ಪತ್ನಿ ಜೊತೆ ಅಕ್ರಮ ಸಂಬಂಧ ಹೊಂದಿದ್ದ ತಬ್ರೇಜ್ ಕೊಲೆ ಪ್ರಕರಣ: ಸ್ಪೋಟಕ ಮಾಹಿತಿ ಬಹಿರಂಗ
ಅಕ್ರಮ ಸಂಬಂಧದ ವಿಚಾರವಾಗಿ ಬೆಂಗಳೂರು ನಗರದ ತಿಲಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಬ್ರೇಜ್ ಎಂಬಾತನನ್ನು ಕೊಲೆ ಮಾಡಲಾಗಿತ್ತು. ಈ ಪ್ರಕರಣದ ಆರೋಪಿಯನ್ನು ಬಂಧಿಸಿದ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದು, ಸ್ಪೋಟಕ ಮಾಹಿತಿಯೊಂದು ಹೊರಬಿದ್ದಿದೆ.
ಬೆಂಗಳೂರು, ನ.18: ತನ್ನ ಪತ್ನಿ ಜೊತೆ ಅಕ್ರಮ ಸಂಬಂಧ ಹೊಂದಿದ್ದ ನಗರದ (Bengaluru) ತಿಲಕನಗರ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ತಬ್ರೇಜ್ ಕೊಲೆ ಪ್ರಕರಣ ಸಂಬಂಧ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ. ಆರೋಪಿ ಶಬ್ಬೀರ್ನನ್ನು ವಿಚಾರಣೆ ನಡೆಸುತ್ತಿರುವ ಪೊಲೀಸರಿಗೆ, ಆರೋಪಿಯು ಆ ದಿನ ಒಂದಲ್ಲ, ಎರಡು ಕೊಲೆಗಳನ್ನು ಮಾಡಲು ಸ್ಕೆಚ್ ಹಾಕಿರುವುದು ತಿಳಿದುಬಂದಿದೆ. ಪ್ರಕರಣದ ಇನ್ಸೈಡ್ ಕಹಾನಿ ಇಲ್ಲಿದೆ.
ವುಡ್ ವರ್ಕ್ನ ಸಬ್ ಕಾಂಟ್ರಾಕ್ಟರ್ ಆಗಿದ್ದ ತಬ್ರೇಜ್ ಕೊಲೆ ನಂತರ ಕೈಯಲ್ಲಿ ರಕ್ತ ಸಿಕ್ತ ಡ್ರ್ಯಾಗರ್ ಹಿಡಿದು ನಡುರಸ್ತೆಯಲ್ಲಿ ಶಬ್ಬೀರ್ ಓಡಾಡುತ್ತಿರುವ ದೃಶ್ಯವನ್ನು ಸಾರ್ವಜನಿಕರು ಸೆರೆ ಹಿಡಿದಿದ್ದಾರೆ. ಇದರ ವಿಡಿಯೋ ಟಿವಿ9ಗೆ ಲಭ್ಯವಾಗಿದೆ. ನಿಜಕ್ಕೂ ಆ ದಿನ ನಡೆದಿದ್ದೇನು ಗೊತ್ತಾ?
ಹತ್ಯೆಯ ಹಿಂದಿತ್ತು ಮೂರು ತಿಂಗಳ ತಂತ್ರ
ವೃತ್ತಿಯಲ್ಲಿ ವೆಲ್ಡಿಂಗ್ ಕೆಲಸ ಮಾಡುತಿದ್ದ ಶಬ್ಬೀರ್, ದುಬೈನಲ್ಲಿ ಕೆಲಸ ಮಾಡಿ ವಾಪಾಸ್ ಆಗಿ ಕೆಂಗೇರಿಯಲ್ಲಿ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಉಳಿದುಕೊಂಡಿದ್ದ. ಆದರೆ, ಕಳೆದ ಒಂಬತ್ತು ತಿಂಗಳ ಹಿಂದೆ ಶಬ್ಬೀರ್ಗೆ ತನ್ನ ಪತ್ನಿ ಹಾಗೂ ಮೂರು ಮಕ್ಕಳ ತಂದೆಯಾಗಿರುವ ತಬ್ರೇಜ್ ನಡುವೆ ಅಕ್ರಮ ಸಂಬಂಧ ಇರುವುದು ತಿಳಿದುಬಂದಿದೆ. ಇದೇ ವೇಳೆ ಪತ್ನಿ ಶ್ರೀರಾಮ್ಪುರದಲ್ಲಿರುವ ತವರು ಮನೆ ಸೇರಿದ್ದಳು.
ಇದನ್ನೂ ಓದಿ: ಓರ್ವಳ ಮೇಲಿನ ದ್ವೇಷಕ್ಕೆ ನಾಲ್ವರನ್ನ ಹತ್ಯೆಗೈದ ಹಂತಕ: ಕೊಲೆ ಹಿಂದಿನ ಕಾರಣ ಬಿಚ್ಚಿಟ್ಟ ಉಡುಪಿ ಎಸ್ಪಿ
ಆದರೆ, ಅಕ್ರಮ ಸಂಬಂಧ ವಿಚಾರವಾಗಿ ತಬ್ರೇಜ್ ಹಾಗೂ ಶಬ್ಬೀರ್ ನಡುವೆ ಜಗಳ ನಡೆದು ರಾಜಿಪಂಚಾಯಿತಿ ಕೂಡ ನಡೆದಿತ್ತು. ಆದರೂ ಅಕ್ರಮ ಸಂಬಂಧ ಮುಂದುವರಿದಿತ್ತು. ಹೀಗಾಗಿ ಮೂರು ತಿಂಗಳ ಹಿಂದೆಯೇ ಕೆಂಗೇರಿಯಲ್ಲಿ ಡ್ರ್ಯಾಗರ್ ಅನ್ನು ಶಬ್ಬೀರ್ ರೆಡಿ ಮಾಡಿದ್ದನು. ಇದನ್ನು ತಬ್ರೇಜ್ ಹತ್ಯೆ ಮಾಡಲೆಂದೆ ಇಟ್ಟುಕೊಂಡಿದ್ದನು. ತನ್ನ ಪತ್ನಿ ದೂರಾದರೂ ಸಂಬಂಧ ಹೊಂದುದವನ ಮೇಲಿದ್ದ (ತಬ್ರೇಜ್) ಸೇಡು, ಅನುಮಾನ ಕಡಿಮೆಯಾಗಿರಲಿಲ್ಲ. ಅದಕ್ಕಾಗೆ ತಬ್ರೇಜ್ ಹತ್ಯೆಯ ಸಂಚು ರೂಪಿಸಿದ್ದ.
ತಬ್ರೇಜ್ ಹತ್ಯೆ ನಂತರ ಪತ್ನಿ ಕೊಲೆಗೆ ಸ್ಕೆಚ್
ಅಂದು ಆರೋಪಿ ಶಬ್ಬೀರ್ ಒಂದಲ್ಲ, ಎರಡು ಕೊಲೆ ಮಾಡಲು ಸ್ಕೆಚ್ ಹಾಕಿದ್ದನು ಎಂಬ ವಿಚಾರ ತನಿಖೆಯಿಂದ ತಿಳಿದುಬಂದಿದೆ. ಮೊದಲು ತಬ್ರೇಜ್ನನ್ನು ಹತ್ಯೆ ಮಾಡಿ ಪತ್ನಿ ಕೊಲೆಗೆ ಸಂಚು ರೂಪಿಸಿದ್ದನು. ಅದರಂತೆ, ಊಟಕ್ಕೆಂದು ತನ್ನ ಗೆಳೆಯನ್ನು ಬಿಎಚ್ಎಲ್ ಕಸ್ಟಮರ್ ಕಚೇರಿ ಬಳಿ ಕರೆದೊಯ್ದು ಏಕಾಏಕಿಯಾಗಿ ತಬ್ರೇಜ್ ಮೇಲೆ ಡ್ರ್ಯಾಗರ್ನಿಂದ ದಾಳಿ ನಡೆಸಿ ಕೊಲೆ ಮಾಡಿದ್ದಾನೆ. ಇದನ್ನು ಕಂಡ ಶಬ್ಬೀರ್ ಗೆಳೆಯ ಬೈಕ್ ಬಿಟ್ಟು ಪರಾರಿಯಾಗಿದ್ದನು.
ಇತ್ತ, ತಬ್ರೇಜ್ ಕೊಲೆ ನಂತರ ಡ್ರ್ಯಾಗರ್ ಹಿಡಿದುಕೊಂಡು ಪತ್ನಿಯನ್ನು ಕೊಲೆ ಮಾಡಲು ಗೆಳೆಯ ಬಿಟ್ಟು ಹೋದ ಬೈಕ್ನಲ್ಲೇ ಶ್ರೀರಾಮ್ ಪುರಕ್ಕೆ ತೆರಳಿದ್ದನು. ಮನೆ ಬಾಗಿಲು ತಟ್ಟಿದ್ದಾಗ ಪತ್ನಿ ಅಲ್ಲಿ ಇರಲಿಲ್ಲ. ಈ ವಿಚಾರ ತಿಳಿದ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಡ್ರ್ಯಾಗರ್ ಸಹಿತ ಶಬ್ಬೀರ್ನನ್ನು ಬಂಧಿಸಿದ್ದರು.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