AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru Air Quality Alert: ಬಳ್ಳಾರಿ ಜನರಿಗೆ ಹೈ ಅಲರ್ಟ್​​​ ನೀಡಿದ ತಜ್ಞರು, ರಾಜ್ಯದಲ್ಲಿ ಗಾಳಿಯ ಮಟ್ಟ ಕಳಪೆ

ಬೆಂಗಳೂರಿನಲ್ಲಿ ಗಾಳಿಯ ಗುಣಮಟ್ಟ ತೀವ್ರ ಕಳಪೆಯಾಗಿದ್ದು, AQI 184-221 (ಅನಾರೋಗ್ಯಕರ/ತೀವ್ರ ಅನಾರೋಗ್ಯಕರ) ವರದಿಯಾಗಿದೆ. PM2.5 ಮತ್ತು PM10 ಮಟ್ಟಗಳು ಹೆಚ್ಚಿದ್ದು, ಮುಂದಿನ 7 ದಿನ ಚಳಿ ಮತ್ತು ಮಂಜು ವಾತಾವರಣದ ಕಾರಣ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು. ಮಕ್ಕಳು, ವೃದ್ಧರು, ಉಸಿರಾಟದ ಸಮಸ್ಯೆ ಇರುವವರು ಹೊರಗೆ ಬರದಂತೆ ಎಚ್ಚರಿಕೆ ನೀಡಲಾಗಿದ್ದು, ಮಾಸ್ಕ್ ಧರಿಸಲು ತಜ್ಞರು ಸಲಹೆ ನೀಡಿದ್ದಾರೆ. ಆರೋಗ್ಯ ರಕ್ಷಣೆಗಾಗಿ ಮುಂಜಾಗ್ರತೆ ಕ್ರಮಗಳು ಅತ್ಯಗತ್ಯ.

Bengaluru Air Quality Alert: ಬಳ್ಳಾರಿ ಜನರಿಗೆ ಹೈ ಅಲರ್ಟ್​​​ ನೀಡಿದ ತಜ್ಞರು, ರಾಜ್ಯದಲ್ಲಿ ಗಾಳಿಯ ಮಟ್ಟ ಕಳಪೆ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on:Dec 25, 2025 | 8:54 AM

Share

ಬೆಂಗಳೂರು, ಡಿ.25: ಇಂದು ಬೆಂಗಳೂರು (Bengaluru air quality) ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗಾಳಿಯ ಗುಣಮಟ್ಟ ಕಳಪೆಯಾಗಿದೆ ಎಂದು ಹೇಳಲಾಗಿದೆ. ಮುಂದಿನ 7 ದಿನ ಚಳಿ ಮತ್ತು ಮಂಜು ವಾತಾವರಣ ಇರುವ ಕಾರಣ, ಗಾಳಿಯ ಗುಣಮಟ್ಟದಲ್ಲಿ ದೊಡ್ಡ ಮಟ್ಟದ ಬದಲಾವಣೆಗಳು ಆಗುವ ಸಾಧ್ಯತೆಗಳು ಇದೆ. ಬೆಂಗಳೂರಿನ ಗಾಳಿಯ ಗುಣಮಟ್ಟ ಅನಾರೋಗ್ಯಕರವಾಗಿದ್ದು, ವಾಯು ಗುಣಮಟ್ಟ ಸೂಚ್ಯಂಕ (AQI) ಪ್ರಕಾರ, ಇಂದು ಗಾಳಿಯ ಗುಣಮಟ್ಟದಲ್ಲಿ ಕೆಟ್ಟ ಪರಿಣಾಮವನ್ನು ಉಂಟು ಮಾಡುವ ಸಾಧ್ಯತೆಗಳು ಇದೆ ಎಂದು ಹೇಳಲಾಗಿದೆ. ನಗರದ ಸರಾಸರಿ AQI 184 (ಅನಾರೋಗ್ಯಕರ) ಮತ್ತು 221 (ತುಂಬಾ ಅನಾರೋಗ್ಯಕರ/ತೀವ್ರ) ನಡುವೆ ವರದಿಯಾಗಿದೆ . ಇನ್ನು PM2.5 ಮತ್ತು PM10 . PM2.5 ಮಟ್ಟಗಳು 96 µg/m³ ವರೆಗೆ ದಾಖಲಾಗಿದೆ. PM10 ಮಟ್ಟಗಳು ಸುಮಾರು 132 µg/m³ ರಷ್ಟಿವೆ .

