Bengaluru Power Cut: ಬೆಂಗಳೂರಿನಲ್ಲಿ 17 ದಿನ ವಿದ್ಯುತ್ ವ್ಯತ್ಯಯ; ಯಾವಾಗ ಮತ್ತು ಎಲ್ಲೆಲ್ಲಿ?

Bengaluru Power Alert: ಬೆಂಗಳೂರಿನ ಇಪಿಐಪಿ ಕೈಗಾರಿಕಾ ಪ್ರದೇಶ ಮತ್ತು ಸುತ್ತಮುತ್ತಲ ಸ್ಥಳಗಳಲ್ಲಿ ಜನವರಿ 3 ರಿಂದ 19ರವರೆಗೆ ಅಂದರೆ 17 ದಿನಗಳ ಕಾಲ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಈ ಬಗ್ಗೆ ಬೆಸ್ಕಾಂ ಮಾಧ್ಯಮ ಪ್ರಕಟಣೆ ಹೊರಡಿಸಿದೆ. ಹಾಗಾದರೆ ಯಾವೆಲ್ಲಾ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂಬ ಮಾಹಿತಿ ಇಲ್ಲಿದೆ.

Bengaluru Power Cut: ಬೆಂಗಳೂರಿನಲ್ಲಿ 17 ದಿನ ವಿದ್ಯುತ್ ವ್ಯತ್ಯಯ; ಯಾವಾಗ ಮತ್ತು ಎಲ್ಲೆಲ್ಲಿ?
Power Cut

Updated on: Jan 02, 2026 | 3:22 PM

ಬೆಂಗಳೂರು, ಜನವರಿ 02: 220/66/11 ಕೆ.ವಿ ಇಪಿಐಪಿ ಸ್ಟೇಷನ್​ನಲ್ಲಿ 31.5 ಎಂವಿಎ ಶಕ್ತಿ ಪರಿವರ್ತಕ 3ರ ರಿಟ್ರೋಫಿಲ್ಲಿಂಗ್ ನಿರ್ವಹಣಾ ಕೆಲಸ ಹಿನ್ನೆಲೆ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ 17 ದಿನ ವಿದ್ಯುತ್ ವ್ಯತ್ಯಯ (power outage) ಉಂಟಾಗಲಿದೆ. ಜನವರಿ 03ರಿಂದ ಜನವರಿ 19ರ ವರೆಗೆ ಬೆಳಗ್ಗೆ 10 ಗಂಟೆಯಿಂದ ಸಂಜೆ 5ರ ವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (bescom) ತಿಳಿಸಿದೆ.

ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು

ಎಲ್​​ ಆ್ಯಂಡ್​ ಟಿ, ಆರ್​​ಎಂಝೆಡ್​ ನೆಕ್ಸ್ಟ್, ರಾಗಿಹಳ್ಳಿ, ಸಿದ್ದಾಪುರ ಗೇಟ್, ಇಪಿಐಪಿ ಲೇಔಟ್, ಟಿಸಿಎಸ್ ಸಾಫ್ಟ್​ವೇರ್, ಎಸ್​ಜೆಆರ್ ಟೆಕ್​ಪಾರ್ಕ್, ಎಂ.ಎಸ್.ವಿಎಸ್ಎನ್ಎಲ್ ಫೀಡರ್, ರಿಲಯನ್ಸ್(ಬಿಗ್ ಬಜಾರ್), ಓರಿಯಂಟಲ್ ಹೋಟೆಲ್, ಏರ್​​​ಟೆಲ್​, ಬುಷ್ರಾ ಟೆಕ್​ಪಾರ್ಕ್, ಗೋಪಾಲನ್ ಎಂಟರ್ ಪ್ರೈಸಸ್, ಸದಾ ಟೆಕ್​ಪಾರ್ಕ್, ಕ್ವಾಲ್ಕಾಮ್, ಕ್ವಾಲ್ಕಾಮ್-2, ಜಿಇ ಬಿಇ ಕಂಪನಿ, ಬಾಗ್ಮನೆ ನೀಯಾನ್ ಬ್ಲಾಕ್, ಇಪಿಐಪಿ ಇಂಡಸ್ಟ್ರಿಯಲ್ ಏರಿಯಾ ಸುತ್ತಮುತ್ತ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕರಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: Viral: ಪವರ್ ಕಟ್ ನೆಪ ಹೇಳಿ ಕಚೇರಿ ಕೆಲಸದಿಂದ ತಪ್ಪಿಸಿಕೊಂಡ ಉದ್ಯೋಗಿಯನ್ನು ತರಾಟೆಗೆ ತೆಗೆದುಕೊಂಡ ಮ್ಯಾನೇಜರ್

