Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಶೇ.50ರಷ್ಟು ಮೆಟ್ರೋ ನಿಲ್ದಾಣಗಳಲ್ಲಿ ಪಾರ್ಕಿಂಗ್ ಸೌಲಭ್ಯವಿಲ್ಲ, ಪ್ರಯಾಣಿಕರಲ್ಲಿ ಆಕ್ರೋಶ

ರಾಜಧಾನಿ ಬೆಂಗಳೂರು ಬೆಳೆದಂತೆಲ್ಲ ನಮ್ಮ ಮೆಟ್ರೋ ಮಾರ್ಗವೂ ವಿಸ್ತರಣೆ ಆಗ್ತಿದೆ. ಪ್ರತಿದಿನ ಲಕ್ಷಾಂತರ ಪ್ರಯಾಣಿಕರು ಪ್ರಯಾಣ ಮಾಡ್ತಾರೆ. ಆದರೆ ಕೆಲವೊಂದು ಮೆಟ್ರೋ ಸ್ಟೇಷನ್​ಗಳನ್ನು ಹೊರತು ಪಡಿಸಿದ್ರೆ ಸಾಕಷ್ಟು ಮೆಟ್ರೋ ಸ್ಟೇಷನ್​ಗಳಲ್ಲಿ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲ ಇದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಬೆಂಗಳೂರು: ಶೇ.50ರಷ್ಟು ಮೆಟ್ರೋ ನಿಲ್ದಾಣಗಳಲ್ಲಿ ಪಾರ್ಕಿಂಗ್ ಸೌಲಭ್ಯವಿಲ್ಲ, ಪ್ರಯಾಣಿಕರಲ್ಲಿ ಆಕ್ರೋಶ
ಮೆಟ್ರೋ ಪಾರ್ಕಿಂಗ್
Follow us
Kiran Surya
| Updated By: ಆಯೇಷಾ ಬಾನು

Updated on:Oct 14, 2023 | 11:03 AM

ಬೆಂಗಳೂರು, ಅ.14: ಮೆಟ್ರೊ ಪ್ರಯಾಣ ಇಷ್ಟ ಆದರೆ ಪ್ರಯಾಣಿಕರಿಗೆ ಪಾರ್ಕಿಂಗ್ ಮಾತ್ರ ಕಷ್ಟ ಕಷ್ಟ ಅನ್ನುವಂತಾಗಿದೆ ಪರಿಸ್ಥಿತಿ (Namma Metro). ಸದ್ಯ ರಾಜಧಾನಿ ಟ್ರಾಫಿಕ್ ಸಮಸ್ಯೆಗೆ ಮೆಟ್ರೊ ಒಂದೇ ಪರಿಹಾರವಾಗಿದ್ದು, ಬಹುನಿರೀಕ್ಷಿತ ನೇರಳೆ ಮಾರ್ಗ ನಮ್ಮ ಮೆಟ್ರೊ ಸಂಪೂರ್ಣ ಸಂಚಾರ ಆರಂಭಿಸುತ್ತಿದ್ದಂತೆಯೇ ಮೆಟ್ರೊ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ. ಆದರೆ, ಮೆಟ್ರೋ ನಿಲ್ದಾಣದಲ್ಲಿ ವಾಹನ ನಿಲ್ಲಿಸುವವರಿಗೆ ಪಾರ್ಕಿಂಗ್ ಸ್ಥಳ ಸಿಗದೆ ಪರದಾಡುವಂತಾಗಿದೆ (Metro Parking). ಪ್ರಸ್ತುತ ನಮ್ಮ ಮೆಟ್ರೊ ಹಸಿರು ಮತ್ತು ನೇರಳೆ ಮಾರ್ಗದಲ್ಲಿ ಒಟ್ಟು 74 ಕಿ.ಮೀ. ಸಂಚರಿಸುತ್ತಿದ್ದು, ಹಸಿರು ಮಾರ್ಗದಲ್ಲಿ ಒಟ್ಟು 29 ಹಾಗೂ ನೇರಳೆ ಮಾರ್ಗದಲ್ಲಿ 37 ನಿಲ್ದಾಣಗಳಿವೆ.

