ಪಂಚ ಗ್ಯಾರಂಟಿ ಯೋಜನೆಗಳಿಗೆ ಹಣ ಒದಗಿಸಲು ಒದ್ದಾಟ, ಖಜಾನೆ ತುಂಬಿಸಿಕೊಳ್ಳಲು ಸರ್ಕಾರದ ಮಾಸ್ಟರ್ ಪ್ಲಾನ್

ಸರ್ಕಾರ ಹಾಲಿ ತ್ರೈ ಮಾಸಿಕದ ಬದಲು ಲೈಫ್ ಟೈಮ್ ಟ್ಯಾಕ್ಸ್ ಕಾಯ್ದೆ ಜಾರಿಗೊಳಿಸಿದೆ. ಕಾಲಾಂತರದಲ್ಲಿ ಭವಿಷ್ಯದಲ್ಲಿ ಬರುವ ಹಣವನ್ನೂ ಈಗಲೇ‌ ವಸೂಲಿ ಮಾಡುವುದು ಸರ್ಕಾರದ ಜಾಣ ನಡೆಯಾಗಿದೆ. ಆದರೆ ಈ ಅನಿರೀಕ್ಷಿತ ಹೊರೆಯಿಂದ ವಾಹನ ಮಾಲೀಕರು ಕಂಗಲಾಗಿದ್ದಾರೆ. ಅದರಲ್ಲೂ ಮಧ್ಯಮ ಗಾತ್ರದ ಎಲ್ಲೋ ಬೋರ್ಡ್ ಗೂಡ್ಸ್ ವಾಹನಗಳ ಮಾಲೀಕರಿಗೆ‌ ಬರೆ ಬಿದ್ದಿದೆ. ಕೂಡಲೇ ಈ ನಿರ್ಧಾರ ಕೈ ಬಿಡಬೇಕು ಎಂದು ವಾಹನ ಮಾಲೀಕರು, ಚಾಲಕರು ಆಗ್ರಹಿಸಿದ್ದಾರೆ.

ಪಂಚ ಗ್ಯಾರಂಟಿ ಯೋಜನೆಗಳಿಗೆ ಹಣ ಒದಗಿಸಲು ಒದ್ದಾಟ, ಖಜಾನೆ ತುಂಬಿಸಿಕೊಳ್ಳಲು ಸರ್ಕಾರದ ಮಾಸ್ಟರ್ ಪ್ಲಾನ್
ಖಜಾನೆ ತುಂಬಿಸಿಕೊಳ್ಳಲು ಸರ್ಕಾರದ ಮಾಸ್ಟರ್ ಪ್ಲಾನ್
Follow us
ಮಹೇಶ್ ಇ, ಭೂಮನಹಳ್ಳಿ
| Updated By: ಸಾಧು ಶ್ರೀನಾಥ್​

Updated on:Sep 01, 2023 | 1:47 PM

ತುಮಕೂರು, ಸೆಪ್ಟೆಂಬರ್​ 1: ರಾಜ್ಯ ಕಾಂಗ್ರೆಸ್ ಸರ್ಕಾರ (Siddaramaiah Government) ತನ್ನ ಮಹತ್ವಾಕಾಂಕ್ಷಿ ಐದು ಗ್ಯಾರಂಟಿ ಯೋಜನೆಗಳಿಗಾಗಿ ಹಣ ಒದಗಿಸಲು ಒದ್ದಾಟ ನಡೆಸುತ್ತಿರುವುದರ ಮಧ್ಯೆ, ಖಜಾನೆ ತುಂಬಿಸಿಕೊಳ್ಳಲು ಮಾಸ್ಟರ್ ಪ್ಲಾನ್ ಜಾರಿಗೆ ಮುಂದಾಗಿದೆ. ವಾಣಿಜ್ಯ ಗೂಡ್ಸ್ ವಾಹನಗಳ (medium-sized goods vehicles) ತೆರಿಗೆ ಹೆಚ್ಚಳ ಮಾಡುವ ಮೂಲಕ ಖಜಾನೆ ಭರ್ತಿ ಮಾಡುವುದು ಯೋಜನೆಯ ಪ್ರಮುಖ ಆಶಯವಾಗಿದೆ (as a part of its efforts to mobilise resources for implementing its guarantees).

