ಬಿಜೆಪಿ ಲಂಚ ರೇಟ್ ಕಾರ್ಡ್ ಬಿಡುಗಡೆ ಮಾಡಿದ ಕಾಂಗ್ರೆಸ್: ಪ್ರತಿ ಹುದ್ದೆಗೂ ಒಂದೊಂದು ಲಂಚದ ದರ ಫಿಕ್ಸ್!
ರಾಜ್ಯ ಸರ್ಕಾರ ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್ನಿಂದ ವಿಭಿನ್ನ ರೀತಿಯಾಗಿ ಭ್ರಷ್ಟಾಚಾರ ಅಭಿಯಾನಕ್ಕೆ ಪ್ಲ್ಯಾನ್ ಮಾಡುತ್ತಿದೆ. ಅಭಿಯಾನದ ಭಾಗವಾಗಿ ಸದ್ಯ ಕಾಂಗ್ರೆಸ್ನಿಂದ ಬಿಜೆಪಿ ಲಂಚ ರೇಟ್ ಕಾರ್ಡ್ ಬಿಡುಗಡೆ ಮಾಡಿದೆ.
ಬೆಂಗಳೂರು: ಕರ್ನಾಟಕ ಈಗ ಕರಪ್ಶನ್ ಕ್ಯಾಪಿಟಲ್ ಆಫ್ ಇಂಡಿಯಾ ಆಗಿದೆ. ಡಬಲ್ ಇಂಜಿನ್ ಸರ್ಕಾರ ಬಂದ ಮೇಲೆ ಬೊಮ್ಮಾಯಿ ಸರ್ಕಾರ ರೇಟ್ ಕಾರ್ಡ್ ಹಾಕಿ, ಯಾವು ಯಾವುದಕ್ಕೆ ಎಷ್ಟೆಷ್ಟು ರೇಟ್ ಅಂತ ಫಿಕ್ಸ್ ಮಾಡಲಾಗಿದೆ. ಎಲ್ಲ ಹುದ್ದೆಗೂ ಒಂದೊಂದು ರೇಟ್ ಫಿಕ್ಸ್ ಆಗಿಬಿಟ್ಟಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿಕೆ ನೀಡಿದರು. ಜೊತೆಗೆ ರಾಜ್ಯ ಸರ್ಕಾರ ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್ನಿಂದ ವಿಭಿನ್ನ ರೀತಿಯಾಗಿ ಭ್ರಷ್ಟಾಚಾರ ಅಭಿಯಾನಕ್ಕೆ ಪ್ಲ್ಯಾನ್ ಮಾಡುತ್ತಿದೆ. ಅಭಿಯಾನದ ಭಾಗವಾಗಿ ಸದ್ಯ ಕಾಂಗ್ರೆಸ್ನಿಂದ ಬಿಜೆಪಿ ಲಂಚ ರೇಟ್ ಕಾರ್ಡ್ ಬಿಡುಗಡೆ ಮಾಡಿದೆ.
ಸರ್ಕಾರದ ಡೀಲ್ಗಳು ಹಾಗೂ ಶೇಕಡಾವಾರು ಕಾರ್ಡ್ ಹೀಗಿದೆ:
ಕೋವಿಡ್ ಕಿಟ್ ಪೂರೈಕೆ -75%, ಪಿಡಬ್ಲ್ಯೂಡಿ ಒಪ್ಪಂದ -40%, ಮಠಕ್ಕೆ ಅನುದಾನ -40%, ಉಪಕರಣಗಳ ಪೂರೈಕೆ – 40%, ಮೊಟ್ಟೆ ಪೂರೈಕೆ -30%.