ಒಟ್ಟು 66 ಸ್ಟೇಷನ್​ಗಳ ಪೈಕಿ ಕೇವಲ 33 ಸ್ಟೇಷನ್​ಗಳಲ್ಲಿ ಮಾತ್ರ ಪಾರ್ಕಿಂಗ್‌ ಸೌಲಭ್ಯವಿದೆ ಶೇ.50ರಷ್ಟು ನಿಲ್ದಾಣಗಳಲ್ಲಿ ಪಾರ್ಕಿಂಗ್‌ ಸೌಲಭ್ಯವೇ ಇಲ್ಲ. ಪಾರ್ಕಿಂಗ್ ಸೌಲಭ್ಯವಿರುವ ನಿಲ್ದಾಣಗಳಲ್ಲೂ ಹೆಚ್ಚಿನ ಸ್ಥಳಾವಕಾಶ ಇಲ್ಲ. ಇದರಿಂದ ವಾಹನಗಳನ್ನು ಪಾರ್ಕಿಂಗ್ ಮಾಡಿ ಮೆಟ್ರೋ ಮೂಲಕ ಪ್ರಯಾಣ ಮಾಡುವವರು ಪ್ರತಿನಿತ್ಯ ಪರದಾಡುವಂತಾಗಿದೆ ಎಂದು ಮೆಟ್ರೋ ಪ್ರಯಾಣಿಕರು ತಿಳಿಸಿದ್ದಾರೆ.

ಇನ್ನು ನೇರಳೆ ಮಾರ್ಗದ 37 ನಿಲ್ದಾಣಗಳ ಪೈಕಿ ಕೇವಲ 14 ನಿಲ್ದಾಣಗಳಲ್ಲಿ ಪಾರ್ಕಿಂಗ್ ಸೌಲಭ್ಯವಿದೆ ಉಳಿದ ನಿಲ್ದಾಣಗಳು ಹಸಿರು ಮಾರ್ಗದಲ್ಲಿದೆ. ಇಂಟರ್‌ಚೇಂಜ್ ಮೆಜೆಸ್ಟಿಕ್‌ನಲ್ಲಿ ಪಾರ್ಕಿಂಗ್ ವ್ಯವಸ್ಥೆ ಇದೆ ಇನ್ನೂ ಬೈಯಪ್ಪನಹಳ್ಳಿಯಲ್ಲೂ ದೊಡ್ಡದಾದ ಪಾರ್ಕಿಂಗ್ ವ್ಯವಸ್ಥೆ ಇದೆ. ಎನ್‌ಜಿಇಎಫ್ ಕಡೆ ಒಂದು ದಿನಕ್ಕೆ 20 ಸಾವಿರಕ್ಕೂ ಹೆಚ್ಚು ಜನರು ಪ್ರಯಾಣ ಮಾಡುತ್ತಾರೆ. (10,800 ಚದರಡಿ)ಯ ಪಾರ್ಕಿಂಗ್ ವ್ಯವಸ್ಥೆ ಇದೆ. ಹಾಗೂ ಓಎಂಆ‌ರ್ ಕಡೆ ಇದರಲ್ಲಿ ಇನ್ನೊಂದು (2600 ಚದರಡಿ) ಪಾರ್ಕಿಂಗ್ ಸೌಲಭ್ಯ ಕಲ್ಪಿಸಲಾಗಿದೆ. ಈ ಎರಡೂ ಪಾರ್ಕಿಂಗ್ ಸ್ಥಳಗಳಲ್ಲಿ ಒಟ್ಟಾಗಿ 715 ದ್ವಿಚಕ್ರ ವಾಹನ ಹಾಗೂ 342 ಕಾರು ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಸದ್ಯ ಈ ನಿಲ್ದಾಣದ ಮೂಲಕ ಪ್ರತಿದಿನ 20 ಸಾವಿರ ಪ್ರಯಾಣಿಕರ ಪ್ರಯಾಣ ಮಾಡುತ್ತಾರೆ ಸರಾಸರಿ 30% ಪ್ರಯಾಣಿಕರು ಪಾರ್ಕಿಂಗ್‌ ಅವಲಂಬಿಸಿದ್ದಾರೆ. ಮಿಕ್ಕವರಿಗೆ ಪಾರ್ಕಿಂಗ್ ಸೌಲಭ್ಯ ಸಿಗ್ತಿಲ್ಲ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಎಗ್ಗಿಲ್ಲದೇ ನಡೆಯುತ್ತಿದೆ ಪ್ಲಾಸ್ಟಿಕ್ ಉತ್ಪಾದನೆ, ಯಾವುದೇ ಕ್ರಮ ತೆಗೆದುಕೊಳ್ಳದ ಮಾಲಿನ್ಯ ನಿಯಂತ್ರಣ ‌ಮಂಡಳಿ

