ಪುಲಿಕೇಶಿ ನಗರದಲ್ಲಿ ಕೊನೆಗೂ ಆ ಪಕ್ಷದಿಂದ ಅಖಾಡಕ್ಕಿಳಿದ ಅಖಂಡ ಶ್ರೀನಿವಾಸ ಮೂರ್ತಿ!
ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಅಖಂಡ ಶ್ರೀನಿವಾಸಮೂರ್ತಿ ಅವರು ಕಾಂಗ್ರೆಸ್ಗೆ ಗುಡ್ ಬೈ ಹೇಳಿ ಬಿಎಸ್ಪಿ ಪಕ್ಷ ಸೇರಿದ್ದಾರೆ. ಬೆಂಗಳೂರಿನ ಪುಲಿಕೇಶಿನಗರ ಕ್ಷೇತ್ರದ ಬಿಎಸ್ಪಿ ಅಭ್ಯರ್ಥಿಯಾಗಿ ಈ ಬಾರಿ ಚುನಾವಣೆ ಎದುರಿಸಲಿದ್ದಾರೆ.
ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ರಣಕಣ ರಂಗೇರಿದೆ. ಅಭ್ಯರ್ಥಿಗಳ ಕೈಯಲ್ಲಿ ಕೆಲವೇ ದಿನಗಳು ಬಾಕಿ ಇದ್ದು ಎಲ್ಲರೂ ಭರ್ಜರಿ ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮತ್ತೊಂದೆಡೆ ಟಿಕೆಟ್ ಕೈ ತಪ್ಪಿದ ಅಸಮಾಧಾನಿತ ಅಭ್ಯರ್ಥಿಗಳು ತಮ್ಮ ಪಕ್ಷಕ್ಕೆ ರಾಜೀನಾಮೆ ನೀಡಿ ಬೇರೆ ಬೇರೆ ಪಕ್ಷಗಳಿಗೆ ಹಾರುತ್ತಿದ್ದಾರೆ. ಸದ್ಯ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಅಖಂಡ ಶ್ರೀನಿವಾಸಮೂರ್ತಿ ಅವರು ಕಾಂಗ್ರೆಸ್ಗೆ ಗುಡ್ ಬೈ ಹೇಳಿ ಬಿಎಸ್ಪಿ ಪಕ್ಷ ಸೇರಿದ್ದಾರೆ. ಬೆಂಗಳೂರಿನ ಪುಲಿಕೇಶಿನಗರ ಕ್ಷೇತ್ರದ ಬಿಎಸ್ಪಿ ಅಭ್ಯರ್ಥಿಯಾಗಿ ಈ ಬಾರಿ ಚುನಾವಣೆ ಎದುರಿಸಲಿದ್ದಾರೆ. ಕಾಂಗ್ರೆಸ್ಗೆ ಪ್ರಬಲ ಪೈಪೋಟಿ ನೀಡಲು ಅಖಂಡ ಶ್ರೀನಿವಾಸ ಮೂರ್ತಿ ಸಜ್ಜಾಗಿದ್ದಾರೆ.
ಕಾಂಗ್ರೆಸ್ ಟಿಕೆಟ್ ನೀಡದ ಹಿನ್ನೆಲೆ ಪುಲಿಕೇಶಿ ನಗರ ಹಾಲಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದರು. ಇದೀಗ ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಕ್ಷ ಸೇರ್ಪಡೆಗೊಂಡಿದ್ದಾರೆ. ಕಳೆದ 2018ರ ವಿಧಾನಸಭೆ ಚುನಾವಣೆಯಲ್ಲಿ 81 ಸಾವಿರ ಮತಗಳ ಅಂತರದಿಂದ ಗೆದ್ದಿದ್ದರೂ ದಲಿತ ಶಾಸಕನಾಗಿದ್ದ ಅಖಂಡ ಶ್ರೀನಿವಾಸಮೂರ್ತಿ ಕಾಂಗ್ರೆಸ್ ಟಿಕೆಟ್ ನೀಡಿಲ್ಲ. ಬದಲಾಗಿ ಎ.ಸಿ. ಶ್ರೀನಿವಾಸ್ ಎಂಬುವವರಿಗೆ ಕಾಂಗ್ರೆಸ್ ಟಿಕೆಟ್ ನೀಡಲಾಗಿದೆ.
ಅಖಂಡ ಶ್ರೀನಿವಾಸಮೂರ್ತಿಗೆ ಕಾಂಗ್ರೆಸ್ ಟಿಕೆಟ್ ನೀಡದಿರಲು ಕಾರಣವೇನು?
ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಡಿಜೆ ಹಳ್ಳಿ ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ಅಖಂಡ ಶ್ರೀನಿವಾಸಮೂರ್ತಿ ಅವರ ಹೆಸರು ಹೇಳಿ ಬಂದಿತ್ತು. ಅಖಂಡ ಶ್ರೀನಿವಾಸಮೂರ್ತಿ ಅವರ ಸಂಬಂಧಿ ನವೀನ್ ಎಂಬಾತ ಪ್ರವಾದಿ ಪೈಗಂಬರ್ ಅವರ ಕುರಿತು ನಿಂದನೆ ಮಾಡಿ ಫೇಸ್ಬುಕ್ನಲ್ಲಿ ಪೋಸ್ಟೊಂದ್ನನು ಹರಿಬಿಟ್ಟಿದ್ದು ಈ ಪ್ರಕರಣ ವಿರೋಪಕ್ಕೆ ತೆರಳಿತ್ತು. ಪ್ರವಾದಿ ನಿಂದನೆ ಆರೋಪದಡಿಯಲ್ಲಿ ಕೆಲವು ಕಿಡಿಗೇಡಿಗಳು ಡಿಜೆ ಹಳ್ಳಿ ಪೊಲೀಸ್ ಠಾಣೆಗೆ ಬೆಂಕಿ ಇಟ್ಟಿದ್ದರು. ಹಲವು ವಾಹನಗಳನ್ನು ಸುಟ್ಟು ಹಾಕಿದ್ದರು. ಅಲ್ಲದೆ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೂ ಬೆಂಕಿ ಇಡಲಾಗಿತ್ತು. ಈ ವೇಳೆ ನಡೆದ ಪೊಲೀಸ್ ಗೊಲಿಬಾರ್‌ಗೆ ಮೂವರು ಬಲಿಯಾಗಿದ್ದರು.
ಈ ಘಟನೆಯ ಹಿಂದೆ ಮಾಜಿ ಮೇಯರ್ ಹಾಗೂ ಪುಲಕೇಶಿನಗರದ ಟಿಕೆಟ್ ಆಕಾಂಕ್ಷಿ ಸಂಪತ್ ರಾಜ್ ಅವರನ್ನು ಪೊಲೀಸರು ಬಂಧಿಸಿದ್ದರು. ಕಾಂಗ್ರೆಸ್‌ನಲ್ಲಿ ಒಂದು ಬಣ ಅಖಂಡ ಶ್ರೀನಿವಾಸ್ ಮೂರ್ತಿಗೆ ಬೆಂಬಲವಾಗಿ ನಿಂತರೆ ಮತ್ತೊಂದು ಬಣ ವಿರೋಧವಾಗಿತ್ತು. ಅಖಂಡ ಮನೆಗೆ ಬೆಂಕಿ ಇಟ್ಟ ಆರೋಪಿ ಸಂಪತ್ ರಾಜ್ ಕೆಪಿಸಿಸಿಯ ಕಾರ್ಯಕ್ರಮಗಳಲ್ಲಿ ಕೆಲ ಕಾಲ ಕಾಣಿಸಿಕೊಳ್ಳದೆ ಇದ್ದರೂ, ಬಳಿಕ ಅವರಿಗೆ ವೇದಿಕೆಯಲ್ಲಿ ಅವಕಾಶ ಕೊಡಲಾಗಿತ್ತು. ಇದರಿಂದ ನೊಂದುಕೊಂಡಿದ್ದ ಅಖಂಡ ಎಐಸಿಸಿಗೂ ದೂರು ನೀಡಿದ್ದರು. ಈ ನಡುವೆ ಅಖಂಡ ಶ್ರೀನಿವಾಸಮೂರ್ತಿಗೆ ಟಿಕೆಟ್ ಕೊಡಬಾರದು ಎಂಬ ಚರ್ಚೆ ಆರಂಭಗೊಂಡಿತು. ಈ ಸಂದರ್ಭದಲ್ಲಿ ಅಖಂಡ ಪರವಾಗಿ ಸಿದ್ದರಾಮಯ್ಯ ಹಾಗೂ ಜಮೀರ್ ನಿಂತಿದ್ದರು. ಹಾಗಿದ್ದರೂ ನಾಲ್ಕನೇ ಪಟ್ಟಿಯಲ್ಲೂ ಅಖಂಡ ಹೆಸರು ಕಂಡುಬಂದಿಲ್ಲ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 2:06 pm, Mon, 24 April 23