ಸರ್ಕಾರ ಹಾಲಿ ತ್ರೈ ಮಾಸಿಕದ ಬದಲು ಲೈಫ್ ಟೈಮ್ ಟ್ಯಾಕ್ಸ್ ಕಾಯ್ದೆ ಜಾರಿಗೊಳಿಸಿದೆ. ಕಾಲಾಂತರದಲ್ಲಿ ಭವಿಷ್ಯದಲ್ಲಿ ಬರುವ ಹಣವನ್ನೂ ಈಗಲೇ‌ ವಸೂಲಿ ಮಾಡುವುದು ಸರ್ಕಾರದ ಜಾಣ ನಡೆಯಾಗಿದೆ. ಆದರೆ ಈ ಅನಿರೀಕ್ಷಿತ ಹೊರೆಯಿಂದ ವಾಹನ ಮಾಲೀಕರು ಕಂಗಲಾಗಿದ್ದಾರೆ. ಅದರಲ್ಲೂ ಮಧ್ಯಮ ಗಾತ್ರದ ಎಲ್ಲೋ ಬೋರ್ಡ್ ಎಲ್.ಜಿ.ವಿ- ಎಂ.ಜಿ.ವಿ ಗೂಡ್ಸ್ ವಾಹನಗಳ ಮಾಲೀಕರಿಗೆ‌ ಬರೆ ಬಿದ್ದಿದೆ. ‌ ಎಲ್.ಜಿ.ಎಇ- ಎಂ.ಜಿವಿ ವಾಹನಗಳಿಗೆ ತ್ರೈಮಾಸಿಕ 2,000 ರೂಪಾಯಿ ಟ್ಯಾಕ್ಸ್ ನಿಗದಿ ಪಡಿಸಲಾಗಿತ್ತು. ಕಾಯ್ದೆ ಬದಲಾವಣೆ ಮಾಡಿ, ಈಗ ಲಕ್ಷ ರೂಪಾಯಿಗೂ ಹೆಚ್ಚು ಟ್ಯಾಕ್ಸ್ ವಸೂಲಿ ಮಾಡುವುದು ಇದರ ಉದ್ದೇಶವಾಗಿದೆ. ಸರ್ಕಾರದ ಈ ಹೊಸ ತೆರಿಗೆ ನೀತಿಗೆ ವಾಹನ ಮಾಲೀಕರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ವಾಹನ ಮಾಲೀಕರು ಈ ಸಂಬಂಧ ತುಮಕೂರಿನ ಆರ್.ಟಿ.ಒ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. ವಾಹನಗಳನ್ನು ಆರ್.ಟಿ.ಒ ಕಚೇರಿ ಆವರಣಕ್ಕೆ ತಂದು ಪ್ರತಿಭಟನೆಗಿಳಿದಿದ್ದಾರೆ. ವಾಹನಗಳನ್ನು ಸರ್ಕಾರದ ಸ್ವಾಧೀನ ಕೊಡುತ್ತೇವೆಂದು ಪ್ರತಿಭಟನಕಾರರು ಮುಂದಾಗಿದ್ದಾರೆ. ಟ್ಯಾಕ್ಸ್ ಕಟ್ಟದಿದ್ದರೆ ಗಾಡಿ ಎಫ್.ಸಿ. (ಫಿಟ್ನೆಸ್ ಸರ್ಟಿಫೀಕೇಟ್ ) ನೀಡಲ್ಲ. ಹೀಗಾಗಿ ವಾಹನಗಳನ್ನು ಓಡಿಸಲು ಆಗುವುದಿಲ್ಲ. ಸರ್ಕಾರ ಅವೈಜ್ಞಾನಿಕವಾಗಿ ಟ್ಯಾಕ್ಸ್ ಹೆಚ್ಚಳ ಮಾಡಿದೆ. ಕೂಡಲೇ ಈ ನಿರ್ಧಾರವನ್ನು ಕೈ ಬಿಡಬೇಕು ಎಂದು ವಾಹನ ಮಾಲೀಕರು ಹಾಗೂ ಚಾಲಕರು ಆಗ್ರಹಿಸಿದ್ದಾರೆ.

ಹೊಸ ತೆರಿಗೆ ದರ ಎಷ್ಟು:

ಹಳೇ ತೆರಿಗೆ ದರ 5.500-7.500 ಕೆಜಿ ತೂಕದ ವಾಹನಗಳಿಗೆ ತ್ರೈಮಾಸಿಕ 2,000 ಸಾವಿರ ಕಟ್ಟಿಸಿಕೊಳ್ಳಲಾಗುತ್ತಿತ್ತು.

ಹೊಸ ತೆರಿಗೆ ದರ ಶೇ. 11ರಷ್ಟು ತೆರಿಗೆ ಒಳಗೊಂಡಂತೆ 66,660 ರೂಪಾಯಿ ಹೆಚ್ಚಳ.

7.500- 9,500 ಕೆಜಿ ತೂಕದ ವಾಹನಗಳಿಗೆ ಹಳೇ ತೆರಿಗೆ ದರ 2000 ರೂಪಾಯಿ.

ಬದಲಾದ ದರ 88,800 ರೂಪಾಯಿ ತೆರಿಗೆ ನಿಗದಿ.

9500-12,000 ಕೆಜಿ ಸಾವಿರ ತೂಕದ ವಾಹನಗಳಿಗೆ ಹಳೇ ದರ 2000,

ಹೊಸ ತೆರಿಗೆ ದರ 1,11,000 ರೂಪಾಯಿ ನಿಗದಿಪಡಿಸಲಾಗಿದೆ.

ತುಮಕೂರು ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:44 pm, Fri, 1 September 23