ಆಫ್ರಿಕಾ ಪ್ರಜೆಗಳಿಂದ ದಾಂಧಲೆ ಪ್ರಕರಣ: ಗಲಭೆಗೆ ಪ್ರಚೋದನೆ ನೀಡಿದ್ದ ಮಹಿಳೆಗಾಗಿ ಹುಡುಕಾಟ

ಆಫ್ರಿಕಾ ಪ್ರಜೆಗಳಿಂದ ದಾಂಧಲೆ ಪ್ರಕರಣ: ಗಲಭೆಗೆ ಪ್ರಚೋದನೆ ನೀಡಿದ್ದ ಮಹಿಳೆಗಾಗಿ ಹುಡುಕಾಟ
ಪೊಲೀಸರು ಮತ್ತು ಆಫ್ರಿಕಾ ಪ್ರಜೆಗಳ ನಡುವೆ ವಾಗ್ವಾದ

ಪೊಲೀಸರ ಮೇಲೆ ಹಲ್ಲೆ ನಡೆಸಿದ ಇನ್ನೂ ನಾಲ್ವರು ಎಸ್ಕೇಪ್ ಆಗಿದ್ದಾರೆ. ಸ್ಥಳೀಯ ಮಹಿಳೆಯೊಬ್ಬಳು ನಿನ್ನೆ (ಆಗಸ್ಟ್ 2) ನೈಜೀರಿಯನ್ ಪ್ರಜೆಗಳ ಪ್ರತಿಭಟನೆಗೆ ಸಾಥ್ ನೀಡಿದ್ದಳು. ಗಲಭೆಗೆ ಪ್ರಚೋದನೆ ನೀಡಿದ್ದ ಮಹಿಳೆಗಾಗಿ ಇದೀಗ ಹುಡುಕಾಟ ಶುರುವಾಗಿದೆ.

TV9kannada Web Team

| Edited By: sandhya thejappa

Aug 03, 2021 | 11:41 AM

ಬೆಂಗಳೂರು: ಆಫ್ರಿಕಾ (Africa) ಪ್ರಜೆಗಳಿಂದ ಜೆ.ಸಿ.ನಗರ ಠಾಣೆಯಲ್ಲಿ ನಡೆದ ದಾಂಧಲೆ ಪ್ರಕರಣಕ್ಕೆ ಸಂಬಂಧಿಸಿ ಪರಾರಿಯಾಗಿರುವ ಆರೋಪಿಗಳಿಗಾಗಿ ತೀವ್ರ ಹುಡುಕಾಟ ನಡೆಯುತ್ತಿದೆ. ಮೂರು ವಿಶೇಷ ತಂಡ ರಚಿಸಿ ಪರಾರಿಯಾಗಿರುವ ಆರೋಪಿಗಳನ್ನು ಹುಡುಕಲಾಗುತ್ತಿದೆ. ಸಿಸಿಟಿವಿ ಮತ್ತು ಪೊಲೀಸರ ಹ್ಯಾಂಡಿ ಕ್ಯಾಮ್​ನಲ್ಲಿ ಶೂಟ್ ಆದ ದೃಶ್ಯಗಳನ್ನು ಆಧರಿಸಿ, ಕೊತ್ತನೂರು, ಹೆಣ್ಣೂರು, ಬಾಣಸವಾಡಿ, ಆರ್.ಟಿ ನಗರ, ರಾಮಮೂರ್ತಿನಗರ ಮತ್ತು ಟಿ.ಸಿ.ಪಾಳ್ಯದಲ್ಲಿ ಹುಡುಕಾಟ ನಡೆಯುತ್ತಿದೆ.

ಪೊಲೀಸರ ಮೇಲೆ ಹಲ್ಲೆ ನಡೆಸಿದ ಇನ್ನೂ ನಾಲ್ವರು ಎಸ್ಕೇಪ್ ಆಗಿದ್ದಾರೆ. ಸ್ಥಳೀಯ ಮಹಿಳೆಯೊಬ್ಬಳು ನಿನ್ನೆ (ಆಗಸ್ಟ್ 2) ನೈಜೀರಿಯನ್ ಪ್ರಜೆಗಳ ಪ್ರತಿಭಟನೆಗೆ ಸಾಥ್ ನೀಡಿದ್ದಳು. ಗಲಭೆಗೆ ಪ್ರಚೋದನೆ ನೀಡಿದ್ದ ಮಹಿಳೆಗಾಗಿ ಇದೀಗ ಹುಡುಕಾಟ ಶುರುವಾಗಿದೆ. ಗಲಭೆಯಾಗುತ್ತಿದ್ದಂತೆ ಮಹಿಳೆ ಪರಾರಿಯಾಗಿದ್ದಳು. ಹೀಗಾಗಿ ಸ್ಥಳೀಯ ಮಹಿಳೆ ಸೇರಿ ಐದು ಜನ ನೈಜೀರಿಯನ್ಸ್ಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

