ಅವರ ಟಾರ್ಚರ್​ ಸಹಿಸಲು ಆಗ್ತಿಲ್ಲ, ಸಿಬ್ಬಂದಿಗೆ ಗರ್ಭಪಾತವೇ ಆಗಿದೆ: ಡಿಸಿಪಿ ನಿಶಾ ಜೇಮ್ಸ್ ವಿರುದ್ಧ ಆರೋಪಗಳ ಸುರಿಮಳೆ

| Updated By: ಆಯೇಷಾ ಬಾನು

Updated on: Oct 17, 2022 | 10:03 AM

ನಿಶಾ ಜೇಮ್ಸ್ ಅವರ ನಡೆಯಿಂದ ಬೇಸತ್ತ 25 ಸಿಬ್ಬಂದಿಗೆ ವೇತನ ಬಡ್ತಿಯನ್ನ ತಡೆ ಹಿಡಿದಿದ್ದಾರೆ. ನಿಶಾ ಅವರು ಕಡತಗಳನ್ನ ಸಮಯಕ್ಕೆ ಸರಿಯಾಗಿ ನೋಡದೇ, ತಿಂಗಳುಗಟ್ಟಲೇ ಸಹಿ ಮಾಡದೇ ಪೆಂಡಿಂಗ್ ಇಡ್ತಾರೆ.

ಅವರ ಟಾರ್ಚರ್​ ಸಹಿಸಲು ಆಗ್ತಿಲ್ಲ, ಸಿಬ್ಬಂದಿಗೆ ಗರ್ಭಪಾತವೇ ಆಗಿದೆ: ಡಿಸಿಪಿ ನಿಶಾ ಜೇಮ್ಸ್ ವಿರುದ್ಧ ಆರೋಪಗಳ ಸುರಿಮಳೆ
ಡಿಸಿಪಿ ನಿಶಾ ಜೇಮ್ಸ್
Follow us on

ಬೆಂಗಳೂರು: ಬೆಂಗಳೂರು ಪೊಲೀಸ್ ಆಯುಕ್ತರ​ ಕಚೇರಿ ಸಿಬ್ಬಂದಿ ಡಿಸಿಪಿ ನಿಶಾ ಜೇಮ್ಸ್​ ಅವರ ವಿರುದ್ಧ ಆಡಳಿತ ವಿಭಾಗದ ಎಡಿಜಿಪಿ ಡಾ.ಎಂ.ಎ.ಸಲೀಂಗೆ ದೂರು ಸಲ್ಲಿಸಿದ್ದಾರೆ. 25ಕ್ಕೂ ಹೆಚ್ಚು ಎಫ್​ಡಿಎ, ಎಸ್​ಡಿಎಗಳಿಂದ ಎಡಿಜಿಪಿಗೆ ದೂರು ನೀಡಲಾಗಿದೆ. ಸೆಪ್ಟೆಂಬರ್​ 3ರಂದು ಎಡಿಜಿಪಿಗೆ ನೀಡಿದ್ದ ದೂರಿನ ಪ್ರತಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಾಮಾನ್ಯ ವಿಷಯಗಳನ್ನ ದೊಡ್ಡದಾಗಿ ಮಾಡಿ ಕಾನೂನುಬಾಹಿರವಾಗಿ ಶಿಸ್ತುಕ್ರಮಕ್ಕೆ ಮುಂದಾಗುತ್ತಾರೆ. ಉದ್ದೇಶಪೂರ್ವಕವಾಗಿ ಸಿಬ್ಬಂದಿಗಳನ್ನ ತಡರಾತ್ರಿವರೆಗೂ ಕಚೇರಿಯಲ್ಲಿಯೇ ಉಳಿಸಿಕೊಳ್ಳುತ್ತಾರೆ. ನಿಶಾ ಜೇಮ್ಸ್ ಸಂಜೆ 6 ರ ನಂತರ ಕೆಲಸ ಶುರುಮಾಡಿ ರಾತ್ರಿ 3ಕ್ಕೆ ಮುಗಿಸ್ತಾರೆ. ಇದರಿಂದ ಪತ್ನಿ ಮಕ್ಕಳು ಪೋಷಕರ ಜೊತೆ ಸಮಯ ಕಳೆಯಲು ಆಗ್ತಿಲ್ಲ. ನಿಶಾ ಜೇಮ್ಸ್​ ಕಿರುಕುಳದಿಂದಾಗಿ ನಮಗೆ ನಿದ್ದೆ ಮಾಡಲು ಆಗುತ್ತಿಲ್ಲ. ನಿದ್ರಾಹೀನತೆಯಿಂದ ಮರೆವು ಸೇರಿದಂತೆ ಹಲವು ಕಾಯಿಲೆ ಬರುತ್ತಿವೆ ಎಂದು ಸಿಬ್ಬಂದಿ ನೀಡಿದ್ದ ದೂರಿನ ಪ್ರತಿ ಈಗ ವೈರಲ್ ಆಗಿದೆ. ಇದನ್ನೂ ಓದಿ: Shocking News: ಆಂಧ್ರಪ್ರದೇಶದಲ್ಲಿ ವಿಷದ ಇಂಜೆಕ್ಷನ್ ಚುಚ್ಚಿ 18 ನಾಯಿಗಳ ಹತ್ಯೆ

ಕನ್ನಡದಲ್ಲಿ ವ್ಯವಹರಿಸುವುದಿಲ್ಲ, ಸಿಬ್ಬಂದಿಯನ್ನು ತುಚ್ಛವಾಗಿ ಕಾಣ್ತಾರೆ

ನಿಶಾ ಜೇಮ್ಸ್ ಅವರ ನಡೆಯಿಂದ ಬೇಸತ್ತ 25 ಸಿಬ್ಬಂದಿಗೆ ವೇತನ ಬಡ್ತಿಯನ್ನ ತಡೆ ಹಿಡಿದಿದ್ದಾರೆ. ನಿಶಾ ಅವರು ಕಡತಗಳನ್ನ ಸಮಯಕ್ಕೆ ಸರಿಯಾಗಿ ನೋಡದೇ, ತಿಂಗಳುಗಟ್ಟಲೇ ಸಹಿ ಮಾಡದೇ ಪೆಂಡಿಂಗ್ ಇಡ್ತಾರೆ. ಇದರಿಂದ ಕಡತ ವಿಲೇವಾರಿ ತಡವಾಗ್ತಿದೆ. ನಿಶಾ ಜೇಮ್ಸ್ ಕಚೇರಿಯಲ್ಲಿ ಹಿಂದೂ ದೇವರುಗಳ ಫೋಟೋ ಇಡಲಿಕ್ಕೆ ಅವಕಾಶ ನೀಡುವುದಿಲ್ಲ. ಕನ್ನಡದಲ್ಲಿ ವ್ಯವಹರಿಸುವುದಿಲ್ಲ, ಕನ್ನಡ ಮಾತಾಡುವ ಸಿಬ್ಬಂದಿಯನ್ನ ತುಚ್ಛವಾಗಿ ಕಾಣ್ತಾರೆ. ಕಚೇರಿಯಲ್ಲಿನ ತೊಂದರೆ ಕಷ್ಟಗಳನ್ನ ಹೇಳಲಿಕ್ಕೆ ಸಿಬ್ಬಂದಿ ಬಂದ್ರೆ ಭಿಕ್ಷುಕರಂತೆ ಕಾಣ್ತಾರೆ. ಮಹಿಳಾ ಟೈಪಿಸ್ಟ್ ತಾನು ಗರ್ಭಿಣಿ ಎಂದು ತಿಳಿಸಿದ್ರು ಕಚೇರಿಯಲ್ಲಿ 9 ಘಂಟೆಗೂ ಹೆಚ್ಚು ಕಾಲ ಕಾಯುವಂತೆ ತಿಳಿಸಿದ್ರು. ಇದರಿಂದ ಗರ್ಭಿಣಿ ಟೈಪಿಸ್ಟ್ ಸಿಬ್ಬಂದಿಗೆ ಮಾನಸಿಕ ಹಿಂಸೆಯಾಗಿ ಗರ್ಭಪಾತವಾಗಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತರ​ ಕಚೇರಿ ಸಿಬ್ಬಂದಿ ದೂರು ನೀಡಿದ್ದರು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:43 am, Mon, 17 October 22