‘ಎತ್ತಿಕೊಂಡು ಹೋದ’ ಕಲಾಕೃತಿಗಳ ವೆಚ್ಚ ಭರಿಸುವಂತೆ ಬೇಳೂರು ರಾಘವೇಂದ್ರ ಶೆಟ್ಟಿಗೆ ನೋಟಿಸ್ ಕಳಿಸಿದ ರೂಪಾ ಮೌದ್ಗಿಲ್

TV9 Digital Desk

| Edited By: TV9 SEO

Updated on:Jun 02, 2022 | 2:24 PM

ನಿಗಮದ ಎಂಡಿ ರೂಪಾ ಮೌದ್ಗಿಲ್ ಅವರು ರಾಘವೇಂದ್ರ ಶೆಟ್ಟಿ ನಿಗಮಕ್ಕೆ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದಾಗಿನಿಂದ ನಿಗಮದ ಕಲಾಕೃತಿಗಳನ್ನು ಅನಾಮತ್ತಾಗಿ, ಹಣ ಪಾವತಿ ಮಾಡದೇ ಎತ್ತಿಕೊಂಡು ಹೋಗಿರುವುದರ ಹಣ ಪಾವತಿ ಮಾಡುವಂತೆ ಪತ್ರ ಕಳಿಸಿದ್ದಾರೆ.

'ಎತ್ತಿಕೊಂಡು ಹೋದ' ಕಲಾಕೃತಿಗಳ ವೆಚ್ಚ ಭರಿಸುವಂತೆ ಬೇಳೂರು ರಾಘವೇಂದ್ರ ಶೆಟ್ಟಿಗೆ ನೋಟಿಸ್ ಕಳಿಸಿದ ರೂಪಾ ಮೌದ್ಗಿಲ್
ರೂಪಾ ಮೌದ್ಗಿಲ್

ಬೆಂಗಳೂರು: ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ(Beluru Raghavendra Shetty) ಹಾಗೂ ನಿಗಮದ ಎಂಡಿ ರೂಪಾ ಮೌದ್ಗಿಲ್(D Roopa Moudgil)ವಿರುದ್ಧ ಜಟಾಪಟಿ ನಡೆಯುತ್ತಿದೆ. ಈ ಹಿಂದೆ ರೂಪಾ ಮೌದ್ಗಿಲ್ ಅವರು ಬೇಳೂರು ರಾಘವೇಂದ್ರ ಶೆಟ್ಟಿ ವಿರುದ್ಧ ಆರೋಪ ಮಾಡಿ ಸುದೀರ್ಘ 6 ಪುಟಗಳ ದೂರಿನ ವರದಿ ಸಲ್ಲಿಸಿದ್ದರು. ಇದಾದ ಬಳಿಕ ಇದಕ್ಕೆ ಸ್ಪಷ್ಟನೆ ನೀಡಿದ ಬೇಳೂರು ರಾಘವೇಂದ್ರ ಶೆಟ್ಟಿ ಆರೋಪಗಳನ್ನು ತಳ್ಳಿ ಹಾಕಿ ರೂಪ ವಿರುದ್ಧವೇ ಪ್ರತ್ಯಾರೋಪ ಮಾಡಿದ್ದರು. ಇದರ ನಡುವೆ ಈಗ ನಿಗಮದ ಎಂಡಿ ರೂಪಾ ಮೌದ್ಗಿಲ್ ಅವರು ರಾಘವೇಂದ್ರ ಶೆಟ್ಟಿ ನಿಗಮಕ್ಕೆ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದಾಗಿನಿಂದ ನಿಗಮದ ಕಲಾಕೃತಿಗಳನ್ನು ಅನಾಮತ್ತಾಗಿ, ಹಣ ಪಾವತಿ ಮಾಡದೇ ಎತ್ತಿಕೊಂಡು ಹೋಗಿರುವುದರ ಹಣ ಪಾವತಿ ಮಾಡುವಂತೆ ಪತ್ರ ಕಳಿಸಿದ್ದಾರೆ.

ಪತ್ರದಲ್ಲಿ ರಾಘವೇಂದ್ರ ಶೆಟ್ಟಿ ಎತ್ತಿಕೊಂಡು ಹೋದ ಕಲಾಕೃತಿಗಳು ಮತ್ತು ಅದರ ವೆಚ್ಚವನ್ನು ನೀಡಲಾಗಿದ್ದು ನಿಗಮಕ್ಕೆ ಒಟ್ಟು 3 ಲಕ್ಷದ 10 ಸಾವಿರದ 166 ರೂ ನೀಡುವಂತೆ ಸೂಚಿಸಿದ್ದಾರೆ. ಇದನ್ನೂ ಓದಿ: ಕಾಶ್ಮೀರದ ಕುಲ್ಗಾಂನಲ್ಲಿ ಉಗ್ರರ ಅಟ್ಟಹಾಸ; ಬ್ಯಾಂಕ್ ಮ್ಯಾನೇಜರ್ ಮೇಲೆ ಗುಂಡು ಹಾರಿಸಿ ಬರ್ಬರ ಹತ್ಯೆ

