AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಚ್ಚರಿಯ ಹೇಳಿಕೆ ನೀಡಿದ ಆಹಾರ ತಜ್ಞ, ಬೆಂಗಳೂರಿನ ಶೇ 87 ರಷ್ಟು ಪೊಲೀಸರು ಅನ್​​ಫಿಟ್​​

ಬೆಂಗಳೂರು ಪೊಲೀಸರ ತಪಾಸಣೆ ವೇಳೆ ಬಾಡಿ ಮಾಸ್ ಇಂಡಿಕ್ಸ್ ಮೂಲಕ ದೈಹಿಕ ಸದೃಢತೆ ಇಲ್ಲದಿರುವಿಕೆ ಗೊತ್ತಾಗಿದೆ ಎಂದು ಆಹಾರ ತಜ್ಞ ಡಾ.ಕೀರ್ತಿಶ್ರೀ ಹಿರಿಸಾವೆ ಹೇಳಿದ್ದಾರೆ. ಈ ವಿಚಾರವಾಗಿ ಬೆಂಗಳೂರು ಪೊಲೀಸ್ ಆಯುಕ್ತ ಬಿ.ದಯಾನಂದ್​ ಸಿಬ್ಬಂದಿಗಳಿಕೆ ಖಡಕ್​ ಸೂಚನೆ ನೀಡಿದ್ದಾರೆ. ಉತ್ತಮವಲ್ಲದ ಜೀವನ ಶೈಲಿ ದೈಹಿಕ ಸದೃಢತೆ ಇಲ್ಲದಿರಲು ಕಾರಣ ಎಂದಿದ್ದಾರೆ.

Shivaprasad B
| Edited By: |

Updated on:May 25, 2024 | 10:22 AM

Share

ಬೆಂಗಳೂರು, ಮೇ 24: ಬೆಂಗಳೂರು ಪೊಲೀಸರ (Police) ತಪಾಸಣೆ ವೇಳೆ (BMI) ಬಾಡಿ ಮಾಸ್ ಇಂಡಿಕ್ಸ್ ಮೂಲಕ ದೈಹಿಕ ಸದೃಢತೆ ಇಲ್ಲದಿರುವಿಕೆ ಗೊತ್ತಾಗಿದೆ ಎಂದು ಆಹಾರ ತಜ್ಞ ಡಾ.ಕೀರ್ತಿಶ್ರೀ ಹಿರಿಸಾವೆ ಹೇಳಿದ್ದಾರೆ. ನಗರದಲ್ಲಿ ಟಿವಿ9 ಜೊತೆಗೆ ಮಾತನಾಡಿದ ಅವರು, ದೇಹದ ಮೇಲೆ ಒತ್ತಡ ಹೆಚ್ಚಾದಾಗ ದೇಹದ ತೂಕ ಹೆಚ್ಚಳವಾಗುತ್ತೆ. ಸರಿಯಾದ ಪ್ರಮಾಣದಲ್ಲಿ ಆಹಾರ ಪಥ್ಯ ಕ್ರಮ ಇಲ್ಲದಿರುವಿಕೆ, ಅಸಮರ್ಪಕ ಜೀವನ ಶೈಲಿ ಕಾರಣವಾಗಿದೆ. ಸಮಯ ನಿರ್ವಹಣೆ ಮಾಡುವ ಮೂಲಕ ದೇಹದ ಸದೃಢತೆ ಕಾಯ್ದುಕೊಳ್ಳಬೇಕು ಎಂದಿದ್ದಾರೆ.

