ಶಾಲಾ ವಿದ್ಯಾರ್ಥಿಗಳ ಬ್ಯಾಗ್​ನಲ್ಲಿ ಕಾಂಡೋಮ್ ಪತ್ತೆ ಪ್ರಕರಣ; ಸಭೆ ನಡೆಸಿ ಮಹತ್ವದ ಹೆಜ್ಜೆ ಇಟ್ಟ ಔಷಧ ನಿಯಂತ್ರಣ ಮಂಡಳಿ

ಕೊರೊನಾ ಬಳಿಕ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಒಳ್ಳೆಯದಕ್ಕಿಂತ, ಕೆಟ್ಟ ಬದಲಾವಣೆಗಳು ಸದಾ ಸುದ್ದಿಯಲ್ಲಿದೆ. ಕಳೆದ ಕೆಲ ದಿನಗಳ ಹಿಂದೆಯಷ್ಟೇ ಮಕ್ಕಳ ಶಾಲಾ ಬ್ಯಾಗ್ ನಲ್ಲಿ ಕಾಂಡೋಮ್ ಡ್ರಗ್ಸ್ ಉತ್ತೇಜಕ ಟ್ಯಾಬ್ಲೆಟ್ ಸಿಕ್ಕು ದೊಡ್ಡ ಚರ್ಚೆಗೆ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ ಈಗ ಅಲರ್ಟ್ ಆಗಿರುವ ಔಷಧ ನಿಯಂತ್ರಣ ‌ಮಂಡಳಿ ಮಹತ್ವದ ಹೆಜ್ಜೆಗೆ ಮುಂದಾಗಿದೆ.

ಶಾಲಾ ವಿದ್ಯಾರ್ಥಿಗಳ ಬ್ಯಾಗ್​ನಲ್ಲಿ ಕಾಂಡೋಮ್ ಪತ್ತೆ ಪ್ರಕರಣ; ಸಭೆ ನಡೆಸಿ ಮಹತ್ವದ ಹೆಜ್ಜೆ ಇಟ್ಟ ಔಷಧ ನಿಯಂತ್ರಣ ಮಂಡಳಿ
ಸಾಂದರ್ಭಿಕ ಚಿತ್ರ
Follow us
| Edited By: ವಿವೇಕ ಬಿರಾದಾರ

Updated on:Nov 18, 2023 | 10:47 AM

ಬೆಂಗಳೂರು, ನ.18: ಕಳೆದ ಕೆಲ ತಿಂಗಳ ಹಿಂದೆಯಷ್ಟೇ ಬೆಂಗಳೂರಿನ ಶಾಲೆವೊಂದರಲ್ಲಿ ಇನ್ಸ್ಪೆಕ್ಷನ್ ಮಾಡುವ ವೇಳೆ ಕಾಂಡೋಮ್ (Condoms) ಪತ್ತೆಯಾಗಿತ್ತು. ಶಾಲಾ ವಿದ್ಯಾರ್ಥಿಯ ಸ್ಕೂಲ್ ಬ್ಯಾಗ್ ನಲ್ಲಿ (School Bag) ಕಾಂಡೋಮ್ ಇರೋದು ಎಲ್ಲರನ್ನೂ ದಂಗು ಬಡಿಸಿತ್ತು. ಮಕ್ಕಳು ಕೆಟ್ಟೊದ್ರು ಅನ್ನೊ ಟೀಕೆಗಳು ವ್ಯಕ್ತವಾದವು. ಮಕ್ಕಳಿಗೆ ಸೆಕ್ಸ್ ಎಜುಕೇಶನ್ ನೀಡಿ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದೆಲ್ಲದರ ಮಧ್ಯೆ ರಾಜ್ಯ ಔಷಧ ನಿಯಂತ್ರಣ ಮಂಡಳಿ ಮಹತ್ವದ ಆದೇಶಕ್ಕೆ ಮುಂದಾಗಿದೆ.

ಕಳೆದ ವಾರ ಆರೋಗ್ಯ ಸಚಿವರ ಸಭೆ ನಡೆಸಿದ್ದ ಔಷಧ ನಿಯಂತ್ರಣ ಮಂಡಳಿ ಹಲವು ಚರ್ಚೆ ನಡೆಸಿತ್ತು. ಇದಾದ ಬಳಿಕ ರಾಜ್ಯದ ಮೆಡಿಕಲ್ ಫಾರ್ಮಸಿಸ್ಟ್ ಅಸೋಶಿಯೇಶನ್ ಸಭೆ ನಡೆಸಿತ್ತು. ಬಳಿಕ ಮಕ್ಕಳು ಕೆಟ್ಟ ಚಟಕ್ಕೆ ಬೀಳುತ್ತಿರುವ ಆತಂಕದ ಮಧ್ಯೆ ಹೊಸ ಕಾನೂನು ರೂಪಿಸಿದ್ದು 18 ವರ್ಷದೊಳಗಿನ ಮಕ್ಕಳಿಗೆ ಕಾಂಡೋಮ್, ಗರ್ಭ ನಿರೋಧಕ ಮಾತ್ರೆ ಹಾಗೂ ಉತ್ತೇಜಕ ಮಾತ್ರೆಗಳನ್ನ ಕೊಡಬಾರದೆಂದು ಮೆಡಿಕಲ್ ಶಾಪ್ ಗಳಿಗೆ ಖಡಕ್ ಸೂಚನೆ ರವಾನಿಸಿದೆ.

ಇದನ್ನೂ ಓದಿ: Viral: ಕಾಂಡೋಮ್​ ಆರ್ಡರ್​ ಮಾಡುವಾಗ ಡೆಲಿವರಿ ಅಡ್ರೆಸ್ ಬದಲಾಯಿಸಲು ಅವನು ಮರೆತ

ಕಾಂಡೋಮ್ ಅಥವಾ ಗರ್ಭ ನಿರೋಧಕ ಮಾತ್ರೆಗಳನ್ನು ಆನ್ ದಿ ಕೌಂಟರ್ ಕೊಡಬಾರದೆಂದು ರಿಸ್ಟ್ರಿಕ್ಟ್ ಮಾಡಿದೆ. 18 ವರ್ಷದೊಳಗಿನ ಮಕ್ಕಳು ಇವುಗಳನ್ನು‌ ಕೇಳಿದ್ದಲ್ಲಿ ನಿರಾಕರಿಸುವಂತೆ ತಿಳಿಸಲಾಗಿದೆ. ಈಗಾಗಲೇ ಎಲ್ಲಾ ಮೆಡಿಕಲ್ ಶಾಪ್ ಗಳಿಗೆ ರಾಜ್ಯ ಔಷಧ ನಿಯಂತ್ರಣ ಮಂಡಳಿ ಸೂಚಿಸಿದೆ. ಈ ಹಿಂದಿನಿಂದಲೂ ವಿರೋಧಿಸುತ್ತಾ ಬಂದಿದ್ದ ಖಾಸಗಿ ಶಾಲೆಗಳ ಒಕ್ಕೂಟ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದೆ.

ಒಟ್ನಲ್ಲಿ ಕೊರೊನಾ ಬಳಿಕ ಮಕ್ಕಳು ಒಂದಲ್ಲ ಒಂದು ಕೆಟ್ಟ ಚಟಕ್ಕೆ ಬಲಿಯಾಗುತ್ತಿದ್ದು ತಿಳವಳಿಕೆ ಇಲ್ಲದೆ ತಪ್ಪು ಹಾದಿ ಹಿಡಿದು ಅವಾಂತರಕ್ಕೆ ಕಾರಣವಾಗುತ್ತಿದ್ದಾರೆ. ಹೀಗಾಗಿ ಆರೋಗ್ಯ ಇಲಾಖೆ ಹಾಗೂ ಔಷಧ ನಿಯಂತ್ರಣ ಮಂಡಳಿ 18 ವರ್ಷದ ಮಕ್ಕಳಿಗೆ ಇತರ ಔಷಧ ಮಾರಟಕ್ಕೆ ಬ್ರೇಕ್ ಹಾಕಿದೆ. ಇತರದ ವೆಸನಗಳಿಂದ ದೂರವಿಡಲು‌ ಈ ಮಹತ್ವದ ಕ್ರಮ ಜರುಗಿಸಿರುವುದು ಉತ್ತಮ ನಡೆಯಾಗಿದೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:17 am, Sat, 18 November 23

ತಾಜಾ ಸುದ್ದಿ
ಗಾಯಗೊಂಡ ಕಾಗೆಯ  ಆರೈಕೆ ಮಾಡುತ್ತಿರುವ ಕೊಪ್ಳಳದ ಶ್ರೀನಿವಾಸ ರೆಡ್ಡಿ ದಯಾಮಯಿ
ಗಾಯಗೊಂಡ ಕಾಗೆಯ  ಆರೈಕೆ ಮಾಡುತ್ತಿರುವ ಕೊಪ್ಳಳದ ಶ್ರೀನಿವಾಸ ರೆಡ್ಡಿ ದಯಾಮಯಿ
ಬಿಆರ್ ಪಾಟೀಲ್ ಜೊತೆ ಮಾತಾಡಿ ಬಂದು ಕಾಣುವಂತೆ ಹೇಳಿದ್ದೇನೆ: ಸಿದ್ದರಾಮಯ್ಯ
ಬಿಆರ್ ಪಾಟೀಲ್ ಜೊತೆ ಮಾತಾಡಿ ಬಂದು ಕಾಣುವಂತೆ ಹೇಳಿದ್ದೇನೆ: ಸಿದ್ದರಾಮಯ್ಯ
ಉತ್ತರಕಾಶಿ: ಸಾವು ಗೆದ್ದು ಬಂದ ಕಾರ್ಮಿಕರನ್ನು ಅಭಿನಂದಿಸಿದ ಪ್ರಧಾನಿ ಮೋದಿ
ಉತ್ತರಕಾಶಿ: ಸಾವು ಗೆದ್ದು ಬಂದ ಕಾರ್ಮಿಕರನ್ನು ಅಭಿನಂದಿಸಿದ ಪ್ರಧಾನಿ ಮೋದಿ
ಆರೋಪ ಮುಕ್ತನಾಗದ ಹೊರತು ಸದನಕ್ಕೆ ಕಾಲಿಡಲ್ಲ, ಸಾಬೀತಾದರೆ ರಾಜೀನಾಮೆ: ಪಾಟೀಲ್
ಆರೋಪ ಮುಕ್ತನಾಗದ ಹೊರತು ಸದನಕ್ಕೆ ಕಾಲಿಡಲ್ಲ, ಸಾಬೀತಾದರೆ ರಾಜೀನಾಮೆ: ಪಾಟೀಲ್
ಕಷ್ಟಪಟ್ಟು ಕನ್ನಡ ಓದಿದ ಮೈಕಲ್ ಅಜಯ್; ಇಲ್ಲಿದೆ ವಿಡಿಯೋ
ಕಷ್ಟಪಟ್ಟು ಕನ್ನಡ ಓದಿದ ಮೈಕಲ್ ಅಜಯ್; ಇಲ್ಲಿದೆ ವಿಡಿಯೋ
ವಿನೋದ್ ರಾಜ್ ಜೊತೆಗಿನ ತಮ್ಮ ಬಂಧದ ಬಗ್ಗೆ ಶಿವಣ್ಣ ಮಾತು
ವಿನೋದ್ ರಾಜ್ ಜೊತೆಗಿನ ತಮ್ಮ ಬಂಧದ ಬಗ್ಗೆ ಶಿವಣ್ಣ ಮಾತು
ರಾಜೀನಾಮೆ ನೀಡುತ್ತೇನೆಂದ ಬಿಅರ್ ಪಾಟೀಲ್ ಪತ್ರ ಸಿದ್ದರಾಮಯ್ಯಗೆ ಸಿಕ್ಕಿಲ್ಲ?
ರಾಜೀನಾಮೆ ನೀಡುತ್ತೇನೆಂದ ಬಿಅರ್ ಪಾಟೀಲ್ ಪತ್ರ ಸಿದ್ದರಾಮಯ್ಯಗೆ ಸಿಕ್ಕಿಲ್ಲ?
ಅಂತಿಮ ಹಂತದಲ್ಲಿ ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣಾ ಕಾರ್ಯಚರಣೆ
ಅಂತಿಮ ಹಂತದಲ್ಲಿ ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣಾ ಕಾರ್ಯಚರಣೆ
12 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪ ಹಿಡಿದ ಉರಗರಕ್ಷಕ
12 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪ ಹಿಡಿದ ಉರಗರಕ್ಷಕ
ಪ್ರತಾಪ್​ ಚಾಲಾಕಿತನಕ್ಕೆ ಇನ್ನೊಂದು ಸಾಕ್ಷಿ; ಬಿಕ್ಕಿ ಬಿಕ್ಕಿ ಅತ್ತ ನಮ್ರತಾ
ಪ್ರತಾಪ್​ ಚಾಲಾಕಿತನಕ್ಕೆ ಇನ್ನೊಂದು ಸಾಕ್ಷಿ; ಬಿಕ್ಕಿ ಬಿಕ್ಕಿ ಅತ್ತ ನಮ್ರತಾ