ರೂಪಾ ಮೌದ್ಗಿಲ್ ಅವರು ರಾಘವೇಂದ್ರ ಶೆಟ್ಟಿ ಅವರಿಗೆ ಕಳಿಸಿದ ನೋಟಿಸ್ನಲ್ಲೇನಿದೆ ವಿಷಯ: ನಿಗಮದ ಕಲಾಕೃತಿಗಳನ್ನು ಅನಾಮತ್ತಾಗಿ, ಹಣ ಪಾವತಿ ಮಾಡದೇ ಎತ್ತಿಕೊಂಡು ಹೋಗಿರುವುದರ ಹಣ ಪಾವತಿ ಮಾಡುವ ಬಗ್ಗೆ.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಈ ಮೂಲಕ ತಮ್ಮ ಗಮನಕ್ಕೆ ತರಬಯಸುವುದೇನೆಂದರೆ ತಾವು ನಿಗಮಕ್ಕೆ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದಾಗಿನಿಂದ ತಾವು ನಿಗಮದಿಂದ ಈ ಕೆಳಕಂಡ ಕರಕುಶಲ ವಸ್ತುಗಳನ್ನು ಅನಾಮತ್ತಾಗಿ ಮಳಿಗೆಗಳಿಂದ ಎತ್ತಿಕೊಂಡು ಹೋಗಿದ್ದು, ಈಗಾಗಲೇ ಮೌಖಿಕವಾಗಿ ಹಲವು ಬಾರಿ ಅದರ ಬಾಬು ಮೊತ್ತವನ್ನು ಪಾವತಿಸಲು ಕೋರಲಾಗಿದ್ದು ತಾವು ಇದುವರೆಗೂ ಪಾವತಿಸಿರುವುದಿಲ್ಲ ಹಾಗೂ ತಾವು ಕೂಡಲೇ ಈ ಕೆಳಕಂಡ ಕರಕುಶಲ ವಸ್ತುಗಳ ಮೊತ್ತವನ್ನು ನಿಗಮಕ್ಕೆ ಪಾವತಿಸಲು ತಿಳಿಸಿದೆ.

d roopa moudgil

ನಿಗಮದ ಮೇಲೆ ಹೇಳಿದ ಮೊತ್ತ ಅಷ್ಟೇ ಅಲ್ಲದೇ ನೀವು (ನೀರು) ನಿಗಮದ ಕರಕುಶಲ ಕರ್ಮಿಗಳು ಹಾಗೂ ನೋಂದಾಯಿತ ಮಾರಾಟಗಾರರಿ೦ದ ಕಲಾಕೃತಿಗಳನ್ನು ಪಾವತಿಸದೆ ಪಡೆದುಕೊಂಡಿರುತ್ತೀರಿ ಎಂಬ ಮಾಹಿತಿಯು ಇದ್ದು, ಮೇಲೆ ಹೇಳಿದ ಮಾರಾಟಗಾರರಿಗೆ ಹಣ ಮಾಡದೇ ಇರುವ ವಿಷಯ ನಿಗಮಕ್ಕೆ ನೇರ ಸಂಬಂಧ ಇಲ್ಲದಿದ್ದರೂ, ನಿಗಮದ ಅಧ್ಯಕ್ಷರ ಹುದ್ದೆಗೆ ಹಾಗೂ ನಿಗಮದ ಹೆಸರಿಗೆ ಕಳಂಕ ತರುವಂತಾಗಿದೆ. ಆದ್ದರಿಂದ ಮೇಲೆ ಹೇಳಿದ ಎಲ್ಲಾ ಪಾಪತಿಗಳನ್ನು ಕೂಡಲೇ ಮಾಡಬೇಕೆಂದು ತಿಳಿಸಿದೆ. ಇದನ್ನೂ ಓದಿ: ಲಂಚಕ್ಕೆ ಬೇಡಿಕೆಯಿಟ್ಟು ಅರೆಸ್ಟ್ ಆದ ಅಧಿಕಾರಿಗಳು; ಚನ್ನಪ್ಪಗೆ 14 ದಿನಗಳ ನ್ಯಾಯಾಂಗ ಬಂಧನ, ಶಂಕರಣ್ಣನ ಮೆಡಿಕಲ್ ರಿಪೋರ್ಟ್ಗಾಗಿ ಕಾಯುತ್ತಿರುವ ಎಸಿಬಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada