ಬೆಂಗಳೂರಿನಲ್ಲಿ ನಿಲ್ಲದ ಬೈಕ್​ ವ್ಹೀಲಿಂಗ್: ವಿಡಿಯೋ ಶೇರ್ ಮಾಡಿದ ನೆಟ್ಟಿಗ, ಕ್ರಮಕೈಗೊಳ್ಳುವುದಾಗಿ ಹೇಳಿದ ಟ್ರಾಫಿಕ್ ಪೊಲೀಸ್

| Updated By: ಆಯೇಷಾ ಬಾನು

Updated on: Aug 01, 2023 | 3:06 PM

ವೈಟ್‌ಫೀಲ್ಡ್ ಮೆಟ್ರೋ ನಿಲ್ದಾಣದ ಬಳಿ ಯುವಕರು ವೀಲಿಂಗ್ ಮಾಡುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಲಾಗಿದೆ. ಬೈಕ್ ಸವಾರನ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ವೈಟ್ ಫೀಲ್ಡ್ ಸಂಚಾರ ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ನಿಲ್ಲದ ಬೈಕ್​ ವ್ಹೀಲಿಂಗ್: ವಿಡಿಯೋ ಶೇರ್ ಮಾಡಿದ ನೆಟ್ಟಿಗ, ಕ್ರಮಕೈಗೊಳ್ಳುವುದಾಗಿ ಹೇಳಿದ ಟ್ರಾಫಿಕ್ ಪೊಲೀಸ್
ಬೈಕ್ ವೀಲಿಂಗ್ ಮಾಡುತ್ತಿರುವ ಯುವಕ
Follow us on

ಬೆಂಗಳೂರು, ಆ.01: ವೈಟ್‌ಫೀಲ್ಡ್ ಮೆಟ್ರೊ ನಿಲ್ದಾಣದ(Whitefield Metro Station) ಬಳಿಯ ಸಾರ್ವಜನಿಕ ರಸ್ತೆಯಲ್ಲಿ ಯುವಕನೊಬ್ಬ ವೀಲಿಂಗ್(Bike Wheeling) ಮಾಡುತ್ತಿರುವ ವಿಡಿಯೋ ಹರಿದಾಡುತ್ತಿದ್ದು ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ. ಯುವಕ ಬೈಕ್ ಸ್ಟಂಟ್ ಮಾಡುತ್ತಿರುವ ವಿಡಿಯೋವನ್ನು ಥರ್ಡ್ ಐ ಎಂಬ ಯೂಟ್ಯೂಬರ್ ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಿದ್ದಾನೆ.

ವಿಡಿಯೋ ಅಪ್‌ಲೋಡ್ ವೇಳೆ​ ಯೂಟ್ಯೂಬರ್ ವೈಟ್‌ಫೀಲ್ಡ್ ಟ್ರಾಫಿಕ್ ಪೊಲೀಸರನ್ನು ಟ್ಯಾಗ್ ಮಾಡಿದ್ದಾರೆ. ಹಾಗೂ ಇಂತಹ ಜನನಿಬಿಡ ಸಾರ್ವಜನಿಕ ರಸ್ತೆಯಲ್ಲಿ ಸಾಹಸ ಪ್ರದರ್ಶಿಸುವ ಬೈಕ್ ಸವಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ. ಇನ್ನು ಯುವಕ ವೀಲಿಂಗ್ ಮಾಡಲು ಬಳಸಿದ ಬೈಕ್‌ನ ನಂಬರ್ ಪ್ಲೇಟನ್ನು ಮರೆ ಮಾಡಿದ್ದು ನಂತರ ಬೈಕ್ ನ ನೋಂದಣಿ ಸಂಖ್ಯೆ KA53HB3623 ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ತುಮಕೂರು ರಿಂಗ್ ರಸ್ತೆಯಲ್ಲಿ ವೀಲಿಂಗ್ ಪುಂಡರ ಹಾವಳಿ; ವಾಹನ ಸವಾರರಿಂದ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ

ಇನ್ನು ಯೂಟ್ಯೂಬರ್ ಪೋಸ್ಟ್​ಗೆ ವೈಟ್‌ಫೀಲ್ಡ್ ಟ್ರಾಫಿಕ್ ಪೊಲೀಸರು ಪ್ರತಿಕ್ರಿಯಿಸಿದ್ದು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ವಿಡಿಯೋದಲ್ಲಿ ವೀಲಿಂಗ್ ಮಾಡುತ್ತಿರುವ ಬೈಕ್ ಸವಾರ 18 ವರ್ಷದ ನಿರಂಜನ್ ಎಂದು ತಿಳಿದು ಬಂದಿದ್ದು ನಿರಂಜನ್ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಲೀಂಗ್ ಮಾಡುವ ಅನೇಕ ವಿಡಿಯೋಗಳನ್ನು ಅಪ್​ಲೋಡ್ ಮಾಡಿದ್ದಾರೆ. ಹಾಗೂ ತಮ್ಮ ಇನ್‌ಸ್ಟಾಗ್ರಾಮ್ ಬಯೋದಲ್ಲಿ, ‘ವೀಲಿಂಗ್ ಲವ್ವರ್’ ಎಂದು ಬರೆದುಕೊಂಡಿದ್ದಾರೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