ಬೆಂಗಳೂರು: ಕೊರೊನಾ ಕಾರಣದಿಂದ ಕಳೆದ ಎರಡು ವರ್ಷಗಳಿಂದ ರಾಜಧಾನಿ ಬೆಂಗಳೂರಲ್ಲಿ ವಿಜೃಂಭಣೆಯಿಂದ ಹೊಸ ವರ್ಷಾಚರಣೆ (New Year) ಸಾಧ್ಯವಾಗಿರಲಿಲ್ಲ. ಹೀಗಾಗಿ ಈ ಬಾರಿ ಸಿಲಿಕಾನ್ ಸಿಟಿ ಜನರು ಅದ್ಧೂರಿಯಾಗಿ ಹೊಸ ವರ್ಷವನ್ನು ಬರಮಾಡಿಕೊಳ್ಳಲು ಸಿದ್ಧರಾಗಿದ್ದಾರೆ. ಆದರೆ ರಾಜ್ಯ ಸರ್ಕಾರ (Karnataka Government) ಈ ಸಂಭ್ರಮಾಚರಣೆಗೆ ಕೆಲವೊಂದು ಕೊರೊನಾ ಕಟ್ಟು ಪಡುಗಳನ್ನು ವಿಧಿಸಿದೆ. ಈಗ ನ್ಯೂ ಇಯರ್ ದಿನ ಯಾವುದೆ ಅಹಿತಕರ ಘಟನೆಗಳು ನಡೆಯದಂತೆ ಬೆಂಗಳೂರು ನಗರ ಪೊಲೀಸರು ಡ್ರೋನ್ (Drone) ಕಣ್ಗಾವಲಿನ ಮೊರೆ ಹೋಗಿದ್ದಾರೆ ಎಂದು ಖಾಸಗಿ ಸುದ್ದಿ ಸಂಸ್ಥೆ ಹಿಂದುಸ್ಥಾನ ಟೈಮ್ಸ್ ವರದಿ ಮಾಡಿದೆ.
ಹೌದು ನಗರ ಪೊಲೀಸರು ಈಗಾಗಲೆ ರೌಡಿ ಶೀಟರ್ಗಳಿಗೆ ವಾರ್ನ್ ಮಾಡಿದ್ದು, ನ್ಯೂ ಇಯರ್ದಂದು ಬಾಲ ಬಿಚ್ಚದಂತೆ ಖಡಕ್ ಸಂದೇಶ ರವಾನಿಸಿದ್ದಾರೆ. ಮೋಜು ಮಸ್ತಿಯಲ್ಲಿ ಮೈ ಮೇಲೆ ಪ್ರಜ್ಞೆ ಇಲ್ಲದಂತೆ ವರ್ತಿಸುವವರ, ಬೇಕೆಂತಲೇ ಕಾಲು ಕೆದರಿಗೊಂಡು ಜಗಳ ತೆಗೆಯುವವರ ಮತ್ತು ಕುಡಿದ ಮತ್ತಿನಲ್ಲಿ ಬೇಕಾ ಬಿಟ್ಟಿ ವಾಹನ ಚಲಾಯಿಸುವವರ ಮೇಲೆ ಕಣ್ಣಿಡಲು ಹೆಚ್ಚಿನ ಸಿಸಿ ಕ್ಯಾಮೆರಾ ಮತ್ತು ಡ್ರೋನ್ ಕಣ್ಗಾವಲು ಇರಲಿದೆ.
If you think WE CAN’T SEE YOU, think again ?♂️
We are ensuring adequate lighting in crowded areas, increased CCTV and Drone Surveillance during NYE. Let’s all pledge to keep Namma Ooru, Safe Bengaluru ?#PolicePublicPartnership ? pic.twitter.com/yY24T31aO0
— ಬೆಂಗಳೂರು ನಗರ ಪೊಲೀಸ್ BengaluruCityPolice (@BlrCityPolice) December 27, 2022
ಇದನ್ನೂ ಓದಿ: ಜನವರಿ 27ರಿಂದ 3 ದಿನಗಳ ಕಾಲ ಹಂಪಿ ಉತ್ಸವ: ಜಿಲ್ಲಾಡಳಿತ ತೀರ್ಮಾನ
ಹೊಸ ವರ್ಷಾಚರಣೆ ವೇಳೆ ಎದುರಾಗುವ ಸಮಸ್ಯೆಗಳನ್ನು ನಿಭಾಯಿಸಲು ತಯಾರಿ ಮಾಡಿಕೊಳ್ಳಲಾಗುತ್ತಿದೆ. ಸದ್ಯ ಡಿಸೆಂಬರ್ 31ರ ರಾತ್ರಿ ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಮುಳುಗಿ ತೇಲಾಡುವ ಮಂದಿಯನ್ನು ಸೇಫ್ಟಿಗೆ ಬೆಂಗಳೂರು ಪೊಲೀಸ್ ಇಲಾಖೆ ಹೊಸ ಪ್ರಯೋಗಕ್ಕೆ ಮುಂದಾಗಿದೆ.
