ಬೆಂಗಳೂರು: ಬೆಂಗಳೂರಿನಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದ್ದರೂ ಪವರ್ ಕಟ್ (Power Cut) ಸಮಸ್ಯೆ ಮಾತ್ರ ಇನ್ನೂ ಮುಂದುವರೆದಿದೆ. ಇಂದು ಕೂಡ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (BESCOM) ಬೆಂಗಳೂರಿನಲ್ಲಿ ದುರಸ್ತಿ ಮತ್ತು ನಿರ್ವಹಣೆ ಕಾರ್ಯಗಳನ್ನು ಕೈಗೊಂಡಿರುವುದರಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಬೆಂಗಳೂರಿನ (Bengaluru) ಹಲವು ಪ್ರದೇಶಗಳಲ್ಲಿ ಇಂದು ಬೆಳಗ್ಗೆ 10ರಿಂದ ಸಂಜೆ 6ರವರೆಗೆ ವಿದ್ಯುತ್ ಕಡಿತವಾಗುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ಇಂದು ಬೆಳಗ್ಗೆಯಿಂದ ಸಂಜೆಯವರೆಗೆ ಹೇರೋಹಳ್ಳಿ, ಕಿರ್ಲೋಸ್ಕರ್ ಲೇಔಟ್, ಚಿಕ್ಕಸಂದ್ರ ಸೇರಿದಂತೆ ಹಲವು ಏರಿಯಾಗಳಲ್ಲಿ ಕರೆಂಟ್ ಇರುವುದಿಲ್ಲ.
ಇದನ್ನೂ ಓದಿ: Bangalore Power Cut: ಬೆಂಗಳೂರಿನ ಕೋರಮಂಗಲ, ಮಡಿವಾಳ ಸೇರಿ ಹಲವೆಡೆ ಇಂದು ಸಂಜೆಯವರೆಗೆ ಪವರ್ ಕಟ್
ಇಂದು (ಭಾನುವಾರ) ಪವರ್ ಕಟ್ ಇರುವ ಪ್ರದೇಶಗಳು:
ಇಂದು ಬೆಂಗಳೂರಿನ ಹಿರೇಮೇಗಳಗೆರೆ, ಅಣಜಿಗೆರೆ, ಚೌಡಾಪುರ, ಹೊಸಹಳ್ಳಿ, ಶ್ರೀಕಂಠಪುರ, ಹೇರೋಹಳ್ಳಿ, ಮಧುರಮ್ಮ ದೇವಸ್ಥಾನ, ನಾಗರಹಳ್ಳಿ ಸರ್ಕಲ್, ಪ್ರಸನ್ನ ಲೇಔಟ್, ದರ್ಬೆ, ಮಾಧೇಶ್ವರ, ಹೇರೋಹಳ್ಳಿ ಕೆರೆ, ವಿಘ್ನೇಶ್ವರ ನಗರ, ನೀಲಗಿರಿ ತೋಪ್ ರಸ್ತೆ, ಓಂಕಾರ ಎಲ್ ಆಶ್ರಮ, ಆಂಜನ್ಯಾ ಆಶ್ರಮ, ಎಸ್. ಇಂಡಸ್ಟ್ರಿಯಲ್ ರಸ್ತೆ, ಎಸ್‌ಎಲ್‌ವಿ ಇಂಡಸ್ಟ್ರಿ, ಟಿಜಿ ಪಾಳ್ಯ ರಸ್ತೆ, ಅನ್ನಪೂರ್ಣೇಶ್ವರಿ ಎಲ್/ಒ, ಕಿರ್ಲೋಸ್ಕರ್ ಲೇಔಟ್, ನೇವಿ ಲೇಔಟ್, ಬೋನ್ ಮಿಲ್, ಚಿಕ್ಕಸಂದ್ರ, ಅಂದಾನಪ್ಪ ಲೇಔಟ್, ದಾಬಸ್‌ಪೇಟೆ ಟೌನ್, ದಾಬಸ್‌ಪೇಟೆ ಸೋಂಪುರ, ನಾರಾಯಣಕೆರೆ, ಯಡಗೊಂಡನಹಳ್ಳಿಯಲ್ಲಿ ಬೆಳಗ್ಗೆ 10ರಿಂದ ಸಂಜೆಯ 6ರವರೆಗೆ ಪವರ್ ಕಟ್ ಇರಲಿದೆ.