ಬೆಂಗಳೂರು ಪೊಲೀಸರಿಗೆ ನೆರವಿನ ಹಸ್ತ ನೀಡಿದ ಬಾಲಿವುಡ್ ನಟ ಸೋನು ಸೂದ್

Sonu Sood: ಫ್ರಂಟ್ ಲೈನ್ ಕೊರೊನಾ ವಾರಿಯರ್ಸ್ ಪೊಲೀಸರಿಗೆ ಆಕ್ಸಿಜನ್ ಸಪ್ಲೈ ಮಾಡುವ ಯಂತ್ರ ಇದಾಗಿದೆ. ಯಾವುದೇ ಪ್ರಚಾರವಿಲ್ಲದೇ ಸೈಲೆಂಟಾಗಿ ಪೊಲೀಸರಿಗೆ ಆಕ್ಸಿಜನ್ ಯಂತ್ರ ನೀಡಿ ಸೋನು ಸೂದ್ ಚಾರಿಟಬಲ್ ಟ್ರಸ್ಟ್ ಸದಸ್ಯರು ತೆರಳಿದ್ದಾರೆ.

ಬೆಂಗಳೂರು ಪೊಲೀಸರಿಗೆ ನೆರವಿನ ಹಸ್ತ ನೀಡಿದ ಬಾಲಿವುಡ್ ನಟ ಸೋನು ಸೂದ್
ಸೋನು ಸೂದ್
Rashmi Kallakatta

|

Apr 27, 2021 | 8:32 PM

ಬೆಂಗಳೂರು: ಸೋನು ಸೂದ್ ಚಾರಿಟಬಲ್ ಟ್ರಸ್ಟ್ ಪೊಲೀಸ್ ಇಲಾಖೆಗೆ ಆಕ್ಸಿಜನ್ ಕಾನ್ಸನ್ಟ್ರೇಟರ್ ಯಂತ್ರ ಹಸ್ತಾಂತರ ಮಾಡಿದೆ. ಬೆಂಗಳೂರು ಪೊಲೀಸರಿಗೆ ನೆರವಿನ ಹಸ್ತ ಚಾಚಿರುವ ಬಾಲಿವುಡ್ ನಟ ಸೋನು ಸೂದ್ ವಿಡಿಯೋ ಕಾಲ್ ಮೂಲಕ ಕಮಲ್ ಪಂತ್ ಅವರಿಗೆ ಮನವಿ ಮಾಡಿ ಯಂತ್ರ ಪಡೆದುಕೊಳ್ಳಲು ಹೇಳಿದ್ದಾರೆ.

ಏನಿದು ಆಕ್ಸಿಜನ್ ಕಾನ್ಸನ್ಟ್ರೇಟರ್ ಯಂತ್ರ ಫ್ರಂಟ್ ಲೈನ್ ಕೊರೊನಾ ವಾರಿಯರ್ಸ್ ಪೊಲೀಸರಿಗೆ ಆಕ್ಸಿಜನ್ ಸಪ್ಲೈ ಮಾಡುವ ಯಂತ್ರ ಇದಾಗಿದೆ. ಯಾವುದೇ ಪ್ರಚಾರವಿಲ್ಲದೇ ಸೈಲೆಂಟಾಗಿ ಪೊಲೀಸರಿಗೆ ಆಕ್ಸಿಜನ್ ಯಂತ್ರ ನೀಡಿ ಸೋನು ಸೂದ್ ಚಾರಿಟಬಲ್ ಟ್ರಸ್ಟ್ ಸದಸ್ಯರು ತೆರಳಿದ್ದಾರೆ.

ಕೊನೆಗೂ ಫಲಿಸಿತು ಕೋಟ್ಯಂತರ ಅಭಿಮಾನಿಗಳ ಪ್ರಾರ್ಥನೆ

ಕಳೆದ ವರ್ಷ ಲಾಕ್​ಡೌನ್​ ಸಂದರ್ಭದಲ್ಲಿ ಸಾವಿರಾರು ಜನರಿಗೆ ಸಹಾಯ ಮಾಡಿದ್ದ ನಟ ಸೋನು ಸೂದ್​ ಅವರಿಗೆ ಇತ್ತೀಚೆಗೆ ಕೊರೊನಾ ವೈರಸ್​ ಸೋಂಕು ತಗುಲಿರುವುದು ಧೃಡವಾಗಿತ್ತು. ಈ ವಿಚಾರ ಗೊತ್ತಾಗುತ್ತಿದ್ದಂತೆ ಕೋಟ್ಯಂತರ ಅಭಿಮಾನಿಗಳು ಸೋನು ಸೂದ್​ ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದ್ದರು. ಈಗ ಈ ಪ್ರಾರ್ಥನೆಗೆ ಫಲ ಸಿಕ್ಕಿದೆ. ಸೋನು ಸೂದ್​ಗೆ ಕೊರೊನಾ ನೆಗೆಟಿವ್​ ಬಂದಿದೆ.

‘ಕೊವಿಡ್​ ಪಾಸಿಟಿವ್​ ಆಗಿದೆ. ಆದರೆ ಮನಸ್ಸು ಮತ್ತು ಉತ್ಸಾಹ ಸೂಪರ್​ ಪಾಸಿಟಿವ್​ ಆಗಿದೆ. ಎಲ್ಲರಿಗೂ ಹಾಯ್​. ಇಂದು ಬೆಳಗ್ಗೆ ನನಗೆ ಕೊವಿಡ್​-19 ಪಾಸಿಟಿವ್​ ಆಗಿದೆ ಎಂಬುದನ್ನು ತಿಳಿಸುತ್ತಿದ್ದೇನೆ. ಮುನ್ನೆಚ್ಚರಿಕೆ ಕ್ರಮವಾಗಿ ನಾನು ಕ್ವಾರಂಟೈನ್​ ಆಗಿದ್ದೇನೆ. ಹೆಚ್ಚಿನ ಕಾಳಜಿ ವಹಿಸುತ್ತಿದ್ದೇನೆ. ಆದರೆ ಚಿಂತೆ ಮಾಡುವುದು ಬೇಡ. ನಿಮ್ಮೆಲ್ಲರ ಸಮಸ್ಯೆಯನ್ನು ಪರಿಹರಿಸಲು ನನಗೆ ಇದರಿಂದ ಹೆಚ್ಚಿನ ಸಮಯ ಸಿಗಲಿದೆ. ನಿಮಗಾಗಿ ನಾನು ಸದಾ ಇರುತ್ತೇನೆ ಎಂಬುದನ್ನು ನೆನಪಿಡಿ’ ಎಂದು ಸೋಶಿಯಲ್​ ಮೀಡಿಯಾದಲ್ಲಿ ಸೋನು ಸೂದ್​ ಏಪ್ರಿಲ್​ 17ರಂದು ತಿಳಿಸಿದ್ದರು. ಇದಾದ ಒಂದು ವಾರದ ಬಳಿಕ ಅವರಿಗೆ ಕೊರೊನಾ ಟೆಸ್ಟ್​ ನೆಗೆಟಿವ್​ ಬಂದಿದೆ.

ಈ ವಿಚಾರವನ್ನು ಸೋನು ಸೂದ್​ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ಕೊರೊನಾ ನೆಗೆಟಿವ್​ ಬಂದಿದೆ ಎಂದು ಸನ್ನೆ ಮೂಲಕ ತೋರಿಸಿದ್ದಾರೆ. ಈ ವಿಚಾರ ತಿಳಿದು ಸೋನು ಅಭಿಮಾನಿಗಳು ಖುಷಿಯಾಗಿದ್ದಾರೆ.

ವಿದೇಶದಲ್ಲಿ ಸಿಲುಕಿಕೊಂಡಿದ್ದವರನ್ನು ಭಾರತಕ್ಕೆ ಕರೆತರಲು ಸೋನು ಸೂದ್​ ಶ್ರಮಿಸಿದ್ದರು. ಕಾರ್ಮಿಕರನ್ನು ವಿಮಾನದ ಮೂಲಕ ಅವರವರ ಊರುಗಳಿಗೆ ತಲುಪಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಸೋನು ಸೂದ್​ ಗಮನ ಸೆಳೆದಿದ್ದರು. ಈ ಎಲ್ಲ ಘಟನೆಗಳ ಬಳಿಕ ಎಷ್ಟೋ ಬಡವರ ಮನೆಯಲ್ಲಿ ಸೋನು ಸೂದ್​​ ಫೋಟೋ ಇಟ್ಟು ಪೂಜೆ ಮಾಡಿದ ಬಗ್ಗೆ ವರದಿ ಆಗಿತ್ತು.

ಇದನ್ನೂ ಓದಿ: ನಾನಲ್ಲ, ಕೊರೊನಾ ಬಳಲುತ್ತಿದೆ; ಅಚ್ಚರಿಯ ಟ್ವೀಟ್​ ಮಾಡಿದ ಸೋನು ಸೂದ್

(Indian actor Sonu Sood distribute 2 oxygen concentrators to bangalore police force)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada