ಬೆಂಗಳೂರಿಗೆ ಮಳೆ ಮುನ್ಸೂಚನೆ; ಯಾವುದೇ ಕಾರಣಕ್ಕೂ ಕೆರೆ, ರಾಜಕಾಲುವೆ ಒತ್ತುವರಿ ತೆರವಿಗೆ ನಿರ್ಲಕ್ಷ್ಯ ಬೇಡ -ತುಷಾರ್ ಗಿರಿನಾಥ್ ಆದೇಶ
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ನೇತೃತ್ವದಲ್ಲಿ ರಾಜಕಾಲುವೆ ಒತ್ತುವರಿ ತೆರವು ವಿಚಾರವಾಗಿ ಸಭೆ ಸೇರಲಾಗಿತ್ತು. ಸಭೆಯಲ್ಲಿ ಯಾವುದೇ ಕಾರಣಕ್ಕೂ ಈ ಬಾರಿ ತೆರವು ವಿಚಾರದಲ್ಲಿ ನಿರ್ಲಕ್ಷ ವಹಿಸದಂತೆ ಸೂಚಿಸಲಾಗಿದೆ. ಇನ್ನು, ಒತ್ತುವರಿ ತೆರವು ವಿಚಾರವಾಗಿ ಸರ್ಕಾರ ಕೆರೆಗೆ ಸಂಬಂಧಿಸಿದಂತೆ ಹಾಗು ಕಾಲುವೆಗೆ ಸಂಬಂಧಿಸಿದಂತೆ ಒಂದು ನೋಟಿಫಿಕೇಶನ್ ಹೊರಡಿಸಿದೆ.
ಬೆಂಗಳೂರು, ಸೆ.14: ನಗರದಲ್ಲಿ ತಡವಾಗಿಯಾದ್ರೂ ಮಳೆಗಾಲ ಆರಂಭವಾಗೋ ಎಲ್ಲ ಲಕ್ಷಣಗಳೂ ಕಾಣ್ತಿದೆ(Bengaluru Rain). ಹವಾಮಾನ ಇಲಾಖೆ ಕೂಡ ಈ ಬಗ್ಗೆ ಮುನ್ಸೂಚನೆ ಕೊಟ್ಟಿದೆ. ಹೀಗಿರುವಾಗ ನಮ್ಮ ಬೆಂಗಳೂರು ಮಳೆಯನ್ನು ಸ್ವಾಗತಿಸಲು ಸಜ್ಜಾಗಿದ್ಯಾ ಅನ್ನೋ ಪ್ರಶ್ನೆ ಕೂಡ ಕಾಡುತ್ತೆ. ಯಾಕಂದ್ರೆ ಕಾಲುವೆಗಳಲ್ಲಿ ಹರಿಯಬೇಕಿರೋ ಮಳೆ ನೀರು ಬೇರೆ ವಿಧಿಯಿಲ್ಲದೇ ರಸ್ತೆಯಲ್ಲಿ ಹರಿಯುತ್ತೆ. ಯಾಕಂದ್ರೆ ಆ ರಾಜಕಾಲುವೆಗಳ ಮೇಲೆ ಅಪಾರ್ಟ್‌ಮೆಂಟ್‌ಗಳು ಸೇರಿದಂತೆ ಅನೇಕ ಬಿಲ್ಡಿಂಗ್‌ಗಳು ತಲೆಯೆತ್ತಿವೆ. ಅವುಗಳನ್ನು ತೆರವು ಮಾಡಲು ಈ ಹಿಂದೆ ಹೈಕೋರ್ಟ್ ಸೂಚನೆ ನೀಡಿದ್ರೂ ಕೂಡ ಪಾಲಿಕೆ(BBMP) ಹಾಗು ಜಿಲ್ಲಾಧಿಕಾರಿಗಳ ತಂಡ ವಿಫಲವಾಗಿತ್ತು. ಹೀಗಾಗಿ ನಿನ್ನೆ(ಸೆ.13) ಮತ್ತೊಂದು ಸುತ್ತಿನ ಸಭೆ ಸೇರಿದ್ದ ಪಾಲಿಕೆಯ ಹಿರಿಯ ಅಧಿಕಾರಿಗಳು ತೆರವು ಮಾಡಲು ಸಜ್ಜಾಗಿದ್ದೇವೆ ಎಂದಿದ್ದಾರೆ.