ಯುವಕ, ಯುವತಿ ಸೇರಿದಂತೆ ಯಾರೇ ಕುಡಿದು ಟೈಟಾದರೂ ಅವರಿಗೆ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗುತ್ತಿದೆ.ಡಿ. 31ರ ರಾತ್ರಿ ಮಾತ್ರ ಈ ಸೇವೆ ಲಭ್ಯವಿರಲಿದೆ. ಆಗ್ನೇಯ ವಿಭಾಗ ಡಿಸಿಪಿ ಸಿಕೆ ಬಾಬಾ ಅವರು ಈ ಮೂಲಕ ಮತ್ತೊಂದು ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದಾರೆ. ನ್ಯೂ ಇಯರ್ ಸಮಯದಲ್ಲಿ ಮದ್ಯಪ್ರಿಯರಿಗೆ ಸಮಸ್ಯೆಯಾಗದಂತೆ ನೀಡಿಕೊಳ್ಳಲು ಪೊಲೀಸರು ಬಂಪರ್ ಪ್ಲಾನ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಶಾಲಾ ಕೊಠಡಿಗೆ ನುಗ್ಗಿ ಶಿಕ್ಷಕನ ಮೇಲೆ ಮಾನಸಿಕ ಅಸ್ವಸ್ಥನಿಂದ ಏಕಾಏಕಿ ಹಲ್ಲೆ
ಕೋರಮಂಗಲ, ಮಡಿವಾಳ, ಎಲೆಕ್ಟ್ರಾನಿಕ್ ಸಿಟಿ, ಹೆಚ್ಎಸ್ಆರ್ ಲೇಔಟ್ ನಲ್ಲಿ ಸಂಪೂರ್ಣ ಭದ್ರತೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆಗ್ನೇಯ ವಿಭಾಗದಲ್ಲಿ 108 ಪಬ್, ರೆಸ್ಟೋರೆಂಟ್ಗಳಿವೆ, ಪ್ರತಿಯೊಂದು ಪಬ್, ರೆಸ್ಟೋರೆಂಟ್ ಮುಂದೆಯೂ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗುತ್ತಿದೆ. ಎಣ್ಣೆ ಹೊಡೆದು ಫುಲ್ ಟೈಟಾಗಿ ಪ್ರಜ್ಞೆ ತಪ್ಪಿ ಬೀಳುವವರಿಗೆ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗುತ್ತಿದೆ. ಕುಡಿದ ಅಮಲಿನಲ್ಲಿ ಕುಣಿದು ಕುಪ್ಪಳಿಸಿ, ಗಾಯ ಮಾಡಿಕೊಂಡೋರಿಗೆ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗುತ್ತಿದೆ. ಅಥವಾ ಆಕಸ್ಮಿಕವಾಗಿ ಸೆಲೆಬ್ರೇಷನ್ ವೇಳೆ ಯಾರಿಗಾದ್ರು ಆರೋಗ್ಯ ತಪ್ಪಿದ್ರೆ ಪೊಲೀಸರಿಂದಲೇ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗುತ್ತೆ. ಕೂಡಲೇ ಆ್ಯಂಬುಲೆನ್ಸ್ ನಲ್ಲಿ ಬಿದ್ದ ಕುಡುಕರನ್ನ ಸಾಗಿಸಿ ಆಸ್ಪತ್ರೆಗೆ ದಾಖಲಿಸಲಾಗುತ್ತೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:39 pm, Wed, 28 December 22