ತುಮಕೂರು: ಮಗಳನ್ನು ಹತ್ಯೆಗೈದಿದ್ದ ತಂದೆಗೆ ಕಠಿಣ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್
ಬೇರೊಬ್ಬಳ ಜೊತೆ ಮದುವೆಯಾಗಲು ಅಡ್ಡಿ ಬರುತ್ತಾಳೆ ಎಂದು ತನ್ನ ಮಗಳನ್ನೇ ಹತ್ಯೆ ಮಾಡಿದ್ದ ಅಪರಾಧಿ ತಂದೆಗೆ ತುಮಕೂರು ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯವು ಕಠಿಣ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ತನ್ನ ನಾಲ್ಕು ವರ್ಷದ ಮಗಳನ್ನು ಕೊಲೆ ಮಾಡಿ ಬಾವಿಗೆ ಬಿಸಾಡಿದ್ದ ನರಸಿಂಹಮೂರ್ತಿಗೆ ಶಿಕ್ಷೆಗೆ ಒಳಗಾದ ಅಪರಾಧಿ.
ತುಮಕೂರು, ಸೆ.2: ಬೇರೊಬ್ಬಳ ಜೊತೆ ಮದುವೆಯಾಗಲು ಅಡ್ಡಿ ಬರುತ್ತಾಳೆ ಎಂದು ತನ್ನ ಮಗಳನ್ನೇ ಹತ್ಯೆ (Murder) ಮಾಡಿದ್ದ ಅಪರಾಧಿ ತಂದೆಗೆ ತುಮಕೂರು (Tumkur) ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯವು ಕಠಿಣ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ತನ್ನ ನಾಲ್ಕು ವರ್ಷದ ಮಗಳನ್ನು ಕೊಲೆ ಮಾಡಿ ಬಾವಿಗೆ ಬಿಸಾಡಿದ್ದ ನರಸಿಂಹಮೂರ್ತಿಗೆ ಶಿಕ್ಷೆಗೆ ಒಳಗಾದ ಅಪರಾಧಿ.
ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ತಣ್ಣೇನಹಳ್ಳಿ ಸಮೀಪದ ವೆಂಕಟಾಪುರದ ಗ್ರಾಮದ ನರಸಿಂಹಮೂರ್ತಿ, ತನ್ನ ಪತ್ನಿಯ ಮೇಲೆ ಅಕ್ರಮ ಸಂಬಂಧದ ಶಂಕೆ ಹೊಂದಿದ್ದನು. ಹೀಗಾಗಿ ಆಕೆಯನ್ನು ಬಿಟ್ಟು ಬೇರೊಬ್ಬಳಂದಿಗೆ ಮದುವೆಯಾಗಲು ನಿರ್ಧರಿಸಿದ್ದನು.
ಇದನ್ನೂ ಓದಿ: ತುಮಕೂರು: ಅನುಮಾನಸ್ಪದವಾಗಿ ವಿವಾಹಿತ ಮಹಿಳೆ ಸಾವು, ಅತ್ಯಸಂಸ್ಕಾರಕ್ಕೂ ಬಾರದ ಪತಿ ಮೇಲೆ ಅನುಮಾನ
ಆದರೆ, ಮದುವೆಗೆ ಸ್ವಂತ ಮಗಳು ಅಡ್ಡ ಬರುತ್ತಾಳೆಂದು 2018 ಡಿಸೆಂಬರ್ 4 ರಂದು ನಾಲ್ಕು ವರ್ಷದ ಮಗಳನ್ನೇ ಕೊಂದು ಬಾವಿಗೆ ಎಸೆದು ಪರಾರಿಯಾಗಿದ್ದನು. ಪ್ರಕರಣ ದಾಖಲಿಸಿಕೊಂಡಿದ್ದ ಕೋಳಾಲ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ತುಮಕೂರು ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಬಿ ಗೀತಾ ಅವರು, ಆರೋಪಿ ನರಸಿಂಹಮೂರ್ತಿ ವಿರುದ್ಧದ ಆರೋಪ ಸಾಬೀತಾದ ಹಿನ್ನೆಲೆ ನರಸಿಂಹಮೂರ್ತಿಯನ್ನು ಅಪರಾಧಿ ಎಂದು ಘೋಷಿಸಿ ಕಠಿಣ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. ಸರ್ಕಾರಿ ವಕೀಲ ಎಸ್ ರಾಜಣ್ಣ ವಾದ ಮಂಡಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:10 am, Sat, 2 September 23