ಸುಮಾರು 17 ದಿನ ವಿದ್ಯುತ್ ವ್ಯತ್ಯಯ ಹಿನ್ನೆಲೆ ವಿದ್ಯುತ್ ಬಾಧಿತ ಪ್ರದೇಶಗಳಲ್ಲಿ ನಿವಾಸಿಗಳು, ಕಚೇರಿಗಳು ಮತ್ತು ವಾಣಿಜ್ಯ ಸಂಸ್ಥೆಗಳು ಜೊತೆಗೆ ವರ್ಕ್ ಫ್ರಮ್ ಹೋಮ್​​ ಮಾಡುವವರು, ಸಣ್ಣ ವ್ಯವಹಾರ ಸೇರಿದಂತೆ ವಿದ್ಯುತ್ ಉಪಕರಣಗಳನ್ನು ಅವಲಂಬಿಸಿರುವ ಜನರು ಮುಂಜಾಗ್ರತವಾಗಿ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳುವಂತೆ ಅಥವಾ ತಮ್ಮ ದಿನವನ್ನು ಅದಕ್ಕೆ ಅನುಗುಣವಾಗಿ ಯೋಜಿಸುವಂತೆ ಬೆಸ್ಕಾಂ ಕೋರಿದೆ.

ಬೆಂಗಳೂರಿನಲ್ಲಿ ಇಂದು ವಿದ್ಯುತ್ ಕಡಿತ

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಅಗತ್ಯ ನಿರ್ವಹಣೆ ಮತ್ತು ನವೀಕರಣ ಕಾರ್ಯಗಳನ್ನು ನಿರ್ವಹಿಸುತ್ತಿರುವುದರಿಂದ ಇಂದು ಅಂದರೆ ಜನವರಿ 2 ರಂದು ಬೆಂಗಳೂರಿನ ಕೆಲ ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಕೋಡಿಹಳ್ಳಿ, ಮಂಜುನಾಥ ನಗರ, ಕಲ್ಕೆರೆ, ಇರಲಗೆರೆ, ಶಾಂತನಹಳ್ಳಿ, ಕೋಟನಾಯಕನಹಳ್ಳಿ, ವಾಟರ್ಸಪ್ಪೆ, ರಾಮೇನಹಳ್ಳಿ, ಆಚಾರ್ಪಾಳ್ಯ, ಬಂಡಿಹಳ್ಳಿ, ಗಾಂಧಿನಗರ, ಆದಿನಾಯಕನಹಳ್ಳಿ ಪೂರಕಗಳಿಗೆ ವಿದ್ಯುತ್​​ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

ಇದನ್ನೂ ಓದಿ: ಫುಟ್​ಪಾತ್ ಮೇಲೆಯೇ ಟ್ರಾನ್ಸ್​ಫಾರ್ಮರ್​​ಗಳ ಸ್ಥಾಪನೆ; ಜನರ ಜೀವದ ಜೊತೆ ಆಟ ಆಡುತ್ತಿದೆಯಾ ಬೆಸ್ಕಾಂ?

ತುರ್ತು ನಿರ್ವಹಣಾ ಕಾರ್ಯ ಪೂರ್ಣಗೊಳ್ಳುವವರೆಗೆ ಅಂದರೆ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ಕಡಿತವಾಗಲಿದೆ. ಒಂದೇ ವೇಳೆ ಕೆಲಸವು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಮುಗಿದರೆ ವಿದ್ಯುತ್​ ಸರಬರಾಜು ಮೊದಲೇ ಪುನಃಸ್ಥಾಪನೆಯಾಗಲಿದೆ ಎಂದು ಬೆಸ್ಕಾಂ ಹೇಳಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.