ಮದ್ಯಪ್ರಿಯರಿಗೆ ಶಾಕ್​! ಅಯ್ಯೋ, ಜೂನ್ ಮೊದಲ ವಾರ ಎಣ್ಣೆ ಸಿಗಲ್ಲ

ಜೂನ್​ ಮೊದಲ ವಾರ ಮದ್ಯ ಪ್ರಿಯರಿಗೆ ನಿರಾಸೆ ಕಾದಿದೆ. ಇಡೀ ವಾರ ಬೆಂಗಳೂರಿನಲ್ಲಿ ಮದ್ಯ ಸಿಗಲ್ಲ. ಏಕೆಂದರೆ ವಿಧಾನ ಪರಿಷತ್​ ಚುನಾವಣೆ ಮತ್ತು ಲೋಕಸಭಾ ಚುನಾವಣೆ ಮತ ಎಣಿಕೆ ಇರುವುದರಿಂದ ಜೂನ್​​ 1 ರಿಂದ 6ರ ವರೆಗೆ ಮದ್ಯ ಮಾರಾಟವನ್ನು ನಿಷೇಧಿಸಿ ಬೆಂಗಳೂರು ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಮದ್ಯಪ್ರಿಯರಿಗೆ ಶಾಕ್​! ಅಯ್ಯೋ, ಜೂನ್ ಮೊದಲ ವಾರ ಎಣ್ಣೆ ಸಿಗಲ್ಲ
ಮದ್ಯಪಾನ ಆರೋಗ್ಯಕ್ಕೆ ಹಾನಿಕಾರ
Follow us
| Updated By: ವಿವೇಕ ಬಿರಾದಾರ

Updated on:May 27, 2024 | 10:26 AM

ಬೆಂಗಳೂರು, ಮೇ 24: ಜೂನ್​ ಮೊದಲ ವಾರ ಮದ್ಯಪ್ರಿಯರಿಗೆ ಶಾಕ್​ ಕಾದಿದೆ. ಮಳೆಗಾಲ ಆರಂಭವಾಗುತ್ತೆ, ಸಾಯಂಕಾಲ ಜಿಟಿಜಿಟಿ ಮಳೆ-ಚಳಿಯಲ್ಲಿ ಒಂದು ಪೆಗ್​ ಏರಸತಾ ಕೂರಬೇಕು ಅಂದುಕೊಂಡಿರುವ ಮದ್ಯಪ್ರಿಯರು ಈ ಸುದ್ದಿಯನ್ನೊಮ್ಮೆ ಓದಿ ಬಿಡಿ. ಜೂನ್​​ ಮೊದಲ ವಾರ ನೀವು ಮದ್ಯದ ಮಳಿಗೆಗಳ (Alcohol Shop) ಬಳಿ ಹೋದರೆ ನಿರಾಸೆಯಿಂದ ವಾಪಸ್​ ಆಗಬೇಕಾಗುತ್ತದೆ. ಏಕೆಂದರೆ ವಿಧಾನ ಪರಿಷತ್​ ಚುನಾವಣೆ (Vidhan Parishad Election) ಮತ್ತು ಲೋಕಸಭೆ ಚುನಾವಣೆ (Lok Sabha Election) ಮತ ಎಣಿಕೆ ಇರುವುದರಿಂದ ಜೂನ್​ 1 ರಿಂದ 6ರ ವರೆಗೆ ಮದ್ಯದ (Alcohol) ಮಾರಾಟವನ್ನು ಬಂದ್​​ ಮಾಡುವಂತೆ ಬೆಂಗಳೂರು ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಜೂನ್ 1 ರಿಂದ 6ರವರೆಗೆ (ಜೂನ್ 5 ಹೊರತುಪಡಿಸಿ) ಬೆಂಗಳೂರಿನ ಎಲ್ಲ ಎಣ್ಣೆ ಅಂಗಡಿಗಳು ಸಂಪೂರ್ಣವಾಗಿ ಬಂದ್ ಇರಲಿವೆ. ಜೂನ್ 3 ರಂದು ಪದವೀಧರ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಹೀಗಾಗಿ ಜೂನ್ 1ರ ಸಾಯಂಕಾಲ 4 ಗಂಟೆಯಿಂದ ಜೂನ್ 3ರ ವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ.

ಇದನ್ನೂ ಓದಿ: ಲೋಕಸಭಾ ಚುನಾವಣೆ ಫಲಿತಾಂಶ ಬಳಿಕ ಮದ್ಯದ ದರ ಏರಿಕೆ ಸಾಧ್ಯತೆ

ಇನ್ನು ಜೂನ್ 4 ರಂದು ದೇಶಾದ್ಯಂತ ಲೋಕಸಭೆ ಚುನಾವಣೆಯ ಮತ ಎಣಿಕೆ‌ ನಡೆಯುವುದರಿಂದ ಅಂದು ಸಹ ಸಂಪೂರ್ಣವಾಗಿ ಎಲ್ಲ ಬಾರ್ ಅಂಡ್ ರೆಸ್ಟೋರೆಂಟ್, ವೈನ್ ಶಾಪ್ ಬಂದ್​ ಇರಲಿವೆ. ಜೂನ್​ 5 ರಂದು ಯಥಾಪ್ರಕಾರ ಎಣ್ಣೆ ಅಂಗಡಿಗಳು ತೆರೆದಿರುತ್ತವೆ. ಮತ್ತೆ ಜೂನ್ 6 ರಂದು ವಿಧಾನ ಪರಿಷತ್​ ಚುನಾವಣೆ ಮತ ಎಣಿಕೆ ಇರುವುದರಿಂದ ಅಂದು ಸಹ ಎಲ್ಲ ತರಹದ ಎಣ್ಣೆ ಅಂಗಡಿಗಳು ಬಂದ್​ ಆಗಲಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:04 pm, Fri, 24 May 24