ಇನ್ನು ಈ ಗಾಳಿಯ ಗುಣಮಟ್ಟದಲ್ಲಿ ವಾತಾವರಣಕ್ಕೆ ಅನುಗುಣವಾಗಿ ಬದಲಾವಣೆ ಆಗುವ ಸಾಧ್ಯತೆ ಇದೆ. ಇನ್ನು ಬೆಂಗಳೂರಿನ ಭೋಗನಹಳ್ಳಿಯಲ್ಲಿ ಗಾಳಿಗುಣ ಮಟ್ಟ 225 ಇದೆ. ಇನ್ನು ಪಾಮ್ ಮೆಡೋಸ್​​ನಲ್ಲಿ 202, ಮತ್ತು ಬೆಳತ್ತೂರುನಲ್ಲಿ 204, ಅರೆಕೆರೆಯಲ್ಲಿ 194, ಕೃಷ್ಣರಾಜಪುರದಲ್ಲಿ 19 ಹಾಗೂ ಬೊಮ್ಮನಹಳ್ಳಿಯಲ್ಲಿ 187 ಗಾಳಿಯಮಟ್ಟ ಇದೆ. ಪ್ರಸ್ತುತ ಬೆಂಗಳೂರಿನ ಗಾಳಿಯ ಗುಣಮಟ್ಟದ ಸ್ಥಿತಿ ಕೆಟ್ಟಾಗಿದ್ದು, ಆರೋಗ್ಯದಲ್ಲಿ ದೊಡ್ಡ ಮಟ್ಟದ ಬದಲಾವಣೆ ಆಗುವ ಸಾಧ್ಯತೆ ಇದೆ. ಅದಕ್ಕಾಗಿ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳಲು ತಜ್ಞರು ಸಲಹೆ ನೀಡಿದ್ದಾರೆ.

ಮಕ್ಕಳು, ವೃದ್ಧರು ಮತ್ತು ಉಸಿರಾಟದ ಸಮಸ್ಯೆಗಳಿರುವ ಜನರು ಹೊರಗೆ ಬರದಂತೆ ಎಚ್ಚರಿಕೆ ನೀಡಿದ್ದಾರೆ. ಆರೋಗ್ಯವಂತ ವ್ಯಕ್ತಿಗಳು ಗಂಟಲಿನಲ್ಲಿ ಕಿರಿಕಿರಿ ಅಥವಾ ಉಸಿರಾಟದ ತೊಂದರೆ ಅನುಭವಿಸಬಹುದು. ಹೆಚ್ಚಿನ ಸಂಚಾರ ಅಥವಾ ಹೆಚ್ಚಿನ ಮಾಲಿನ್ಯ ಪ್ರದೇಶಗಳಲ್ಲಿ ಹೋಗುವ ಮುನ್ನ N95 ಮಾಸ್ಕ್ ಬಳಸಿ ಎಂದು ಹೇಳಲಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ದಟ್ಟ ಮಂಜು ಕವಿದ ವಾತಾವರಣ ಇರಲಿದೆ

ರಾಜ್ಯದಲ್ಲಿ ಗಾಳಿಯ ಗುಣಮಟ್ಟ:

ಬೆಂಗಳೂರು: 186

ಮಂಗಳೂರು: 140

ಮೈಸೂರು: 130

ಬೆಳಗಾವಿ: 156

ಕಲಬುರ್ಗಿ: 97

ಶಿವಮೊಗ್ಗ: 68

ಬಳ್ಳಾರಿ : 210

ಹುಬ್ಬಳ್ಳಿ : 112

ಉಡುಪಿ :108

ವಿಜಯಪುರ: 88

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

ಉತ್ತಮ- 0-50

ಮಧ್ಯಮ – 50-100

ಕಳಪೆ – 100-150

ಅನಾರೋಗ್ಯಕರ – 150-200

ಗಂಭೀರ – 200 – 300

ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:51 am, Thu, 25 December 25