನಾನಾ ಜಿಲ್ಲೆಗಳ ಮಾವು ಬೆಳೆಗಾರರು ಭಾಗವಹಿಸಿದ್ದು ವಾಣಿಜ್ಯ, ಪಾರಂಪರಿಕ ಮಾವಿನ ತಳಿಗಳು, ಜತೆಗೆ ಉಪ್ಪಿನಕಾಯಿಗೆ ಬಳಸುವ ಮಿಡಿ, ಮಿಡಿ ಮಾವು ಜೊತೆಗೆ ರೈತರು ಬೆಳೆದ ನಾನಾ ತಳಿಯ ಹಲಸಿನ ಹಣ್ಣನ್ನು ಮಾರಾಟ ಮಾಡಲಾಗುತ್ತದೆ.

ಯಾವೆಲ್ಲ ತಳಿಯ ಮಾವುಗಳಿವೆ?

ಈ ವರ್ಷದ‌ ಮೇಳದಲ್ಲಿ ಬಾದಾಮಿ, ರಸಪುರಿ, ಸೇಂಧೂರ, ಮಲಗೋವ, ನೀಲಂ, ಮಲ್ಲಿಕಾ, ಆಮ್ರಪಾಲಿ, ಬಂಗನಪಲ್ಲಿ, ತೋತಾಪುರಿ, ಸಕ್ಕರೆಗುತ್ತಿ ಸೇರಿದಂತೆ ನಾನಾ ತಳಿಯ ಹಣ್ಣುಗಳಿದ್ದು, ತೋಟಗಾರಿಕೆ ಇಲಾಖೆಯೇ ಹಣ್ಣುಗಳ‌ ಬೆಲೆ‌ ನಿಗದಿ‌ ಮಾಡಿದೆ.

ಯಾವ ತಳಿಯ ಮಾವಿನ ಹಣ್ಣಿಗೆ ಎಷ್ಟು ಬೆಲೆ (ರೂಪಾಯಿಗಳಲ್ಲಿ)?

  • ಬಾದಮಿ – 130
  • ಬಾದಾಮಿ ಬಾಕ್ಸ್ – 450
  • ರಸಪುರಿ – 100
  • ಮಲ್ಲಿಕಾ – 130
  • ಸೇಂದೂರ – 60
  • ಸಕ್ಕರೆ ಗುತ್ತಿ – 200
  • ಮಲಗೋವಾ – 220
  • ಬಂಗನಪಲ್ಲಿ – 80
  • ಮಲ್ಲಿಕಾ ಬಾಕ್ಸ್ – 375
  • ದಶೇರಿ – 137
  • ತೋತಾಪುರಿ – 50
  • ಕಾಲಾಪಾಡ್ – 135
  • ಅಮ್ರಪಾಲಿ – 120
  • ಕೇಸರ್ – 130
  • ಇಮಾಮ್ ಪಸಂದ್ – 250
  • ಆಮ್ಲೆಟ್ – 100

ಇದನ್ನೂ ಓದಿ: ಅಚ್ಚರಿಯ ಹೇಳಿಕೆ ನೀಡಿದ ಆಹಾರ ತಜ್ಞ, ಬೆಂಗಳೂರಿನ ಶೇ 87 ರಷ್ಟು ಪೊಲೀಸರು ಅನ್​​ಫಿಟ್

ಪ್ರತಿವರ್ಷ ಮಾವಿನ ಸೀಸನ್​​ನಲ್ಲಿ ರಾಜ್ಯದಲ್ಲಿ ಸುಮಾರು 15 ಲಕ್ಷ ಟನ್‌ ಮಾವು ಉತ್ಪಾದನೆಯಾಗಬೇಕಿತ್ತು. ಆದರೆ, ಮಳೆಯಿಲ್ಲದ ಪರಿಣಾಮ ಹಾಗೂ ಅಧಿಕ ತಾಪಮಾನದಿಂದಾಗಿ ಕೇವಲ 4-5 ಲಕ್ಷ ಟನ್‌ನಷ್ಟು ಮಾವಿನ ಫಸಲು ಕಡಿಮೆ ಬಂದಿದೆ. ಹೀಗಾಗಿ ಈ ಬಾರಿ ಮೇಳದಲ್ಲಿ ದರ ಕೊಂಚ ಏರಕೆಯಾಗಿದೆ. ಆದ್ರೂ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ ಎಂದು ರೈತರು ಹೇಳಿದ್ದಾರೆ.

ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?