ಪೊಲೀಸರ ವಶದಲ್ಲಿದ್ದು ಸಾವನ್ನಪ್ಪಿದ ಆಫ್ರಿಕನ್ ಪ್ರಜೆ ಜಾನ್ ಮರಣೋತ್ತರ ಪರೀಕ್ಷೆ ಇಂದು ನಡೆಯಲಿದೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಹಸ್ತಾಂತರ ಮಾಡಲಾಗುತ್ತದೆ. ಸದ್ಯ ಬೌರಿಂಗ್ ಆಸ್ಪತ್ರೆಯಲ್ಲಿ ಜಾನ್ ಮೃತದೇಹವಿದೆ. ಯಾರಿಗೆ ಶವ ಹಸ್ತಾಂತರ ಮಾಡಬೇಕು ಎಂಬುದರ ಬಗ್ಗೆ ನಿರ್ಧಾರ ಮಾಡಲಾಗುತ್ತದೆ. ಈಗಾಗಲೇ ಕಾಂಗೋ ಎಂಬಸ್ಸಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಎಂಬಸ್ಸಿ ಸೂಚನೆ ಆಧರಿಸಿ ಮುಂದಿನ ಪ್ರಕ್ರಿಯೆ ನಡೆಯುತ್ತದೆ.

ಕಾಂಗೋ ದೇಶಕ್ಕೆ ಮೃತದೇಹ ರವಾನೆ ಮಾಡಲು ತಿಳಿಸಿದರೆ ಕಳುಹಿಸಿಕೊಡಲು ಸಿದ್ಧತೆ ನಡೆಸಲಾಗುವುದು. ಇಲ್ಲೇ ಅಂತ್ಯಕ್ರಿಯೆಗೆ ರಾಯಭಾರಿ ಕಚೇರಿ ಸೂಚಿಸಿದರೆ ಇಲ್ಲೇ ಅಂತ್ಯಕ್ರಿಯೆ ನಡೆಯುತ್ತದೆ. ಸದ್ಯ ಎಂಬೆಸ್ಸಿ ಸೂಚನೆಗಾಗಿ ಪೊಲೀಸರು ಕಾಯುತ್ತಿದ್ದಾರೆ.

ಡಿಸಿಪಿ ಧರ್ಮೇಂದ್ರಕುಮಾರ್ ಮೀನಾ ಭೇಟಿ ಉತ್ತರ ವಿಭಾಗ ಡಿಸಿಪಿ ಧರ್ಮೇಂದ್ರಕುಮಾರ್ ಮೀನಾ ಜೆ.ಸಿ.ನಗರ ಠಾಣೆಗೆ ಭೇಟಿ ನೀಡಿ ಮೂರು ಪ್ರಕರಣಗಳ ಪ್ರಗತಿ ಪರಿಶೀಲನೆ ನಡೆಸಿದರು.

