Viral News: ಬಾಡಿಗೆದಾರನ ಸ್ಟಾರ್ಟ್ ಅಪ್ನಲ್ಲಿ ರೂ.8 ಲಕ್ಷ ಹೂಡಿಕೆ ಮಾಡಿದ ಮನೆ ಮಾಲೀಕ!
ಬಾಡಿಗೆದಾರನ ಸ್ಟಾರ್ಟ್‌ಅಪ್‌ನಲ್ಲಿ $10,000 ಹೂಡಿಕೆ ಮಾಡುವ ಮೂಲಕ ಬೆಂಗಳೂರು ಮನೆ ಮಾಲೀಕರು ನೆಟ್ಟಿಗರಿಗೆ ಶಾಕ್ ನೀಡಿದ್ದಾರೆ.
ಬೆಂಗಳೂರು ಎಂದರೆ ಹೊರ ರಾಜ್ಯದವರಲ್ಲಿ ಇರುವ ದೋರಣೆ ಎಂದರೆ ಮನೆ ಬಾಡಿಗೆಗೆ ಕೊಡುವುದಿಲ್ಲ. ಕೊಟ್ಟರು ಹಲವಾರು ಷರತ್ತುಗಳನ್ನು ಹಾಕುತ್ತಾರೆ ಎಂದು. ಹೀಗಿರುವ ಸುದ್ದಿಗಳು ಓಡಾಡುತ್ತಿರುವ ಈ ಕಾಲದಲ್ಲಿ ಒಬ್ಬ ಮನೆ ಮಾಲೀಕ ತನ್ನ ಬಾಡಿಗೆದಾರ ಸ್ಟಾರ್ಟ್ ಅಪ್ನಲ್ಲಿ ಬರೋಬ್ಬರಿ $10K (ರೂ.8.24 ಲಕ್ಷ) ಹೂಡಿಕೆ ಮಾಡಿರುವ ವಿಷಯವನ್ನು ಸ್ವತಃ ಬಾಡಿಗೆದಾರ ತನ್ನ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾನೆ.
ಭಾರತದ ಸಿಲಿಕಾನ್ ವ್ಯಾಲಿ ಬೆಂಗಳೂರಿನಿಂದ ಹೃದಯಸ್ಪರ್ಶಿ ಮತ್ತು ಆಶ್ಚರ್ಯಕರ ಕಥೆ ಹೊರಹೊಮ್ಮಿದೆ. ಸಿಂಗಲ್ಸ್‌ಗಾಗಿ AI ನಡೆಸುತ್ತಿರುವ ಮ್ಯಾರೇಜ್ ಸೂಪರ್ ಅಪ್ಲಿಕೇಶನ್ ಬೆಟರ್‌ಹಾಫ್‌ನ ಸಂಸ್ಥಾಪಕರಾದ, ಪವನ್ ಗುಪ್ತಾ, ಟ್ವಿಟರ್‌ನಲ್ಲಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಈ ಸುದ್ದಿ ಈಗ ಸಖತ್ ವೈರಲ್ ಆಗಿದೆ.
In a tough business landscape, I found an unexpected investor in my landlord. He recently invested $10K in my startup @betterhalfai. Truly amazed by the entrepreneurial spirit everyone in Bangalore shows. Silicon Valley of India for a reason. #peakbengalurumoment pic.twitter.com/IfzUn0lPkl
— Pawan Gupta (@pguptasloan) June 2, 2023
ಇತ್ತೀಚಿನ ದಿನಗಳಲ್ಲಿ, ಬೆಂಗಳೂರಿನಲ್ಲಿ ಬಾಡಿಗೆ ಮನೆಗಳು ಸಿಗುವುದು ಸವಾಲಿನದಾಗಿದೆ, ಮನೆ ಮಾಲೀಕರು ಬಾಡಿಗೆದಾರರಿಂದ ಕಟ್ಟುನಿಟ್ಟಾದ ಮಾನದಂಡಗಳನ್ನು ಒತ್ತಾಯಿಸುತ್ತಿದ್ದಾರೆ, ಲಿಂಕ್ಡ್‌ಇನ್ ಪ್ರೊಫೈಲ್‌ಗಳು ಮತ್ತು ಪ್ರತಿಷ್ಠಿತ ಸಂಸ್ಥೆಗಳಿಂದ ಪದವಿಗಳನ್ನು ಕೇಳುತ್ತಿದ್ದಾರೆ. ಆದಾಗ್ಯೂ, ಈ ವಿಶಿಷ್ಟ ಸಂದರ್ಭದಲ್ಲಿ, ಪವನ್ ಗುಪ್ತಾ ಅವರ ಮನೆ ಮಾಲೀಕರು ತನ್ನ ಸ್ಟಾರ್ಟಪ್‌ನಲ್ಲಿ ನಂಬಿಕೆಯನ್ನು ವ್ಯಕ್ತಪಡಿಸಿ ಅದರಲ್ಲಿ ಹೂಡಿಕೆ ಮಾಡಲು ನಿರ್ಧರಿಸಿರುವುದು ವಿಶೇಷವಾಗಿದೆ .
