KSHDCL: ಬೇಳೂರು ರಾಘವೇಂದ್ರ ಶೆಟ್ಟಿ ವಿರುದ್ಧ ಎಫ್ಐಆರ್ -ಅನರ್ಹತೆ ದೂರು, 1 ವರ್ಷ 8 ತಿಂಗಳು ಅಧಿಕಾರ ಅನುಭವಿಸಿದ ಆರೋಪ
Dr Beloor Raghavendra Shetty: 2022 ರಲ್ಲಿ ಸರ್ಕಾರ ಅವರನ್ನು ಅಧ್ಯಕ್ಷರ ಸ್ಥಾನದಿಂದ ರದ್ದುಪಡಿಸಿತ್ತು. ಬಳಿಕ ರಾಘವೇಂದ್ರ ಶೆಟ್ಟಿ ಅವರ ಡಿಐಎನ್ ಅನರ್ಹವಾಗಿರುವ ಬಗ್ಗೆ ರಿಜಿಸ್ಟ್ರಾರ್ ಆಫ್ ಕಂಪನೀಸ್ ಅವರಿಂದ ಕರಕುಶಲ ಅಭಿವೃದ್ಧಿ ನಿಗಮಕ್ಕೆ ಪತ್ರ ಬಂದಿತ್ತು.
ಬೆಂಗಳೂರು: ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ (Karnataka State Handicrafts Development Corporation Limited -KSHDCL) ಮಾಜಿ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ (Dr Beloor Raghavendra Shetty) ವಿರುದ್ಧ ಬೆಂಗಳೂರಿನ ಅಶೋಕನಗರ ಠಾಣೆಯಲ್ಲಿ ಎಫ್ಐಆರ್ (FIR) ದಾಖಲಾಗಿದೆ. ರಾಘವೇಂದ್ರ ಶೆಟ್ಟಿಯವರ ಡಿಐಎನ್ ಸಂಖ್ಯೆ ಅನರ್ಹವಾದರೂ ಹುದ್ದೆಯಲ್ಲಿ ಮುಂದುವರಿದ ಆರೋಪ ಎದುರಿಸುತ್ತಿದ್ದಾರೆ. ಈ ಬಗ್ಗೆ ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕ ನಾರಾಯಣ ಕೆ ನಾಯ್ಕ್ ಅವರು ದೂರು ಸಲ್ಲಿಸಿದ್ದರು. ಬೇಳೂರು ರಾಘವೇಂದ್ರ ಶೆಟ್ಟಿ 2020 ರಲ್ಲಿ ನಿಗಮದ ಅಧ್ಯಕ್ಷರಾಗಿ ನೇಮಕವಾಗಿದ್ದರು. ಇದೀಗ ಐಪಿಸಿ 175,177,120b,406,407, 420,23 ಅಡಿಯಲ್ಲಿ ಎಫ್ಐಆರ್ ದಾಖಲು ಮಾಡಿಕೊಳ್ಳಲಾಗಿದೆ.
2022 ರಲ್ಲಿ ಸರ್ಕಾರ ಅವರನ್ನು ಅಧ್ಯಕ್ಷರ ಸ್ಥಾನದಿಂದ ರದ್ದುಪಡಿಸಿತ್ತು. ಬಳಿಕ ರಾಘವೇಂದ್ರ ಶೆಟ್ಟಿ ಅವರ ಡಿಐಎನ್ (ಡೈರೆಕ್ಟರ್ ಐಡೆಂಟಿಪೀಕೇಷನ್ ನಂಬರ್ DIN disqualification). ಅನರ್ಹವಾಗಿರುವ ಬಗ್ಗೆ ರಿಜಿಸ್ಟ್ರಾರ್ ಆಫ್ ಕಂಪನೀಸ್ ಅವರಿಂದ ಕರಕುಶಲ ಅಭಿವೃದ್ಧಿ ನಿಗಮಕ್ಕೆ ಪತ್ರ ಬಂದಿತ್ತು.
ರಿಜಿಸ್ಟ್ರಾರ್ ಆಫ್ ಕಂಪನೀಸ್ ಸೆಪ್ಟೆಂಬರ್ 28 ರಂದು ಪತ್ರ ಬರೆದು ವಿಚಾರ ತಿಳಿಸಿದ್ದರು. ಬೇಳೂರು ರಾಘವೇಂದ್ರ ಶೆಟ್ಟಿಯವರ ಡಿಐಎನ್ ಸಂಖ್ಯೆ 3116646 ಸಂಖ್ಯೆ ಅನರ್ಹವಾಗಿದೆ ಎಂದು ಪತ್ರ ಬರೆದಲ್ಲಿ ಉಲ್ಲೇಖಿಸಲಾಗಿತ್ತು. ಡಿಐಎನ್ ಅನರ್ಹವಾದಲ್ಲಿ ಅಧ್ಯಕ್ಷ ಅಥವಾ ಡೈರೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುವಂತಿಲ್ಲ. ಈ ವಿಚಾರ ಸರ್ಕಾರ ಹಾಗೂ ನಿಗಮದಿಂದ ಮುಚ್ಚಿಟ್ಟು ಒಂದು ವರ್ಷ ಎಂಟು ತಿಂಗಳು ಕಾಲ ಬೇಳೂರು ರಾಘವೇಂದ್ರ ಶೆಟ್ಟಿ ಅಧಿಕಾರದಲ್ಲಿ ಇದ್ದ ಮುಂದುವರಿದ ಆರೋಪ ದಾಖಲಾಗಿದೆ.
Also Read:
‘ಎತ್ತಿಕೊಂಡು ಹೋದ’ ಕಲಾಕೃತಿಗಳ ವೆಚ್ಚ ಭರಿಸುವಂತೆ ಬೇಳೂರು ರಾಘವೇಂದ್ರ ಶೆಟ್ಟಿಗೆ ನೋಟಿಸ್ ಕಳಿಸಿದ ರೂಪಾ ಮೌದ್ಗಿಲ್
ಈ ವೇಳೆ ಬೇಳೂರು ರಾಘವೇಂದ್ರ ಶೆಟ್ಟಿ ಅನೇಕ ನಿರ್ಧಾರಗಳನ್ನ ಕೈಗೊಂಡಿರುತ್ತಾರೆ. ಡಿಐಎನ್ ಅನರ್ಹವಾದ ವ್ಯಕ್ತಿ ತೆಗೆದುಕೊಂಡ ನಿರ್ಧಾರಗಳು ಅಸಿಂಧುವಾಗಿರುತ್ತೆ. ಯಾವುದೇ ವೇತನ, ಸಂಬಳ, ವೆಚ್ಚ ಪಡೆಯಲು ಬರುವುದಿಲ್ಲ. ಅದು ಗೊತ್ತಿದ್ದೂ ಬೇಳೂರು ರಾಘವೇಂದ್ರ ಶೆಟ್ಟಿ ನಿಗಮದಿಂದ ವೇತನ ಮತ್ತು ಭತ್ಯೆ ಪಡೆದ ಆರೋಪ ಎದುರಿಸುತ್ತಿದ್ದಾರೆ. ಪ್ರತಿ ತಿಂಗಳು 1.52 ಲಕ್ಷ ರೂ.