ಘಟನೆ ಸಂಬಂಧ ಎರಡು ಪ್ರಕರಣ ದಾಖಲು ಮಾಡಿಕೊಂಡಿದ್ದೇವೆ. ಪಿಎಸ್ಐ ಲತಾ ಅವರ ದೂರಿನ ಮೇಲೆ ಒಂದು ಕೇಸ್ ದಾಖಲಾಗಿದೆ. ಆಫ್ರಿಕನ್ ಪ್ರಜೆಗಳ ಗಲಾಟೆ ವೇಳೆ ಬಾಲಕನಿಗೂ ಗಾಯವಾಗಿದೆ. ಈ ಎರಡು ಕೇಸ್​ಗಳ ಬಗ್ಗೆ ಈಗಾಗಲೇ ತನಿಖೆ ಮಾಡ್ತಿದ್ದೀವಿ. ನಿನ್ನೆ ಪ್ರೊಟೆಸ್ಟ್​ನಲ್ಲಿ ಭಾಗವಹಿಸಿರುವ ವಿಡಿಯೋ ಇದೆ. ಅದನ್ನ ನೋಡಿ ಯಾರ್ಯಾರೂ ಇದ್ರೂ ಅನ್ನುವುದನ್ನ ಪತ್ತೆ ಹಚ್ಚುತ್ತೇವೆ. ಎನ್​ಡಿಇಪಿಎಸ್​ ಮತ್ತು ಫಾರಿನರ್ಸ್ ಆ್ಯಕ್ಟ್ ಅಡಿಯಲ್ಲೂ ಕೇಸ್ ಹಾಕ್ತೀವಿ. ಈಗಾಗಲೇ ಐದು ಜನರ ಯೂರಿನ್ ಸ್ಯಾಂಪಲ್ ಸಂಗ್ರಹಿಸಲಾಗಿದೆ. ಅದರಲ್ಲಿ ಓರ್ವನ ಡ್ರಗ್ಸ್ ಸೇವನೆ ರಿಪೋರ್ಟ್ ಪಾಸಿಟಿವ್ ಬಂದಿದೆ. ಸಿಐಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಉತ್ತರ ವಿಭಾಗ ಡಿಸಿಪಿ ಧರ್ಮೇಂದ್ರಕುಮಾರ್ ಮೀನಾ ತಿಳಿಸಿದರು.

ಬೌರಿಂಗ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ರಿಪೋರ್ಟ್ ನೋಡಿ ಮುಂದಿನ ಕ್ರಮಕೈಗೊಳ್ಳುತ್ತೇವೆ. ವಿಶೇಷ ತನಿಖಾ ತಂಡದಿಂದ ಪ್ರಕರಣದ ತನಿಖೆ ನಡೆಯುತ್ತಿದೆ. ಓರ್ವ ಇನ್ಸ್​ಪೆಕ್ಟರ್ ಮತ್ತು ಇಬ್ಬರು ಸಬ್ ಇನ್ಸ್​ಪೆಕ್ಟರ್ ಈಗಾಗಲೇ ಮಾಹಿತಿ ಕಲೆ ಹಾಕ್ತಿದ್ದಾರೆ. ಎಲ್ಲರನ್ನ ಟ್ರೇಸ್ ಮಾಡಿ ಕ್ರಮಕೈಗೊಳ್ಳುತ್ತೇವೆ. ವೀಸಾ ಅವಧಿ ಮುಗಿದಿದ್ರು ಇಲ್ಲೇ ನೆಲೆಸಿರೋದು ಪತ್ತೆಯಾಗಿದೆ. ಆರೋಪಿಗಳನ್ನ ಟ್ರೇಸ್ ಮಾಡೋದು ಕೂಡ ಕಷ್ಟವಾಗಿದೆ. ವಿಡಿಯೋ ನೋಡಿ ಪ್ರತಿಯೊಬ್ಬರನ್ನೂ ಐಡೆಂಟಿಫೈ ಮಾಡಬೇಕು. ಬಳಿಕ ಹೆಸ್ರು ಸರಿಯಾಗಿದೆಯಾ ಅಂಥ ನೋಡಬೇಕು. ಪೋಸ್ಟ್ ಮಾರ್ಟಮ್ ಆದ ಮೇಲೆ ಇನ್ವೇಷ್ಟಿಗೇಷನ್ ಆರಂಭ ಆಗತ್ತೆ ಅಂತ ಧರ್ಮೇಂರ್ ಕುಮಾರ್ ಮೀನಾ ತಿಳಿಸಿದರು.

ಇದನ್ನೂ ಓದಿ

Bengaluru Lathi Charge: ಪೊಲೀಸರ ಮೇಲೆ ಹಲ್ಲೆ ನಡೆಸಿದ ಆಫ್ರಿಕನ್ ಪ್ರಜೆಗಳ ಮೇಲೆ ಲಾಠಿಚಾರ್ಜ್

ಪೊಲೀಸರ ವಶದಲ್ಲಿದ್ದ ಆಫ್ರಿಕನ್ ಪ್ರಜೆ ಸಾವು ಪ್ರಕರಣ ಸಿಐಡಿ ತನಿಖೆಗೆ ವರ್ಗಾವಣೆ

(Bengaluru Police are searching for a woman who instigated a riot in Africa)

Follow us on

Related Stories

Most Read Stories

Click on your DTH Provider to Add TV9 Kannada