AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ರಸ್ತೆ ಗುಂಡಿ ಮುಚ್ಚಲು ಬಂದ ಜೆಟ್ ಪ್ಯಾಚರ್ ಮೆಷಿನ್ ಬಗ್ಗೆ ವಿವರಿಸಿದ ಕೃಷ್ಣಭೈರೇಗೌಡ

ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳಿಂದಾಗಿ ಪ್ರಯಾಣಿಕರು, ವಾಹನ ಚಾಲಕರು ಹೈರಾಣಾಗಿದ್ದಾರೆ. ಇದೇ ಹಿನ್ನೆಲೆಯಲ್ಲಿ ಜಿಬಿಎ ಹಾಗೂ ಸಚಿವ ಕೃಷ್ಣಭೈರೇಗೌಡ ಕೂಡ ನಾನಾ ರೀತಿಯ ಕಸರತ್ತು ಮಾಡಿ ಗುಂಡಿ ಮುಚ್ಚಲು ಹರಸಾಹಸಪಡುತ್ತಿದ್ದಾರೆ. ಇದೀಗ ಜೆಟ್ ಪ್ಯಾಚರ್ ಮೆಷಿನ್ ತಂದಿದ್ದಾರೆ. ಹಾಗಾದ್ರೆ, ಈ ಜೆಟ್ ಪ್ಯಾಚರ್ ಮೆಷಿನ್ ಹೇಗೆ ಕೆಲಸ ಮಾಡುತ್ತೆ ಎನ್ನುವುದನ್ನು ಕೃಷ್ಣಭೈರೇಗೌಡ ವಿವರಿಸಿದ್ದಾರೆ.

ಬೆಂಗಳೂರಿನ ರಸ್ತೆ ಗುಂಡಿ ಮುಚ್ಚಲು ಬಂದ ಜೆಟ್ ಪ್ಯಾಚರ್ ಮೆಷಿನ್ ಬಗ್ಗೆ ವಿವರಿಸಿದ ಕೃಷ್ಣಭೈರೇಗೌಡ
Krishnabyregowda
ಲಕ್ಷ್ಮಿ ನರಸಿಂಹ ಸ್ವಾಮಿ ಎಲ್.
| Edited By: |

Updated on: Sep 11, 2026 | 4:25 PM

Share

ಬೆಂಗಳೂರು, (ಸೆಪ್ಟೆಂಬರ್ 11): ಬೆಂಗಳೂರಿನ ರಸ್ತೆ ಗುಂಡಿಗಳ ಸಮಸ್ಯೆ ಬಗೆಹರಿಯುತ್ತಿಲ್ಲ. ಹೈಕೋರ್ಟ್ ಚಾಟಿ ಬೀಸಿ ಎಚ್ಚರಿಕೆ ನೀಡಿದರೂ ಸಹ ಜಿಬಿಎ ಅಧಿಕಾರಿಗಳು ಮಾತ್ರ ಮುಚ್ಚುತ್ತೇವೆ ಎಂದು ಹೇಳಿ ಜಾರಿಕೊಳ್ಳುತ್ತಿದ್ದಾರೆ. ಇದೀಗ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಅವರು ಆಗಿದ್ದು, ಈಗಾಗಲೇ ಫುಟ್​​ಪಾತ್ ಸೇರಿಂತೆ ನಗರ ಬದಲಾವಣೆ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಇದೀಗ ಬೆಂಗಳೂರಿನ ರಸ್ತೆಗಳಲ್ಲಿ ಗುಂಡಿ ಸಮಸ್ಯೆ ಬಗೆಹರಿಸಲು ಮುಂದಾಗಿದ್ದು, ಜೆಟ್ ಪ್ಯಾಚರ್ ಮೆಷಿನ್​​ಗೆ ಮೂಲಕ ಟ್ರಾಫಿಕ್ ಜಾಮ್ ಆಗದೇ ಗುಂಡಿ ಮುಚ್ಚಲು ಮುಂದಾಗಿದ್ದಾರೆ. ಹೀಗಾಗಿ ಪ್ರಯೋಗಿಕವಾಗಿ ಇಂದು (ಸೆ.11) ಈ ಜೆಟ್ ಪ್ಯಾಚರ್ ಮೆಷಿನ್​​ಗೆ ಕೃಷ್ಣಭೈರೇಗೌಡ ಅವರು ಚಾಲನೆ ನೀಡಿದರು.

ಇದೇ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕೃಷ್ಣಭೈರೇಗೌಡ, ಬೆಂಗಳೂರಿನ ರಸ್ತೆಗಳಲ್ಲಿ ಗುಂಡಿ ಸಮಸ್ಯೆ ವ್ಯಾಪಕವಾಗಿದೆ. ಎಲ್ಲಾ ಕಡೆಗಳಲ್ಲಿ ಒಂದೇ ಪರಿಹಾರ ಕೊಡೋಕೆ ಆಗಲ್ಲ. ಕೆಲವು ಕಡೆ ಟಾರ್ ಎದ್ದು ಹೋಗಿರುತ್ತೆ. ರಸ್ತೆ ಗುಂಡಿಗಳ ಪರಿಹಾರಕ್ಕಾಗಿ ಪ್ರಯತ್ನ ಮಾಡುತ್ತಿದ್ದೇವೆ. ಎರಡ್ಮೂರು ಇಂಚು ಗುಂಡಿ ಬಿದ್ರೆ ಮಶೀನ್ ಮೂಲಕ ಕವರ್ ಮಾಡುತ್ತೇವೆ. ಟ್ರಾಫಿಕ್ ಸಂಪೂರ್ಣ ಬಂದ್ ಮಾಡೋದು ಬೇಡ . ರಾತ್ರಿ ಹೊತ್ತು ಹೋಗಿ ಕೆಲಸ ಮಾಡೋದು ಬೇಡ. ಒಂದೇ ಮಷಿನ್​​ನಲ್ಲಿ ಟ್ರಾಫಿಕ್ ಮಧ್ಯೆ ಕೆಲಸ ಮಾಡಬಹುದು ಎಂದಿದ್ದಾರೆ.

ಈ ಮಷಿನ್​​​​ನಿಂದ ಟ್ರಾಫಿಕ್ ಮಧ್ಯೆ ಕೆಲಸ ಮಾಡಬಹುದು

ಒಂದೇ ಮಷಿನ್ ನಲ್ಲಿ ಡಸ್ಟ್ ಕ್ಲಿನ್, ವೆಟ್ ಮಿಕ್ಸ್ ಹಾಕೋ ಮೂಲಕ ಟ್ರಾಫಿಕ್ ಸಂಪೂರ್ಣವಾಗಿ ನಿಲ್ಲಿಸದೆ ಟ್ರಾಫಿಕ್ ಮಧ್ಯೆ ಕೆಲಸ ಮಾಡಬಹುದು. ಹಾಟ್ ಮಿಕ್ಸ್ ಯಾಕೆ ಹಾಕಲ್ಲ ಅಂದ್ರೆ ಮಳೆಗಾಲ ಅಲ್ಲಿ ಹಾಕೋಕೆ ಆಗಲ್ಲ. ಟ್ರಾಫಿಕ್ ಅಲ್ಲಿ ಹಾಕೋಕೆ ಆಗಲ್ಲ. 2 ಗಂಟೆ ಟ್ರಾಫಿಕ್ ಬಿಡೋಕೆ ಆಗಲ್ಲ . ಈ ಕೆಲವು ಹೈ ಡೆನ್ಸಿಟಿ ರೋಡ್ ಗಳಲ್ಲಿ ಈ ಜೆಟ್ ಪ್ಯಾಚರ್ ಮೂಲಕ ರೋಡ್ ನಿಯಂತ್ರಣ ಮಾಡ್ತೇವೆ. ಹಾಟ್ ಮಿಕ್ಸ್ ಹಾಕೋಕೆ ರೋಲರ್ ಬೇಕು. ಕ್ವಾಂಟಿಟಿ ಕೂಡ ಜಾಸ್ತಿ ಬೇಕಾಗುತ್ತದೆ . ಈ ಮಶೀನ್ ಅಲ್ಲಿ ಒಂದೇ ಒಂದು ಗುಂಡಿ ಬಿದ್ದಿದರೆ ಕೂಡ ಕವರ್ ಮಾಡಬಹುದು.

ಆಳವಾದ ಗುಂಡಿ ಬಿದ್ದಿದ್ರೆ ಇದು ವರ್ಕ್ ಆಗಲ್ಲ

ಕೇಂದ್ರ ನಗರ ಪಾಲಿಕೆಯಿಂದ ಟ್ರಯಲ್ ಮೂಲಕ ಆರಂಭ ಮಾಡಿದ್ದೇವೆ. ಇದು ಇಲ್ಲಿ ಯಶಸ್ವಿಯಾದರೆ ಬೇರೆ ಕಾರ್ಪೊರೇಷನ್ ಅಲ್ಲಿ ಬಳಕೆ ಮಾಡಬಹುದು. ತುಂಬಾ ಆಳವಾದ ಗುಂಡಿ ಬಿದ್ದಿದ್ದರೆ ಇದು ವರ್ಕ್ ಆಗಲ್ಲ. ಹೀಗಾಗಿ ಆಳವಾದ ಗುಂಡಿಗಳಿಗೆ ಬೇರೆ ಮೆಥಡ್ ಕಂಡು ಹಿಡಿಯಬೇಕಿದೆ.ಅಲ್ಲೊಂದು ಇಲ್ಲೊಂದು ಗುಂಡಿ ಇದ್ರೆ ಮಾತ್ರ ಜೆಟ್ ಪ್ಯಾಚರ್ ಉಪಯುಕ್ತ .ಆ ಕಾರಣಕ್ಕಾಗಿ ಪ್ರಾಯೋಗಿಕವಾಗಿ ಆರಂಭ ಮಾಡಿದ್ದೇವೆ ಎಂದು ಹೇಳಿದರು.