ಹುದ್ದೆಗಳು ಮತ್ತು ದರ:
ಬೆಸ್ಕಾಂ-1 ಕೋಟಿ, ಸಹಾಯಕ ಪ್ರಾಧ್ಯಾಪಕ 50-70 ಲಕ್ಷ, PSI – 80 ಲಕ್ಷ, ಉಪನ್ಯಾಸಕ – 30-50 ಲಕ್ಷ, FDI 30 ಲಕ್ಷ, ಸಹಾಯಕ ಇಂಜಿನಿಯರ್ 30 ಲಕ್ಷ, ಬಮುಲ್ 25 ಲಕ್ಷ, PWD ಸಹಾಯಕ ಇಂಜಿನಿಯರ್ 10ಲಕ್ಷ, ಪೊಲೀಸ್ ಪೇದೆ 8 ಲಕ್ಷ, BDA ಆಯುಕ್ತ 10- 15 ಲಕ್ಷ, KPSC ಅಧ್ಯಕ್ಷ ಸ್ಥಾನ 3.75 ರಿಂದ 16 ಕೋಟಿ, ಡಿಸಿ ಮತ್ತು ಎಸ್. ಪಿ 1 ರಿಂದ 16 ಕೋಟಿ, ಉಪಕುಲಪತಿ-1 ರಿಂದ 10 ಕೋಟಿ, ಎಸಿ ಮತ್ತು ತಹಸೀಲ್ದಾರ್ 50 ಲಕ್ಷದಿಂದ 3 ಕೋಟಿ, ರೈಲ್ವೆ ಹುದ್ದೆ- 10 ಲಕ್ಷ,
ವರ್ಗಾವಣೆ ದರ:
ಸಬ್ ರಿಜಿಸ್ಟರ್ 50 ಲಕ್ಷದಿಂದ 5 ಕೋಟಿ, PSI 10 ಲಕ್ಷದಿಂದ 1 ಕೋಟಿ, ಇಂಜಿನಿಯರ್ 5 ಲಕ್ಷದಿಂದ 5 ಕೋಟಿ, ವಿವಿಧ ಹಗರಣಗಳಲ್ಲಿ 1 ಲಕ್ಷ 50 ಸಾವಿರ ಕೋಟಿ ಲೂಟಿ ಮಾಡಿದ್ದಾರೆ ಎಂದು ಕಾರ್ಡ್ ಬಿಡುಗಡೆ ಮಾಡಲಾಗಿದೆ.
ವಿಡಂಬನಾತ್ಮಕ ವಿಡಿಯೋ ಬಿಡುಗಡೆ:
ಭ್ರಷ್ಟಾಚಾರ ಭ್ರಷ್ಟಾಚಾರ ಕಮಿಷನ್ನೇ ಬಿಜೆಪಿಗೆ ಆಹಾರ ಸಾಂಗ್ ರಿಲೀಸ್ ಮಾಡಲಾಯಿತು. ಬ್ಯಾನರ್ನಲ್ಲಿ 200 ರೂ. ನೋಟ್ ಪ್ರಿಂಟ್ ಮಾಡಿದ ಕಾಂಗ್ರೆಸ್, 200 ರೂ. ನೋಟಿನಲ್ಲಿ ಭ್ರಷ್ಟ ಜನತಾ ಪಕ್ಷ ಅಂದ್ರೆ ಭ್ರಷ್ಟಾಚಾರ, 40% ಕಮಿಷನ್ ಸರ್ಕಾರ, ಹೆಚ್ಚಿನ ಮಾಹಿತಿಗಾಗಿ 8447704040 ಈ ನಂಬರ್ಗೆ ಕರೆ ಮಾಡಿ ಎಂದು ಹೆಲ್ಪ್ ಲೈನ್ ಸಂಖ್ಯೆ ಮುದ್ರಣ ಮಾಡಲಾಗಿದೆ. ನಾನು ಕರ್ನಾಟಕದ ಪ್ರತಿಯೊಬ್ಬ ನಾಗರೀಕರಿಂದ 40% ಕಮಿಷನ್ ತೆಗೆದುಕೊಳ್ಳುವ ಭರವಸೆ ನೀಡಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಪೋಟೋ ಮುದ್ರಣ ಮಾಡಲಾಗಿದೆ. ಕಮಿಷನ್ನ್ನು ಕರೆನ್ಸಿ ಮಾಡಿದ ಸರ್ಕಾರ ಎಂದು ಕಾಂಗ್ರೆಸ್ ವ್ಯಂಗ್ಯ ಮಾಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.