ಬೆಂಗಳೂರಿನಲ್ಲಿನ ಸೈಬರ್​ ಕ್ರೈಂ ಪ್ರಕರಣಗಳ ಪತ್ತೆಗೆ ನಾಲ್ವರು ಡಿಸಿಪಿಗಳ ನೇಮಕ

| Updated By: ವಿವೇಕ ಬಿರಾದಾರ

Updated on: Nov 18, 2023 | 10:00 AM

ಈಗಾಗಲೇ ಒಂದೊಂದು ವಿಭಾಗದಲ್ಲಿ ಸಾವಿರಕ್ಕು ಅಧಿಕ ಪ್ರಕರಣಗಳು ದಾಖಲಾಗಿವೆ. ಬರೀ ಪ್ರಕರಣ ಮಾತ್ರ ದಾಖಲಾಗುತ್ತಿದೆ. ಅದರೆ ತನಿಖೆಯಾಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ತನಿಖೆಗೆ ಸಹಾಯ, ಆರೋಪಿಗಳ ಬಂಧನಕ್ಕೆ ಬಲೆ ಬೀಸುವುದು ಸೇರಿದಂತೆ ಪ್ರಕರಣದ ಸಂಪೂರ್ಣ ಜವಾಬ್ದಾರಿಯನ್ನು ಡಿಸಿಪಿ ನೇತೃತ್ವದ ತಂಡಕ್ಕೆ ವಹಿಸಲಾಗಿದೆ.

ಬೆಂಗಳೂರಿನಲ್ಲಿನ ಸೈಬರ್​ ಕ್ರೈಂ ಪ್ರಕರಣಗಳ ಪತ್ತೆಗೆ ನಾಲ್ವರು ಡಿಸಿಪಿಗಳ ನೇಮಕ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು ನ.18: ನಗರದಲ್ಲಿ ಮಿತಿ ಮೀರಿದ ಸೈಬರ್ ವಂಚಕರ ಹಾವಳಿ ಮಿತಿ ಮೀರಿದ್ದು, ಪ್ರತಿ ವರ್ಷ ಹತ್ತು ಸಾವಿರಕ್ಕು ಅಧಿಕ ಪ್ರಕರಣಗಳು ದಾಖಲಾಗುತ್ತಿವೆ. ಸೈಬರ್​​ ವಂಚಕರ ಬಲೆಗೆ ಬಿದ್ದು ಜನರು ಕೋಟ್ಯಾಂತರ ರೂಪಾಯಿ ಕಳೆದುಕೊಂಡಿದ್ದಾರೆ. ಈ ಸೈಬರ್​ ವಂಚಕರನ್ನು ಮಟ್ಟ ಹಾಕಲು ಬೆಂಗಳೂರು ಮಹಾನಗರ ಪೊಲೀಸ್​ ಆಯುಕ್ತ ಬಿ.‌ದಯಾನಂದ್ (B Dayananda) ಹೊಸ ಕ್ರಮಕ್ಕೆ ಕೈಗೊಂಡಿದ್ದಾರೆ. ಸೈಬರ್​ ಕ್ರೈಂ (Cyber Crime) ತಡೆಯಲು ಮತ್ತು ಆರೋಪಿಗಳನ್ನು ಪತ್ತೆ ಹಚ್ಚಲು ನಾಲ್ವರು ಡಿಸಿಪಿಗಳನ್ನು (DCP)ನೇಮಿಸಿದ್ದಾರೆ. ಸೈಬರ್ ಕ್ರೈಂ ವಂಚನೆಗಳನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದೆ. ಒಂದೊಂದು ವಿಭಾಗಕ್ಕೆ ಒಬ್ಬ ಡಿಸಿಪಿಯನ್ನು ನೇಮಿಸಲಾಗಿದೆ.

  1. ಆಧಾರ್ ಕಾರ್ಡ್ ಎನೇಮಲ್ ಪೇಮೆಂಟ್ ಸರ್ವೀಸ್ ವಂಚನೆ- ಈಶಾನ್ಯ ವಿಭಾಗ ಡಿಸಿಪಿ ಲಕ್ಷ್ಮೀ ಪ್ರಸಾದ್
  2. ಪೆಡೆಕ್ಸ್ ಕೊರಿಯರ್ ವಂಚನೆ- ಪೂರ್ವ ವಿಭಾಗ ಸಂಚಾರ ಡಿಸಿಪಿ ಕುಲದೀಪ್ ಕುಮಾರ್ ಜೈನ್
  3. ಆನ್ ಲೈನ್ ಜಾಬ್ ಚೀಟಿಂಗ್- ದಕ್ಷಿಣ ವಿಭಾಗ ಸಂಚಾರ ಡಿಸಿಪಿ ಶಿವಪ್ರಕಾಶ್ ದೇವರಾಜ್
  4. ಸೆಕ್ಸ್ ಟ್ರಾಕ್ಷನ್ ಕೇಸ್​ಗಳ ತನಿಖೆ- ಉತ್ತರ ವಿಭಾಗ ಸಂಚಾರ ಡಿಸಿಪಿ‌ ಸಚಿನ್ ಘೋರ್ಪಡೆ ಅವರನ್ನು ನೇಮಿಸಿದ್ದಾರೆ.

ಇದನ್ನೂ ಓದಿ: ಸೈಬರ್​ ಕ್ರೈಂ ಪ್ರಕರಣ ತಡೆಗಟ್ಟಲು ಪ್ರತ್ಯೇಕ CEN ಘಟಕಗಳ ಆರಂಭ

ಈಗಾಗಲೇ ಒಂದೊಂದು ವಿಭಾಗದಲ್ಲಿ ಸಾವಿರಕ್ಕು ಅಧಿಕ ಪ್ರಕರಣಗಳು ದಾಖಲಾಗಿವೆ. ಬರೀ ಪ್ರಕರಣ ಮಾತ್ರ ದಾಖಲಾಗುತ್ತಿದೆ. ಅದರೆ ತನಿಖೆಯಾಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ತನಿಖೆಗೆ ಸಹಾಯ, ಆರೋಪಿಗಳ ಬಂಧನಕ್ಕೆ ಬಲೆ ಬೀಸುವುದು ಸೇರಿದಂತೆ ಪ್ರಕರಣದ ಸಂಪೂರ್ಣ ಜವಾಬ್ದಾರಿಯನ್ನು ಡಿಸಿಪಿ ನೇತೃತ್ವದ ತಂಡಕ್ಕೆ ವಹಿಸಲಾಗಿದೆ.

ಆಧಾರ್ ಕಾರ್ಡ್ ಬಳಸಿಕೊಂಡು ಸಾರ್ವಜನಿಕರ ಹಣ ಲಪಟಾಯಿಸುವುದು, ಹಾಗೂ ಅಶ್ಲೀಲ ಪೋಟೊ, ವಿಡಿಯೋ ತೋರಿಸಿ ಜನರಿಗೆ ಬ್ಲಾಕ್ ಮೇಲ್ ಮಾಡುವುದು. ವಿಡಿಯೋ ಕರೆ ಮಾಡಿ ಜನರಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡುವುದು. ಕೆಲಸ ಕೊಡಿಸುವುದು, ಗಿಪ್ಟ್ ಹೆಸರಲ್ಲಿ ಮಕ್ಮಲ್ ಟೋಪಿ ಹಾಕುವ ಪ್ರಕರಣಗಳ ತನಿಖೆಗೆ ಕಮೀಷನರ್ ಸೂಚನೆ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