ಬೆಂಗಳೂರು: ಇಂದು ರಾತ್ರಿಯಿಂದ ಆರಂಭವಾದ ಕೊರೊನಾ ಕರ್ಫ್ಯೂ ಹಿನ್ನೆಲೆಯಲ್ಲಿ ಮೆಜೆಸ್ಟಿಕ್ ಬಸ್ ನಿಲ್ದಾಣ ಸಂಪೂರ್ಣ ಸ್ತಬ್ಧವಾಗಿದೆ. ಮೆಜೆಸ್ಟಿಕ್ ಸುತ್ತಮುತ್ತ ಕೆಲ ಆಟೋಗಳು ಸಂಚರಿಸುತ್ತಿವೆ. ಬೆಂಗಳೂರಿನ ಪ್ರಮುಖ ರಸ್ತೆಗಳು, ಫ್ಲೈಓವರ್ಗಳು ಬಂದ್ ಆಗಿವೆ. ಅನಗತ್ಯವಾಗಿ ವಾಹನ ರಸ್ತೆಗಿಳಿದರೆ ಪೊಲೀಸರು ವಾಹನ ವಶಪಡಿಸಿಕೊಳ್ಳುವ ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರು ನಗರದ ಪ್ರಮುಖ ಸ್ಥಳಗಳಲ್ಲಿ ನಾಕಾಬಂದಿ ಹಾಕಲಾಗಿದೆ.
ಬೆಂಗಳೂರು ಆಗ್ನೇಯ ವಿಭಾಗದಲ್ಲಿ ವೀರಸಂದ್ರ ಚೆಕ್ ಪೋಸ್ಟ್ , ಬೊಮ್ಮನಹಳ್ಳಿ, ಸಿಲ್ಕ್‌ಬೋರ್ಡ್, ಮಡಿವಾಳ, ಸೇಂಟ್ಸ್ ಜಾನ್ಸ್, ಆಡುಗೋಡಿ ಜಂಕ್ಷನ್, ಕೋರಮಂಗಲ ಎನ್ಜಿವಿ ಕಾಂಪ್ಲೆಕ್ಸ್, ಬೆಂಗಳೂರು ಪಶ್ಚಿಮ ವಿಭಾಗದಲ್ಲಿ ಮಾರುಕಟ್ಟೆ ಮೇಲ್ಸೇತುವೆ, ಕೆ.ಆರ್. ಮಾರುಕಟ್ಟೆ ಸರ್ಕಲ್, ಮೈಸೂರು ರಸ್ತೆ, ಕೆ.ಪಿ.ಅಗ್ರಹಾರ, ಕೆಂಗೇರಿ ಮುಖ್ಯರಸ್ತೆ, ಮಾಗಡಿ ರೋಡ್‌ನಲ್ಲಿ ಚೆಕ್‌ಪೋಸ್ಟ್ ಹಾಕಲಾಗಿದೆ.
ಬೆಂಗಳೂರು ಈಶಾನ್ಯ ವಿಭಾಗದಲ್ಲಿ ಏರ್‌ಪೋರ್ಟ್ ರಸ್ತೆ, ಹೆಬ್ಬಾಳ ಮೇಲ್ಸೇತುವೆ, ಸಂಪಿಗೆಹಳ್ಳಿ, ವಿದ್ಯಾರಣ್ಯಪುರ ಸರ್ಕಲ್, ಬಿಇಎಲ್ ಸರ್ಕಲ್, ಯಲಹಂಕ ಮುಖ್ಯರಸ್ತೆ ಬಳಿ ತಪಾಸಣೆ ನಡೆಸಲಾಗುತ್ತಿದೆ. ಬೆಂಗಳೂರು ಪೂರ್ವ ವಿಭಾಗದಲ್ಲಿ ಟ್ರಿನಿಟಿ ಸರ್ಕಲ್, ಬಿಆರ್‌ವಿ ಜಂಕ್ಷನ್, ನಾಗವಾರ ಜಂಕ್ಷನ್, ಬಾಣಸವಾಡಿ , ಕಮ್ಮನಹಳ್ಳಿ ರಸ್ತೆ, ಮಣಿಪಾಲ್ ಹಾಸ್ಪಿಟಲ್ ಜಂಕ್ಷನ್, ಓಲ್ಡ್ ಏರ್‌ಪೋರ್ಟ್ ರಸ್ತೆಯಲ್ಲಿ ಚೆಕ್‌ಪೋಸ್ಟ್ ಹಾಕಲಾಗಿದೆ.
ಬೆಂಗಳೂರು ಕೇಂದ್ರ ವಿಭಾಗದಲ್ಲಿ ಕೆ.ಆರ್.ಸರ್ಕಲ್, ಟೌನ್ ಹಾಲ್, ಚಿನ್ನಸ್ವಾಮಿ ಸ್ಟೇಡಿಯಂ, ಕಾರ್ಪೊರೇಷನ್ ಬಳಿ, ಬೆಂಬೆಂಗಳೂರು ಉತ್ತರ ವಿಭಾಗದಲ್ಲಿ ಯಶವಂತಪುರ ಸರ್ಕಲ್, ತುಮಕೂರು ರಸ್ತೆ, ಗಂಗಮ್ಮನಗುಡಿ ಸರ್ಕಲ್, ಪೀಣ್ಯ, ಗೊರಗುಂಟೆ ಪಾಳ್ಯ ಬಳಿ ಪೊಲೀಸರು ನಾಕಾಬಂದಿ ಹಾಕಿದ್ದಾರೆ.
ಬೆಂಗಳೂರಿನ ಪ್ರಮುಖ ಫ್ಲೈ ಓವರ್ ಗಳು, ಮುಖ್ಯ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿರುವ ಪೊಲೀಸರು, ನಗರದಾದ್ಯಂತ ಚೆಕ್ ಪಾಯಿಂಟ್ಗಳಲ್ಲಿ ಹದ್ದಿನ ಕಣ್ಣು ಇಟ್ಟಿದ್ದಾರೆ. ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.
(Bengaluru Police arrange barricades in roads flyovers are closed)