ಕೊಟ್ಟಿರೋ ಟಾಸ್ಕ್ ಮಾಡಬೇಕು, ಇಲ್ಲವಾದ್ರೆ ನೀವು ಜಾಗ ಖಾಲಿ ಮಾಡಬೇಕು
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ನೇತೃತ್ವದಲ್ಲಿ ರಾಜಕಾಲುವೆ ಒತ್ತುವರಿ ತೆರವು ವಿಚಾರವಾಗಿ ಸಭೆ ಸೇರಲಾಗಿತ್ತು. ವಿಶೇಷ ಆಯುಕ್ತರಾದ ಹರೀಶ್ ಕುಮಾರ್ ಹಾಗು ತ್ರಿಲೋಕ ಚಂದ್ರ ಭಾಗಿಯಾಗಿದ್ರು. ಅಷ್ಟೇ ಅಲ್ಲದೇ ಎಲ್ಲ ವಲಯಗಳ ಜೆಸಿ, ಸಿಇ ಹಾಗು ಇಇಗಳು ಕೂಡ ಹಾಜರಿದ್ರು. ಸಭೆಯಲ್ಲಿ ಯಾವುದೇ ಕಾರಣಕ್ಕೂ ಈ ಬಾರಿ ತೆರವು ವಿಚಾರದಲ್ಲಿ ನಿರ್ಲಕ್ಷ ವಹಿಸದಂತೆ ಸೂಚಿಸಲಾಗಿದೆ. ಇನ್ನು, ಒತ್ತುವರಿ ತೆರವು ವಿಚಾರವಾಗಿ ಸರ್ಕಾರ ಕೆರೆಗೆ ಸಂಬಂಧಿಸಿದಂತೆ ಹಾಗು ಕಾಲುವೆಗೆ ಸಂಬಂಧಿಸಿದಂತೆ ಒಂದು ನೋಟಿಫಿಕೇಶನ್ ಹೊರಡಿಸಿದೆ. ಅದರ ಅನ್ವಯ ಕಾಲುವೆ ಒತ್ತುವರಿ ವಿಚಾರವಾಗಿ ಪ್ರತಿಯೊಂದು ಕಿಲೋಮೀಟರ್ ಒತ್ತುವರಿ ಪತ್ತೆಹಚ್ಚಲು ಒಬ್ಬ ಇಂಜಿನಿಯರ್‌ಗೆ ಜವಾಬ್ದಾರಿ ನೀಡಲಾಗಿದೆ. ಅವರ ನೇತೃತ್ವದಲ್ಲಿ ಯಾರ ಅವಧಿಯಲ್ಲಿ ಕರ್ತವ್ಯ ಲೋಪ ಅಂತ ರಿಪೋರ್ಟ್ ಮಾಡಬೇಕು. ಪೂರ್ಣವಾದ ತೆರವು ರಿಪೋರ್ಟ್ ಹಾಗು ಕರ್ತವ್ಯ ಲೋಪ ರಿಪೋರ್ಟ್ ಪಾಲಿಕೆಗೆ ಸಲ್ಲಿಸಬೇಕು. 10 ದಿನಗಳಲ್ಲಿ ಅವರಿಗೆ ನೀಡಿರೋ ಟಾಸ್ಕ್ ಮಾಡಿಲ್ಲವಾದ್ರೆ ಆ ಎಂಜಿನಿಯರ್ ವಿರುದ್ದ ಕ್ರಮ ಜರುಗಿಸಲಾಗುತ್ತೆ. ಇದೇ ರೀತಿ 10 ಕೆರೆಗಳ ಒತ್ತುವರಿಗೆ ಸಂಬಂಧಿಸಿದಂತೆ 3 ದಿನಗಳ ಸಮಯ ನೀಡಲಾಗಿದೆ.
ಇದನ್ನೂ ಓದಿ: ಇಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
ಇನ್ನು, ಯಾರ್ಯಾರ ಅವಧಿಯಲ್ಲಿ ಎಷ್ಟೆಷ್ಟು ಅವ್ಯವಹಾರ ಹಾಗು ಎಡವಟ್ಟುಗಳಾಗಿದೆ ಅಂತ ಹಾಲಿ ಅಧಿಕಾರಿಗಳ ಹಾಗು ಸಿಬ್ಬಂದಿ ವರ್ಗವೇ ರಿಪೋರ್ಟ್ ರೆಡಿ ಮಾಡಬೇಕಿದೆ. ಒಬ್ಬರ ಮೇಲೆ ರಿಪೋರ್ಟ್ ತಯಾರಿಸಿದ್ರೂ ಆ ರಿಂಗ್‌ನಲ್ಲಿ ಎಲ್ಲರ ಹೆಸರೂ ನಮೂದಿಸಬೇಕಾಗುತ್ತೆ. ಈ ರಿಪೋರ್ಟ್ ಮಾಡಲು ಪಾಲಿಕೆಯ ಈಗಿರೋ ಅಧಿಕಾರಿಗಳಿಗೆ ಮನಸ್ಸು ಆಗ್ತಿಲ್ಲ ಅನ್ನೋದು ಎಷ್ಟು ಸತ್ಯವೋ, ರಿಪೋರ್ಟ್ ರೆಡಿ ಮಾಡಿಕೊಡಲಿಲ್ಲವಾದ್ರೆ ಅವರ ಕೆಲಸ ಹೋಗೋದು ಕೂಡ ಅಷ್ಟೇ ಗ್ಯಾರೆಂಟಿಯಾಗಿದೆ. ಅದೇನೇ ಇರಲಿ, ತಪ್ಪಿತಸ್ಥರ ವಿರುದ್ಧ ಕ್ರಮವಾಗಬೇಕು, ನಗರದಲ್ಲಿರೋ ರಾಜಕಾಲುವೆ ಒತ್ತುವರಿ ತೆರವಾಗಬೇಕು. ಮಳೆಗಾಲದಲ್ಲಿ ಯಾರಿಗೂ ಕೂಡ ಸಮಸ್ಯೆ ಆಗದಂತೆ ಪಾಲಿಕೆ ಎಚ್ಚರ ವಹಿಸುತ್ತೆ ಅನ್ನೋದನ್ನ ಕಾದು ನೋಡಬೇಕು.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