ಶಿವರಾತ್ರಿ ಹಿನ್ನೆಲೆ ಬೆಂಗಳೂರಿನ ಕೆಲ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧ, ಶಿವ ದೇವಸ್ಥಾನಗಳಲ್ಲಿ ಹೈ ಅಲರ್ಟ್

| Updated By: ಆಯೇಷಾ ಬಾನು

Updated on: Mar 08, 2024 | 7:39 AM

ಬೆಳ್ಳಗ್ಗೆಯಿಂದಲೇ ಶಿವರಾತ್ರಿಯ ಸೊಬಗು ರಾಜಾಧಾನಿಯಲ್ಲಿ ಆರಂಭವಾಗಿದ್ದು, ಶಿವ ದೇವಸ್ಥಾನಗಳಲ್ಲಿ ಪೂಜೆ-ಪುನಸ್ಕಾರ ಆರಂಭವಾಗಿದೆ. ಮತ್ತೊಂದೆಡೆ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಅಲರ್ಟ್​ ಆಗಿದ್ದು ಶಿವ ದೇವಸ್ಥಾನಗಳಿಗೆ ಪೊಲೀಸ್ ಬಂದೋಬಸ್ತ್ ನೀಡಲಾಗಿದೆ. ಹಾಗೂ ಕೆಲವೆಡೆ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.

ಶಿವರಾತ್ರಿ ಹಿನ್ನೆಲೆ ಬೆಂಗಳೂರಿನ ಕೆಲ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧ, ಶಿವ ದೇವಸ್ಥಾನಗಳಲ್ಲಿ ಹೈ ಅಲರ್ಟ್
ಬೆಂಗಳೂರಿನ ಕೆಲ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧ
Follow us on

ಬೆಂಗಳೂರು, ಮಾರ್ಚ್​.08: ನಾಡಿನೆಲ್ಲೆಡೆ ಇಂದು ಶಿವರಾತ್ರಿ (Maha Shivratri)  ಹಬ್ಬದ ಸಂಭ್ರಮ ಮನೆ ಮಾಡಿದೆ.‌ ಶಿವರಾತ್ರಿ ಹಿನ್ನೆಲೆ ನಗರದ ಎಲ್ಲಾ ಶಿವ (Lord Shiva) ದೇವಸ್ಥಾನಗಳಲ್ಲಿ ವಿಶೇಷ ಪೂಜೆ-ಪುನಸ್ಕಾರಗಳನ್ನು ಹಮ್ಮಿಕೊಳ್ಳಲಾಗಿದೆ. ಮತ್ತೊಂದೆಡೆ ಇತ್ತೀಚೆಗೆ ನಗರದ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ಆದ ಬಾಂಬ್ ಬ್ಲಾಸ್ಟ್​ನಿಂದ ಎಚ್ಚೆತ್ತ ಪೊಲೀಸರು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ. ಸದ್ಯ ಶಿವರಾತ್ರಿ ಹಬ್ಬ ಆಚರಣೆ ಹಿನ್ನೆಲೆ ಬೆಂಗಳೂರು ನಗರದಾದ್ಯಂತ ಪೊಲೀಸ್ (Bengaluru Police) ಹೈ ಅಲರ್ಟ್ ಆಗಿದೆ. ಬೆಂಗಳೂರಿನಲ್ಲಿ ಟ್ರಾಫಿಕ್ ಪೊಲೀಸರು ಸಂಚಾರಿ ಮಾರ್ಪಾಡು ಮಾಡಿದ್ದಾರೆ.ನಗರದಲ್ಲಿ ಇಂದು ಕೆಲ ರಸ್ತೆಗಳಲ್ಲಿ ವಾಹನಗಳ ಸಂಚಾರ ನಿರ್ಬಂಧ ಹೇರಲಾಗಿದೆ.

