AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಪೊಲೀಸರ ಮೆಗಾ ಡ್ರಗ್ ಬೇಟೆ: ಒಂದೇ ವಾರದಲ್ಲಿ 50 ಕೋಟಿ ರೂ. ಮೌಲ್ಯದ ಮಾದಕ ವಸ್ತು ಜಪ್ತಿ

ಬೆಂಗಳೂರು ನಗರ ಪೊಲೀಸರು ಮಾದಕ ವಸ್ತು ಜಾಲದ ವಿರುದ್ಧ ಯುದ್ಧ ಸಾರಿದ್ದು, ಕಳೆದ ಒಂದು ವಾರದಲ್ಲಿ ಸಿಸಿಬಿ ಸೇರಿದಂತೆ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ನಡೆಸಿದ ದಾಳಿಯಲ್ಲಿ ಒಟ್ಟು 50 ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಎಂಡಿಎಂಎ, ಎಲ್‌ಎಸ್‌ಡಿ ಮತ್ತು ಬ್ರೌನ್ ಶುಗರ್ ಸೇರಿದಂತೆ ಭಾರೀ ಪ್ರಮಾಣದ ಅಮಲು ಪದಾರ್ಥಗಳು ಪತ್ತೆಯಾಗಿವೆ.

ಬೆಂಗಳೂರಿನಲ್ಲಿ ಪೊಲೀಸರ ಮೆಗಾ ಡ್ರಗ್ ಬೇಟೆ: ಒಂದೇ ವಾರದಲ್ಲಿ 50 ಕೋಟಿ ರೂ. ಮೌಲ್ಯದ ಮಾದಕ ವಸ್ತು ಜಪ್ತಿ
ಸಾಂದರ್ಭಿಕ ಚಿತ್ರImage Credit source: tv9
ಪ್ರಜ್ವಲ್​ ಕುಮಾರ್ ಎನ್​ ವೈ
| Edited By: |

Updated on:Apr 29, 2026 | 12:43 PM

Share

ಬೆಂಗಳೂರು, ಏಪ್ರಿಲ್ 29: ಬೆಂಗಳೂರು (Bengaluru) ನಗರದಲ್ಲಿ ಡ್ರಗ್ಸ್ ಮಾಫಿಯಾದ (Drugs Mafia) ಬೆನ್ನೆಲುಬು ಮುರಿಯಲು ನಗರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಕೇವಲ ಒಂದು ವಾರದಲ್ಲಿ ಬರೋಬ್ಬರಿ 50 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ವಿವಿಧ ವಿಭಾಗಗಳ ಪೊಲೀಸರು ಏಕಕಾಲಕ್ಕೆ ದಾಳಿ ನಡೆಸಿ ಅಕ್ರಮ ಜಾಲವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಡ್ರಗ್ಸ್ ವಿರುದ್ಧ ಕಾರ್ಯಾಚರಣೆಗಳ ವಿವರ

  • ಬಾಗಲೂರು ಪೊಲೀಸರು ಸುಮಾರು 16 ಕೋಟಿ ರೂಪಾಯಿ ಮೌಲ್ಯದ ಎಲ್‌ಎಸ್‌ಡಿ (LSD) ಸ್ಟ್ರಿಪ್‌ಗಳನ್ನು ಜಪ್ತಿ ಮಾಡಿದ್ದಾರೆ.
  • ಸಿಸಿಬಿ ಪೊಲೀಸರು ನಡೆಸಿದ ದಾಳಿಯಲ್ಲಿ 17.5 ಕೋಟಿ ರೂಪಾಯಿ ಮೌಲ್ಯದ ಎಂಡಿಎಂಎ (MDMA) ಪತ್ತೆಯಾಗಿದೆ.
  • ಆಡುಗೋಡಿ ಪೊಲೀಸರು ತಮ್ಮ ವ್ಯಾಪ್ತಿಯಲ್ಲಿ 1.5 ಕೋಟಿ ರೂಪಾಯಿ ಬೆಲೆಯ ಬ್ರೌನ್ ಶುಗರ್ ವಶಪಡಿಸಿಕೊಂಡಿದ್ದಾರೆ.
  • ಯಶವಂತಪುರ ಮತ್ತು ಜಾಲಹಳ್ಳಿ ಭಾಗಗಳಲ್ಲಿ ನಡೆದ ಕಾರ್ಯಾಚರಣೆಯಲ್ಲಿ 6.47 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ಪತ್ತೆಯಾಗಿದೆ.
  • ಚಿಕ್ಕಜಾಲ ಪೊಲೀಸರು 1.6 ಕೋಟಿ ರೂಪಾಯಿ ಮೌಲ್ಯದ ಎಂಡಿಎಂಎ ಜಪ್ತಿ ಮಾಡಿದ್ದಾರೆ.