ಮೈಸೂರ್ ರೋಡ್ ಮೆಟ್ರೋ ಸ್ಟೇಷನ್ ಮೆಟ್ರೋದ ಎರಡನೇ ಅತಿದೊಡ್ಡ ಪಾರ್ಕಿಂಗ್ ಸೌಲಭ್ಯವನ್ನು ಹೊಂದಿದ್ದು, ಈ ಪಾರ್ಕಿಂಗ್ ನಲ್ಲಿ 1700 ದ್ವಿಚಕ್ರ, 240 ಕಾರು ಹಾಗೂ 10 ಲಘು ವಾಣಿಜ್ಯ ವಾಹನಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ನಿಲ್ದಾಣದಲ್ಲಿ ಪ್ರತಿ ದಿನ 10 ಸಾವಿರ ಜನರು ಪ್ರಯಾಣ ಮಾಡುತ್ತಾರೆ. ಈ ನಿಲ್ದಾಣದಲ್ಲೂ ಶೇ.10ರಷ್ಟು ಜನರಿಗೆ ಪಾರ್ಕಿಂಗ್ ಸೌಲಭ್ಯ ಸಿಗುತ್ತಿಲ್ಲ. ಇಂದಿರಾನಗರದ ಮೆಟ್ರೊ ನಿಲ್ದಾಣದಲ್ಲಿ ಪ್ರತಿದಿನ 14 ಸಾವಿರ ಜನರು ಪ್ರಯಾಣ ಮಾಡುತ್ತಾರೆ. ಈ ನಿಲ್ದಾಣದ ಪಾರ್ಕಿಂಗ್ ವಿಸ್ತಾರ ಕೇವಲ 437 ಚದರ ಮೀಟರ್, 155 ದ್ವಿಚಕ್ರ ವಾಹನಕ್ಕೆ ಮಾತ್ರ ಪಾರ್ಕಿಂಗ್ ಸೌಲಭ್ಯವಿದೆ. ಈ ನಿಲ್ದಾಣದಲ್ಲಿ ಅರ್ಧಕ್ಕೂ ಹೆಚ್ಚು ಪ್ರಯಾಣಿಕರಿಗೆ ಸೌಲಭ್ಯವಿಲ್ಲದೆ ಪರದಾಡುವಂತಾಗಿದೆ. ಈ ಬಗ್ಗೆ ಮೆಟ್ರೋ ಅಧಿಕಾರಿಗಳನ್ನು ‌ಕೇಳಿದ್ರೆ ಈಗಾಗಲೇ ಸಾಕಷ್ಟು ಮೆಟ್ರೋ ‌ಸ್ಟೇಷನ್ ಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗ್ತಿದೆ. ಕೆಲವೊಂದು ಮೆಟ್ರೋ ಸ್ಟೇಷನ್ ಗಳಲ್ಲಿ ಸರಿಯಾದ ‌ಪಾರ್ಕಿಂಗ್ ವ್ಯವಸ್ಥೆ ಇಲ್ಲ ಮುಂದಿನ ದಿನಗಳಲ್ಲಿ ಎಲ್ಲಾ ಮೆಟ್ರೋ ಸ್ಟೇಷನ್ ಗಳಲ್ಲೂ ಪಾರ್ಕಿಂಗ್ ವ್ಯವಸ್ಥೆ ಮಾಡ್ತಿವಿ ಎಂದು ತಿಳಿಸಿದ್ದಾರೆ.