ದಿನನಿತ್ಯ ಪ್ರಾಣಯಾಮ, ವ್ಯಾಯಾಮ, ನಡಿಗೆ, ಹಿತ-ಮಿತ ಆಹಾರ ಸೇವನೆ ಆರೋಗ್ಯ ಕಾಪಾಡುವಲ್ಲಿ ಸಹಕಾರಿ. ಹಣ್ಣು-ಹಂಪಲು, ತರಕಾರಿ ದೈನಂದಿನ ಆಹಾರದಲ್ಲಿ ಇರಬೇಕು. ಒತ್ತಡ ನಿರ್ವಹಣೆ ಮಾಡುವ ಮೂಲಕ ಸಮಯ ನಿರ್ವಹಣೆ ಅತಿ ಮುಖ್ಯ. ಸರಿಯಾದ ಪ್ರಮಾಣದಲ್ಲಿ ನಿದ್ದೆ ಮಾಡುವುದು. ಸೂಕ್ತ ರೀತಿಯಲ್ಲಿ ದೈಹಿಕವಾಗಿ ದೇಹ ದಂಡನೆ ಅವಶ್ಯವಿದೆ ಎಂದು ಹೇಳಿದ್ದಾರೆ.

ಸಿಬ್ಬಂದಿಗೆ ಆಯುಕ್ತ ಬಿ.ದಯಾನಂದ್ ಖಡಕ್ ಸೂಚನೆ

ಈ ವಿಚಾರವಾಗಿ ಬೆಂಗಳೂರು ಪೊಲೀಸ್ ಆಯುಕ್ತ ಬಿ.ದಯಾನಂದ್ ಮಾತನಾಡಿ, ಈ ಬಗ್ಗೆ ಆಯಾ ವಿಭಾಗದ ಡಿಸಿಪಿಗಳಿಗೆ ಸೂಚನೆ ನೀಡಲಾಗಿದೆ. ದೈಹಿಕ ಸದೃಢರಲ್ಲ ಸಿಬ್ಬಂದಿಗೆ ಸೂಚನೆ ನೀಡುವಂತೆ ತಿಳಿಸಲಾಗಿದೆ. ಸಿಬ್ಬಂದಿ ದೈಹಿಕ ಮತ್ತು ಮಾನಸಿಕ ಆರೋಗ್ಯ ಸ್ವಾಸ್ಥ್ಯಕ್ಕಾಗಿ ಕ್ರಮಕೈಗೊಳ್ಳಲಾಗುತ್ತಿದೆ. ಇದಕ್ಕಾಗಿ ಪೊಲೀಸ್ ಇಲಾಖೆಯಿಂದ ಹಲವು ಕಾರ್ಯಸೂಚಿ ರೂಪಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಬಿಬಿಎಂಪಿ ಮುಖ್ಯ ಆಯುಕ್ತರ ಹೆಸರಲ್ಲಿ ಫೇಕ್ ವಾಟ್ಸಾಪ್​​​​: ಸೈಬರ್​ ಕ್ರೈಂಗೆ ತುಷಾರ್ ಗಿರಿನಾಥ್ ದೂರು

ಉತ್ತಮವಲ್ಲದ ಜೀವನ ಶೈಲಿ ದೈಹಿಕ ಸದೃಢತೆ ಇಲ್ಲದಿರಲು ಕಾರಣ. ಸಮಾಲೋಚಕರೊಂದಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತೇವೆ. ನಿಯಮಿತ ವ್ಯಾಯಾಮ, ಸರಿಯಾದ ಸಮಯಕ್ಕೆ ಆಹಾರ ಸೇವನೆ, ಒತ್ತಡ ನಿರ್ವಹಣಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವುದಾಗಿ ಅವರು ಹೇಳಿದ್ದಾರೆ.