ನಗರದ ಯುವಜನತೆಯನ್ನು ಗುರಿಯಾಗಿಸಿಕೊಂಡು ಸರಬರಾಜು ಮಾಡಲಾಗುತ್ತಿದ್ದ ಈ ಬೃಹತ್ ಪ್ರಮಾಣದ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯುವ ಮೂಲಕ ಪೊಲೀಸರು ಡ್ರಗ್ಸ್ ಜಾಲಕ್ಕೆ ದೊಡ್ಡ ಏಟು ನೀಡಿದ್ದಾರೆ.

ಬೆಂಗಳೂರಿನಲ್ಲಿ ಇತ್ತೀಚಿನ ಅತಿದೊಡ್ಡ ಡ್ರಗ್ಸ್ ಬೇಟೆಗಳ ವಿವರ

  • ಏಪ್ರಿಲ್ 7, 2026: ವಿದೇಶಿ ಪ್ರಜೆಗಳು ಸೇರಿದಂತೆ 8 ಮಂದಿಯನ್ನು ಬಂಧಿಸಿದ ಪೊಲೀಸರು, 12 ಕೆಜಿ ಎಂಡಿಎಂಎ, 275 ಗ್ರಾಂ ಕೊಕೇನ್ ಮತ್ತು 34 ಕೆಜಿ ಗಾಂಜಾ ಸೇರಿ 27.42 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದರು.
  • ವಿಮಾನ ನಿಲ್ದಾಣದಲ್ಲಿ ನಾರ್ಕೋಟಿಕ್ಸ್ ಕಾರ್ಯಾಚರಣೆ (ಏಪ್ರಿಲ್): ಬ್ಯಾಂಕಾಕ್‌ನಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕನೊಬ್ಬನಿಂದ ಕಸ್ಟಮ್ಸ್ ಅಧಿಕಾರಿಗಳು ಸುಮಾರು 3.1 ಕೋಟಿ ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ಜಪ್ತಿ ಮಾಡಿದ್ದರು. ನಂತರ ಆತನನ್ನು ಬಂಧಿಸಲಾಗಿತ್ತು.
  • ಮಾರ್ಚ್: ಮಾದಕ ವಸ್ತು ಸಾಗಣೆ ಜಾಲದ ಮೇಲೆ ನಡೆಸಿದ ಭರ್ಜರಿ ದಾಳಿಯಲ್ಲಿ ಒಟ್ಟು 13.5 ಕೋಟಿಗೂ ಅಧಿಕ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿತ್ತು.
  • ಜನವರಿ: ಅಮೃತಹಳ್ಳಿ ಪೊಲೀಸರು 10 ಮಂದಿಯನ್ನು ಬಂಧಿಸಿ 4 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆದಿದ್ದರು.

ಇದನ್ನೂ ಓದಿ: ಬೆಂಗಳೂರು ಏರ್​ಪೋರ್ಟಲ್ಲಿ ಭರ್ಜರಿ ಕಾರ್ಯಾಚರಣೆ: ಬ್ಯಾಂಕಾಕ್, ಹಾಂಕಾಂಗ್​ನಿಂದ ಬರ್ತಿದ್ದ ಅಪಾರ ಪ್ರಮಾಣದ ಡ್ರಗ್ಸ್ ವಶ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:13 pm, Wed, 29 April 26

