ಬೆಂಗಳೂರಿನಲ್ಲಿ 20 ಕೆಜಿ ಅಂಗರ್​ಗ್ರೀಸ್ ವಶ; ಕೋಲಾರದಲ್ಲಿ ಉಸಿರುಗಟ್ಟಿ ಬಾಲಕಿ ಮೃತ

| Updated By: guruganesh bhat

Updated on: Aug 17, 2021 | 11:03 PM

ಇಂದು ಒಂದೇ ದಿನ ಬೆಂಗಳೂರು ನಗರದಲ್ಲಿ ಪೊಲೀಸರು ಒಟ್ಟು 20 ಕೆಜಿ ಅಂಬರ್‌ಗ್ರಿಸ್​ನ್ನು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರಿನಲ್ಲಿ 20 ಕೆಜಿ ಅಂಗರ್​ಗ್ರೀಸ್ ವಶ; ಕೋಲಾರದಲ್ಲಿ ಉಸಿರುಗಟ್ಟಿ ಬಾಲಕಿ ಮೃತ
ತಿಮಿಂಗಿಲದ ವಾಂತಿ
Follow us on

ಬೆಂಗಳೂರು: ಖಚಿತ ಮಾಹಿತಿ ಆಧರಿಸಿ ನಗರದ ಎರಡು ಕಡೆ ದಾಳಿ ಮಾಡಿರುವ ಪೊಲೀಸರು 20 ಕೋಟಿ ಮೌಲ್ಯದ ಅಂಬರ್‌ಗ್ರಿಸ್​ನ್ನು ಜಪ್ತಿ ಮಾಡಿ ನಾಲ್ವರನ್ನು ಬಂಧಿಸಿದ್ದಾರೆ. ಎನ್ ಆರ್ ರಸ್ತೆಯ ಖಾಸಗಿ ವಸತಿ ಗೃಹದ ಕೊಠಡಿಯೊಂದರಲ್ಲಿ ಸಂಗ್ರಹಿಸಲಾಗಿದ್ದ 2.5 ಕೆ.ಜಿ ಅಂಬರ್‌ಗ್ರಿಸ್​ನ್ನು ಎಸ್‌.ಜೆ.ಪಾರ್ಕ್‌ ಠಾಣೆಯ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಜತೆಗೆ ಹೊಸಕೋಟೆಯಲ್ಲೂ ಅಂಬರ್‌ಗ್ರಿಸ್ ಸಂಗ್ರಹ ಬಗ್ಗೆ ಮಾಹಿತಿ ಪಡೆದ ಪೊಲೀಸರು 17.5 ಕೆಜಿ ಅಂಬರ್‌ಗ್ರಿಸ್​ನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈಮೂಲಕ ಇಂದು ಒಂದೇ ದಿನ ಬೆಂಗಳೂರು ನಗರದಲ್ಲಿ ಪೊಲೀಸರು ಒಟ್ಟು 20 ಕೆಜಿ ಅಂಬರ್‌ಗ್ರಿಸ್​ನ್ನು ವಶಕ್ಕೆ ಪಡೆದಿದ್ದಾರೆ.

ಕೋಲಾರದಲ್ಲಿ ಉಸಿರುಗಟ್ಟಿ ಬಾಲಕಿ ಸಾವು
ಕೋಲಾರ: ಸೀರೆಯಲ್ಲಿ‌ ಉಯ್ಯಾಲೆ ಮಾಡಿಕೊಂಡು ಆಡುತ್ತಿದ್ದ ವೇಳೆ ಕುತ್ತಿಗೆ ಬಿಗಿದು ಕೋಲಾರ ಜಿಲ್ಲೆ‌ ಮುಳಬಾಗಲು ತಾಲೂಕಿನ ಪೆದ್ದೂರು ಗ್ರಾಮದಲ್ಲಿ ಉಸಿರುಗಟ್ಟಿ ಬಾಲಕಿಯೋರ್ವಳು ಸಾವನ್ನಪ್ಪಿದ್ದಾಳೆ. ಮತ್ತೋರ್ವ ಬಾಲಕಿಯ ಸ್ಥಿತಿ ಗಂಭೀರವಾಗಿದೆ. ನಂಗಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಗುಂಡು ಹಾರಿಸಿ ಬಟ್ಟೆ ವ್ಯಾಪಾರಿಯ ಹತ್ಯೆ
ಚಿತ್ರದುರ್ಗ: ಜಿಲ್ಲೆಯ ಹೊಳಲ್ಕೆರೆ ಪಟ್ಟಣದಲ್ಲಿ‌ ಗುಂಡು ಹಾರಿಸಿ ವ್ಯಾಪಾರಿಯೋರ್ವನ ಹತ್ಯೆ ಮಾಡಲಾಗಿದೆ. ಖಾಸಗಿ ಟೆಕ್ಸ್ ಟೈಲ್ಸ್ ಮಾಲೀಕ ಮೂಲಸಿಂಗ್(50) ಎಂಬಾತನೇ ಹತ್ಯೆಗೀಡಾದ ದುರ್ದೈವಿ. ಬಟ್ಟೆ ಅಂಗಡಿ ಬಳಿ ವ್ಯಾಪಾರಿಯ ಹತ್ಯೆಗೈದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಹೊಳಲ್ಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಘಟನಾ ಸ್ಥಳಕ್ಕೆ ಎಸ್ಪಿ ಜಿ.ರಾಧಿಕಾ, ಡಿವೈಎಸ್ಪಿ ಪಾಂಡುರಂಗ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: 

ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ಗೆ ಜಯ: ಜಮ್ಮು ಕಾಶ್ಮೀರದಲ್ಲಿ ಕಟ್ಟೆಚ್ಚರ, ಕಾದು ನೋಡುವ ತಂತ್ರ ಅನುಸರಿಸಲು ಭಾರತ ನಿರ್ಧಾರ

ಕೆಲಸಕ್ಕೆ ಹಿಂದಿರುಗುವಂತೆ ಅಫ್ಘಾನ್​ ಸರ್ಕಾರಿ ನೌಕರರಿಗೆ ಕರೆಕೊಟ್ಟ ತಾಲಿಬಾನ್​ ಉಗ್ರರು; ಮಹಿಳೆಯರಿಗೂ ಆಹ್ವಾನ

(Bengaluru police detained 20 kg of amber grice today)

Published On - 9:33 pm, Tue, 17 August 21