ಒಟ್ನಲ್ಲಿ ಬೆಂಗಳೂರಿನ ಪ್ರಮುಖ ಮಾರ್ಗಗಳಲ್ಲಿ ನಮ್ಮ ಮೆಟ್ರೋ ಸಂಚಾರ ಮಾಡ್ತಿದೆ. ಇದರಿಂದ ಪ್ರಯಾಣಿಕರು ಕೂಡ ಮೆಟ್ರೋ ಹೆಚ್ಚಿನ ಸಂಖ್ಯೆಯಲ್ಲಿ ಮುಖ ಮಾಡ್ತಿದ್ದಾರೆ. ಆದರೆ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲದಿರೋದ್ರಿಂದ ರೋಡ್ ನಲ್ಲಿ ಪಾರ್ಕಿಂಗ್ ಮಾಡೋದು, ಸ್ವಂತ ವಾಹನಗಳ ಮೂಲಕ ರೋಡಿಗಿಳಿಯುವುದರಿಂದ ಒಂದ್ಕಡೆ ಟ್ರಾಫಿಕ್ ಜಾಮ್ ಮತ್ತೊಂದು ಕಡೆ ಪೊಲೂಷನ್ ಪ್ರಾಬ್ಲಮ್ಮು ಆಗ್ತಿದ್ದು, ಕೂಡಲೇ ಈ ಸಮಸ್ಯೆ ಬಗ್ಗೆ ಮೆಟ್ರೋ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:02 am, Sat, 14 October 23

ಜಾಮ್‌ನಗರದ ಬಳಿ ವಾಯುಪಡೆಯ ಯುದ್ಧ ವಿಮಾನ ಪತನವಾದ ಕ್ಷಣ ಸಿಸಿಟಿವಿಯಲ್ಲಿ ಸೆರೆ
ಜಾಮ್‌ನಗರದ ಬಳಿ ವಾಯುಪಡೆಯ ಯುದ್ಧ ವಿಮಾನ ಪತನವಾದ ಕ್ಷಣ ಸಿಸಿಟಿವಿಯಲ್ಲಿ ಸೆರೆ
‘ದರ್ಶನ್ ಅಪ್ಪಟ ಬಂಗಾರ’: ಡಿ ಬಾಸ್ ವ್ಯಕ್ತಿತ್ವ ವಿವರಿಸಿದ ಗಣೇಶ್ ಕಾಸರಗೋಡು
‘ದರ್ಶನ್ ಅಪ್ಪಟ ಬಂಗಾರ’: ಡಿ ಬಾಸ್ ವ್ಯಕ್ತಿತ್ವ ವಿವರಿಸಿದ ಗಣೇಶ್ ಕಾಸರಗೋಡು
ಗ್ರಾಮಸ್ಥರ ಪ್ರಶ್ನೆಗಳಿಗೆ ಲಕ್ಷ್ಮಿಹೆಬ್ಬಾಳ್ಕರ್ ಅವರಲ್ಲಿ ಉತ್ತರವಿರಲಿಲ್ಲ
ಗ್ರಾಮಸ್ಥರ ಪ್ರಶ್ನೆಗಳಿಗೆ ಲಕ್ಷ್ಮಿಹೆಬ್ಬಾಳ್ಕರ್ ಅವರಲ್ಲಿ ಉತ್ತರವಿರಲಿಲ್ಲ
ಕೋಟೆನಾಡಲ್ಲಿ ನಾಳೆಯೂ ಅಗಲಿದೆಯಂತೆ ಮಳೆ
ಕೋಟೆನಾಡಲ್ಲಿ ನಾಳೆಯೂ ಅಗಲಿದೆಯಂತೆ ಮಳೆ
ಮಾರಿಗುಡಿ ದೇವಾಲಯಕ್ಕೆ ಭೇಟಿ ನೀಡಿದ ಅಶ್ವಿನಿ ಪುನೀತ್ ರಾಜ್​ಕುಮಾರ್: ವಿಡಿಯೋ
ಮಾರಿಗುಡಿ ದೇವಾಲಯಕ್ಕೆ ಭೇಟಿ ನೀಡಿದ ಅಶ್ವಿನಿ ಪುನೀತ್ ರಾಜ್​ಕುಮಾರ್: ವಿಡಿಯೋ
ರಿಷಬ್ ಶೆಟ್ಟಿ ಶಿವಾಜಿ ಪಾತ್ರ ಮಾಡುವುದು ಬೇಡ: ವಾಟಾಳ್ ನಾಗರಾಜ್
ರಿಷಬ್ ಶೆಟ್ಟಿ ಶಿವಾಜಿ ಪಾತ್ರ ಮಾಡುವುದು ಬೇಡ: ವಾಟಾಳ್ ನಾಗರಾಜ್
ಮಳೆಗಾಲದಲ್ಲಿ ಬೆಂಗಳೂರು ಹೇಗಿರಲಿದೆ ಅನ್ನೋದಿಕ್ಕೆ ಇದು ಟೀಸರ್ ಮಾತ್ರ!
ಮಳೆಗಾಲದಲ್ಲಿ ಬೆಂಗಳೂರು ಹೇಗಿರಲಿದೆ ಅನ್ನೋದಿಕ್ಕೆ ಇದು ಟೀಸರ್ ಮಾತ್ರ!
ಥಾಯ್ ಪ್ರಧಾನಿಯಿಂದ ಮೋದಿಗೆ ದಿ ವರ್ಲ್ಡ್ ಟಿಪಿಟಕ ಗ್ರಂಥ ಉಡುಗೊರೆ
ಥಾಯ್ ಪ್ರಧಾನಿಯಿಂದ ಮೋದಿಗೆ ದಿ ವರ್ಲ್ಡ್ ಟಿಪಿಟಕ ಗ್ರಂಥ ಉಡುಗೊರೆ
ವಕ್ಫ್ ತಿದ್ದುಪಡಿ ಬಿಲ್ ಬಗ್ಗೆ ನನ್ನ ಪಕ್ಷದ ಹಿರಿಯರು ಮಾತಾಡುತ್ತಾರೆ: ಸಚಿವೆ
ವಕ್ಫ್ ತಿದ್ದುಪಡಿ ಬಿಲ್ ಬಗ್ಗೆ ನನ್ನ ಪಕ್ಷದ ಹಿರಿಯರು ಮಾತಾಡುತ್ತಾರೆ: ಸಚಿವೆ
ಯಡಿಯೂರಪ್ಪ ಜೊತೆ ಬಸ್ಸಲ್ಲಿ ಹೋಗಲು ಬಿಜೆಪಿ ನಾಯಕರಲ್ಲಿ ಪೈಪೋಟಿ
ಯಡಿಯೂರಪ್ಪ ಜೊತೆ ಬಸ್ಸಲ್ಲಿ ಹೋಗಲು ಬಿಜೆಪಿ ನಾಯಕರಲ್ಲಿ ಪೈಪೋಟಿ