ಬೆಂಗಳೂರು: ಮಹಾನಗರದಲ್ಲಿ ಅಪರಾಧ ಕೃತ್ಯ ತಡೆಯಲು ಮಾಸ್ಟರ್ ಪ್ಲ್ಯಾನ್ ರೂಪಿಸಲಾಗಿದೆ. ಕೇಂದ್ರ ಸರ್ಕಾರ ಪರಿಚಯಿಸಿದ್ದ ಸಿಸಿಟಿಎನ್ಎಸ್ ಮೊಬೈಲ್ ಅಪ್ಲಿಕೇಷನ್ ಮೂಲಕ ಕಳೆದ 2 ತಿಂಗಳಿಂದ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚುತ್ತಿದ್ದಾರೆ. ಕಳೆದ ಎರಡು ತಿಂಗಳಿಂದ ನಗರದಲ್ಲಿ ಪೊಲೀಸರು ರಾತ್ರಿ 11 ಗಂಟೆ ನಂತರ ಸಿಸಿಟಿಎನ್ಎಸ್ ಅಪ್ಲಿಕೇಷನ್ ಮೂಲಕ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ರಾತ್ರಿ ವೇಳೆ ಅನುಮಾನಸ್ಪದ ವ್ಯಕ್ತಿಗಳು, ವಾಹನಗಳನ್ನು ತಪಾಸಣೆ ನಡೆಸಿ ಅಪ್ಲಿಕೇಷನ್ ಮೂಲಕ ಪಾತಾಕಿಗಳನ್ನು ಪತ್ತೆ ಹಚ್ಚಲಾಗುತ್ತಿಸದೆ. ಈ ವೇಳೆ ಎಂಸಿಸಿಟಿಎನ್ಎಸ್ ಅಪ್ಲಿಕೇಷನ್ ನಲ್ಲಿ ಬೆರಳಚ್ಚುಗಳ ಪರಿಶೀಲನೆ ನಡೆಸಲಾಗುತ್ತದೆ.
ಈಗಾಗಲೇ ಪೊಲೀಸರ ಬಳಿಯಿರುವ ಅಪರಾಧಿಗಳ ಪಿಂಗರ್ ಪ್ರಿಂಟ್ ಜೊತೆ ಮ್ಯಾಚ್ ಮಾಡಲಾಗುತ್ತದೆ. ಬೆರಳಚ್ಚು ಪರಿಶೀಲನೆ ವೇಳೆ ಆತ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರೋದು ಕಂಡು ಬಂದರೆ ಕೂಡಲೇ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತದೆ.
ಮೊಬೈಲ್ ಸ್ನಾಚ್ ಮತ್ತು ಮನೆಗಳ್ಳತನ ಮಾಡಿದ್ದ ಆರೋಪಿಗಳ ಬಂಧನ
ಬೆಂಗಳೂರು: ಮಹಾನಗರದಲ್ಲಿ ಮೊಬೈಲ್ ಸ್ನಾಚ್ ಮತ್ತು ಮನೆಗಳ್ಳತನ ಮಾಡಿದ್ದ ಆರೋಪಿಗಳನ್ನು ಹಾಸನದಲ್ಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಆನಂದ್ ಅರಸೀಕೆರೆ ರೈಲ್ವೆ ಸ್ಟೇಷನ್ ಬಳಿ ರಾತ್ರಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದನು.
ಈ ವೇಳೆ ನೈಟ್ ಬೀಟ್ ಇದ್ದ ಅರಸೀಕೆರೆ ಪೊಲೀಸ್ ಠಾಣಾ ಪೊಲೀಸರು ಅನುಮಾನಗೊಂಡು MCCTNS ಮೊಬೈಲ್ ಅಪ್ಲೀಕೇಷನ್ ಮೂಲಕ ಫಿಂಗರ್ ಪ್ರಿಂಟ್ ಸಂಗ್ರಹಿಸಿದ್ದರು. ಆಗ ಆರೋಪಿ ಆನಂದ್ ಮೊಬೈಲ್ ಸ್ನಾಚ್ ಮತ್ತು ಮನೆಗಳ್ಳತನದಲ್ಲಿ ಭಾಗಿಯಾಗಿದ್ದಾನೆ ಎಂದು ಗೊತ್ತಾಗಿದೆ.
ಕೂಡಲೇ ಆನಂದನನ್ನು ಪೊಲೀಸರು ಬಂಧಿಸಿದ್ದಾರೆ. ಆನಂದ್ ಬಂಧನದ ಬಳಿಕ ಅರಸೀಕೆರೆ ಟೌನ್ ಪೊಲೀಸರು ಸಹಚರ ಚಂದ್ರುನನ್ನು ಬಂಧಿಸಿದ್ದಾರೆ. ಬಂಧಿತ ಆನಂದ್ ಮತ್ತು ಚಂದ್ರು ಬೆಂಗಳೂರಿನಲ್ಲಿ ಮನೆಗಳ್ಳತನದಲ್ಲಿ 30 ಗ್ರಾಂ ಚಿನ್ನಾಭರಣ ಕದ್ದಿದ್ದಾಗಿ ಬಾಯ್ಬಿಟ್ಟಿದ್ದಾರೆ. ಬಂಧಿತ ಆರೋಪಿಗಳಿಂದ 30 ಗ್ರಾಂ. ಚಿನ್ನಾಭರಣ ಮತ್ತು 90 ಮೊಬೈಲ್ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:11 pm, Tue, 13 September 22