ಹೆಚ್ಚಿನ ಶಿವ ಭಕ್ತರು ಸೇರುವ ಶಿವ ದೇವಸ್ಥಾನಗಳಿಗೆ ಮುನ್ನೆಚ್ಚರಿಕ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಇಂದು ಬೆಳಗಿನ ಜಾವದಿಂದಲೇ ಪೊಲೀಸ್ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾರೆ. ನಗರದ ಎಲ್ಲ ಠಾಣೆಗಳ ಇನ್ಸ್​ಪೆಕ್ಟರ್, ಸಿಬ್ಬಂದಿ ಗಸ್ತಿನಲ್ಲಿರುವಂತೆ ಸೂಚನೆ ನೀಡಲಾಗಿದೆ. ರಾಮೇಶ್ವರಂ ಕೆಫೆಯಲ್ಲಿ ಬ್ಲಾಸ್ಟ್ ನಂತರ ಹೈಅಲರ್ಟ್ ಆಗಿರುವ ಪೊಲೀಸರು ಯಾವುದೇ ವಿಧ್ವಂಸಕ ಕೃತ್ಯ ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದಾರೆ. ಇನ್ನು ಮತ್ತೊಂದೆಡೆ ಬೆಂಗಳೂರಿನಲ್ಲಿ ಟ್ರಾಫಿಕ್ ಪೊಲೀಸರು ಸಂಚಾರಿ ಮಾರ್ಪಾಡು ಮಾಡಿದ್ದಾರೆ. ನಗರದಲ್ಲಿ ಇಂದು ಕೆಲ ರಸ್ತೆಗಳಲ್ಲಿ ವಾಹನಗಳ ಸಂಚಾರ ನಿರ್ಬಂಧ ಹೇರಲಾಗಿದೆ.

ಎಲ್ಲೆಲ್ಲಿ ಸಂಚಾರ ನಿರ್ಬಂಧ?

ಜೀವನಹಳ್ಳಿ, ಚಾರ್ಲ್ಸ್ ಕ್ಯಾಂಬೇಜ್ ಮುಖ್ಯರಸ್ತೆ, ಬೈಯ್ಯಪ್ಪನಹಳ್ಳಿ ರಸ್ತೆ, ಕಲ್ಲಲ್ಲಿ ಸ್ಮಶಾನದ ರಸ್ತೆ, ಗರುಡಾಚಾರಪಾಳ್ಯ ಜಂಕ್ಷನ್‌ನಿಂದ ರಾಯಣ್ಣ ಸರ್ಕಲ್, ಗೋಶಾಲ ರಸ್ತೆಯಿಂದ ಸಂಗೊಳ್ಳಿ ರಾಯಣ್ಣ ಸರ್ಕಲ್​ವರೆಗೆ ಸಂಚಾರ ನಿರ್ಬಂಧ ಇರಲಿದೆ.

ಇದನ್ನೂ ಓದಿ: ಬಳ್ಳಾರಿ ಜೈಲಲ್ಲೇ ಕುಳಿತು ಬೆಂಗಳೂರು ಸ್ಫೋಟಕ್ಕೆ ಸಂಚು ಹೂಡಿದ್ದ ಶಂಕಿತ ಉಗ್ರ ಎನ್​ಐಎ ವಶಕ್ಕೆ

ಮಧ್ಯಾಹ್ನ 12 ಗಂಟೆಯಿಂದ ಸಿಎಂಹೆಚ್​ ರಸ್ತೆಯ ಆದರ್ಶ ಜಂಕ್ಷನ್​ನಿಂದ ಶಾಂತಿ ಸಾಗರ್ ಜಂಕ್ಷನ್​ವರೆಗೆ ವಾಹನಗಳ ಸಂಚಾರ ನಿರ್ಬಂಧ ಹೇರಲಾಗಿದೆ. ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 10ರವರೆಗೆ ವಾಹನಗಳ ಸಂಚಾರ ನಿರ್ಬಂಧ ಹೇರಲಾಗಿದೆ. ಬಜಾರ್ ಸ್ಟ್ರೀಟ್ ಬೇಗಂ ಮಾಲ್​ನಿಂದ ರಾಮಯ್ಯ ಜಂಕ್ಷನ್​ವರೆಗೆ ನಿರ್ಬಂಧ ಇರಲಿದೆ.

ಓ.ಎಂ.ಸರ್ಕಾರಿ ಕಾಲೇಜ್ ರಸ್ತೆ ಬೆಳಗ್ಗೆ 6ರಿಂದ ನಾಳೆ ಬೆಳಗ್ಗೆ 6ರವರೆಗೆ ನಿರ್ಬಂಧ ಹೇರಲಾಗಿದೆ. ಯಮಲೂರು ಓಂ ಶಕ್ತಿ ದೇಗುಲದಿಂದ ಸರ್ಕಾರಿ ಶಾಲೆವರೆಗಿನ ರಸ್ತೆ ನಿರ್ಬಂಧ. ಕೆಲ ರಸ್ತೆಗಳಲ್ಲಿ ನಿರ್ಬಂಧ ಹಿನ್ನೆಲೆ ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ.

ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗ

ದೊಡ್ಡಗುಂಟೆ ಸರ್ಕಲ್, ಕೆನ್ಸಿಂಗ್​ಟನ್ ರಸ್ತೆ ಮೂಲಕ ಬೈಯ್ಯಪ್ಪನಹಳ್ಳಿ ಓವರ್ ಬ್ರಿಡ್ಜ್ ಎಡರಸ್ತೆ, ಹೂಡಿ ಕೃಷ್ಣ ಟೆಂಪಲ್. ITPL ರಸ್ತೆ, ಬಿಎಂಶ್ರೀ ಜಂಕ್ಷನ್​ನಿಂದ ಆದರ್ಶ ಜಂಕ್ಷನ್ ಮೂಲಕ ತೆರಳಬಹುದು. ಬಜಾರ್ ಸ್ಟ್ರೀಟ್ ಸವಾರರಿಗೆ ಗುರುದ್ವಾರ ಜಂಕ್ಷನ್. ರಾಮಯ್ಯ ಜಂಕ್ಷನ್ ಸವಾರರಿಗೆ ಟ್ರಿನಿಟಿ ಜಂಕ್ಷನ್. ಓ.ಎಂ.ರಸ್ತೆ ಸವಾರರಿಗೆ K.R.ಪುರಂ ಎಕ್ಸ್​ಟೆನ್ಷನ್ ರಸ್ತೆ ಬಳಸುವಂತೆ ಮನವಿ ಮಾಡಲಾಗಿದೆ.

ಬೆಂಗಳೂರಿನಲ್ಲಿ ಇಂದು ವಾಹನ ನಿಲುಗುಡೆಗೆ ನಿರ್ಬಂಧಿಸಲಾದ ರಸ್ತೆಗಳು

CMH ರಸ್ತೆ, ಆದರ್ಶ ಜಂಕ್ಷನ್, ಶಾಂತಿ ಸಾಗರ್ ರಸ್ತೆಯ ಎರಡು ಬದಿ, ಓಲ್ಡ್ ಏರ್​ಪೋರ್ಟ್​ ರಸ್ತೆಯ ಎರಡು ಬದಿ, ಗೊರಗುಂಟೆಪಾಳ್ಯ ಸರ್ವಿಸ್ ರಸ್ತೆ, ಮೆಜೆಸ್ಟಿಕ್, ಮಲ್ಲೇಶ್ವರಂ ಸಂಪಿಗೆ ರಸ್ತೆ, ಮಿಲ್ಕ್ ಕಾರ್ನರ್ ಬಳಿ ನಿಲುಗಡೆಗೆ ನಿರ್ಬಂಧ ಹೇರಲಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