ಬೆಂಗಳೂರು: ದುರಸ್ತಿ ಕಾರ್ಯ ಹಿನ್ನೆಲೆ ತಾತ್ಕಾಲಿಕವಾಗಿ ಮುಚ್ಚಲಾಗಿದ್ದ ಯಮಲೂರು-ಬೆಳ್ಳಂದೂರು ಕೆರೆ ರಸ್ತೆಯನ್ನು(Yemalur-Bellandur Lake Road) ಶನಿವಾರ ದ್ವಿಚಕ್ರವಾಹನ, ಆಟೋರಿಕ್ಷಾ ಮತ್ತು ಕಾರುಗಳಂತಹ ಲಘು ಮೋಟಾರು ವಾಹನಗಳ ಸಂಚಾರಕ್ಕೆ ತೆರೆಯಲಾಗಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಅಧಿಕಾರಿಗಳು ತಿಳಿಸಿದ್ದಾರೆ. ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆ ಮುಖ್ಯ ಇಂಜಿನಿಯರ್ ಬಸವರಾಜ ಕಬಾಡೆ ಮಾತನಾಡಿ, ಸೇತುವೆ ಮರುನಿರ್ಮಾಣದಿಂದಾಗಿ ಯಮಲೂರು-ಬೆಳ್ಳಂದೂರು ಕೆರೆ ಕೋಡಿ ರಸ್ತೆ ಬಂದ್ ಆಗಿತ್ತು. ಹೆವಿ ವಾಹನಗಳ ಸಂಚಾರಕ್ಕೆ ಸದ್ಯ ಅನುಮತಿ ಇಲ್ಲ. ಲಘು ವಾಹನ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.
ಹಳೆಯ ಸೇತುವೆ ಕೇವಲ 12 ಮೀಟರ್ ಅಗಲವಿದ್ದು, ಮರುನಿರ್ಮಾಣ ಮಾಡಲಾಗಿದೆ ಎಂದು ಇಂಜಿನಿಯರ್ ಬಸವರಾಜ ಕಬಾಡೆ ಮಾಹಿತಿ ನೀಡಿದರು. “ತೆರಪಿನ ಅಗಲವು ಕೇವಲ 15-16 ಮೀಟರ್ ಆಗಿತ್ತು. ಈಗ ನೀರು ಹರಿಯುವಂತೆ ಸಂಪರ್ಗ ಗಾತ್ರವನ್ನು 24 ಮೀಟರ್‌ಗೆ ಮತ್ತು ರಸ್ತೆಯ ಅಗಲವನ್ನು 30 ಮೀಟರ್‌ಗೆ ಹೆಚ್ಚಿಸುತ್ತಿದ್ದೇವೆ. ರಸ್ತೆ ಮಟ್ಟಕ್ಕಿಂತ ಸುಮಾರು ಎರಡು ಅಡಿ ಎತ್ತರವಿದ್ದು, ಬೆಳ್ಳಂದೂರು ಕೆರೆಯಿಂದ ನೀರು ಸರಾಗವಾಗಿ ಹರಿಯುತ್ತದೆ ಎಂದರು.
Bellandur Kodi Road Update pic.twitter.com/NKXxfcehNK
— Outer Ring Road Companies Association ® (@0RRCA) June 3, 2023
ಶುಕ್ರವಾರ ರಸ್ತೆ ಬಂದ್ ಮಾಡಿದ್ದರಿಂದ ಬೆಂಗಳೂರು ನಿವಾಸಿಗಳು ದಿನನಿತ್ಯದ ಸಂಚಾರಕ್ಕೆ ತೊಂದರೆ ಅನುಭವಿಸಿದರು. ಹಲವು ಸ್ಥಳೀಯರು ವಾಹನ ಸಂಚಾರದ ವೇಳೆ ತಾವು ಎದುರಿಸಿದ ಕೆಟ್ಟ ಪರಿಸ್ಥಿತಿಯ ಬಗ್ಗೆ ವೀಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಬಸ್ನಲ್ಲೇ ರಣ ಚಂಡಿ ಅವತಾರ: ಕೀಟಲೆ ಕೊಟ್ಟ ಯುವಕನ ಗ್ರಹಚಾರ ಬಿಡಿಸಿದ ಯುವತಿ
ಫುಡ್ ಬ್ಲಾಗರ್ ಹೇಮಂತ್ ಕಾಮತ್ ಎಂಬುವವರು ಟ್ವೀಟ್ ಮಾಡಿ, ಬೆಳ್ಳಂದೂರು ಕೆರೆ ರಸ್ತೆ ದುರಸ್ತಿ ಕಾರ್ಯ ಹಿನ್ನೆಲೆ ಬಂದ್ ಆಗಿದ್ದು, ನೀವು ಮಾರತ್ತಹಳ್ಳಿ ರಸ್ತೆ ಮೂಲಕ ಸಂಚರಿಸಬಹುದು. ಹಾಗೂ ಕೋರಮಂಗಲದಿಂದ ಬರಬಹುದು ಆದರೆ ಟ್ರಾಫಿಕ್ ಹೆಚ್ಚಿರುತ್ತೆ ಎಂದು ಟ್ವೀಟ್ ಮಾಡಿದ್ದಾರೆ.
With Bellandur Lake Road blocked for repair, this is our daily route to office.. Yes, you can take Marathahalli road or come from Koramangala but the traffic is insane! #Bengaluru pic.twitter.com/RbQSzmvXin
— Hemanth Kamath (@MuteManushya) June 1, 2023
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