Bangalore Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಡಿಸೆಂಬರ್ 26ಕ್ಕೆ ಪವರ್ ಕಟ್
ಬೆಂಗಳೂರು ಪವರ್ ಕಟ್: ಗುರುವಾರ ಹೇಗೂ ಕ್ರಿಸ್ಮಸ್ ರಜೆ. ಶನಿವಾರ, ಭಾನುವಾರ ರಜೆ. ಶುಕ್ರವಾರ ಒಂದು ದಿನ ವರ್ಕ್ ಫ್ರಂ ಹೋಂ ಮಾಡಿದರೆ ಒಟ್ಟು 4 ದಿನ ಕಚೇರಿಗೆ ಹೋಗೋದು ತಪ್ಪುತ್ತೆ ಎಂದು ಏನಾದರೂ ಪ್ಲಾನ್ ಮಾಡಿದ್ದೀರಾ? ಡಿಸೆಂಬರ್ 26 ರಂದು ಬೆಂಗಳೂರಿನ ಹಲವೆಡೆ ಪವರ್ ಕಟ್ ಇದೆ. ಎಲ್ಲೆಲ್ಲಿ ಎಂಬ ಮಾಹಿತಿ ಇಲ್ಲಿದೆ.

ಬೆಂಗಳೂರು, ಡಿಸೆಂಬರ್ 25: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ವ್ಯಾಪ್ತಿಯಲ್ಲಿ ಡಿಸೆಂಬರ್ 26, 2025ರಂದು ವಿದ್ಯುತ್ ವ್ಯತ್ಯಯ (Power Cut) ಉಂಟಾಗಲಿದೆ. 66/11 ಕೆವಿ ಕಗ್ಗೇನಹಳ್ಳಿ ಸಬ್‌ಸ್ಟೇಷನ್ ಕೇಬಲ್ ನಿರ್ವಹಣಾ ಕಾರ್ಯ ಹಿನ್ನೆಲೆಯಲ್ಲಿ ಈ ವಿದ್ಯುತ್ ವ್ಯತ್ಯಯ ಸಂಭವಿಸಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. ಜತೆಗೆ, ಎಕ್ಸ್ ಸಂದೇಶದ ಮೂಲಕವೂ ಮಾಹಿತಿ ನೀಡಿದೆ.
ಎಷ್ಟು ಗಂಟೆಯಿಂದ ಎಷ್ಟು ಗಂಟೆ ವರೆಗೆ ಪವರ್ ಕಟ್?
ಬೆಸ್ಕಾಂ ಪ್ರಕಟಣೆಯಲ್ಲಿ ನೀಡಿದ ಮಾಹಿತಿ ಪ್ರಕಾರ, ಡಿಸೆಂಬರ್ 26ರಂದು ಬೆಳಗ್ಗೆ 11 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ. ಕಗ್ಗೇನಹಳ್ಳಿ ಸಬ್‌ಸ್ಟೇಷನ್‌ನ 9-7 ಫೀಡರ್ ವ್ಯಾಪ್ತಿಯಲ್ಲಿ ಕೇಬಲ್ ನಿರ್ವಹಣಾ ಕಾರ್ಯ ಕೈಗೊಳ್ಳಲಾಗುತ್ತಿರುವುದರಿಂದ ಈ ಅವಧಿಯಲ್ಲಿ ವಿದ್ಯುತ್ ಪೂರೈಕೆ ಇರದು.
ಯಾವೆಲ್ಲ ಏರಿಯಾಗಳಲ್ಲಿ ಪವರ್ ಕಟ್?
ಬೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯದ ವಿವರ
ಡಿಸೆಂಬರ್ 26, 2025#Bescom #poweroutage pic.twitter.com/4JYCX5PLgZ
— Namma BESCOM | ನಮ್ಮ ಬೆಸ್ಕಾಂ (@NammaBESCOM) December 25, 2025
ವಿದ್ಯುತ್ ವ್ಯತ್ಯಯಕ್ಕೆ ಒಳಪಡುವ ಪ್ರದೇಶಗಳಲ್ಲಿ ನಾರ್ಥ್ ಗೇಟ್ 1, 2, 3, ಎಂಬಾಸಿ, ಫೀಲಿಪ್ಸ್ ಕಂಪನಿ, ದ್ವಾರಕನಗರ, ಬಾಬಾನಗರ, ಕಗ್ಗೇನಹಳ್ಳಿ ಸುತ್ತಮುತ್ತಲ ಪ್ರದೇಶಗಳು, ಬಾಗಲೂರು ಕ್ರಾಸ್, ಮಟ್ಟು ಬಾಗಲೂರು ಮುಖ್ಯ ರಸ್ತೆ, ಮಣಿಪಾಲ ಕಾಲೇಜು, BSF, PDMS, ಬಾಗಲೂರು ಕ್ರಾಸ್ ವಿನಾಯಕನಗರ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳು ಸೇರಿವೆ.
ಇದನ್ನೂ ಓದಿ: Viral: ಪವರ್ ಕಟ್ ನೆಪ ಹೇಳಿ ಕಚೇರಿ ಕೆಲಸದಿಂದ ತಪ್ಪಿಸಿಕೊಂಡ ಉದ್ಯೋಗಿಯನ್ನು ತರಾಟೆಗೆ ತೆಗೆದುಕೊಂಡ ಮ್ಯಾನೇಜರ್
ನಿರ್ವಹಣಾ ಕಾರ್ಯ ಪೂರ್ಣಗೊಂಡ ನಂತರ ವಿದ್ಯುತ್ ಸರಬರಾಜು ಪುನಃ ಆರಂಭಿಸಲಾಗುತ್ತದೆ ಎಂದು ಬೆಸ್ಕಾಂ ತಿಳಿಸಿದೆ. ಸಾರ್ವಜನಿಕರು ಅಗತ್ಯ ಮುಂಜಾಗ್ರತೆ ವಹಿಸಿ ಸಹಕರಿಸುವಂತೆ ಬೆಸ್ಕಾಂ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:37 pm, Thu, 25 December 25