Follow Us
‘ಸಾಕ್ಷ್ಯ ವಿಚಾರಣೆ ವಿಳಂಬ ಆಗುತ್ತಿದೆ, ಜಾಮೀನು ಕೊಡಿ’; ದರ್ಶನ್ ಅರ್ಜಿ
‘ಸಾಕ್ಷ್ಯ ವಿಚಾರಣೆ ವಿಳಂಬ ಆಗುತ್ತಿದೆ, ಜಾಮೀನು ಕೊಡಿ’; ದರ್ಶನ್ ಅರ್ಜಿ
ಬಂಗಾಳ ಅಂತಿಮ ಸಮರದಲ್ಲಿ ಆರಂಭಿಕ ವಿಘ್ನ
ಬಂಗಾಳ ಅಂತಿಮ ಸಮರದಲ್ಲಿ ಆರಂಭಿಕ ವಿಘ್ನ
ವಾರಾಣಸಿಯ ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ
ವಾರಾಣಸಿಯ ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ
ಡಿಕೆಶಿ ಬಣಕ್ಕೆ ಮೇ ಕ್ರಾಂತಿ ಕನಸು: ಸಿದ್ದರಾಮಯ್ಯ ಬಣ ಅಹಿಂದ ಕಾರ್ಡ್​ ಪ್ಲೇ!
ಡಿಕೆಶಿ ಬಣಕ್ಕೆ ಮೇ ಕ್ರಾಂತಿ ಕನಸು: ಸಿದ್ದರಾಮಯ್ಯ ಬಣ ಅಹಿಂದ ಕಾರ್ಡ್​ ಪ್ಲೇ!
ಹಾಸನ ಹಲವು ಅವಾಂತರ ಸೃಷ್ಟಿಸಿದ ಮಳೆ: ಧರೆಗುರುಳಿದ ವಿದ್ಯುತ್​ ಕಂಬ, ಮರಗಳು
ಹಾಸನ ಹಲವು ಅವಾಂತರ ಸೃಷ್ಟಿಸಿದ ಮಳೆ: ಧರೆಗುರುಳಿದ ವಿದ್ಯುತ್​ ಕಂಬ, ಮರಗಳು
ಐವಿ ಡ್ರಿಪ್​ ಹಾಕಿಸಿಕೊಂಡು ಕೆಲಸಕ್ಕೆ ಹಾಜರಾದ ಅಂಗನವಾಡಿ ಕಾರ್ಯಕರ್ತೆ
ಐವಿ ಡ್ರಿಪ್​ ಹಾಕಿಸಿಕೊಂಡು ಕೆಲಸಕ್ಕೆ ಹಾಜರಾದ ಅಂಗನವಾಡಿ ಕಾರ್ಯಕರ್ತೆ
‘ಮಗನೇ ಈಗಲೂ ನನಗೆ ಸಿನಿಮಾ ಅರ್ಥ ಆಗಿಲ್ಲ ಅಂತಿದ್ರು’; ವಿನೋದ್
‘ಮಗನೇ ಈಗಲೂ ನನಗೆ ಸಿನಿಮಾ ಅರ್ಥ ಆಗಿಲ್ಲ ಅಂತಿದ್ರು’; ವಿನೋದ್
ದೇವಾಲಯದಲ್ಲಿ ಪ್ರಸಾದ ಬೇಡ ಅನ್ನೋದು ಘೋರ ಪಾಪ! ಯಾಕೆ ಗೊತ್ತಾ?
ದೇವಾಲಯದಲ್ಲಿ ಪ್ರಸಾದ ಬೇಡ ಅನ್ನೋದು ಘೋರ ಪಾಪ! ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಪ್ರೇಮ ವ್ಯವಹಾರಗಳಿಗೆ ಮನ್ನಣೆ
ಇಂದು ಈ ರಾಶಿಯವರಿಗೆ ಪ್ರೇಮ ವ್ಯವಹಾರಗಳಿಗೆ ಮನ್ನಣೆ
‘ಯಾವುದೇ ಗಿಮಿಕ್ ಇಲ್ಲದೇ ಗೆದ್ದ ಸಿನಿಮಾ ನಮ್ಮದು’: ನಟ ವಿನೋದ್ ಪ್ರಭಾಕರ್
‘ಯಾವುದೇ ಗಿಮಿಕ್ ಇಲ್ಲದೇ ಗೆದ್ದ ಸಿನಿಮಾ ನಮ್ಮದು’: ನಟ ವಿನೋದ್ ಪ್ರಭಾಕರ್