ಬೆಂಗಳೂರು ಸೆ.02: ವಜ್ರ, ಚಿನ್ನಾಭರಣ ಕಳ್ಳತನ ಮಾಡಿದ್ದ ಕ್ಯಾಬ್ ಚಾಲಕನನ್ನು (Cab Driver) ಯಲಹಂಕ (Yelahanka) ನ್ಯೂಟೌನ್ ಪೊಲೀಸರು ಬಂಧಿಸಿದ್ದಾರೆ. ರಾಜಾನುಕುಂಟೆ ಮೂಲದ ಕ್ಯಾಬ್ ಚಾಲಕ ನಂದೀಶ್ ಬಂಧಿತ ಆರೋಪಿ. ಆರೋಪಿ ನಂದೀಶ್ನಿಂದ 30 ಲಕ್ಷ ಮೌಲ್ಯದ 485 ಗ್ರಾಂ ಚಿನ್ನ, 17 ಕ್ಯಾರೆಟ್ ತೂಕದ ವಜ್ರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಉದ್ಯಮಿಯೊಬ್ಬರು ಚೆನ್ನೈನಿಂದ ಬೆಂಗಳೂರಿಗೆ ಮದುವೆಗೆ ಬಂದಿದ್ದರು. ಉದ್ಯಮಿ ನಗರದ ಯಲಹಂಕ ಬಳಿಯ ಹೊಟೇಲ್ನಲ್ಲಿ ಉಳಿದುಕೊಂಡಿದ್ದರು. ಮದುವೆ ಮುಗಿಸಿ ವಾಪಸ್ ತೆರಳುತ್ತಿರುವ ವೇಳೆ ಸೂಟ್ಕೇಸ್ ಕದ್ದುಕೊಂಡು ಪರಾರಿಯಾಗಿದ್ದಾನೆ. ಈ ಬಗ್ಗೆ ಉದ್ಯಮಿ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಂದೀಶ್ ಈ ಹಿಂದೆ ಹಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದನು.
ಇದನ್ನೂ ಓದಿ: ಮಗಳನ್ನು ಹತ್ಯೆಗೈದಿದ್ದ ತಂದೆಗೆ ಕಠಿಣ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್
ನಗರದಲ್ಲಿ ಚಿನ್ನದ ಅಂಗಡಿಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಜೋಡಿಯನ್ನು ಹತ್ತು ವರ್ಷದ ಬಳಿಕ ಬನಶಂಕರಿ ಪೊಲೀಸರು ಬಂಧಿಸಿದ್ದಾರೆ. ಚಿನ್ನ ಖರೀದಿಸುವ ನೆಪದಲ್ಲಿ ಜ್ಯುವೆಲರಿ ಶಾಪ್ಗಳಿಗೆ ಎಂಟ್ರಿ ಕೊಡುವ ಈ ಖತರ್ನಾಕ್ ಲೇಡಿ ಜೋಡಿ ಮಾಲೀಕನಿಗೆ ತಿಳಿಯದ ಹಾಗೆ ಚಿನ್ನ ಕದ್ದು ಪರಾರಿಯಾಗುತ್ತಿದ್ದರು. ಸದ್ಯ ಈ ಜೋಡಿ ಹತ್ತು ವರ್ಷದ ಬಳಿಕ ಮತ್ತೆ ಸದ್ದು ಮಾಡಿ ಈಗ ಸಿಕ್ಕಿ ಬಿದ್ದಿದೆ. ರತ್ನ ಪೆರುಮಾಳ್ ಹಾಗೂ ಕೃಷ್ಣವೇಣಿ ಬಂಧಿತ ಆರೋಪಿಗಳು. ಇವರು ಬೆಂಗಳೂರಿನ ಚಿನ್ನದ ಅಂಗಡಿಗಳನ್ನೇ ಟಾರ್ಗೆಟ್ ಮಾಡುತ್ತಿದ್ದರು.
ಬಂಧಿತ ಮಹಿಳೆಯರು, ನಕಲಿ ಚಿನ್ನದೊಂದಿಗೆ ಚಿನ್ನದ ಅಂಗಡಿಗಳಿಗೆ ಎಂಟ್ರಿ ಕೊಡುತ್ತಿದ್ದರು. ಮಾಲೀಕರ ಗಮನ ಬೇರೆಡೆ ಸೆಳೆದು ನಕಲಿ ಚಿನ್ನವನ್ನಿಟ್ಟು ಅಸಲಿ ಚಿನ್ನದೊಂದಿಗೆ ಎಸ್ಕೇಪ್ ಆಗುತ್ತಿದ್ದರು. ತಮಿಳುನಾಡು ಮೂಲದವರಾದ ಈ ಮಹಿಳೆಯರು ಬೆಂಗಳೂರಿನ ಹಲವೆಡೆ ತಮ್ಮ ಕೈಚಳಕ ತೋರಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