ಗಳಂತೆ ಒಂದು ವರ್ಷ ಎಂಟು ತಿಂಗಳು 33.68 ಲಕ್ಷ ತೆಗೆದುಕೊಂಡು ಮೋಸ ಮಾಡಿದ್ದಾರೆ ಎಂದು ದೂರು ಸಲ್ಲಿಸಲಾಗಿದೆ. ಹಾಗೂ ಬೇಳೂರು ರಾಘವೇಂದ್ರ ಶೆಟ್ಟಿ ಡಿಐಎನ್ ಅನರ್ಹ ವಿಚಾರ ಮುಚ್ಚಿಟ್ಟಿದ್ದಾರೆ ಎಂದು ಆರೋಪಿಸಿ ಅಂದಿನ ಕಂಪನಿ ಸೆಕ್ರೆಟರಿ ವಿರುದ್ಧವೂ ದೂರು ದಾಖಲಿಸಲಾಗಿದೆ. ಬೇಳೂರು ರಾಘವೇಂದ್ರ ಶೆಟ್ಟಿ ಹಾಗೂ ಅಂದಿನ ಕಂಪನಿ ಸೆಕ್ರೆಟರಿ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಇದಕ್ಕೆಲ್ಲಾ ಹೆದರುವ ಜಾಯಮಾನ ನಮ್ಮದಲ್ಲ:ಬೇಳೂರು ರಾಘವೇಂದ್ರ ಶೆಟ್ಟಿ ಹೇಳಿಕೆ
ಪ್ರಕರಣ ಸಂಭಂದ ಬೇಳೂರು ರಾಘವೇಂದ್ರ ಶೆಟ್ಟಿ ಹೇಳಿಕೆ ನಿಡಿದ್ದು, ತನ್ನ ವಿರುದ್ದ ಮಹಿಳಾ ಅಧಿಕಾರಿ ಪಿತೂರಿ ನಡೆಸುತಿದ್ದಾರೆ. ಅವರೆ ಕಚೇರಿಗೆ ಸರಿಯಾದ ಸಮಯಕ್ಕೆ ಬರುವುದಿಲ್ಲಾ. ಕಾನೂನು ಪ್ರಕಾರ ಡಿಐನ್ ನಂಬರ್ ಇರಲೇ ಬೇಕು ಎಂದೇನೂ ಇಲ್ಲಾ. ನಾನು ಈ ಹಿಂದೆ ಪುರುಷ ಟೈಪಿಸ್ಟ್ ಬೇಕು ಎಂದು ಕೇಳಿದ್ದೆ. ಅದಕ್ಕೆ ಅವ್ರು ಮಹಿಳಾ ಪಿಎ ಬೇಕು ಎಂದು ಕೇಳಿದ್ದಾರೆ ಎಂದು ಅರೋಪ ಮಾಡಿದ್ದರು. ಇದಕ್ಕೆಲ್ಲಾ ಹೆದರುವ ಜಾಯಮಾನ ನಮ್ಮದಲ್ಲ. ನಾನು ಆಕೆಯ ವಿರುದ್ದ ಕೇಸ್ ಹಾಕಲಿದ್ದೇನೆ, ಅದಕ್ಕೆ ಈ ರೀತಿ ಮಾಡ್ತಿದ್ದಾರೆ. ಆಕೆಗೆ ಕಾಮನ್ ಸೆನ್ಸ್ ಇಲ್ಲದಂತೆ ಈ ಕೆಲಸ ಮಾಡ್ತಿದ್ದಾರೆ. ಐಪಿಎಸ್ ಅನ್ನೋ ಕಾರಣಕ್ಕೆ ಎಲ್ಲರೂ ಅವರಿಗೆ ಮಹತ್ವ ಕೊಡ್ತಾರೆ. ನಿಗಮದ ಎಂಡಿ ಅಗಿದ್ದಾರೆ ಅಂದ್ರೆ ಅವರ ಕೆಲಸ ಹೇಗಿದೆ? ನಾನು ಇದೆಲ್ಲದಕ್ಕೂ ಕಾನೂನು ಮೂಲಕ ಉತ್ತರ ಕೊಡ್ತೀನಿ. ಅವರಿಗೆ ತಾಕತ್ ಇದ್ರೆ ಕಾನೂನು ಮೂಲಕ ಫೈಟ್ ಮಾಡಲಿ ಎಂದು ವಿವರಣೆ ಕೊಟ್ಟಿದ್ದಾರೆ.
Published On - 11:31 am, Mon, 17 October 22