ಗುಪ್ತಾ ಮತ್ತು ಅವರ ಮನೆ ಮಾಲೀಕರ ನಡುವಿನ ವಾಟ್ಸಾಪ್ ಚಾಟ್ ಮಾಲೀಕರ ಸಂದೇಶವನ್ನು ಬಹಿರಂಗಪಡಿಸಿತು, “ನಾನು ನಿಮ್ಮಲ್ಲಿ ಹೂಡಿಕೆ ಮಾಡುತ್ತಿದ್ದೇನೆ. ನಿಜವಾಗಿಯೂ ಹೂಡಿಕೆ ಮಾಡಲು ಸಿದ್ದನಿದ್ದೇನೆ” ಎಂದು ಕಳಿಸಿರುವ ಸಂದೇಶವನ್ನು ನಾವು ನೋಡಬಹುದು. ಅವರು ಗುಪ್ತಾ ಯಶಸ್ಸನ್ನು ಬಯಸಿ ಅವರು ಬೆಟರ್‌ಹಾಫ್ ಎಐ ಕಂಪನಿಯ ಪ್ರಾರಂಭದಲ್ಲಿ $10,000 ಹೂಡಿಕೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಗುಪ್ತಾ ಅವರ ಟ್ವಿಟರ್ ಪೋಸ್ಟ್ ನೆಟ್ಟಿಗರ ಗಮನ ಸೆಳೆಯಿತು, ಬಳಕೆದಾರರು ತಮ್ಮ ಆಶ್ಚರ್ಯವನ್ನು ವ್ಯಕ್ತಪಡಿಸಿದ್ದಾರೆ ಮತ್ತು ತಮ್ಮ ಶುಭಾಶಯಗಳನ್ನು ಕಳುಹಿಸಿದ್ದಾರೆ. ಅವರ ಮನೆ ಮಾಲೀಕರ ಅನಿರೀಕ್ಷಿತ ಬೆಂಬಲವು ಬೆಂಗಳೂರಿನಲ್ಲಿ ಹೆಣಗಾಡುತ್ತಿರುವ ಸ್ಟಾರ್ಟ್‌ಅಪ್‌ಗಳಿಗೆ ಭರವಸೆಯ ಕಿರಣವನ್ನು ತಂದಿದೆ.
ಇದನ್ನೂ ಓದಿ: ಬಾಸ್ಗಳ ಸಹವಾಸ ಸಾಕೆಂದು ಕೆಲಸ ಬಿಟ್ಟವರೇ ಹೆಚ್ಚಂತೆ; ಭಾರತದಲ್ಲಿ ಕುತೂಹಲ ಮೂಡಿಸುತ್ತವೆ ರೆಸಿಗ್ನೇಶನ್ ಕಾರಣಗಳು
ಈ ಹೃದಯಸ್ಪರ್ಶಿ ಕಥೆಯು ಬೆಂಗಳೂರಿಗರ ಉದ್ಯಮಶೀಲತಾ ಮನೋಭಾವ ಮತ್ತು ಬೆಂಬಲವನ್ನು ಪ್ರದರ್ಶಿಸುತ್ತದೆ, ಇಲ್ಲಿಯ ಜನರ ಯೋಚನೆಯೂ ಭಾರತದ ಸಿಲಿಕಾನ್ ವ್ಯಾಲಿ ಎಂಬ ಹೆಸರಿಗೆ ತಕ್ಕಂತೆ ಇದೆ ಎಂದು ನೆಟ್ಟಿಗರು ಹೇಳಿದ್ದಾರೆ. ಇದು ನನ್ನ ಪೀಕ್ ಬೆಂಗಳೂರು ಮೊಮೆಂಟ್ ಎಂದು ಗುಪ್ತ ಅವರು ಹೇಳಿಕೊಂಡಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