ತಾಜಾ ಸುದ್ದಿ
ಜೈಲಿನಲ್ಲಿ ದರ್ಶನ್​ನ​ ಅಪ್ಪಿ ಕಣ್ಣೀರು ಹಾಕಿದ ತಾಯಿ ಮೀನಾ
ಜೈಲಿನಲ್ಲಿ ದರ್ಶನ್​ನ​ ಅಪ್ಪಿ ಕಣ್ಣೀರು ಹಾಕಿದ ತಾಯಿ ಮೀನಾ
Daily Devotional: ಸನಾತನ ಧರ್ಮದಲ್ಲಿ 108ರ ಮಹತ್ವ ತಿಳಿದುಕೊಳ್ಳಿ
Daily Devotional: ಸನಾತನ ಧರ್ಮದಲ್ಲಿ 108ರ ಮಹತ್ವ ತಿಳಿದುಕೊಳ್ಳಿ
Daily Horoscope: ವೈವಾಹಿಕ ಜೀವನವು ಸುಖಮಯವಾಗಿ ಸಾಗಲಿದೆ
Daily Horoscope: ವೈವಾಹಿಕ ಜೀವನವು ಸುಖಮಯವಾಗಿ ಸಾಗಲಿದೆ
‘ದರ್ಶನ್ ರಿಲೀಸ್​ ಆಗ್ತಾರಾ?’: ದೇವರಿಗೆ ಪ್ರಶ್ನೆ ಕೇಳಿ ಉತ್ತರ ಪಡೆದ ಪೂಜಾರಿ
‘ದರ್ಶನ್ ರಿಲೀಸ್​ ಆಗ್ತಾರಾ?’: ದೇವರಿಗೆ ಪ್ರಶ್ನೆ ಕೇಳಿ ಉತ್ತರ ಪಡೆದ ಪೂಜಾರಿ
ಭಾರೀ ಮಳೆಯಿಂದ ಟ್ರಾಫಿಕ್ ಮಧ್ಯೆ 8 ಅಡಿ ಉದ್ದದ ಮೊಸಳೆ ಪ್ರತ್ಯಕ್ಷ!
ಭಾರೀ ಮಳೆಯಿಂದ ಟ್ರಾಫಿಕ್ ಮಧ್ಯೆ 8 ಅಡಿ ಉದ್ದದ ಮೊಸಳೆ ಪ್ರತ್ಯಕ್ಷ!
ಅಪ್ಪ ಕೊಚ್ಚಿ ಹೋಗುವ ವಿಡಿಯೋ ಮಗಳ ಮೊಬೈಲ್​ನಲ್ಲಿ ಸೆರೆ
ಅಪ್ಪ ಕೊಚ್ಚಿ ಹೋಗುವ ವಿಡಿಯೋ ಮಗಳ ಮೊಬೈಲ್​ನಲ್ಲಿ ಸೆರೆ
ಪಿಕ್ನಿಕ್ ಹೋದ ಐವರು ಜಲಪಾತದಲ್ಲಿ ಕೊಚ್ಚಿ ಹೋದ ಭಯಾನಕ ವಿಡಿಯೋ ವೈರಲ್
ಪಿಕ್ನಿಕ್ ಹೋದ ಐವರು ಜಲಪಾತದಲ್ಲಿ ಕೊಚ್ಚಿ ಹೋದ ಭಯಾನಕ ವಿಡಿಯೋ ವೈರಲ್
ಸಿದ್ದರಾಮಯ್ಯ ಮೇಲಿನ ವೈರತ್ವ ಮಗನ ಮೇಲೆ ಸಾಧಿಸುವುದು ಸರಿಯಲ್ಲ:ಭೈರತಿ ಸುರೇಶ್
ಸಿದ್ದರಾಮಯ್ಯ ಮೇಲಿನ ವೈರತ್ವ ಮಗನ ಮೇಲೆ ಸಾಧಿಸುವುದು ಸರಿಯಲ್ಲ:ಭೈರತಿ ಸುರೇಶ್
ಶೇ 60 ರಷ್ಟು ಕನ್ನಡ ಕಡ್ಡಾಯ; ಸರ್ಕಾರದಿಂದ  ಸೂಕ್ತ ಕ್ರಮ: ನಾರಾಯಣಗೌಡ, ಕರವೇ
ಶೇ 60 ರಷ್ಟು ಕನ್ನಡ ಕಡ್ಡಾಯ; ಸರ್ಕಾರದಿಂದ  ಸೂಕ್ತ ಕ್ರಮ: ನಾರಾಯಣಗೌಡ, ಕರವೇ
ಪ್ರಜ್ವಲ್​ ಮಾತಾಡಿಸಲು ಜೈಲಿಗೆ ಬಂದ ಭವಾನಿ ಮಾಧ್ಯಮಗಳಿಗೆ ಮುಖ ತೋರಿಸಲಿಲ್ಲ!
ಪ್ರಜ್ವಲ್​ ಮಾತಾಡಿಸಲು ಜೈಲಿಗೆ ಬಂದ ಭವಾನಿ ಮಾಧ್ಯಮಗಳಿಗೆ ಮುಖ ತೋರಿಸಲಿಲ್ಲ!