ಸದೃಢರಾಗಿದ್ದರೇ ಮೊದಲು ನಮಗೆ ಲಾಭ, ಬಳಕ ಇಲಾಖೆಗೆ: ಅಲೋಕ್ ಕುಮಾರ್

ಸಂಚಾರ ಮತ್ತು ರಸ್ತೆ ಸುರಕ್ಷತೆ ಎಡಿಜಿಪಿ ಅಲೋಕ್ ಕುಮಾರ್​​ ಪ್ರತಿಕ್ರಿಯಿಸಿದ್ದು, ಫಿಸಿಕಲ್ ಫಿಟ್ನೆಸ್ ಮತ್ತು ಮೆಂಟಲ್ ಟಫ್ನೆಸ್ ಎರಡೂ ಪೊಲೀಸ್ ಇಲಾಖೆಯಲ್ಲಿ ಮುಖ್ಯ. ಪೊಲೀಸ ಇಲಾಖೆಯಲ್ಲಿ ಬಹಳಷ್ಟು ದೈಹಿಕ ಸದೃಢತೆ ಕಾಯ್ದುಕೊಳ್ಳಲು ಪ್ರತ್ಯೇಕ ಕಾಲಾವಕಾಶ ಸಿಗುವುದಿಲ್ಲ. ಹಿರಿಯ ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗೆ ಉತ್ತೇಜನ, ಪ್ರೋತ್ಸಾಹ ನೀಡಬೇಕು. ನಮ್ಮ ಮಾನಸಿಕ ಮತ್ತು ಶಾರೀಕ ಆರೋಗ್ಯ ಸದೃಢವಾಗಿಟ್ಟುಕೊಳ್ಳಬೇಕು. ನಾವು ಸದೃಢತೆ ಹೊಂದಿದ್ದರೇ ಅದರ ಮೊದಲ ಲಾಭ ನಮಗೆ, ನಂತರ ನಮ್ಮ ಕುಟುಂಬಕ್ಕೆ ಆ ಬಳಿಕ ಇಲಾಖೆಗೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮದ್ಯಪ್ರಿಯರಿಗೆ ಶಾಕ್​! ಅಯ್ಯೋ, ಜೂನ್ ಮೊದಲ ವಾರ ಎಣ್ಣೆ ಸಿಗಲ್ಲ

ಮಾಡುವ ಕೆಲಸದ ಜೊತೆ-ಜೊತೆಗೆ ದೇಹವನ್ನು ದಂಡಿಸುವ ಕೆಲಸ ಮಾಡಬೇಕು. ಪೆಟ್ರೋಲಿಂಗ್ ಮಾಡುವ ವೇಳೆ, ಬೀಟ್ ಮಾಡುವ ವೇಳೆ ನಡೆದಾಡಬೇಕು. ಆಹಾರ ಕ್ರಮ ಬದಲಾಗಬೇಕಿದೆ. ವ್ಯಾಯಾಮ, ಆಹಾರ ಕ್ರಮ, ಜೀವನ ಶೈಲಿ ದೇಹದ ಸದೃಢತೆ ಮೇಲೆ ಪರಿಣಾಮ ಬೀರುತ್ತೆ. ಆಹಾರ ತಜ್ಞರಿಂದ ಸಲಹೆ ಪಡೆದುಕೊಳ್ಳಬಹುದು ಎಂದಿದ್ದಾರೆ.

ಸರಿಯಾದ ಪ್ರಮಾಣದಲ್ಲಿ ನಿದ್ದೆ ಮಾಡದಿರುವುದು, ಸರಿಯಾದ ಪ್ರಮಾಣದಲ್ಲಿ ಈ ಮೂರನ್ನು ನಿರ್ವಹಣೆ ಮಾಡುವುದು ಸುಲಭವಲ್ಲ. ಆದರೆ ಅಸಾಧ್ಯವಾದುದಲ್ಲ. ದೈಹಿಕ ಸದೃಢತೆ ಕಾಯ್ದುಕೊಳ್ಳುವುದು ನಮ್ಮ ಮನಸ್ಸಿಗೆ ಬರಬೇಕು. ಪೊಲೀಸ್ ಸಮವಸ್ತ್ರದಲ್ಲಿ ಸ್ಮಾರ್ಟ್ ಆಗಿ ಕಾಣಬೇಕು. ಜನರಿಗೆ ಪೊಲೀಸರನ್ನು ನೋಡಿದರೆ ಹೆಮ್ಮೆ ಮೂಡುವಂತಾಗಬೇಕು ಎಂಬುದು ನನ್ನ ಅನಿಸಿಕೆ ಎಂದು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published On - 4:57 pm, Fri, 24 May 24