ಡ್ಯಾಶ್ ಕ್ಯಾಮ್ ಮೂಲಕ ರಸ್ತೆ ಗುಂಡಿ ಪತ್ತೆ

ಬೆಂಗಳೂರಿನಲ್ಲಿ ಎಷ್ಟು ಗುಂಡಿ ಇದೆ ಅಂತ ಹೇಳುತಲೇ ಇರುತ್ತೇವೆ. ಗುಂಡಿ ಹೇಳಿದ್ರೆ ಅಪಹಾಸ್ಯಕ್ಕೆ ದಾರಿ ಮಾಡಿಕೊಡುತ್ತೆ. ಎಲ್ಲಾ ರಸ್ತೆ ಎಸ್ಟಿಮೇಟ್ ಮಾಡಿರಲಿಕ್ಕೆ ಸಾಧ್ಯ ಇಲ್ಲ. 15 ಸಾವಿರ ಕಿಲೋಮೀಟರ್ ರಸ್ತೆ ಇದೆ. ಭವಿಷ್ಯದಲ್ಲಿ ವೈಜ್ಞಾನಿಕ ಉತ್ತರ ಕೊಡಬೇಕಾದರೆ ಪ್ರಹಾರಿ ವಾಹನಗಳಿಗೆ ಡ್ಯಾಶ್ ಕ್ಯಾಮ್ ಅಳವಡಿಕೆ ಮಾಡುತ್ತಿದ್ದೇವೆ. ಇದಕ್ಕಾಗಿ ಕಾರ್ಪೊರೇಶನ್ ವತಿಯಿಂದ ಕೆಲವು ವಾಹನಕ್ಕೆ ಕ್ಯಾಮ್ ಫಿಕ್ಸ್ ಮಾಡುತ್ತೇವೆ. ಅದೇ ರಸ್ತೆಯಲ್ಲಿ ಅನಾಲಿಸಿಸ್ ಮಾಡುವ ಪ್ರಕ್ರಿಯೆ ಆರಂಭ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಲಕ್ಷ್ಮಿ ನರಸಿಂಹ ಸ್ವಾಮಿ ಎಲ್.
ಲಕ್ಷ್ಮಿ ನರಸಿಂಹ ಸ್ವಾಮಿ ಎಲ್.

ಲಕ್ಷ್ಮಿ ನರಸಿಂಹ ಸ್ವಾಮಿ. ಎಲ್ ಆದ ನಾನು ಮೂಲತಃ ಬೆಂಗಳೂರಿನವಾಗಿದ್ದು, ಪೂರ್ವ ತಾಲೂಕಿನ ದೊಡ್ಡಗುಬ್ಬಿ ಎಂಬ ಗ್ರಾಮದಲ್ಲಿ ವಾಸವಿದ್ದೇನೆ. ಕಳೆದ 6 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಬೆಂಗಳೂರು ವರದಿಗಾರನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಐತಿಹಾಸಿಕ ಸರ್ಕಾರಿ ಕಲಾ ಕಾಲೇಜಿನಲ್ಲಿ ಸ್ನಾತಕ ಪದವಿ ಪೂರೈಸಿದ ಬಳಿಕ ಬೆಂಗಳೂರು ವಿಶ್ವವಿದ್ಯಾಲಯ (ಜ್ಞಾನಭಾರತಿ) ದಲ್ಲಿ M.A (ಪತ್ರಿಕೋದ್ಯಮ ಮತ್ತು ಸಂವಹನ) ಸ್ನಾತಕೋತ್ತರ ಪದವಿ ಪೂರೈಸಿದ್ದೇನೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಡಿಯ ನಗರ ಪಾಲಿಕೆಗಳು, ಬೆಸ್ಕಾಂ, ಜಲಮಂಡಳಿ, ಆಹಾರ, ಆರೋಗ್ಯ, ಶಿಕ್ಷಣ ಸೇರಿ ವಿವಿಧ ಕ್ಷೇತ್ರಗಳಲ್ಲಿ ನಾಗರಿಕರಿಗೆ ಎದುರಾಗುವ ಸಮಸ್ಯೆಗಳಿಗೆ, ಸಂಕಷ್ಟಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಈವರೆಗೂ ಶ್ರಮವಹಿಸಿದ್ದು, ಮುಂದಿನ ದಿನಗಳಲ್ಲೂ ನಾಗರಿಕರ ಸೇವೆಯನ್ನೂ ಮುಂದುವರೆಸುವ ಗುರಿಯೊಂದಿಗೆ ಉತ್ತಮ ಸಮಾಜಕ್ಕಾಗಿ ಬದ್ಧನಾಗಿದ್ದೇನೆ..

Read More
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