ಬೆಂಗಳೂರು: ರೌಡಿಶೀಟರ್​ಗಳ ಮನೆಗಳ ಮೇಲೆ ಪೊಲೀಸರ ದಾಳಿ; 105 KG ಗಾಂಜಾ, ಮಾರಕಾಸ್ತ್ರ ವಶ

|

Updated on: Apr 24, 2023 | 12:28 PM

ವಿಧಾನಸಭೆ ಚುನಾವಣೆ ಇರುವ ಹಿನ್ನಲೆ, ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಈಗಾಗಲೇ ನಗರದ ಅನೇಕ ರೌಡಿಶೀಟರ್​ಗಳನ್ನ ಗಡಿಪಾರು ಮಾಡಲಾಗಿದೆ. ಇದೀಗ ಬೆಂಗಳೂರು ಪೂರ್ವ ವಿಭಾಗ ಪೊಲೀಸರಿಂದ ಡಿ.ಜೆ ಹಳ್ಳಿ ಠಾಣಾ ವ್ಯಾಪ್ತಿಯ ರೌಡಿ ಶೀಟರ್ಸ್ ಮನೆಗಳ ಮೇಲೆ ದಾಳಿ ಮಾಡಲಾಗಿದ್ದು,  105 KG ಗಾಂಜಾ, ಮಾರಕಾಸ್ತ್ರವನ್ನ ವಶಕ್ಕೆ ಪಡೆಯಲಾಗಿದೆ.

ಬೆಂಗಳೂರು: ರೌಡಿಶೀಟರ್​ಗಳ ಮನೆಗಳ ಮೇಲೆ ಪೊಲೀಸರ ದಾಳಿ; 105 KG ಗಾಂಜಾ, ಮಾರಕಾಸ್ತ್ರ ವಶ
ಪೊಲೀಸರಿಂದ ರೌಡಿಶೀಟರ್​ ಮನೆ ಮೇಲೆ ದಾಳಿ
Follow us on

ಬೆಂಗಳೂರು: ವಿಧಾನಸಭೆ ಚುನಾವಣೆ(Karnataka Assembly Election) ಇರುವ ಹಿನ್ನಲೆ, ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಈಗಾಗಲೇ ನಗರದ ಅನೇಕ ರೌಡಿಶೀಟರ್​ಗಳನ್ನ ಗಡಿಪಾರು ಮಾಡಲಾಗಿದೆ. ಇದೀಗ ಬೆಂಗಳೂರು ಪೂರ್ವ ವಿಭಾಗ ಪೊಲೀಸರಿಂದ ಡಿ.ಜೆ ಹಳ್ಳಿ ಠಾಣಾ ವ್ಯಾಪ್ತಿಯ ರೌಡಿ ಶೀಟರ್ಸ್ ಮನೆಗಳ ಮೇಲೆ ದಾಳಿ ಮಾಡಲಾಗಿದ್ದು, ರೌಡಿಶೀಟರ್​​​​​ ಆಸಿಫ್​​ ಮನೆಯಲ್ಲಿ 105 KG ಗಾಂಜಾ, ಮಾರಕಾಸ್ತ್ರವನ್ನ ವಶಕ್ಕೆ ಪಡೆಯಲಾಗಿದೆ. ಜೊಲ್ಲು ಇಮ್ರಾನ್​​, ಅನಿಸ್​, ಅಬ್ಬಾಸ್​​, ಸಾಧಿಕ್​​​, ಶಾಕಿರ್​​​​, ಇರ್ಫಾನ್​, ಯೂಸೂಫ್​​ ಸೇರಿ 100 ರೌಡಿಶೀಟರ್​​ಗಳ​​ ಮನೆಗಳ ಮೇಲೆ ಪರಿಶೀಲನೆ ಮಾಡಲಾಗಿದೆ. ಈ ವೇಳೆ ಮನೆಗಳಲ್ಲಿದ್ದ ಡ್ರಗ್ಸ್​​, ಮಾರಕಾಸ್ತ್ರಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕೆಲ ದಿನಗಳ ಹಿಂದೆ 1500ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳಿಂದ 500ಕ್ಕೂ ಹೆಚ್ಚು ರೌಡಿಶೀಟರ್​ಗಳ ಮನೆ ಮೇಲೆ ದಾಳಿ

ಬೆಂಗಳೂರು: ಇದೇ ತಿಂಗಳ ಏಪ್ರಿಲ್​ 20 ರಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸುಮಾರು 1500ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳಿಂದ 500ಕ್ಕೂ ಹೆಚ್ಚು ರೌಡಿಶೀಟರ್​ಗಳ ಮನೆ ಮೇಲೆ ದಾಳಿ ನಡೆದಿತ್ತು. ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ರೌಡಿ ಶೀಟರ್​ಗಳ ಮನೆ ಮೇಲೆ ದಾಳಿ ಮಾಡಲಾಗಿತ್ತು. ದಾಳಿ ವೇಳೆ ವಾರಂಟ್ ಪೆಂಡಿಂಗ್ ಇದ್ದ ಕೆಲ ರೌಡಿಗಳ ಮನೆಯಲ್ಲಿ ಮಚ್ಚು, ಲಾಂಗುಗಳು ಪತ್ತೆಯಾಗಿದ್ದವು.

ಇದನ್ನೂ ಓದಿ:Karnataka Assembly Polls 2023: ಬೆಂಗಳೂರು ನಗರದಿಂದ 45 ರೌಡಿ ರೌಡಿಶೀಟರ್​ಗಳನ್ನ ಗಡಿಪಾರು ಮಾಡಲು ನಿರ್ಧಾರ

ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಸೂಚನೆ ಮೇರೆಗೆ ಎಲ್ಲಾ ವಿಭಾಗದ ಡಿಸಿಪಿಗಳ ನೇತ್ರತ್ವದಲ್ಲಿ ದಾಳಿ ನಡೆದಿತ್ತು. ಈ ವೇಳೆ ಕೇಂದ್ರ ವಿಭಾಗ, ದಕ್ಷಿಣ ವಿಭಾಗ, ಪಶ್ಚಿಮ ವಿಭಾಗ ಮತ್ತು ಉತ್ತರ ವಿಭಾಗದಲ್ಲಿ ಸುಮಾರು ಐನೂರಕ್ಕೂ ಹೆಚ್ಚು ರೌಡಿಗಳ ನಿವಾಸದ ಮೇಲೆ ದಾಳಿ ನಡೆಸಿ ಮಾರಕಾಸ್ತ್ರ ಇಟ್ಟುಕೊಂಡಿದ್ದ ರೌಡಿಗಳನ್ನು ವಶಕ್ಕೆ ಪಡೆಯಲಾಗಿತ್ತು. ಉಳಿದ ರೌಡಿಗಳಿಗೆ ಚುನಾವಣಾ ಸಮಯದಲ್ಲಿ ಯಾವ ಪಕ್ಷದ ಪರ ಹೋಗಿ ಗಲಾಟೆ, ರೌಡಿಸಂ ಮಾಡದಂತೆ ಎಚ್ಚರಿಕೆ ನೀಡಲಾಗಿತ್ತು.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:27 pm, Mon, 24 April 23